ಅಂಕಣ

ಪೊಲೀಸರನ್ನು ಬೆಂಬಲಿಸಿ!

ಒಂದೆರೆಡು ವಾರಗಳ ಹಿಂದೆ ವಿಜಯನಗರದ ನಮ್ಮ ರೂಮನಲ್ಲಿ ಕೆಲವು ಮೊಬೈಲ್ ಫೋನ್ಗಳ ಕಳ್ಳತನವಾಗಿತ್ತು. ಬೆಳಿಗ್ಗೆ ಎದ್ದ ಕೂಡಲೇ ಕಾಲೇಜ್ ಹೋಗುವ ಮುನ್ನ ಒಂದು ಕಂಪ್ಲೇಂಟ್ ಕೊಟ್ಟರಾಯಿತೆಂದು, ನಾನು ನನ್ನ ಸ್ನೇಹಿತರು ವಿಜಯನಗರ ಪೋಲಿಸ್ ಸ್ಟೇಷನ್ಗೆ ತೆರಳಿದೆವು. ನಡೆದ ಘಟನೆಯಲ್ಲಿ ನಮ್ಮದೇ ತಪ್ಪಿದ್ದರೂ ಪೊಲೀಸರ ಮೇಲೆ ಹೊಣೆ ಹೊರೆಸುವ ಕೆಲಸವದು, ಸ್ವಲ್ಪ ಬೇಜಾರಲಿದ್ದ ನಾವು ಬೇಗ ಬೇಗ ಕೆಲಸ ಮುಗಿಸಬೇಕೆಂಬ ಆತುರ, ಮೊದಲ ಬಾರಿ ಪೋಲಿಸ್ ಕಂಪ್ಲೇಂಟ್ ಕೊಡಲು ಹೊರಟ ನಮಗೆ, ಪೋಲಿಸ್ ಕಾರ್ಯ ಕಲಾಪಗಳ ಬಗ್ಗೆ ಅಷ್ಟಾಗಿ ಮಾಹಿತಿಯು ಇಲ್ಲ. ನಂತರ ನಮ್ಮ ತಪ್ಪುಗಳಿಂದ ಕಂಪ್ಲೇಂಟ್ ಕೊಡಲು ಎರಡು ದಿನಗಳೇ ಬೇಕಾಯಿತು. ನಡೆದ ಘಟನೆಯಲ್ಲಿ ನಮ್ಮದೇ ತಪ್ಪಿದ್ದರೂ ಪೋಲಿಸ್ ಇಲಾಖೆಗೆ ಮನಸಲ್ಲೇ ” ಬೇಗ ಕಂಪ್ಲೇಂಟ್ ತಗೊಳಕ್ಕ್ ಏನ್ ಧಾಡಿ ಇವ್ರೀಗಿ” ಎಂಬ ಹಿಡಿ ಶಾಪ ಬೇರೆ.  ಈ ಕಂಪ್ಲೇಂಟ್ನ ಹೆಸರಲ್ಲಿ ಒಂದೆರೆದು ಗಂಟೆ ಪೋಲಿಸ್ ಸ್ಟೇಷನ್ನಲ್ಲಿ ಕಳೆದ ನನಗೆ ಅಲ್ಲಿನ ಪರಿಸ್ತಿತಿ ಪೋಲಿಸೆರ ಬಗ್ಗೆ ನಮ್ಮ ವಿಚಾರವನ್ನೇ ಬದಲಿಸಿತು ಅಲ್ಲಿ ಹೊಳೆದ ಕೆಲವು ಯೋಚನೆಗಳ ಧಾರೆ ಇದು .  

ಸಾಮಾನ್ಯವಾಗಿ ಪೊಲೀಸರೆಂದರೆ ನಮಗೆ ಆಭಯಕಿಂತ ಭಯವೇ ಜಾಸ್ತಿ, ಬೈಕಿನಲ್ಲಿ ಹೆಲ್ಮೆಟ್ ಹಾಕದಾಗ, ಲೈಸನ್ಸ್ ಇಲ್ಲದಾಗ, ತ್ರಿಪ್ಪಲ ಸೀಟ್ ಹೊಡೆಯುವಾಗ, ಸಿಗ್ನಲ್ ಜಂಪ್ ಮಾಡಿದಾಗ, ಕಣ್ಣು ಅತ್ತ ಇತ್ತ ಹುಡುಕುವದು ಪೋಲಿಸ್ರನ್ನೇ. ಎಲ್ಲಿ ಪೊಲೀಸರ ಕೈಲಿ ಸಿಕ್ಕಿ ಬೀಳ್ತಿವೋ ಅನ್ನೋ ಭಯ. ಸಾಮಾನ್ಯವಾಗಿ ಎಲ್ಲ ಘಟನೆಗಳಲ್ಲಿ ತಪ್ಪು ನಮ್ಮದೇ. ಆದರು ಹೆಚ್ಚಾಗಿ ಬೈಗುಳ ತಿನ್ನೋದು ಪೋಲಿಸ್. ಎಲ್ಲಿ ಹೆಚ್ಚು ಹಣ ಕಿತ್ತು ಬಿಡ್ತಾನೋ ಅಂತ ಬೈತಿವಿ. ಈ ಪೋಲಿಸ್ನವರು ಬರಿ ಲಂಚ ತಿನ್ನುತ್ತಾರೆ ಅಂತ ಬೈತಿವಿ. ಹೀಗೆ ಒಂದು ದಿನ ವಾಟ್ಸಆಪ್ನಲ್ಲಿ ಒಂದು ವೀಡಿಯೊ  ಬಂದಿತ್ತು. ಡೌನ್ ಲೋಡ್ ಮಾಡಿ ನೋಡಿದಾಗ ಟ್ರಾಫಿಕ್ ಪೋಲಿಸ್ನವರು ದಾರಿಯಲ್ಲಿ ತೆರಳುತಿದ್ದ ವಾಹನಗಳನ್ನು ನಿಲ್ಲಿಸಿ ಪರೀಕ್ಷೆ ನಡಿಸಿದ್ದರು . ಯಾವುದೊ ಲಂಚ ತಗಲೋ ವೀಡಿಯೊ ಇರಬಹುದು ಅಂದುಕೊಂಡೆ. ಒಂದು ಬಿಕೆನಲ್ಲಿಬಂದ ಯುವಕನೊಬ್ಬ ಪೊಲೀಸರಿಗೆ ತಗಲಾಕೊಂಡ ಹೆಲ್ಮೆಟ್ ದರಿಸದಿದ್ದ ಅವನ ಡಾಕ್ಯುಮೆಂಟ್ಗಳನ್ನೂ ಪೊಲೀಸರು ಪರೀಕ್ಷೆ ನಡೆಸಿದರು. ಸ್ವಲ್ಪ ಸಮಯದ ನಂತರ ಆ ಯುವಕ ಅಧಿಕಾರಿಗೆ ಸ್ವಲ್ಪ ಹಣವನ್ನು ಕೊಟ್ಟ. ನಾನು ಅಂದು ಕೊಂಡಂತೆ ಆಯಿತು. ಇದು ಲಂಚದ ಗಿರಾಕಿ ಅಂತ ಮುಂದೆ ನೋಡಿದೆ. ಆ ಅದಿಕಾರಿ ಹಣ ಪಡೆದು ತನ್ನ ಬಿಳಿ ಪಲ್ಸರ್ ಬೈಕ್ನಲ್ಲಿ ತೆರಳಿ ಬಿಟ್ಟ ಆದರೆ ಆ ಯುವಕ ಅಲ್ಲೇ ಇದ್ದ ಕಾನ್ಸ್ಟೇಬಲ್ ಜೊತೆ ನಿಂತುಬಿಟ್ಟ. ಹಣಕೊಟ್ರು ಇನ್ನು ಯಾಕಿವನನ್ನ ಬಿಟಿಲ್ಲ ಅನ್ನೋ ಕುತೂಹಲದಿಂದ ನೋಡಿದ್ದ ನನಗೆ ತೆರಳಿದ್ದ ಪೋಲಿಸ್ ಅದಿಕಾರಿ ಬೈಕ್ ನಲ್ಲಿ  ಒಂದು ಪೆಟ್ಟಿಗೆಯ ಜೊತೆ ವಾಪಾಸಾಗಿದ್ದು ಕಾಣಿಸಿತು. ಬೈಕಿಂದ ಇಳಿದ ಅದಿಕಾರಿ ಪೆಟ್ಟಿಗೆಯನ್ನು ತೆರೆದು ಅದರಲ್ಲಿದ್ದ ಹೆಲ್ಮೆಟ್ ತಗೆದು ಆ ಯುವಕನಿಗೆ ತಾನಾಗಿಯೇ ತಲೆಗೆ ಹೆಲ್ಮೆಟ್ ಹಾಕಿ ಬೆನ್ನು ತಟ್ಟಿ ಕಳುಹಿಸಿಬಿಟ್ಟ.ಸಾಮಾನ್ಯವಾಗಿ ಪೋಲಿಸ್ ಅದಿಕಾರಿಗಳು ಹಣಕ್ಕೆ ಕೆಲಸ ಮಾಡ್ತಾರೆ ಅನ್ನುವವರಿಗೆ ಇದು ಉತ್ತಮ ಪಾಠ.

ಯಾವುದೊ ಸರ್ಕಾರ ಮಾಡುವ ಕಾಯ್ದೆಯಿಂದ ಬೇಸರಪಡುವ ಜನರು ಕಲ್ಲು ಹೊಡೆಯುವದು ಪೊಲೀಸರಿಗೆ ಸರಕಾರಕ್ಕಲ್ಲ!. ಯಾವುದೊ ವ್ಯಕ್ತಿ ಜನರಿಗೆ ಚೀಟಿ ಕಟ್ಟಿ ಹಣಗಳಿಸಿ ಮೋಸ ಮಾಡಿ ಓಡಿ ಹೋದಾಗ ಕಲ್ಲು ಬಿಳುವದೂ ಪೊಲೀಸರಿಗೆ ಆ ಮೊಸಾಗರನಿಗಲ್ಲ! ಕೋಮುಗಳ ನಡುವೆ ಘರ್ಷಯಾಗಿ ತೂರಿ ಬರುವ ಕಲ್ಲು ಪೆಟ್ಟು ನಿಡುವದು ಪೊಲೀಸರಿಗೆ ಹೊರತು ಆ ಕೊಮುವಾದಿಗಳಿಗಲ್ಲ! ಒಂದಾ ಎರಡಾ ಪೊಲೀಸರ ತ್ಯಾಗ ನಮ್ಮ ರಕ್ಷಣೆಗಾಗಿ. ಹೇಗೆ ಸೈನಿಕರು ದೇಶದ ಘಡಿಗಳನ್ನು ಕಾಯುತ್ತರೋ ಹಾಗೆ ಪೊಲೀಸರು ದೇಶದ ದೇಹವನ್ನು ಕಾಯುತ್ತಾರೆ. ಮನೆಯಲ್ಲಿ ದೀಪಾವಳಿ ಆಚರಿಸಬೇಕಾದ ಸಮಯದಲ್ಲಿ ಅವರು ಯಾವುದೊ ರಾಜಕಾರಣಿಯ ಮನೆಯ ದೀಪಾವಳಿಯ ಹಬಕ್ಕೆ ಕಾವಲುಗಾರರಾಗಿರುತ್ತಾರೆ. ದಿನದ 24 ಘಂಟೆಗಳು ವರ್ಷದ ಎಲ್ಲ ದಿನಗಳು ಅವರಿಗಿ ಡ್ಯೂಟಿ ಯಾವಾಗ ಕರೆ ಬಂದರು ಹೋಗಲೇಬೇಕು, ಮನೆಯಿಂದ ಹೊರಟವರು ಸುರಕ್ಷಿತವಾಗಿ ವಾಪಾಸ್ಸಗುತ್ತಾರೆ ಎನ್ನಲು ಸಾದ್ಯವಿಲ್ಲ. ಹೇಳುತ್ತಾ ಹೋದರೆ ಮುಗಿಯುವದಿಲ್ಲ ಇದು ಇವರ ಪರಿಸ್ಥಿತಿ. ಇದನ್ನೆಲ್ಲಾ ಇವರು ಮಾಡುವದು ಏತಕ್ಕಾಗಿ? ಕೇವಲ ಹೊಟ್ಟೆ ಪಾಡಿಗಾದರೆ ಮಾಡಲು ನೂರಾರು ಕೆಲಸಗಳಿವೆ ಪೋಲಿಸ್ ಇಲಾಖೆಗಿಂತ ಹೆಚ್ಚಿನ ವೇತನ ನೀಡುತ್ತಾರೆ!. ಇವರು ನಮ್ಮನ್ನು ಕಾಯುವದು ನಮಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು, ನಾವು ಚಳಿಯಲ್ಲಿ ಬೆಚ್ಚಗೆ ಮಲಗಲು ಪೊಲೀಸರು ರಾತ್ರಿ ಗಸ್ತು ತಿರುಗಲೇಬೇಕು.

ಈ ಎಲ್ಲ ತ್ಯಾಗಗಳನ್ನು ಮಾಡುವ ಇವರು ಇಂದು ಕೇಳುತ್ತಿರುವದಾದರು ಏನು? ತನ್ನ ಪರಿವಾರವನ್ನು ಸಾಕಲು ಬೇಕಾಗುವ ಕನಿಷ್ಠ ವೇತನ! ದೇಶದಲ್ಲೇನೋ ಮೋದಿ ಸರ್ಕಾರ ಕೇಂದ್ರೀಯ ನೌಕರರಿಗೆ ಅವರ ಆಶಯದಂತೆ ವೇತನ ಹೆಚ್ಚಿಸಿದರು. ಆದರೆ ನಾವಿನ್ನು ನಿದ್ರಾಮಯ್ಯನ ಸರ್ಕರದಲ್ಲೇ ಇದ್ದೇವೆ. ನಮ್ಮನ್ನು ಅವರನ್ನು ಕಾಯುವ ಪೊಲೀಸರಿಗೆ ಪ್ರತಿಭಟಿಸುವ ಅದಿಕಾರವನ್ನು ನೀಡದ ಈ ಕಾಂಗ್ರೆಸ್ ಸರ್ಕಾರ ಎಂತಹ ಆದೋಗತಿಗೆ ರಾಜ್ಯವನ್ನು ಒಯ್ಯುತಿದೆ. ನಾವು ಇನ್ನಾದರೂ ಎಚ್ಚರಗೊಳ್ಳಬೇಕು. ಪೊಲೀಸರೇ  ನಿಮ್ಮೊಂದಿಗೆ ನಾವಿದ್ದೇವೆ. ನಮಗಾಗಿ ನೀವು ಪ್ರಾಣ ಕೊಡುತಿದ್ದಿರಿ. ಈಗ ನಿಮಗಾಗಿ ನಾವು ಎದ್ದು ನಿಂತಿದ್ದೇವೆ. ಪೊಲೀಸರ ಪರವಾಗಿ ನಿಲ್ಲುವವರನ್ನು ಬಂದಿಸುತ್ತೇವೆ ಎಂದಿರಲ್ಲ. ನಾವು ಸದಾ ಪೊಲೀಸರೊಂದಿಗೆ ಇದ್ದೇವೆ. ನಮ್ಮನ್ನು ಬಂದಿಸಿ ನೋಡೋಣ.

ಜೈ ಹಿಂದ್

Facebook ಕಾಮೆಂಟ್ಸ್

ಲೇಖಕರ ಕುರಿತು

Sachin anchinal

Writer by Love, Politician by Passion, Engineer by Profession. basically from Vijayapur (Bijapur). and loves to travel, read books and cricket .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!