“ಖಾಲಿ ಹಾಳೆಗಿಂತ ಒಳ್ಳೆ ಕಾವ್ಯ ಇಲ್ರಿ…” ಎಂಬ ಯೋಗರಾಜ್ ಭಟ್ಟರ ಸಾಲುಗಳು ಇಂದೇಕೋ ಪದೇ ಪದೇ ನೆನಪಾಯಿತು. ಕಾರಣ ಇಷ್ಟೇ; ಅದೇನೋ ಬರೆಯ ಬೇಕೆಂದುಕೊಂಡು ಪುಸ್ತಕ ಹಾಗೂ ಪೆನ್ನು ಹಿಡಿದು ಕುಳಿತಿದ್ದೆ. ಇದ್ದಕ್ಕಿದ್ದಂತೆ ಯಾವುದೋ ಬೇರೆ ಆಲೋಚನೆ ಒಂದಷ್ಟು ಹೊತ್ತು ಮನಸ್ಸನ್ನಾವರಿಸಿತು. ಆ ಯೋಚನಾ ಲಹರಿಯಿಂದ ಹೊರ ಬಂದಾಗ ಬರೆಯ ಬೇಕೆಂದುಕೊಂಡ ಹಲವು ಅಂಶಗಳು ಮರೆತು ಹೋಗಿತ್ತು. ಸ್ವಲ್ಪ ಹೊತ್ತಿನ ಮಟ್ಟಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಎಲ್ಲೆಲ್ಲೋ ಸುತ್ತಾಡಿಸಿ ಕೊನೆಗೊಂದು ಕಡೆ ಬಿಡುಗಡೆ ಮಾಡಿ “ಸರಿ ನೀನಿನ್ನು ಮುಂದೆ ಹೋಗು…” ಎಂದಂತಾಗಿತ್ತು ನನಗೆ. ಎದುರಿಗೆ ಬಿಡಿಸಿಟ್ಟ ಖಾಲಿ ಹಾಳೆಯಿತ್ತು. ಆದರೆ ಬರೆಯಲನುವಾದಾಗ ಮಾತ್ರ ಕೈಗೂ ಮನಸಿಗೂ ಸಂಪರ್ಕ ತಪ್ಪಿಹೋದ ಅನುಭವ. ಏನೂ ಬರೆಯದೇ ಇದ್ದರೂ ಆ ತೆರೆದಿಟ್ಟ ಖಾಲಿ ಪುಟವನ್ನು ತಿರುವಿ ಮುಂದಿನ ಪುಟ ಪ್ರವೇಶಿಸಿದೆ. ಇದೊಂಥರಾ ನಮ್ಮ ಕಂಪ್ಯೂಟರ್ ಸ್ಕ್ರೀನ್ ಮೇಲೆ’Right click -> Refresh’ ಮಾಡಿದಂತೆ. ನಿಜವಾಗಿಯೂ ಆಗುವುದು ಏನೂ ಇಲ್ಲ, ಆದರೆ ಎಲ್ಲವೂ ರಿಫ್ರೆಶ್ ಆದಂತೆ ಮನಸನ್ನು ನಂಬಿಸುವ ಹುಚ್ಚು ಪ್ರಯತ್ನ ಅಷ್ಟೇ.
ನಂತರ ಹೊಸ ಖಾಲಿ ಪುಟದಲ್ಲಿ ಬರೆಯಲನುವಾದೆ. ಇಷ್ಟೊತ್ತಿಗೆ ವಿಷಯಗಳೂ ಮತ್ತೆ ನೆನಪಾಗಿದ್ದವು. ಆದರೆ ನನಗೀಗ ನಾನು ಬರೆಯದೇ ಹಾಗೆ ಬಿಟ್ಟು ಬಂದ ಹಿಂದಿನ ಖಾಲಿ ಹಾಳೆ ಏಕೋ ಕಾಡತೊಡಗಿತ್ತು. ಆ ಪುಟದಲ್ಲಿ ಬರೆಯದೇ ಉಳಿದ ಹಲವು ಸಾಲುಗಳಿವೆಯೇನೋ ಅನ್ನಿಸತೊಡಗಿತು. ಮನಸಿಂದ ಹೊರ ಬರಲಾರದೇ ಮೂಲೆ ಸೇರಿದ ಒಂದಷ್ಟು ಆತ್ಮೀಯ ಭಾವಗಳು ಆ ಖಾಲಿ ಹಾಳೆಯಲ್ಲಿ ಅಡಗಿರುವಂತೆ ಭಾಸವಾಗುತ್ತಿತ್ತು. ಮತ್ತೆ ಆ ಖಾಲಿ ಹಾಳೆಯನ್ನೊಮ್ಮೆ ನೋಡುವಾಸೆಯಾಯಿತು. ಪುಟ ತಿರುವಿದೆ. ಮನಸೆಂಬ ಖಾಸಗೀ ಕಛೇರಿಯ ಹಳೆಯ ಧೂಳು ಹಿಡಿದ ಕಡತಗಳನ್ನು ಜೋಡಿಸಿಟ್ಟ ಕೋಣೆಯಂತೆ ಆ ಹಾಳೆಯನ್ನು ಮನಸು ಕಲ್ಪಿಸತೊಡಗಿತು. ನಿಮಗೆ ಈ ಯೋಚನೆ ನೋಡಿ ನಗು ಬಂದರೂ ಬರಬಹುದು. ಏಕೆಂದರೆ, ನನಗೂ ನಗು ಬಂತು ನನ್ನ ಮನಸಿನ ಹುಚ್ಚು ಕಲ್ಪನೆಗೆ. ಆದರೆ ಏನು ಮಾಡಲಿ, ನನಗೆ ಹಾಗೆ ಕಂಡಿದ್ದಂತೂ ನಿಜ.
ಗೆಳೆಯರೆ, ಒಂದು ಕ್ಷಣ ಯೋಚಿಸಿ. ಅದೆಷ್ಟೋ ಜನ ಅದೆಷ್ಟೋ ಸಾರಿ ತಮ್ಮ ಕೆಲವು ಯಾರಲ್ಲಿಯೂ ಹೇಳಲಾರದ ನೋವು, ಅನುಭವ, ದುಃಖ ಅಥವಾ ಖುಷಿಯನ್ನು ಬರೆದಿಡಬೇಕೆಂದುಕೊಂಡು ಬರೆಯಲಾಗದೆ ನಡೆದ ಅಗೋಚರ ಭಾವ ವಿನಿಮಯಕ್ಕೆ ಈ ಖಾಲಿ ಹಾಳೆ ಸಾಕ್ಷಿಯಾಗಿರಬಹುದಲ್ಲವೇ. ಹೀಗೆ ಆಲೋಚಿಸುವಾಗ ನಾವು ಬರೆದು ಹಂಚಿಕೊಳ್ಳುವ ಭಾವಗಳಿಗಿಂತ ಬರೆಯದೆ ಉಳಿದ ಸಾಲುಗಳೇ ಜಾಸ್ತಿ ಇರುತ್ತವೆ ಈ ಬದುಕಿನಲ್ಲಿ. ಅಂದ ಮೇಲೆ ನಮ್ಮ ಬದುಕಿಗೆ ಖಾಲಿ ಹಾಳೆಯೇ ಹೆಚ್ಚು ಆತ್ಮೀಯ ಅನಿಸುವುದಿಲ್ಲವೇ? “ಬರೆಯದ ಸಾಲನು ಹೇಗೆ ಮರೆಯಲಿ…” ಎಂಬಂತೆ ಬರೆಯದ ಸಾಲುಗಳು, ಆಡದೇ ಉಳಿದ ಮಾತುಗಳೇ ನಮ್ಮನ್ನು ಹೆಚ್ಚು ಕಾಡುವುದು. ಹೀಗೆ ಈ ಬರೆಯದ,ಮರೆಯದ ಸಾಲುಗಳು ಇರುವುದು ಖಾಲಿ ಹಾಳೆಗಳಲ್ಲಿ. ಈ ಅದ್ರಶ್ಯ ಸಾಲುಗಳೆಲ್ಲ ಗೋಚರವಾದರೆ ಅದೆಷ್ಟು ಕಾವ್ಯಗಳು ಒಮ್ಮೆಲೇ ಹುಟ್ಟಿಕೊಳ್ಳುತ್ತವೋ ಅನಿಸುವುದು ನನಗೆ. ಈ ಖಾಲಿ ಹಾಳೆ ಎಂದರೆ, ಇಷ್ಟಪಟ್ಟ ಹುಡುಗಿ ಕಣ್ಣೆದುರಿಗಿದ್ದು ಕೂಡ ಅವಳೆದುರು ಭಿನ್ನವಿಸಲಾಗದೆ ಉಳಿದ ಪ್ರೇಮ ನಿವೇದನೆಯಿದ್ದಂತೆ. ಬರೆದಿಡಬೇಕೆಂಬ ಆಸೆ ಉತ್ಕಟವಾಗಿದ್ದರೂ ಬರೆಯದಂತೆ ತಡೆಯುವ ಒಂದು ವಿಚಿತ್ರ ಸನ್ನಿವೇಷದಲ್ಲಿ ಅವ್ಯಕ್ತವಾಗಿ ಅವತರಿಸುವ ಭಾವಗಳ ಒಂದು ರೂಪ.
ಒಂದಷ್ಟು ಹೊತ್ತು ಹಾಗೆ ಈ ದಿಟ್ಟಿಸಿ ಖಾಲಿಪುಟಗಳನ್ನೇ ನೋಡುತ್ತಿದ್ದರೆ ಈ ಮನಸಿನ ಕಛೇರಿಯಹಲವು ‘ಹಿಡನ್ ಫೈಲ್ಸ್’ಗಳು ಒಂದೊಂದಾಗಿತೆರೆದುಕೊಳ್ಳುತ್ತದೆ. ಎಂದೋ ಒಮ್ಮೆ ಅಮ್ಮನಿಗೋಅಪ್ಪನಿಗೋ ಜೋರಾಗಿ ಗದರಿ, ನಂತರ ಪಟ್ಟ ಅವ್ಯಕ್ತಪಶ್ಚತ್ತಾಪವನ್ನು ಈ ಖಾಲಿ ಹಾಳೆ ನೆನಪಿಸಬಹುದು.ಅತಿ ಪ್ರಿಯ ವ್ಯಕ್ತಿಯಿಂದ ನೋವನ್ನುಂಡು, ನಂತರಪ್ರಿಯವಾದವರು ಎಂಬ ಕಾರಣಕ್ಕೆ ಅವರ ‘sorry’ಎಂಬ ಒಂದು ಪದಕ್ಕೆ ತಲೆಬಾಗಿ ಅವರನ್ನಪ್ಪಿಮಾತನಾಡುವಾಗ “ಕ್ಷಮಿಸಲಾರೆ” ಎಂಬ ಮುಗ್ಧಒಳಮನಸಿನ ಕೂಗೊಂದು ಈ ಖಾಲಿ ಹಾಳೆಯಲ್ಲಿಅಗೋಚರವಾಗಿ ಅಚ್ಚೊತ್ತಿರಬಹುದು. ವೈಯಕ್ತಿಕಅಹಂಗಳಿದಾಗಿ ದಾಂಪತ್ಯ ಜೀವನದಿಂದವಿಚ್ಛೇದಿತವಾಗಿರುವ ವ್ಯಕ್ತಿಯೊಬ್ಬನಿಗೆ ಖಾಲಿಹಾಳೆಯಲ್ಲಿ ಅವನ ಪುಟ್ಟ ಮಗುವಿನ ಹಾಲ್ಗೆನ್ನೆಅರಳಬಹುದು. ಬದುಕಿನ ಹೊಸ ಕಥೆಯನ್ನುಬರೆಯುವ ಆಸೆಯಲ್ಲಿ ಪುಟವನ್ನು ತೆರೆದುಬರೆಯಲನುವಾಗುತ್ತಿದ್ದ ಪುಟ್ಟ ಹುಡುಗಿಯೊಬ್ಬಳುಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿ ಖಾಲಿಹಾಳೆಯೊಂದಿಗೆ ಬದುಕಿನ ಪಯಣ ಮುಗಿಸಿದ ಕ್ರೂರನೆನಪು ಅಪ್ಪನೊಬ್ಬನ ಕಣ್ಣಲ್ಲಿ ನೀರುತರಿಸಬಹRefrsh’ರೇಮನಿವೇದಿನೆಗೋಸ್ಕರಪ್ರೇಮಪತ್ರ ಬರೆಯಹೊರಟು ಶಬ್ದಗಳಿಗೆ ತಡಕಾಡಿಕೊನೆಗೆ ಖಾಲಿ ಹಳೆಯ ಫೋಟೋ ತೆಗೆದು “ಗೆಳತಿ,ನನ್ನ ಬದುಕು ಈ ಖಾಲಿ ಹಾಳೆಯಿದ್ದಂತೆ, ನೀನೇಒಂದು ಸುಂದರ ಕವಿತೆಯಾಗಿ ಅದನ್ನು ಅಲಂಕರಿಸು”ಎಂದು ಮೊಬೈಲ್ ಸಂದೇಶ ಕಳಿಸಿದ ಹಳೆಕಥೆಯೊಂದು ಪ್ರೇಮಿಯೊಬ್ಬನಿಗೆ ನೆನಪಾಗಿಒಬ್ಬೊಬ್ಬನೇ ನಗುವಂತೆ ಮಾಡಬಹುದು.
ಹೀಗೆ ಗೆಳೆಯರೇ, ಖಾಲಿ ಹಾಳೆಯಲ್ಲಿ,ಪ್ರಕಟವಾಗದ ಅದೆಷ್ಟೋ ಕಥೆಗಳು ಅಡಗಿರುತ್ತವೆ.ಅದಿನ್ನೆಷ್ಟೋ ನೆನಪುಗಳು ಅವ್ಯಕ್ತ ಅಕ್ಷರಗಳಲ್ಲಿಅಚ್ಚಳಿಯದೆ ಅಚ್ಚಾಗಿರುತ್ತವೆ. ಒಮ್ಮೆ ಹಾಗೆ ಸುಮ್ಮನೆನಿಮ್ಮ ದಿನಚರಿ ಬರೆಯುವ ಡೈರಿಯನ್ನೋ, ಹಳೆಯನೋಟ್ ಬುಕ್ ಗಳನ್ನೋ ತೆರೆಯಿರಿ. ಬರೆಯದೆಉಳಿದ ಖಾಲಿ ಪುಟಗಳನ್ನೊಮ್ಮೆ ದಿಟ್ಟಿಸಿ. ನಿಮಗೂಒಂದಷ್ಟು ಕಾಡುವ ನೆನಪುಗಳು, ಬಾಡದ ಭಾವಗಳುಆ ಖಾಲಿ ಹಾಳೆಗಳಲ್ಲಿ ಮೂಡಬಹುದು. ನಿಮ್ಮಬದುಕು ಕೂಡ ಒಂದು ಸುಂದರ ಕಾವ್ಯವಾಗಬಹುದು.