ಅಂಕಣ

ತಲೆ ಮಾಂಸ ರೇಟಾದ್ರೂ ಕಮ್ಮಿ ಆಗ್ಬೋದು ಆದ್ರೆ ಎಮ್ಮೆಲ್ಲೆ ತಲೆ ರೇಟು ಮಾತ್ರ ಪಿಕ್ಸೇಯಾ!!

ಕಾಕಿಗ್ ಬಣ್ಣಾ ಕಾಂತಾ…. ಅಂತಾ ಜೋರಾಗಿ ಹಾಡೇಳುತ್ತಾ ಗ್ವಾಪಾಲಣ್ಣಿ ಹಟ್ಟಿ ಮುಂದೆ ಬಂತು ಮುರುಗನ್. ವಟಾರ್ದಾಗೆ ಒಸ್ದಾಗಿ ಬಂದಿರೋ ಓತಿಕ್ಯಾತನೂವೇ ಹಾಜರಾಗ್ಬಿಡ್ತು.

ಅಗಳಗಳಗಳಗಳೋ… ಇದ್ಯೇನಾಯ್ತ್ಲಾ ಭಿಕ್ನಾಶೀ ನನ್ ಮಗ್ನೇ.. ಯಾಕ್ಲಾ ಕಾಗೆ ಬಗ್ಗೆ ನಿನ್ನ್ ಕಾಗೆ ಕಂಠದಲ್ಲಿ ಕಿರುಚ್ತಾ ಇದೀಯಾ. ಏನಲಾ ಮಾಟರ್ರು??? ಅಂತಾ ಮಾತು ಆರಂಭಿಸ್ತು ಗ್ವಾಪಾಲಣ್ಣಿ.

ಇಷ್ಯಾ ಇದೆ ಕಣಣ್ಣೋ.. ದೊಡ್ಡೋರು ಯೋಳ್ದಂಗೆ ಎಲ್ರಿಗೂ ಕಾಲ ಬತ್ತೈತೆ ಕಣ್ಲಾ. ಕಾಗೆಗೂ ಇಂಪಾರ್ಟೆನ್ಸು ಬಂದೈತೆ ನೋಡಲಾ. ನಿಮ್ಮ್ ಸಿದ್ದಣ್ಣನ್ ಕಾರ್ ಮ್ಯಾಲೆ ಕಾಗೆ ಕೂತಿದ್ದಕ್ಕೆ ಒಸ ಕಾರ್ ತಕೊಂಡೈತೆ ಕಣ್ಲಾ.

ಥತ್ತೇರಿಕೆ. ಇದೇನಾಗೈತೋ ಸಿದ್ದಣ್ಣಂಗೆ. ಬರೀ ಕಾಗೆ ಕೂತಿದ್ದಕ್ಕೆ ಇಂಗ್ ಮಾಡೈತೆ ಅಂದ್ರೆ ಇನ್ನಾ ಕಕ್ಕ ಏನಾದ್ರು ಮಾಡಿದ್ರೆ ಅದಿನ್ನೇನು ಮಾಡ್ತಿತ್ಲಾ. ಬುಡಲಾ ಬ್ಯಾರೆ ಏನಾದ್ರು ಸಮಾಚಾರ ಮಾತಾಡ್ಲಾ ಅಂತೇಳ್ತು ಗ್ವಾಪಾಲಣ್ಣಿ.

ಗ್ವಾಪಾಲಣ್ಣಿ… ಅದ್ಯೇನ್ಲಾ ರಾಜ್ಸಭೆ ಓಟ್ಗಾಗಿ ಕೋಟಿ ಕೋಟಿ ಕೊಟ್ಟಾವ್ರಂತೆ. ಮುಂಬೈಗೆ ದೇವ್ರು ದಿಂಡ್ರನ್ನ ನೋಡಾಕೆ ಪ್ರೀ ಆಗಿ ಕರ್ಕೊಂಡು ಓಗಾವ್ರಂತೆ ಅಂತಾ ಕೇಳ್ತು ಓತಿಕ್ಯಾತ.

ಊ ಕಣಲಾ. ಈವಾಗಿನ್ ದುನ್ಯಾದಲ್ಲಿ ರಾಜ್ಕೀಯ ಮಾಡ್ಕಂಡಿರೋದೇ ಬೆಸ್ಟು ಕಣಲಾ.. ನೀನ್ಬೇಡಾ ಅಂದ್ರೂ ನಿನ್ನ್ ಉಡಿಕ್ಕೊಂಡ್ ಬರತ್ತೆ ಕಾಂಚಾಣಾ ಅಂತ ಉತ್ರ ಕೊಡ್ತು ಗ್ವಾಪಾಲಣ್ಣಿ.

ನಮ್ಮ್ ಕೇಣಿಗೂ ದುಡ್ಡು ಕೊಟ್ಟಾವ್ರಂತೆ. ಕೇಣಿ ಮೊದ್ಲೇ ಕೋಟ್ಯಾದೀಸ. ಅದಿಕ್ಕ್ ಯಾಕ್ಲಾ ಈ ಉಸಾಬರೀ ಅಂತಾ ಮುರುಗನ್ ಕೇಳ್ತು ಓತಿಕ್ಯಾತ.

ತುಂಬಿದ್ ಕೊಡ ತುಳುಕುತ್ತೇನ್ಲಾ? ನಿಮ್ಮ್ ಕೇಣಿ ಮೊದ್ಲೇ ಶೋಕೀಲಾಲ. ಇನ್ನಾ ಪ್ರೀ ಆಗಿ ದುಡ್ಡೂಟ್ರಿಪ್ಪೂ ಸಿಗತ್ತೆ ಅಂದ್ರೆ ಬುಡತ್ತೇನ್ಲಾ? ನಾನೂವೇ ನೆಕ್ಸ್ಟ್ ಇಲೆಕ್ಷನ್ನಾಗೆ ಯಾರಾರ ಕೈಯೋ ಕಾಲೋ ಇಡಿಕ್ಕೊಂಡು ಎಮ್ಮೆಲ್ಲೆ ಆಗ್ಬುಡ್ತೀನಪ್ಪಾ… ನಮ್ಮ್ ಮಂಡ್ಯಾ, ಮಳ್ವಳ್ಳಿ,ಮದ್ದೋರ್ನಾಗ ರಿಕ್ಸಾ, ಜೀಪ್ನಾಗೇ ಜನ್ಗಳನ್ನ ತುಂಬ್ಕೊಂಡು ಓದಾಂಗೆ ರಾಜ್ಸಭೆ ಇಲೆಕ್ಸನ್ ಟೇಮ್ನಲ್ಲಿ ಎಮ್ಮೆಲ್ಲೆಗಳನ್ನ ಪ್ಲೈಟ್ನಲ್ಲಿ ತುಂಬಿಸ್ಕೊಂಡು ರೆಸಾರ್ಟ್ಗೆ ಒತ್ತೋಯ್ತಾರೆ ಕಣಲಾ…ಇವಾಗ ತಲೆ ಮಾಂಸ ರೇಟಾದ್ರು ಕಮ್ಮಿ ಆಯ್ತದೆ, ಆದ್ರೆ ಎಮ್ಮೆಲ್ಲೆ ತಲೆ ರೇಟೂ ಮಾತ್ರ ಪಿಕ್ಸೇಯಾ ಅಂತೇಳ್ತು ಮುರುಗನ್.

ಅಲ್ಲಾ ಕಣ್ಲಾ, ನಿಮ್ಮ್ ಕುಮಾರಣ್ಣನ್ ಕುಚಿಕ್ಕು ದೋಸ್ತು ಜಮೀರು ಆಂಡ್ ಗ್ರೂಪು ಕಾಂಗ್ರೆಸ್ ಪರ ಓಟಾಕಿದೆ ಅಂತ ಟೀವಿಯಲ್ಲಿ ರಾಧಮ್ಮ ಗಂಟ್ಲರ್ಕೊಂಡು ಯೋಳ್ತಿದ್ರು. ಔದೇನ್ಲಾ?? ಕುಮಾರಣ್ಣ ನಮ್ಮ ಅಣ್ಣ.ದೊಡ್ಡ್ ಗೌಡ್ರು ನಮ್ಮ್ ತಂದೆ ಅಂತೆಲ್ಲಾ ಯೋಳ್ತಿತ್ತು ಜಮೀರು ಅಂತ ಕೇಳ್ತು ಓತಿಕ್ಯಾತ.

ರಾಜ್ಕೀಯ ಅಂದ್ರೆ ಏನಾರೂ ಆಗುತ್ತೆ ಕಣ್ಲಾ. ದಿನ್ ಬೆಳ್ಗಾದ್ರೆ ಒಸ ಅಣ್ಣ, ಅಪ್ಪ ಸಿಕ್ಕ್ಬಿಡ್ತವೆ ನಮ್ಮ್ ರಾಜ್ಕೀಯದವ್ರಿಗೆ. ಕುಮಾರಣ್ಣ ಪೋನ್ ಮಾಡಿಲ್ಲ ಜೆಡಿಎಸ್ಗೆ ವೋಟ್ಮಾಡೀ ಅಂತ. ಅದ್ಕೆ ಮಾಡಿಲ್ಲ ಅಂತ ಯೋಳೈತೆ ಕಣ್ಲಾ ಜಮೀರು ಅಂತ ಸಮಜಾಯ್ಸಿ ಕೊಡ್ತು ಗ್ವಾಪಾಲಣ್ಣಿ.

ನಿಮ್ಮ್ ಉಚ್ಚ ವೆಂಕ್ಟದ್ ಪೊರ್ಕಿ ಉಚ್ಚ ವೆಂಕಟ್ ಪಿಚ್ಚರ್ ಎಲ್ಲಿಗಂಟಾ ಬಂತಲಾ. ಯಾವಾಗಲಾ ರಿಲೀಜೂ ಅಂತಾ ಮುರುಗನ್ ಕುಟುಕ್ತು ಓತಿಕ್ಯಾತ.!!

ಅದ್ಯಾಕಲಾ ಉಚ್ಚ ವೆಂಕ್ಟು ಅಣ್ಣನ್ ಬಗ್ಗೆ ಯಾವಾಗ್ಲೂ ತಮಾಸೆ ಮಾಡ್ತೀಯಾ? ಇಸ್ವದಾದ್ಯಂತ ಪ್ಯಾನೂ ಪಾಲೋವರ್ಸೂ ಇದಾರ್ ಕಣ್ಲಾ ಅಣ್ಣಂಗೆ. ಪೊರ್ಕಿ ಉಚ್ಚ ವೆಂಕಟ್ ಪಿಚ್ಚರ್ ಸಾಂಗೆಲ್ಲ ಮುಗ್ಸಿ ಈವಾಗ್ ಈರೋಯಿನ್ ಸಿಲೆಕ್ಟ್ ಮಾಡ್ತೈತೆ ಕಣ್ಲಾ ವೆಂಕ್ಟಣ್ಣ ಅಂತ ಕ್ವಾಪ್ದಲ್ಲೇ ಉತ್ರ ಕೊಡ್ತು ಮುರುಗನ್.

ಕೂಲ್ ಡೌನ್ ಮುರುಗನ್!! ಅರ್ವತ್ತು ವರ್ಸದ ರವಿಮಾಮಂಗೆ ಲಿಪ್ಟಲ್ಲೇ ಈರೋಯಿನ್ ಸಿಗುತ್ತೆ ಅಂತಾದ್ರೆ, ಸ್ಟೈಲಿಶ್ ಆಂಡ್ ಹ್ಯಾಂಡ್ಸಮ್ ನಿಮ್ಮ್ ವೆಂಕ್ಟಣ್ಣಂಗೂ ಸಿಕ್ಕೇ ಸಿಗುತ್ತೆ ಕಣಲಾ.. ನಡೀಲಾ ಎತ್ತಲಾ ನಿನ್ನ ಗಾಡೀನಾ.. ಪಟ್ಣಾದ ಟೆಂಟ್ನಾಗೆ ಜಗ್ಗುದಾದ ಪಿಚ್ಚರ್ ನೋಡ್ಬಿಟ್ಟು ಮಿಲ್ಟ್ರಿ ಓಟ್ಲಲ್ಲಿ ತಲೆ ಮಾಂಸ ತಿಂದ್ಬರೋಣ ಅಂತ ಗ್ವಾಪಾಲಣ್ಣಿ ಯೋಳಿದ್ದಂಗೆ ಮುರುಗನ್ ಓತಿಕ್ಯಾತ ಇಬ್ರೂ ಜಾಗ ಖಾಲಿ ಮಾಡಿದ್ವು!!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!