Featured ಪರಿಸರದ ನಾಡಿ ಬಾನಾಡಿ

ಕಪ್ಪೆ ಬಾಯಿ  ಇದೊಂದು ಗುಡ್ಡದ ಭೂತ !

ಅಡಿಕೆ ತೋಟ, ತೋಟದ ಮಧ್ಯೆ ಮನೆ, ತೋಟದ ಸುತ್ತ ಸಣ್ಣ ಗುಡ್ಡೆ. ಗುಡ್ಡೆ0ು ತುಂಬ ದಟ್ಟ ಕಾಡು. ಕಾಡಿನಲ್ಲಿ ಸಸ್ಯ ವೈವಿಧ್ಯ. ಆ ವೈವಿಧ್ಯತೆಗೆ ತಕ್ಕನಾದ ಕೀಟ, ಹುಳ, ಚಿಟ್ಟೆ, ಹಕ್ಕಿ ಮತ್ತು ಪ್ರಾಣಿಗಳು. ಇದು ಪುತ್ತೂರು ಸಮೀಪ ಇರುವ ನನ್ನ ಪ್ರೀತಿ0ು ತಂಗಿಯ ತೋಟದ ವರ್ಣನೆ. ನನ್ನ ತಂಗಿಯಷ್ಟೇ ತಣ್ಣನೆಯ ಪ್ರೀತಿಯಿಂದ ಆ ಪರಿಸರ ನನ್ನನ್ನು ಆಗಾಗ  ಅತ್ತ ಕರೆಯುತ್ತದೆ. ಹಾಗೆ ಹೋದರೆ ಅವಳೊಂದಿಗೆ ಹರಟುವುದಕ್ಕಿಂತ ಅಲ್ಲಿನ ಕಾಡು ಸುತ್ತುವುದೇ ಎಷ್ಟೋ ಬಾರಿ ಹೆಚ್ಚಾಗಿ ಬಿಡುತ್ತದೆ.

ಕಳೆದ ಐದು ವರ್ಷಗಳಲ್ಲಿ ಅಲ್ಲಿ 50ಕ್ಕೂ ಮಿಕ್ಕಿ ಚಿಟ್ಟೆಗಳನ್ನು 100ಕ್ಕೂ ಅಧಿಕ ಹಕ್ಕಿಗಳನ್ನು ದಾಖಲಿಸಿದ್ದೇನೆ. ಬೆಳಗ್ಗಿನಿಂದ ಸಂಜೆ0ುವರೆಗೆ ಕಾಡು ಸುತ್ತಿದರೂ, ಇಂಥಾ ಅನೇಕ ವೈವಿಧ್ಯಗಳನ್ನು ನೋಡಿದರೂ, ಒಂದು ಕೊರತೆ ನನ್ನನ್ನು ಕಾಡುತ್ತಿತ್ತು. ರಾತ್ರಿವೇಳೆ  ಆ ಕಾಡಿಂದ ಬರುವ ಒಂದು ಕೂಗು ನನ್ನ ಸೆಳೆಯುತ್ತಿತ್ತು.

ಅದೊಂದು ಭಯಂಕರ ಕೂಗು. ನನ್ನ ಪುಟ್ಟ ಅಳಿಯನನ್ನು  ಬೆಚ್ಚಿ ಬೀಳಿಸುವ  ಕೂಗು. ರಾತ್ರಿ ವೇಳೆ ಆ ಗುಡ್ಡೆಯತ್ತ ಯಾರಾದರೂ ಸುಳಿದರೆ ತಣ್ಣನೆ ಬೆವರಿಳಿಸುವ ಕೂಗು. ಹೊಸಬರಿಗೆ ನಿದ್ದೆಗೆಡಿಸುವ ಕೂಗು. ಹಲವರಿಗೆ ಅದು ಗುಡ್ಡದ ಭೂತ! ಹಾಗಾಗಿ ಅದು ಭೂತದ ಕೂಗು. http://test.xeno-canto.org/species/Batrachostomus-moniliger

ಹಲವು ಗೂಬೆಗಳ ಮತ್ತು ನತ್ತಿಂಗಗಳ ಕೂಗು ಕೇಳಿದ ಅನುಭವ ಇದ್ದ ನನಗೆ ಈ ಕೂಗು ತೀರಾ ಹೊಸತು, ಹಾಗಾಗಿ ವಿಚಿತ್ರವೆನಿಸಿತ್ತು, ತುಸು ಹೆದರಿಸಿತ್ತು. ಪ್ರತಿ ಸಲ ತಂಗಿ ಮನೆಗೆ ಹೋದಾಗಲೂ ಆ ಕೂಗು ಕೇಳಿದ ದಿಕ್ಕಿಗೆ ವಿದ್ಯುದ್ದೀವಟಿಕೆ(torch light) ಹಿಡಿದು ಸಾಗುತ್ತಿದ್ದೆ. ನಾನು ಅದರ ಹತ್ತಿರ ಹೋಗುತ್ತಿದ್ದಂತೆ ಆ ಜೀವಿ ಹಾರಿಹೋಗುತ್ತಿತ್ತು. ಮತ್ತೆ ಕೂಗುತ್ತಿತ್ತು. ಅದನ್ನೇ ಹಿಂಬಾಲಿಸಿದೆ, ಮತ್ತೆ ಹಾರಿತು. ನಿಶ್ಯಬ್ಧವಾದ ಹಾರಾಟ, ಹಾರಾಟದ ಶೈಲಿಯಿಂದ, ಹೊಳೆ0ುುವ ಮುಖದ ಮುಂದಿನ ಎರಡು ಕಣ್ಣುಗಳಿಂದ ಇದೊಂದು ಗೂಬೆಯ ತರಹದ ನಿಶಾಚರಿ ಪಕ್ಷಿ ಎಂಬುದು ಖಾತ್ರಿಯಾಯಿತು. (ಉಳಿದ ಹಕ್ಕಿಗಳಿಗೆ ನಮ್ಮಂತೆ ಮುಖದ ಮುಂದೆ ಕಣ್ಣಿರುವುದಿಲ್ಲ, ಕೊಕ್ಕು ಪ್ರಬಲವಾಗಿರುವ ಕಾರಣ ಮುಖದ ಆಕಾರಕ್ಕನುಸಾರ ಬದಿಗಳಲ್ಲಿ ಕಣ್ಣುಗಳಿರುತ್ತವೆ ಎಂಬುದನ್ನು ಗಮನಿಸಿ.) ಎಷ್ಟು ಕಷ್ಟ ಪಟ್ಟರೂ ಸ್ಪಷ್ಟವಾಗಿ ಅದು ಕಾಣಲಿಲ್ಲ ಮತ್ತು ಕ್ಯಾಮೆರಾ ಕಣ ್ಣಗೂ ಬೀಳಲಿಲ್ಲ.

ಆದರೆ ಆ ಗುಡ್ಡದ ಭೂತದ ದನಿ0ುನ್ನು ನಾನು ರೆಕಾರ್ಡ್ ಮಾಡಿದ್ದೆ. ಅನುಭವೀ ಪಕ್ಷಿವೀಕ್ಷಕರನ್ನು ಸಂಪರ್ಕಿಸಿದಾಗ ಇದು ಕಪ್ಪೆಬಾಯಿಯ ದನಿ ಎಂದು ಗೊತ್ತಾಯಿತು. ಮಳೆಗಾಲದಲ್ಲಿ ಎಲ್ಲೆಲ್ಲೂ ಕೇಳುವ, ಅರಚುವ ಕಪ್ಪೆಯ ಬಾಯಿ ಬೊಬ್ಬೆ ಇದಲ್ಲ! ಇದು ಇತ್ತ ಗೂಬೆಯೂ ಅಲ್ಲದ ಅತ್ತ ನತ್ತಿಂಗವೂ ಅಲ್ಲದ ಪ್ರಭೇದ. ಕೇರಳದ ತಟ್ಟೇಕಾಡಿನ ಡಾ ಸಲಿಂ ಅಲಿ ಪಕ್ಷಿಧಾಮದಲ್ಲಿ ಅನೇಕರು ಈ ಪಕ್ಷಿ0ುನ್ನು ಛಾಯಾಗ್ರಹಣ ಮಾಡಿದ್ದಾರೆ, ಚಿತ್ರವನ್ನಷ್ಟೇ ನೋಡಿದ ನನಗೆ ಈ ಬಾರಿ ದಿಟದಿ ಪಕ್ಷಿಯನ್ನು ನೋಡುವ  ಬಯಕೆ ಹೆಚ್ಚುತ್ತಾ ಹೋಯಿತು. ಆದರೇನು ಮಾಡುವುದು? ಇರುಳಲ್ಲಿ ಮಾತ್ರ ಅಸ್ಪಷ್ಟ ದರ್ಶನ ಕೊಡುವ ಈ ಕಪ್ಪೆಬಾಯಿ ಹಗಲಲ್ಲಿ ಕಾಣಿಸುವುದೇ ಇಲ್ಲವಲ್ಲ..

3

ಮೊದಲೇ ತಿಳಿಸಿದಂತೆ ಗೂಬೆ, ನತ್ತಿಂಗದಂತೆ ಈ ಕಪ್ಪೆಬಾಯಿ ಕೂಡಾ ನಿಶಾಚರಿ. ಪ್ರಪಂಚದಾದ್ಯಂತ ಹನ್ನೆರಡು(12)  ತೆರನಾದ ಕಪ್ಪೆಬಾಯಿಗಳು ಲಭ್ಯ. ಇದರ ಬಾಯಿಯು ಕಪ್ಪೆಯ ಬಾಯಿಯಂತೆ ಅಗಲವಾಗಿ ಇರುವುದರಿಂದ ಅನ್ವರ್ಥವಾಗಿ ಈ ಹೆಸರು. ಇಂಡೋನೇಶಿಯಾ,ಆಸ್ಟ್ರೇಲಿಯಾ, ಶ್ರೀಲಂಕಾ, ಹಿಮಾಲಯದ ಕೆಲವು ಭಾಗಗಳಲ್ಲಿ ಮತ್ತು ನಮ್ಮ ಪಶ್ಚಿಮಘಟ್ಟದಲ್ಲಿ ಮಾತ್ರ ಲಭ್ಯ. ಶ್ರೀಲಂಕಾ ಮತ್ತು ಪಶ್ಚಿಮಘಟ್ಟದಲ್ಲಿ ಲಭ್ಯವಿರುವ ಪ್ರಭೇದಕ್ಕೆ ಶ್ರೀಲಂಕಾ ಕಪ್ಪೆಬಾಯಿಯೆಂದೇ ಹೆಸರು. Sri Lanka Frogmouth (batrachostomus moniliger) . ನಾನು ನನ್ನ ತಂಗಿಯ ತೋಟದಲ್ಲಿ ಕಂಡದ್ದು ಮತ್ತು ಇಲ್ಲಿ ನಿಮ್ಮೆದುರು ತೋರಿಸುತ್ತಿರುವುದು ಈ ಪಶ್ಚಿಮಘಟ್ಟದ ಕಪ್ಪೆಬಾಯಿಯನ್ನೇ. ಶ್ರೀಲಂಕಾದಲ್ಲಿ ಇವು ಹೆಚ್ಚು ನೆಲಸಿರುವ ಕಾರಣ, ಲಂಕೆಗೆ ಗೌರವ ಕೊಟ್ಟು ಈ ಹಕ್ಕಿಯ ಹೆಸರಿಗೆ  ಶ್ರೀಲಂಕಾ ಎಂದು ಸೇರಿಸಲಾಗಿದೆ.

ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದ  ಶ್ರೀಲಂಕಾವು ಕಾಲಕ್ರಮೇಣ ಭಾರತದಿಂದ ಬೇರೆಯಾಗಿ ದ್ವೀಪ ರಾಷ್ಟ್ರವಾಯಿತು ಎಂಬ ವಾದಕ್ಕೆ ಈ ಹಕ್ಕಿ ಕೂಡಾ ಪುಷ್ಟಿ ಕೊಡುತ್ತದೆ.

ನಿಶಾಚರಿ ಹಕ್ಕಿಗಳಲ್ಲಿ ಬಹುತೇಕ ಎಲ್ಲವೂ ವರ್ಣತಾದ್ರೂಪ್ಯ (camouflage) ಗುಣ ಹೊಂದಿರುತ್ತದೆ. ತಾನಿರುವ ಪರಿಸರದಲ್ಲಿ ಅದು ಲೀನವಾಗಿರುತ್ತದೆ. ಉಳಿದವರೆಲ್ಲರೂ ಎಚ್ಚರವಾಗಿರುವಾಗ ಸುಖವಾಗಿ, ಯಾರ ಗಮನಕ್ಕೂ ಬಾರದಂತೆ ನಿದ್ರಿಸಲು ಇದು ಸಹಕಾರಿ. ಹಗಲಲ್ಲಿ ಹೆಚ್ಚಾಗಿ ಒಂದೇ ಜಾಗದಲ್ಲಿ ಮಲಗಿರುತ್ತದೆ. ಮನುಷ್ಯನ ಸಂಚಾರ ಹೆಚ್ಚು ಇಲ್ಲದಂಥ ಜಾಗವನ್ನು ಇವು ಆರಿಸುತ್ತದೆ. (ಅಂಥಾ ಜಾಗ ಇದೆಯೇ..? ಎಂದು ಕೇಳಬೇಡಿ!) ಅಲ್ಲಿನ ಗಿಡ/ಮರದ ಗೆಲ್ಲಿನಲ್ಲಿ ಒಂದು ಚೂರೂ ಅಲ್ಲಾಡದೆ ಕುಳಿತಿರುತ್ತವೆ. ಇಂಥವನ್ನು ಹಗಲಲ್ಲಿ ಹುಡುಕುವುದು ಸವಾಲಿನ ಕೆಲಸವೇ ಸರಿ. ಇರುಳಾಗುತ್ತಿದ್ದಂತೆ ಮೊದಲು ಯಾವ ಜಾಗದಿಂದ ಕೂಗಿತು ಮತ್ತು ಮುಂಜಾನೆ ಇವು ನಿದ್ರಿಸುವ ಮೊದಲು ಕೊನೆ0ು ಕೂಗು ಎಲ್ಲಿಂದ ಕೇಳಿಸಿತು ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಎಂದು ಊಹಿಸಬಹುದು. ಆ ಪ್ರದೇಶವನ್ನು ಕೂಲಂಕಷವಾಗಿ ಸಮೀಕ್ಷೆ ಮಾಡಿದರೆ ಈ ನಿಶಾಚರಿಗಳನ್ನು ಭೇಟಿ ಮಾಡಬಹುದು.

ಈ ಉಪಾಯವನ್ನು ನಾನು ನನ್ನ ತಂಗಿ ಮನೆಯ ಕಪ್ಪೆಬಾಯಿಗೂ ಅಳವಡಿಸಿದೆ. ಅವರ ಮನೆಯ ಹಿಂದಿನ  ಗುಡ್ಡದ ಕಾಡಿನಲ್ಲಿ ಯಥೇಚ್ಚ ಸಸ್ಯ ಸಂಪತ್ತು. ಅದರಲ್ಲಿ ಕಲ್ಮರ (Hopia ponga)ವನ್ನು ಹೆಚ್ಚು ಕಾಣಬಹುದು. ಆ ಕಲ್ಮರದ ಜಾಗದಿಂದ ರಾತ್ರಿ 6:50ಕ್ಕೆ ಕೂಗು ಪ್ರಾರಂಭವಾಗಿತ್ತು. ಹಾಗಾಗಿ ಅದು ಅಲ್ಲಿ ಹಗಲು ಮಲಗುವುದು ಎಂದು ಖಾತ್ರಿ ಇತ್ತು. ಆದರೆ ದಿನವೂ ಹುಡುಕಲು ನನಗಾದರೂ ದಿನದ ಕೊರತೆ ಇತ್ತು . ಹಾಗಾಗಿ ನನ್ನ ತಂಗಿ ಭಾವರಿಗೆ ಅದನ್ನು ಹುಡುಕಿಟ್ಟಿರುವ ಕೆಲಸ ಕೊಟ್ಟಿದ್ದೆ. ಊಹೂ… ಅವರು ನೆನಪು ಬಂದಾಗೆಲ್ಲ ಹುಡುಕಿದರೂ ಅದು ಮಾತ್ರ ಕಾಣಿಸಲಿಲ್ಲ.

ಏಪ್ರಿಲ್ 3, 2016 ವಿಟ್ಲದ ದೇಗುಲವೊಂದರಲ್ಲಿ ನಮ್ಮ ಕುಟುಂಬದ ಹಿರಿ0ುರೊಬ್ಬರು ಪೂಜೆಗೆ ಆಹ್ವಾನಿಸಿದ್ದರು. ವಿಟ್ಲ ನನ್ನ ತಂಗಿ ಮನೆಗೆ ಸಮೀಪದ ಊರು. ಹೇಳಿಕೇಳಿ ಭಾನುವಾರ. ಶನಿವಾರ ರಾತ್ರಿ ಬಸ್ಸಿನಲ್ಲಿ ಪ್ರಯಾಣಿಸಿ ಬೆಳಿಗ್ಗೆ 4 ಗಂಟೆಗೆ ತಂಗಿಯ ಮನೆ ಸೇರಿದ್ದೆ. ಅವಳ ಮನೆಗೆ ಹೋಗುವಾಗಲೇ ಬೆಚ್ಚಿ ಬೀಳಿಸುವ ಕೂಗು, ಅದೇ ಗುಡ್ಡದ ಭೂತದ ಕೂಗು. ಬಲು ದಿನಗಳಿಂದ ದರ್ಶನಭಾಗ್ಯಕ್ಕಾಗಿ ಹಪಹಪಿಸುತ್ತಿರುವ ಕಪ್ಪೆಬಾಯಿಯ ಕೂಗು. ಹಗಲಾಗುವುದನ್ನೇ ಕಾಯುತ್ತಿದ್ದೆ. ಬೆಳಗ್ಗಿನ ತಿಂಡಿ ಮುಗಿಸಿ ಆ ಗುಡ್ಡದ ಕಲ್ಮರ ವನದೊಳಕ್ಕೆ ಹೊಕ್ಕೆ. ಕಲ್ಮರದ ಎಲೆಗಳು ಉದುರಿದ್ದವು.  ಕಲ್ಮರ ಬೀಳಿಸಿದ ಎಲೆಗಳು ನೆಲಕ್ಕೆ ಬಿದ್ದದ್ದಕ್ಕಿಂತ ಹೆಚ್ಚು ಕೆಳಪದರ ಗಿಡಗಳ ಎಡೆಯಲ್ಲಿ ಅಥವಾ ಮುಳ್ಳಿನ ಗಿಡದ ಮುಳ್ಳಿಗೆ ಸಿಕ್ಕಿಹಾಕಿಕೊಂಡಿದ್ದವು. ದಕ್ಷಿಣ ಕನ್ನಡದ ಕಾಡಿನಲ್ಲಿ ಸುತ್ತಿದವರಿಗೆ ಈ ಚಿತ್ರಣ ಅರ್ಥವಾದೀತು.  ಕೆಲ ತರಗೆಲೆಗಳು ಕೆಳಗಿದ್ದ ಸರೋಳಿ ಗಿಡದ (aporusa lindleyana) ತುಂಬ ನೇಲುತ್ತಿದ್ದವು. ಆ ತರಗೆಲೆಗಳಲ್ಲೊಂದು ತರಗೆಲೆ ತುಸು ಬಿನ್ನವಾಗಿತ್ತು. ಅರೆ ಅರೆ! ಆ ಎಲೆಗೆ ಅಗಲವಾದ ಎರಡು ಹೊಳೆ0ುುವ ಕಣ್ಣೂಗಳು. ಅಗಲವಾದ , ಚಪ್ಪಟೆಯಾದ ತ್ರಿಕೋಣಾಕಾರದ ಕೊಕ್ಕು. ತರಗೆಲೆ ತುಂಬಾ ಕೂದಲು. ಅದೇ ಅದೇ ನಾನು ಹುಡುಕುತ್ತಿದ್ದ  ಕಪ್ಪೆ ಬಾಯಿ, ನನ್ನೆದುರಿಗಿತ್ತು. ತರಗೆಲೆಗಳಲ್ಲೊಂದು ತರಗೆಲೆಯಾಗಿ ನನ್ನ ಕೈಗೆಟುಕುವ ಎತ್ತರದಲ್ಲಿತ್ತು. ಕೇವಲ ಎರಡು ಅಡಿ ದೂರದಲ್ಲಿತ್ತು. ಅದನ್ನು ಕಂಡ ನಾನು ನಾಲ್ಕು ಹೆಜ್ಜೆ ಹಿಂದೆ ಸರಿದೆ. ಅಷ್ಟು ಹತ್ತಿರದಲ್ಲಿ ನಾನಿದ್ದರೂ ಕಪ್ಪೆಬಾಯಿ ಒಂದಿಂಚೂ ಜರುಗಲಿಲ್ಲ. ಕಣ್ಣನ್ನು ಮಾತ್ರ ಅರಳಿಸಿತ್ತು. ತಾನಲ್ಲಿರುವುದು ಯಾರ ಅರಿವಿಗೂ  ಬಾರದು ಎಂಬ ವಿಶ್ವಾಸ ಅದಕ್ಕಿದ್ದಂತಿತ್ತು. ಗಿಡ್ಡ ಕತ್ತಿನ, ಸಣ್ಣ ಕಾಲಿನ ಈ ಮಂಡೂಕಬಾಯಿಗೆ ಮೃದವಾದ ತುಪ್ಪಳದ ಕಡುಗಂದು ದೇಹ. ದೇಹದಲ್ಲಿ ಬೂದು, ಕಪ್ಪು, ಬಿಳಿ ಅಡ್ಡಡ್ಡ ಗೀರು-ಪಟ್ಟಿಗಳು. ಪಟ್ಟೆ ಬಾಲ. ಈ ಪ್ರಕೃತಿ ವೈಚಿತ್ರ್ಯಕ್ಕೆ ನಾನು ದಂಗಾಗಿದ್ದೆ. ಕಪ್ಪೆಬಾಯಿಯೇ ವರ್ಣತದ್ರೂಪಿ, ಆ ಕಪ್ಪೆಬಾಯಿಯ ದೇಹ ತುಂಬ ನುಸಿಗಳಿದ್ದವು. ನಾನು ಫೋಟೋ ತೆಗೆದು zoom ಮಾಡಿ ಗಮನಿಸಿದಾಗಷ್ಟೇ ನನಗೆ ಗೋಚರಿಸಿತ್ತು. ಅಬ್ಬಬ್ಬ ಪ್ರಕೃತಿಯನ್ನು zoom ಮಾಡಿ ನೋಡಿದಾಗ ಅದರೊಳಗೆ ಏನೇನಿದೆ!!!

1

ಸುಮಾರು ಒಂದು ಗಂಟೆ0ು ನಂತರ ನನ್ನ ಭಾವ ಮತ್ತು ಮಂಗಳೂರಿನಿಂದ ಬಂದಿದ್ದ ನನ್ನ ಮಾವ ನನ್ನನ್ನು ಹುಡುಕಿಕೊಂಡು ಕಲ್ಮರವನಕ್ಕೆ ಹೊಕ್ಕರು. ಅತಿ ಹರ್ಷದಲ್ಲಿದ್ದ ನಾನು ಅವರಿಗೂ ಕಪ್ಪೆಬಾಯಿಯನ್ನು ತೋರಿಸಿದೆ. ಬೆಟ್ಟು ಮಾಡಿ ತೋರಿದರೂ  ಅವರಿಗೆ ಹಕ್ಕಿಯನ್ನು ಹುಡುಕಲು ಮತ್ತು ಅದು ಹಕ್ಕಿ ಎಂದು ನಂಬಲು ಬಲು ಸಮಯ ತೆಗೆದುಕೊಂಡರು. ಮೂವರಿದ್ದರೂ ಈ ಕಪ್ಪೆಬಾಯಿ ನಿಶ್ಚಲ! ಎಲ್ಲರೂ ಕಣ್ತುಂಬ ಅದನ್ನು ನೋಡಿ ವಿಟ್ಲದತ್ತ ಸಾಗಿದೆವು.

ಆಸ್ಟ್ರೇಲಿಯಾದಲ್ಲಿ Tawny frogmouth ಎಂಬ ಪ್ರಭೇದವೊಂದಿದೆ. ಆ ಕಪ್ಪೆಬಾಯಿ ಮುಸ್ಸಂಜೆ ಹೊತ್ತಿಗೆ ಮರದಲ್ಲಿ ಕುಳಿತು ತನ್ನ ಅಗಲವಾದ ಬಾಯಿಯನ್ನು ತೆರೆಯುತ್ತದಂತೆ. ಬಾಯಿಯೊಳಗೆ ಕಡು ಹಳದಿ ಬಣ್ಣ. ಹೆಚ್ಚಿನ ದುಂಬಿಗಳು ಯಾವುದೋ ಹೂವು ಅರಳಿದೆ ಎಂದೆಣಿಸಿ ಹೊಕ್ಕುತ್ತಾವಂತೆ. ಆಮೇಲಿನದು ಗೊತ್ತೇ ಇದೆ. ಕಪ್ಪೆಬಾಯಿ0ುೂ ಹಾಗೆ,  ಕುಳಿತಲ್ಲೇ ಒಂದಷ್ಟು ಬೇಟೆಯಾಡುತ್ತದೆ. ತೆರೆದ ಬಾಯಿಯೊಳಗೆ ನುಸಿ ನೊಣ ಹೊಕ್ಕೀತು ಎಂದು ದೊಡ್ಡವರು ಹೇಳುವುದು ಸುಮ್ಮನೆಯಲ್ಲ. ಇವು ಹಲ್ಲಿ ಇಲಿ ಮತ್ತು ಸಣ್ಣ ಹಕ್ಕಿಗಳನ್ನೂ ಉಣ್ಣುವುದುಂಟಂತೆ.

2

ಜೂನ್’ನಿಂದ ನವಂಬರ್’ದವರೆಗೆ ಇವುಗಳ ಸಂತಾನೋತ್ಪತ್ತಿ ಸಮಯ. ಮರದ ಗೆಲ್ಲಿನಲ್ಲಿ ಹೆಬ್ಬೆಟ್ಟು ಗಾತ್ರದ ಗೂಡನ್ನು ಪಾಚಿಯ ಸಹಾಯದಿಂದ ಮಾಡುತ್ತವೆ. 3-4 ಮೊಟ್ಟೆಗಳು. ಮೊಟ್ಟೆಗಳು ಗೂಡಿನಿಂದ ಹೊರಗಡೆ ಕಾಣುತ್ತಿರುತ್ತದೆ. ಅಷ್ಟು ಪುಟ್ಟ ಗೂಡು ಹಗಲಿಡೀ ತಂದೆ ಕಾವು ಕೊಟ್ಟರೆ, ರಾತ್ರಿ ಪೂರ್ತಿ ತಾಯಿ ಕಾವು ಕೊಡುವುದಂತೆ. ಆ ಸಣ್ಣ ಗೂಡಿನಲ್ಲಿ ನಾಲ್ಕು ಮರಿಗಳು ಹಿಡಿಸುವುದು ಒಂದು ಸೋಜಿಗವೇ ಸರಿ.

ಕಲ್ಮರದಂಥ ಅನೇಕ ಮರಗಳಿಂದ ಕೂಡಿದ್ದ ನಮ್ಮ ದಕ್ಷಿಣ ಕನ್ನಡ/ಮಲೆನಾಡು ಇಂದು ಮರಗಳನ್ನು ಕಳೆದು ಕೊಂಡು ಕಲ್ಲಾಗುತ್ತಿದೆ. ಕಲ್ಮರಗಳಂತ ಮರಗಳಿಲ್ಲದ ಮಲೆನಾಡಿನಲ್ಲಿ ಕಪ್ಪೆಗಳೇ ಕಣ್ಮರೆಯಾಗುತ್ತಿರುವ ಈ ಸಮಯದಲ್ಲಿ ಕಪ್ಪೆಬಾಯಿ ಕಾಣಿಸುವುದೆಂತು !

ಡಾ ಅಭಿಜಿತ್ ಎ.ಪಿ.ಸಿ

ಚಿತ್ರಗಳು: ಡಾ ಅಭಿಜಿತ್ ಎ.ಪಿ.ಸಿ

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!