Featured ಅಂಕಣ

ಗುಬ್ಬಚ್ಚಿಗಳ ಕೊರಳಿನಿಂದ ಗಿಡುಗನ ದನಿ ಹೊರಡಿಸುತ್ತಿರುವ “ಯುವಾ ಬ್ರಿಗೇಡ್”ಗೆ ಹೆಮ್ಮೆಯ ಎರಡನೇ ವರ್ಷ.

“ಬನ್ನಿ ಗುಬ್ಬಚ್ಚಿಗಳ ಕೊರಳಿನಿಂದ ಗಿಡುಗನ ದನಿ ಹೊರಡಿಸೋಣ! ದನಗಾಹಿ ಬಾಲಕರು ರಾಷ್ಟ್ರರಥ ಚಾಲಕರಾಗೋಣ! ಅಗ್ನಿಪಥಕ್ಕೆ ನಿಮಗಿದೋ ಆಹ್ವಾನ!” ಈ ಮೇಲಿನ ಸಾಲನ್ನು ಒಂದು ಸಲ ಓದುತ್ತಿದ್ದಂತೆ ದೇಶಭಕ್ತಿಯ ಭಾವ ಮೈ ಮನಸ್ಸನ್ನು ಚೂರೂ ಬಿಡದೇ ಆವರಿಸುತ್ತದೆ,ಎರಡನೇ ಬಾರಿ ಮತ್ತೆ ಓದಿದರೆ ನಾನೂ ಈ ದೇಶಕ್ಕೇನಾದರೂ ಮಾಡಬೇಕೆಂದೆನಿಸುತ್ತದೆ ಮೂರನೇ ಬಾರಿ ಓದಿ ಮುಗಿಸುವುದರೊಳಗೆ ದೇಶಸೇವೆ ಮಾಡಲು ಅಣಿಯಾಗಿ ನಾವೇ ಹೊರಡುತ್ತೇವೆ..ಅಲ್ಲವೇ? ಹೌದು ಅದರಲ್ಲಿ ಯಾವುದೇ ಅನುಮಾನ ಬೇಡ. ಇದು ರಾಜಕೀಯ ಪುಢಾರಿಗಳು ಕಟ್ಟಿಕೊಂಡ ಗುಂಪಿನಿಂದ ಬಂದ ಸಾಲುಗಳಲ್ಲ ಅಥವಾ ಯಾವುದೋ ಒಬ್ಬ ವ್ಯಕ್ತಿಯ ಹೆಸರಲ್ಲಿ ಕಟ್ಟಿಕೊಂಡ ಅಭಿಮಾನಿ ಸಂಘಟನೆಯ ಪೋಸ್ಟರ್ ಮೇಲಿನ ಸಾಹಿತ್ಯವಲ್ಲ ಬದಲಾಗಿ ಭಾರತವನ್ನು “ವಿಶ್ವಗುರು” ಮಾಡಲು ಹಗಲಿರುಳು ಶ್ರಮಿಸುತ್ತಿರುವ ಅಸಾಮಾನ್ಯ ಯುವ ಸಂಘಟನೆಯೊಂದರ ಧ್ಯೇಯ ವಾಕ್ಯ. ಅದೇ “ಯುವಾ ಬ್ರಿಗೇಡ್”.

ಈ ಸಂಘಟನೆಯ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಈಗ ಮತ್ತೆ ಬರೆಯಬೇಕೆಂದೆನಿಸುತ್ತಿದೆ. ಕಾರಣವೇನು ?? ಅವರು ಮಾಡುತ್ತಿರುವ ಕೆಲಸವನ್ನು ಗೌರವಿಸುವ ಚಿಕ್ಕ ಕೆಲಸ ಇದು ಅಷ್ಟೇ. ಅದ್ಯಾವುದೋ ಶಕ್ತಿ ಈ ಸಂಘಟನೆಯ ಜೊತೆಗಿದೆ ಬಹುಷ ಅದು “ವಿವೇಕ ಶಕ್ತಿ”ಯೇ ಇರಬೇಕು. ಇಲ್ಲಿರುವ ಯುವಕಾರ್ಯಾರೂ ರಾಜಕೀಯ ಫಲಾಪೇಕ್ಷೆಯನ್ನಿಟ್ಟುಕೊಂಡವರೇ ಅಲ್ಲ. ಇವರುಗಳಿಗೆ   ಚಂದದ ಗುರಿಯನ್ನು  “ಮಾರ್ಗದರ್ಶಕ” ನೊಬ್ಬ ಅದಾಗಲೇ ಕಟ್ಟಿಕೊಟ್ಟಿದ್ದಾನೆ ಮತ್ತು ಪ್ರತೀಕ್ಷಣವೂ ಅವರ ಕೈ ಹಿಡಿದು ನಡೆಸುತ್ತಿದ್ದಾನೆ.

“ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ” ಸ್ವಾಮಿ ವಿವೇಕಾನಂದರು ಹೀಗೊಂದು ಅದ್ಭುತವಾದ ಮಾತನ್ನು ಹೇಳಿದ್ದರು ಅದನ್ನು ನಾವು ಪಾಲಿಸಿದರೆ ಮಾತ್ರ ಭಾರತ ಪ್ರಜ್ವಲಿಸಲು ಸಾಧ್ಯ.ನಮ್ಮ ಯೋಚನೆಗಳು ಯಾವಾಗಲೂ ‘ನಾನು,ನನ್ನದು’ ಎಂಬ ಅಹಂ ನ ಸುತ್ತಲೇ ಸುತ್ತುವಂತೆ ನಾವು ಜೀವಿಸುತ್ತಿದ್ದೇವೆ.ಇದರಿಂದ ಹೊರಬಂದು ಸಮಾಜವನ್ನು ನೋಡಿದರೆ ಸೇವಾ ಮನೋಭಾವ ನಮ್ಮಲ್ಲಿ ಮನೆ ಮಾಡಬಹುದು. ಸಧ್ಯದ ಪರಿಸ್ಥಿತಿಯಲ್ಲಿ ಈ ತರದ ಎಷ್ಟು ಸಂಘಟನೆಗಳು ಕೆಲಸ ಮಾಡುತ್ತಿವೆ ಎಂಬುದೂ ಒಂದು ದೊಡ್ಡ ಪ್ರಶ್ನೆ ಆದರೆ ಇರುವ ಕೆಲವೇ ಕೆಲವು ಸಂಘಟನೆಗಳಲ್ಲಿ “ಯುವಾ ಬ್ರಿಗೇಡ್” ಕೂಡಾ ಒಂದು.

ಎರಡು ವರ್ಷ ಆಗಿಹೋಯಿತು ಯುವಾ ಬ್ರಿಗೇಡ್ ಎಂಬ ಸಂಘಟನೆಯೊಂದು ಜೀವ ತಳೆದು..ಈ ಬ್ರಿಗೇಡಿಯರ್ ಗಳ ಯೋಚನೆ ಸಮಾಜಮುಖಿಯಾದದ್ದು ಆದರೆ ಸ್ವಾರ್ಥವೆಂಬ ಸೋಂಕು ಯಾರಿಗೂ ತಾಗಲಿಲ್ಲ..ಅದೆಷ್ಟೋ ಕೆಲಸವನ್ನು ನಿರಂತರವಾಗಿ ರಾಜ್ಯಾದ್ಯಂತ ಯುವಕರು ಮಾಡತೊಡಗಿದ್ದರು,ಅವರಿಗೆ “ನಾನು” ಬೆಳೆಯಬೇಕೆಂಬ ಅಹಂ ಎಂದೂ ಮೂಡಲೇ ಇಲ್ಲ..ಆದರೆ ಆಂತರಿಕವಾಗಿ ಖಂಡಿತವಾಗಿಯೂ ಅವರೆಲ್ಲರ ಬೆಳವಣಿಗೆ ಆಗುತ್ತಿದೆ ಎನ್ನುವುದು ಪ್ರತಿಯೊಬ್ಬ “ಬ್ರಿಗೇಡಿಯರ್” ನ ಅನಿಸಿಕೆ.ಸಮಾಜಕ್ಕೆ ಏನನ್ನಾದರೂ ನೀಡಬೇಕೆಂಬ ನಮ್ಮ ಮನಸ್ಥಿತಿಗೆ, ನಿಷ್ಕಲ್ಮಷವಾದ ನಮ್ಮ ಸೇವಾ ಮನೋಭಾವನೆಗೆ, ನಮ್ಮೊಳಗಿ‌ನ ಅದೆಷ್ಟೋ ಒಳ್ಳೆಯ ವಿಚಾರಗಳಿಗೆ ನೀರೆರೆಯುವ ಕೆಲಸ ಮಾಡುವ ಸಂಘಟನೆಯೇ “ಯುವಾ ಬ್ರಿಗೇಡ್”. ಏನು ಮಾಡಬೇಕೆಂದು ಹೇಳಲು ಅವರಿಗೆ ಚಕ್ರವರ್ತಿ ಸೂಲಿಬೆಲೆಯವರಂತಹ ಮಾರ್ಗದರ್ಶಕರಿದ್ದಾರೆ..ಸ್ವತ: ಕೆಲವು ಯುವಾ ಬ್ರಿಗೇಡ್ ನ ಕೆಲಸದಲ್ಲಿ ತೊಡಗಿಕೊಂಡ ನನಗೆ ಅದೆಷ್ಟೋ ಸ್ನೇಹಿತರ ಸಂಪರ್ಕದಿಂದ ” ನಾನು” ಎಂಬ ಅಹಂಕಾರ ಚೂರಾದರೂ ಕಮ್ಮಿಯಾಗಿದೆ ಅನ್ನಿಸುತ್ತಿದೆ.”ನಾವು” ಎಂಬ ಮನಸ್ಥಿತಿಯ ನನ್ನೊಳಗೆ ಮನೆ ಮಾಡಿದೆ..ಜಾತಿ,ಧರ್ಮವ ಮೀರಿ ಭಾರತ ಕಟ್ಟುವ ಕೆಲಸವನ್ನು ಮಾಡುವುದೇ ಚಂದ..

ಸಂಸ್ಕೃತಿ,ಪರಂಪರೆಯನ್ನು ಮೇಳೈಸಿಕೊಂಡಿರುವ ಭಾರತಾಂಬೆಯ ಸೇವೆ ಮಾಡಲು ನಮಗೆ ಯಾವುದೇ ಸಿದ್ಧಾಂತದ ತಲೆಬರಹ ಬೇಕಿಲ್ಲ ” ನಾನು ಭಾರತೀಯ”
ಎಂಬ ಹೆಮ್ಮೆ ಮತ್ತು ದೇಶಕ್ಕಾಗಿ ಬದುಕುವ ನಿಷ್ಕಲ್ಮಷವಾದ ಮನಸ್ಥಿತಿ ಇವೆರಡು ಸಾಕು..”ಭಾರತ್ ಮಾತಾ ಕೀ ಜೈ” ಎನ್ನುವಾಗ ಯಾವುದೇ ಹಿಂಜರಿಕೆ ಬೇಡ ಎಂಬ ಯುವಾ ಬ್ರಿಗೇಡ್ ನ ವಿಚಾರಗಳು ಸಮಾಜಕ್ಕೆ ಅತ್ಯವಶ್ಯವಿರುವ ಒಬ್ಬ ಆದರ್ಷ ವ್ಯಕ್ತಿಯನ್ನು ರೂಪಿಸುತ್ತದೆ.

ಸತ್ಸಂಗತ್ವೆ ನಿಸ್ಸಂಗತ್ವಮ್ ನಿಸ್ಸಂಗತ್ವೆ ನಿರ್ಮೋಹತ್ವಮ್|
ನಿರ್ಮೋಹತ್ವೆ ನಿಶ್ಚಲತತ್ವಮ್ ನಿಶ್ಚಲತತ್ವೆ ಜೀವನ ಮುಕ್ತಿ: ||

ಈ ಮೇಲಿನ ಸಂಸ್ಕೃತ ಶ್ಲೋಕ ನಮ್ಮ ಬದುಕಿನ ಸಾರವನ್ನು ತಿಳಿಸುತ್ತದೆ. ನಮ್ಮ ಬದುಕು ನಾವು ಯಾವತರದ ವ್ಯಕ್ತಿಗಳ ಸಂಘವನ್ನು ಮಾಡುತ್ತೇವೆ ಎಂಬುದರ ಮೇಲೆ ನಿರ್ಧಾರಿತವಾಗಿರುತ್ತದೆ..ಮೋಹ, ಜಢತ್ವಗಳ ನಿವಾರಣೆಯಾಗಿ ಮುಕ್ತಿ ಪಡೆವ ಮಾರ್ಗದಲ್ಲಿ ಯಶಗಳಿಸಬೇಕೆಂದರೆ ಸಜ್ಜನರ ಸಂಘವಾಗಬೇಕು. ಸದ್ವಿಚಾರಗಳ ವಿನಿಯೋಗವಾಗಿ ಪರಿಪೂರ್ಣವಾದ ವ್ಯಕ್ತಿತ್ವದ  ನಿರ್ಮಾಣವಾಗಬೇಕೆಂದರೆ  “ಯುವಾ ಬ್ರಿಗೇಡ್” ನಂತಹ ಸಂಘಟನೆಯಲ್ಲಿ ತೊಡಗಿಕೊಳ್ಳುವುದರಿಂದ ಮಾತ್ರ ಸಾಧ್ಯ.

ಸ್ವಲ್ಪ ಹೆಸರುಗಳಿಸಿದ ಅದ್ಯಾವುದೋ ವ್ಯಕ್ತಿಗಳ ಹೆಸರಿನಲ್ಲಿ ಮಾರಿಗೊಂದು “ಅಭಿಮಾನಿಗಳ ಸಂಘ” ಕಟ್ಟಿಕೊಂಡು ಹೆಸರು,ಹಣಕ್ಕಾಗಿ ಭವಿಷ್ಯ ಹಾಳುಮಾಡಿಕೊಂಡ ಅದೆಷ್ಟೋ ಯುವಕರುಗಳಿಗಿಂತ ಭಿನ್ನವಾಗಿರುವ ಸಂಘಟನೆಯೇ “ಯುವಾ ಬ್ರಿಗೇಡ್”. ಸಮಾಜಕ್ಕೆ ಒಳಿತು ಮಾಡುವ ಮನಸ್ಸು ಮತ್ತು ಮನಸ್ಪೂರ್ತಿಯಾಗಿ ಮಾಡಿದ ಕೆಲಸದಿಂದ ನನ್ನೊಳಗಿನ ಅಹಂಕಾರದ ದಮನವಾದಾಗ ಅದನ್ನು ಸಮಾಜಸೇವೆ ಎನ್ನಬಹುದು. ಸೇವೆ ಮಾಡಲು ಜಾತಿ,ಧರ್ಮ,ಮತ ಪಂಥಗಳ ಗಡಿರೇಖೆಗಳಿಲ್ಲ.. ನಾವೆಲ್ಲರೂ ಒಂದು ಎಂಬ ಮನೋಭಾವ ಮನದೊಳಗೆ ಮನೆಮಾಡಿದಾಗ ಒಬ್ಬ ವ್ಯಕ್ತಿಯು ಯಾವ ನಿರೀಕ್ಷೆಯೂ ಇಲ್ಲದೇನೂ ಸೇವೆ ಮಾಡಬಲ್ಲ ಅದು ನಿಸ್ವಾರ್ಥ ಸೇವಾ ಮನೋಭಾವ..

ಕಳೆದ ಮೇ 22ಕ್ಕೆ ಪ್ರಧಾನಿ ಮೋದಿಯವರಿಂದಲೇ ಪ್ರಶಂಸೆಗೆ ಒಳಗಾದ ನಿಮಗೆ ಕೇವಲ ನೀವೆ ಸರಿಸಾಟಿ..ಕಲ್ಯಾಣಿ ಸ್ವಚ್ಛ ಗೊಳಿಸುವ ನಿಮ್ಮ ಯೋಜನೆ ಪ್ರಧಾನಿಯವರನ್ನೂ ಆಕರ್ಷಿಸಿದೆ. ” ಕೋಟಿ ಮನಸ್ಸು ಒಂದೇ ಕನಸು” ಅದು “ವಿಶ್ವಗುರು ಭಾರತ” ಎಂಬ ನಿಮ್ಮ ಧ್ಯೇಯ ವಾಕ್ಯವೇ ನಮ್ಮ ಪ್ರಧಾನಿಯ ಧ್ಯೇಯ ವಾಕ್ಯ ಕೂಡ.

ನಿಸ್ವಾರ್ಥ ಸೇವೆಗೆ ಇನ್ನೊಂದು ಅರ್ಥವಾಗಿರುವ ನೀವು ಭಾರತಾಂಬೆಯ ಹೆಮ್ಮೆಯ ಪುತ್ರರು. ಭವ್ಯ ಭಾರತದ ಪರಂಪರೆ ಸಂಸ್ಕೃತಿಯ ಸಾರವನ್ನು ಜಗತ್ತಿಗೇ ಬಿತ್ತರಿಸುವ ಬಹುದೊಡ್ಡ ಕೆಲಸ ಮಾಡುತ್ತಿರುವ ನಿಮಗೆಲ್ಲರಿಗೂ ಅಭಿನಂದನೆಗಳು.ಹಾರ ತುರಾಯಿಗಳಿಗೆ ಅಸೆ ಪಡದ ನಿಮ್ಮತನವ ಹೆಮ್ಮೆಯಿಂದ ಮುಂದುವರೆಸಿ. ಮನಸ್ಸುಗಳು ಸಂಘಟಿತವಾದಾಗ ಸಮಾಜದಲ್ಲಿ ಮಹತ್ವದ ಬದಲಾವಣೆ ಸಾಧ್ಯ. ರಾಜಕೀಯ ಇಚ್ಛಾಶಕ್ತಿಯ ಸೋಂಕೂ ತಗುಲದ ನಿಮ್ಮ ಸೇವೆಯಿದು ನಿರಂತರವಾಗಲಿ.

ಎರಡು ವರ್ಷ ಪೂರೈಸುತ್ತಿರುವ “ಯುವಾ ಬ್ರಿಗೇಡ್” ಗೆ “ರೀಡೂ” ಬಳಗದಿಂದ ಶುಭಾಶಯಗಳು.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!