ಅಂಕಣ

ಬುದ್ಧ ನಕ್ಕ – ಇದು ಭಾರತದ ಹೆಮ್ಮೆಯ ಪರಮಾಣು ಪರೀಕ್ಷೆಯ ಕಥೆ

ಅದು ಮೇ 11, 1998  ಬುದ್ಧ ಪೂರ್ಣಿಮೆಯ ಪವಿತ್ರ ದಿನ. ದೆಹಲಿಯ 7RCR ರಸ್ತೆಯಲ್ಲಿರುವ ಪ್ರಧಾನ ಮಂತ್ರಿ ನಿವಾಸದಲ್ಲಿ ಪತ್ರಿಕಾ ವರದಿಗಾರರು ಕಿಕ್ಕಿರಿದು ತುಂಬಿದ್ದರು. ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಪತ್ರಕರ್ತರನ್ನುದ್ದೇಶಿಸಿ ಹೇಳಿದರು ” ಇವತ್ತು 15:45  ಘಂಟೆಗೆ ಭಾರತ ಭೂ ತಳದಲ್ಲಿ 3 ಪರಮಾಣು ಪರೀಕ್ಷೆಗಳನ್ನು ಪೋಖ್ರಾನ್ ಪ್ರಾಂತ್ಯದಲ್ಲಿ ನಡೆಸಲಾಯಿತು, ಎಲ್ಲ ಪರೀಕ್ಷೆಗಳು ಯಶಸ್ವಿಯಾಗಿದ್ದು, ವಾತಾವರಣಕ್ಕೆ ಯಾವುದೇ ವಿಕಿರಣಗಳ ಸೋರಿಕೆಯಾಗಿರುವದಿಲ್ಲ. ” ಅದು ವಿಶ್ವವೇ ದಿಗ್ಭ್ರಮೆಗೊಂಡು ಭಾರತದೆಡೆಗೆ ನೋಡಿದ ಕ್ಷಣ. ವಿಶ್ವ ನಾಯಕರ ವಿರೋಧಗಳ ನಡುವೆ, ಆಗಿನ ಭಾರತದ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಮೇ 11 ಮತ್ತು ಮೇ 13 ನೇ ತಾರೀಕಿನಂದು ಒಟ್ಟು 5 ಪರಮಾಣು ಪರೀಕ್ಷೆಗಳನ್ನು ಯಾರಿಗೂ ತಿಳಿಯದಂತೆ ನಡೆಸಿತ್ತು. ಅಮೇರಿಕಾದ ಸಿಐಎಗೆ ಇದು ದೊಡ್ಡ ಹೊಡೆತ. ಅಮೇರಿಕಾದ ಸಿಐಎನ ಕೆಲೆವೇ ಕೆಲವು ಲೋಪಗಲ್ಲಿ ಭಾರತದ ಪರಮಾಣು ಪರೀಕ್ಷೆ ಮುಂಚೂಣಿಯಲ್ಲಿ ನಿಲ್ಲುತ್ತದೆ. ಈಗ ಆ ಘಟನೆಗೆ 18 ವರ್ಷ. ಈ ಸಂದರ್ಭದಲ್ಲಿ ಭಾರತೀಯ ವಿಜ್ಞಾನಿಗಳ ಹಾಗೂ ಭಾರತೀಯ ಸೇನೆಯ ಮಹತ್ವವಾದ ಪರಮಾಣು ಪರೀಕ್ಷಾ ಯೋಜನೆಯ ಸ್ವಾರಸ್ಯಕರವಾದ ನೆನಪುಗಳ ಸಂಕ್ಷಿಪ್ತವಾದ ಮೆಲಕು.

ಅಟಲ್ ಬಿಹಾರಿ ವಾಜಪೇಯಿಯವರು ಎರಡನೇ ಬಾರಿ ಪ್ರಧಾನಿಯಾದ ಸಮಯ. ವಾಜಪೇಯಿ ಅಂದಿನ ಭಾರತದ ಇಬ್ಬರು ಶ್ರೇಷ್ಠ ವಿಜ್ಞಾನಿಗಳಾದ ಚಿದಂಬರಂ ಮತ್ತು ಅಬ್ಧುಲ್ ಕಲಾಂರನ್ನು ಕರೆದು ನಿಮಗೆ ಪರಮಾಣು ಪರೀಕ್ಷೆ ನಡೆಸಲು ಎಷ್ಟು ಸಮಯ ಬೇಕು ಎಂದು ಕೇಳುತ್ತಾರೆ ಆಗ ಕಲಾಂ ನೀವು ಈಗ ಆಜ್ಞೆ ನೀಡಿದರೆ ಹದಿಮೂರನೇ ದಿನ ಪರೀಕ್ಷೆ ನಡೆಸಬಹುದು ಎಂದರು. ತಡಮಾಡದ ಅಟಲ್ ಬಿಹಾರಿ ವಾಜಪೇಯಿ ಆಜ್ಞೆ ನಿಡಿಯೇ ಬಿಡುತ್ತಾರೆ. ಅದು ಸ್ವತಂತ್ರ ಭಾರತದ ಪ್ರಧಾನಿಯೋಬ್ಬರು ತಗೆದುಕೊಂಡ ಅತ್ಯಂತ ಮಹತ್ವವಾದ ನಿರ್ಣಯಗಳಲ್ಲೋಂದು. ಅಲ್ಲಿಯವರೆಗೂ ಅಂದರೆ 1998 ರ ವರೆಗೂ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಪರಮಾಣು ಪರೀಕ್ಷೆ ನಡೆಸಲಾಗದೇ ಕೈ ಕಟ್ಟಿ ಕುಳಿತಿದ್ದ ವಿಜ್ಞಾನಿಗಳಿಗೆ ವಾಜಪೆಯಿಯರವರ ನಿರ್ಣಯ ಹುಮ್ಮಸ್ಸು ತರಿಸಿತ್ತು. ಆದರೆ ಮುಂದಿದ್ದದ್ದು ಕಠಿಣವಾದ ಕೆಲಸ.

ಮುಂದಿದ್ದ ಸವಾಲುಗಳು ಸುಲಭದ್ದಾಗಿರಲಿಲ್ಲ ಪರೀಕ್ಷೆ ನಡೆಸಬೇಕಿದ್ದ ಜಾಗ ಮರುಭೂಮಿ, ರಾಜಸ್ಥಾನದ ಪೋಖ್ರಾನ್. ಈ ಹಿಂದೆ 1982, 1995 ಮತ್ತು 1997 ರಲ್ಲಿ ನಡೆಸಬೇಕಿದ್ದ ಪರಮಾಣು ಪರೀಕ್ಷೆಯನ್ನು ಅಮೆರಿಕಾದ ಗುಪ್ತಚರ ಇಲಾಕೆ ಮಾಹಿತಿ ನೀಡಿ ತಡೆಹಿಡಿದಿತ್ತು. ಆದ್ದರಿಂದ ಒಂದು ಸಣ್ಣ ಮಾಹಿತಿಯೂ ಸೋರಿಕೆಯಾಗದಂತೆ, ವಿಶ್ವದ ಕಣ್ಣು ತಪ್ಪಿಸಿ ಪರೀಕ್ಷೆ ನಡೆಸಬೇಕಿತ್ತು. ಕೇವಲ ನೆಲದ ಮೇಲಿನ ಗುಪ್ತಚರ್ಯ ಅಲ್ಲ, ಆಕಾಶದಲ್ಲಿದ್ದ ಅಮೆರಿಕದ ನಾಲ್ಕು ಸ್ಯಾಟಲೈಟ್’ಗಳ ಕಣ್ಣು ತಪ್ಪಿಸಬೇಕಿತ್ತು. ಆ ಸ್ಯಾಟಲೈಟ್ ಗಳು ಎಷ್ಟು ನಿಖರವಾಗಿದ್ದವೆಂದರೆ ನೆಲದ ಮೇಲಿರುವ ಭಾರತೀಯ ಸೈನಿಕರ ಕೈ ಗಡಿಯಾರದ ಚಿತ್ರ ತಗೆದು ಸಮಯ ಹೇಳಿಬಿಡಬಹುದಿತ್ತು. ಆದರೆ ಭಾರತೀಯ ಸೈನಿಕರ ಮತ್ತು ವಿಜ್ಞಾನಿಗಳ ಇಚ್ಚಾಶಕ್ತಿ ಮುಂದೆ ಈ ಸವಾಲುಗಳು ಅಲ್ಪವಾಗಿಬಿಟ್ಟವು . ಸ್ಯಾಟಲೈಟ್’ಗಳ ಕಣ್ಣು ತಪ್ಪಿಸಲು ರಾತ್ರಿಹೊತ್ತು ಕೆಲಸ ನಡೆಯುತ್ತಿತ್ತು. ಬೆಳಗಿನ ಜಾವದ ಹೊತ್ತಿಗೆ ಎಲ್ಲ ಸಲಕರಣೆಗಳನ್ನು ಹಿಂದಿನ ಜಾಗಕ್ಕೆ ತಂದು ನಿಲ್ಲಿಸುತಿದ್ದರು ಇದರಿಂದ ಯಾವುದೇ ಉಪಕರಣಗಳು ಕದಡಿಯೇಇಲ್ಲ ಎಂಬ ಭ್ರಮೆ ಮೂಡುತಿತ್ತು. ಕೆಲಸ ನಡೆಯುವ ಜಾಗದಲ್ಲಿ ಒಂದು ಫಲಕವನ್ನು ಬಿತ್ತಿಸಲಾಗಿತ್ತು, ಅದರಲ್ಲಿ ನೀರಾವರಿಗೆ ಸಂಬಂದಪಟ್ಟ ಕೆಲಸ ನಡೆಯುತ್ತಿದೆಯೆಂದು ಬರೆಯಲಾಗಿತ್ತು. ಇನ್ನು ಮರಳುಗಾಡಿನಲ್ಲಿ ಗಾಳಿಯ ದಿಕ್ಕಿಗೆ ಮರಳಿನ ದಿಣ್ಣೆಗಳು ಮೂಡುವದರಿಂದ ಮುಚ್ಚಿಡಲಾಗಿದ್ದ ಉಪಕರಣಗಳು ಕಾಣಸಿಗುವ ಸಂಭವವಿರುತಿತ್ತು. ಅದಕ್ಕೆ ಸೈನಿಕರು ಗಾಳಿಯ ದಿಕ್ಕು ವೇಗಕ್ಕನುಗುಣವಾಗಿ ದಿಣ್ಣೆಗಳನ್ನೂ ನಿರ್ಮಿಸಿ ಉಪಕರಣಗಳು ಕಾಣದಂತೆ ಬಚ್ಚಿಡುತಿದ್ದರು. ಪೋಖ್ರಾನ್’ಗೆ ಭೇಟಿನಿಡುವ ಎಲ್ಲ ವಿಜ್ಞಾನಿಗಳಿಗೂ ಹಾಗೂ DRDO ಮತ್ತು BARC ಅಧಿಕಾರಿಗಳಿಗೆ ಸೈನಿಕರ ಉಡುಪುಗಳನ್ನು ನೀಡುತಿದ್ದರು. ಚಿದಂಬರಂ ಮತ್ತು ಅಬ್ದುಲ್ ಕಲಾಂ ಕೂಡಾ ಸೈನಿಕರ ವೇಷದಲ್ಲಿಯೇ ಪರೀಕ್ಷಾ ಸ್ಥಳಕ್ಕೆ ಬೇಟಿ ನೀಡುತ್ತಿದ್ದರು.

ಇವೆಲ್ಲ ಸ್ಯಾಟಲೈಟ್ ನಿಂದ ತಪ್ಪಿಸಲು ಮಾಡಿದ್ದ ಉಪಾಯಗಳಾದರೆ. ಗುಪ್ತಚರರನ್ನು ತಪ್ಪಿಸಲು ಸಾಂಕೇತಿಕ ಭಾಷೆಯನ್ನು ಬಳಸಲಾಗುತ್ತಿತ್ತು. ಮತ್ತು ಪರಮಾಣು ಪರೀಕ್ಷೆಯ ಮಾಹಿತಿಯನ್ನು ತುಂಬಾ ಗೌಪ್ಯವಾಗಿಡಲಾಗಿತ್ತು. ಸರ್ಕಾರದಲ್ಲಿ ಕೇವಲ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ , ಗ್ರಹ ಸಚಿವ ಲಾಲಕೃಷ್ಣ ಅಡ್ವಾಣಿ ವಿತ್ತ ಸಚಿವ ಯಶವಂತ ಸಿನ್ಹಾ ಮತ್ತು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್’ಗೆ ಮಾತ್ರ ಪರಮಾಣು ಪರೀಕ್ಷೆಯ ಮಾಹಿತಿ ಇತ್ತು ವಿಜ್ಞಾನಿಗಳು ಮತ್ತು ಅಧಿಕಾರಿಗಳಿಗೆ ಬೇರೆ ಹೆಸರುಗಳಿಂದ ಕರೆಯುತಿದ್ದರು. ಒಟ್ಟು 6 ಪರಮಾಣು ಅಸ್ತ್ರಗಳನ್ನು ಭೂ ತಳದಲ್ಲಿ ಇರಿಸಲಾಗಿತ್ತು. ಆ 6 ಶಸ್ತ್ರಗಳಿಗೆ ವೈಟ್ ಹೌಸ್, ತಾಜ್ ಮಹಲ್. ಕುಂಭಕರ್ಣ. ನವತಲ 1 ನವತಲ 2 ನವತಲ 3 ಎಂದು ಹೆಸರಿಡಲಾಗಿತ್ತು. ಆದರೆ ಕೇವಲ 5  ಪರಮಾಣು ಪರೀಕ್ಷೆಗಳನ್ನು ನಡೆಸಿ ಚಿದಂಬರಂ ಹೇಳಿದಂತೆ ನವತಲ 3 ಹೊರತಗೆಯಲಾಯ್ತು ಏಕೆಂದರೆ 5 ಪರಮಾಣು ಪರಿಕ್ಷೆಗಳಿಂದಲೇ ಭಾರತಕ್ಕೆ ಬೇಕಾಗಿದ್ದ ಯಶಸ್ಸು ಸಿಕ್ಕಿಯಾಗಿತ್ತು. ಮೊದಲನೆ ದಿನ ಮೇ 11 ರಂದು ಮೂರೂ ಪರೀಕ್ಷೆಗಳನ್ನು ನಡೆಸಿ ದೆಹಲಿಗೆ ಕಳಿಸಬೇಕಿದ್ದ ಮಾಹಿತಿಯನ್ನು ಸಂಕೆತಿಕವಾಗಿ ” ವೈಟೆ ಹೌಸ್ ಬಿದ್ದುಹೋಯಿತು” ( ಅಂದರೆ ಮೊದಲನೇ ಪರೀಕ್ಷೆ ಯಶಸ್ವಿಯಾಯಿತು) ” ತಾಜ್ ಮಹಲನ್ನು ಕೆಡವಲಾಯಿತು”( ಎರಡನೇ ಪರೀಕ್ಷೆ ಯಶಸ್ವಿ) ” ಕುಂಭಕರ್ಣನನ್ನು ಎಬ್ಬಿಸಲಾಯಿತು” ( ಮೂರನೆಯ ಪರೀಕ್ಷೆಯ ಯಶಸ್ಸು) ಎಂದು ಗೌಪ್ಯವಾಗಿ ನಿಡಲಾಗಿತ್ತು. ಮೇ 13 ಮತ್ತೆರೆಡು ( ನವತಲ 1  ಮತ್ತು ನವತಲ 2 ) ನಡೆಸಿದ ನಂತರ ಆಪರೇಷನ್ ಶಕ್ತಿ ಯಶಸ್ವಿಯಾಗಿತ್ತು.

ಅಟಲ್ ಬಿಹಾರಿ ವಾಜಪೇಯಿ ಪರೀಕ್ಷೆಯ ಮಾಹಿತಿಯನ್ನು ಪತ್ರಿಕೆ ಮತ್ತು ಜನರಮುಂದಿಟ್ಟರು. ವಿಶ್ವವೇ ದಿಗ್ಭ್ರಮೆಗೊಂಡಿತ್ತು. ಅಲ್ಲಿಯವರಿಗೂ ಕೇವಲ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ 5 ಕಾಯಂ ಸದಸ್ಯ ರಾಷ್ಟ್ರಗಳ ಬಳಿ ಇದ್ದ ಪರಮಾಣು ಶಸ್ತ್ರ ಹೊಂದುವ ಅಧಿಕಾರವನ್ನು ಮುರಿದ ಭಾರತ 6 ನೆಯ ಪರಮಾಣು ರಾಷ್ಟ್ರವಾಗಿ ಮತ್ತು ಮೊದಲ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯೇತರ ರಾಷ್ಟ್ರವಾಗಿ ಹೊರಹೊಮ್ಮಿತು. ಇದನ್ನು ಸಹಿಸಲಾಗದೆ ಅಮೇರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಭಾರತದಮೇಲೆ ಆರ್ಥಿಕ ದಿಗ್ಭಂಧನವನ್ನು ವಿಧಿಸಿದವು. ಭಾರತ ಹೆದರಲಿಲ್ಲ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತಿತು

ಭಾರತದ ಪರಮಾಣು ಪರೀಕ್ಷೆಯ ನಂತರ ಪಾಕಿಸ್ತಾನ ಕೇವಲ 15 ದಿನಗಳಲ್ಲಿ ಪರಮಾಣು ಪರೀಕ್ಷೆ ನಡೆಸಿತು. ಇದರಿಂದ ಎರಡು ತರ್ಕಗಳು ಹೊರಹುಮ್ಮುತ್ತವೆ ಕೇವಲ 15 ದಿನಗಳಲ್ಲಿ ಪರಮಾಣು ಪರೀಕ್ಷೆ ನಡೆಸಲಾಗಿದೆಯೆಂದರೆ. ಒಂದು ಪಾಕಿಸ್ತಾನದ ಬಳಿ ಮೊದಲೇ ಪರಮಾಣು ಅಸ್ತ್ರ ಬಳಕೆಯಲ್ಲಿತ್ತು ಇಲ್ಲವಾದರೆ ಯಾವುದಾದರು ಬೇರೆ ದೇಶಗಳಿಂದ ಎರವಲು ಪಡೆದಿದ್ದಾಗಿರಬಹುದು. ಭಾರತದ ಪರಮಾಣು ಪರೀಕ್ಷೆ ಪಾಕಿಸ್ತಾನದ ಮುಖವಾಡವನ್ನು ಕಳಚಿಬಿಟ್ಟಿತು.

ಇನ್ನೊಂದು ಸ್ವಾರಸ್ಯಕರವಾದ ಘಟನೆಯಿದೆ. ಪರಮಾಣು ಪರೀಕ್ಷೆ ನಡೆಸಬೇಕಿದ್ದ ಪೋಖ್ರಾನ್ ಸಮೀಪದಲ್ಲಿ ಖೆತೊಲೈ ಎಂಬ ಹಳ್ಳಿ. ಆ ಹಳ್ಳಿಯಲ್ಲಿರುವ ಒಂದು ಶಾಲೆಗೆ ಸೋಹಂರಂ  ವಿಶ್ನೊಇ ಮುಖ್ಯೋಪಾದ್ಯಯನಾಗಿ ಕೆಲಸ ಮಾಡುತಿದ್ದ. 1974 ರಲ್ಲಿ ಭಾರತ ಮೊದಲ ಬಾರಿಗೆ ಪರಮಾಣು ಪರೀಕ್ಷೆ ನಡೆಸಿದಾಗ ಆತನಿಗೆ ಕೇವಲ 15 ವರ್ಷ. ಮೇ 11 1998 ರಂದು ಪರಮಾಣು ಪರೀಕ್ಷೆಗೂ ಮುನ್ನ ಮೇಜರ್ ಮೋಹನ್ ಕುಮಾರ್ ಶರ್ಮ, ಸೋಹಂರಂ ಬಳಿಬಂದು ಶಾಲಾ ಮಕ್ಕಳನ್ನು ಒಂದೆರೆಡು ಘಂಟೆ ಹೊರಗಡೆ ಬಿಡಿಯೆಂದು ಹೇಳುತ್ತಾರೆ. ಆಗ ಸೋಹಂರಂ ವಿಶ್ನೊಇ ” ನೀವು ಇನ್ನೊಂದು ಪರೀಕ್ಷೆ ಮಾಡಲು ಹೊರಟಿದ್ದೀರಲ್ಲ, ನಾವು ನಿಮ್ಮ ಜೊತೆಗಿದ್ದೇವೆ ಮಾಡಿ” . ಅಮೇರಿಕಾದ ಸಿಐಎ ಕಂಡುಹಿಡಿಯಲಾಗಿದ್ದ ಪರಮಾಣು ಪರೀಕ್ಷೆಯ ಮಾಹಿತಿ. ಸೋಹಂರಂ ವಿಶ್ನೊಇ ಕಂಡುಕೊಂಡಿದ್ದ! .

ಜೈ ಹಿಂದ್

Facebook ಕಾಮೆಂಟ್ಸ್

ಲೇಖಕರ ಕುರಿತು

Sachin anchinal

Writer by Love, Politician by Passion, Engineer by Profession. basically from Vijayapur (Bijapur). and loves to travel, read books and cricket .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!