ಕವಿತೆ

ನನ್ನಲ್ಲಿ ಈಗ…

ಎಲ್ಲಾ ಕನಸುಗಳು ಸ್ತಬ್ಧ
ಎಲ್ಲಾ ಆಸೆಗಳೂ ನಿಶ್ಯಬ್ದ
ಮನಸೊಂತರ ಪ್ರಾರಬ್ಧ
ನಿಮಿಷಕ್ಕೊಮ್ಮೆ ಚಂಚಲತೆಯ ಶಬ್ದ

ನನ್ನಲ್ಲಿ ಈಗ…
ಶೂನ್ಯತೆಯ ಅನಾವರಣ
ನಿನ್ನ ನೆನಪುಗಳ ನಿರ್ವಾಣ
ನೀನೋಂತರ ನಿಧಾನಗತಿಯ ಪಾಷಾಣ
ಆವರಿಸಿದೆ ನನ್ನದೇ ಪರ್ಯಾವರಣ

ನನ್ನಲ್ಲಿ  ಈಗ..
ಮುನಿಸಷ್ಟೇ ಅಲ್ಲ ಕಾರಣ ಯಾರಿಗೆ ಗೊತ್ತು?
ಗೊಂದಲಗಳು ನಿನ್ನನುಪಸ್ಥಿತಿಯ ಹೊತ್ತು
ಮತ್ತೊಂದಿರಬಹುದು ನಿನ್ನ ಮನದ ಸ್ವತ್ತು
ಮಗದೊಂದು ನಿನ್ನ ಮನಶ್ಚಂಚಲದ ಆಪತ್ತು

ನನ್ನಲ್ಲಿ ಈಗ
ಕಾಣುತಿದೆ ಭವಿಷ್ಯದ ಸುಂದರ ನಗು
ಮತ್ತೊಮ್ಮೆ ನೀನೂ ಭಾಗಿಯಾಗು
ಬಿಡಿಸಲಾಗದು ಬಂಧ..ಇದು ಸುಳ್ಳೆ ಸೋಗು
ಸಾಗುಹಾಕದಿರೆ ಉಳಿದೆಲ್ಲ,ಅಳಿವಿದೆ ಪ್ರೀತಿಗೂ

ನನ್ನಲ್ಲಿ ಈಗ ನಿನ್ನಾಗಮದ ನಿರೀಕ್ಷೆ
ಬಂಧಿಸುವ ಇರಾದೆಯಲಿ ಹೃದಯದ ಕಕ್ಷೆ
ನಿನ್ನೊಂದಿನ ಹೊಸಬದುಕಿನ ನೀಲಿನಕ್ಷೆ
ಶೂನ್ಯತೆಯಿಂದ ಪರಿಪೂರ್ಣದ ಅಪೇಕ್ಷೆ

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!