ಅಂಕಣ

ಕುಡ್ಯೋಕೆ ನೀರಂತೂ ಇಲ್ಲ.. ಎಣ್ಣೆನಾದ್ರೂ ಕೊಡ್ರಿ ಸಿವಾ!!!

ಕುರಿ ಕೋಳೀನ ಸೋಮ್ವಾರ ಶನ್ವಾರ ಕಡ್ಯೋಂಗಿಲ್ಲ.. ಅಂತಾ ಭಾಳಾ ಜೋಶ್ನಲ್ಲಿ ಸಾಂಗೇಳುತ್ತಾ ಗೋಪಾಲಣ್ಣ  ಒಸ್ದಾಗಿ ಶುರು ಮಾಡಿರೋ ಪಾನ್ ಬೀಡಾ ಶಾಪ್ ಮುಂದೆ ವಕ್ಕರ್ಸ್ಕೊಂಡು ಬಿಡ್ತು ಮುರುಗನ್.

ಏನಲಾ ಅಮ್ವಾಸೆ ನನ ಮಗನೇ?? ಕುರೀ ಕಡೀಬಾರ್ದು, ಮೇಕೆ ಕೋಳಿ ಕತ್ತರ್ಸ್ಬಾರ್ದು ಅಂತಾ ಯೋಳ್ತಿದೀಯಾ?? ಏನಲಾ ಮಾಟರ್ರು?? ಅಂತ ಮಾತು ಆರಂಭಿಸ್ತು ಗೋಪಾಲಣ್ಣಿ.

ಅದೆಲ್ಲೋ ಯಾಗ ಮಾಡೋವಾಗ ಜನ್ವಾರ ಆಕೋಂಡಿರೋರು ಮೇಕೆ ಬಡ್ದು ಬಲಿ ಕೊಟ್ಟವ್ರೆ ಅಂತ ಪೇಪರ್ನಾಗೆ ಬಂದೈತೆ ಕಣ್ಲಾ. ಟೌನಾಲ್ ಮುಂದೆ ಓರಾಟ ಗ್ಯಾರಂಟಿ ಅಂತೆ ಕಣ್ಲಾ. ಹಸ ಮಾಂಸ ರೆಡಿ ಮಾಡಿ ಇಟ್ಟಿರಲಾ ಅಂತ ಮುಲ್ಲಾ ಸಾಬ್’ಗೆ ಫೋನ್ ಬಂದೈತಂತೆ ಪ್ರಸಸ್ತಿ ಇಜೇತ ಸಾಯಿತಿಯಿಂದ ಅಂತೇಳ್ತು ಮುರುಗನ್..

ಥತ್ತೇರಿಕೆ ಯಾವದ್ಲಾ ಆ ಪ್ಯಾಪರ್ರು?? ಸುಮ್ಕೆ ಸುಳ್ಸುದ್ದಿ ಕೋಡೋದೂ!! ಮಳೆ ಬ್ಯಾರೆ ಬಂದಿಲ್ಲ. ತೊಳ್ಯೋಕೂ ನೀರಿಲ್ಲ.. ಒಂದೀಟು ಆ ಪ್ಯಾಪರ್ರು ತರ್ಸ್ಕೊಂಡ್ ಬಿಟ್ರೆ ಉಜ್ಜಕಾದ್ರು ಆಯ್ತದೆ ಬೆಳ್ ಬೆಳಗ್ಗೆ ಅಂತ ಮಕ್ಕುಗೀತು ಗೋಪಾಲಣ್ಣ!!

ಬುಡಲಾ… ವರ್ಷಕ್ಕೆ ಒಂದೋ ಎಲ್ಡೋ ನೆಟ್ಗಿರೋ ಪಿಚ್ಚರ್ ಮಾಡೋದ್ ಬಿಟ್ಟು, ಉಪ್ಪುಳಿ ಕಾರ ಅಂತ ನಿಮ್ಮ್ ಮಾಲಾಸ್ರೀ ಮತ್ತು ಕೊಬ್ರಿ ಮಂಜು ಒಡ್ದಾಡ್ಕಂಡವಂತೆ ಔದೇನ್ಲಾ ಅಂತ ಕೇಳ್ತು ಬೀಗ್ರೂಟ ತಿಂದು ಗೋಪಾಲಣ್ಣಿ ಶಾಪ್ ಅತ್ರ ಕಟ್ಟಿ ಮ್ಯಾಲೆ ಬಿದ್ಕಂಡಿದ್ದ ಕಲ್ಲೇಶಿ..

ಊ ಕಣಲಾ.. ಮಾಲಾಸ್ರೀ ಮತ್ತು ಕೊಬ್ರಿ ಮಂಜು ಎರ್ಡೂವೇ ಅಳೇ ಉಲೀಗಳಲ್ವೇನ್ಲಾ?? ಪಾಪ ಇವಾಗ ಇಬ್ರನ್ನೂವೇ  ಜನ ಕ್ಯಾರೇ ಅನ್ನೋರ್ ಇಲ್ಲಾ. ಅದ್ಕೆ ಸುಮ್ಕೆ ಜಗ್ಳ ಆಡಿ ಬಿಟ್ಟಿ ಪ್ರಚಾರ ಗಿಟ್ಟಿಸ್ಕೋಳ್ತಿದ್ದಾವೆ. ನಮ್ಮ ನ್ಯೂಸ್ ಚಾನೆಲ್ ಗಳೂ ಪಾಪ ಕಾಯ್ತಾ ಇರ್ತಾವೆ. ಕೇಜ್ರಿವಾಲು ಕೆಮ್ಮಿದ್ರೂ ನ್ಯೂಸ್ ಕೊಡೋ ಇವರ್ಗಳು ಜಗ್ಳ ಇಶ್ಯಾ ಬಂದ್ರೆ ಅದೆಂಗ್ಲಾ ಸುಮ್ಕೆ ಕೂರ್ತವೆ??? ಅಂತಾ ಒಂದೇ ಉಸ್ರಲ್ಲಿ ಯೋಳ್ತು ಗೋಪಾಲಣ್ಣ

ಕರ್ನಾಟಕ ಕಮಲ ಪಕ್ಸದೋರ ಕತೆ ಏನ್ಲಾ?? ಯೆಡ್ಯೂರ್ ಅದ್ಯಕ್ಸ ಆದ್ಮೇಲೆ ಭಾಳ ಆಕ್ಟಿವ್ ಆಗವ್ವೆ. ಎಲ್ಲೋದ್ರು ಯೆಡ್ಯೂರ್ಗೆ ಉಘೇ ಉಘೇ ಅಂತ ಹೇಳ್ತಾವ್ರೆ!!! ಏನ್ಲಾ ಸಮಾಚಾರ ಅಂತ ಗೋಪಾಲಣ್ಣಂಗೆ ಪ್ರಶ್ನೆ ಆಕ್ತು ಮುರುಗನ್.

ಇನ್ನೇನ್ಲಾ ಮಾಡಕ್ ಆಯ್ತದೆ ಮಿ.ಮುರುಗನ್. ಯೆಡ್ರು ರಾಜಾಉಲಿ ಕಣ್ಲಾ.. ಅದ್ ಬಂದ್ಮೇಲೆ ಅದ್ರದ್ದೇ ಅವಾ…!! ಸಿಕ್ ಸಿಕ್ಕಲ್ಲಿ ಬಯ್ಕೊಂಡ್ ಬರ್ತಿದ್ದ ಉಡದ್ ಬಾಯಿ ಈಸ್ವರ್ರು, ಸೆಟ್ಟ್ರು ಎಲ್ಲಾ ಸೈಲೆಂಟ್ ಆಗಿ ಬಾಲ ಮುದ್ರುಕ್ಕೊಂಡು ಕೂತವ್ರೆ. ಇಲ್ಲಾಂದ್ರೆ ಯೆಡ್ರು ಸುಮ್ಕೆ ಬುಡ್ತದೇನ್ಲಾ ಇವುಗಳ್ನಾ?? ಅಂತ ಸಮಜಾಯ್ಸಿ ಕೊಡ್ತು ಗೋಪಾಲಣ್ಣ!!

ಮತ್ತೇನ್ಲಾ ಸಮಾಚಾರ. ನಿಮ್ಮ್ ರೇವಣ್ಣನ್ ಎಂಡ್ರು ಜಿಲ್ಲಾ ಪಂಚಾಯ್ತಿ ಅದ್ಯಕ್ಸೆ ಆಗಿಲ್ವಲ್ಲೋ. ದೊಡ್ಡ್ ಗೌಡ್ರು ಏಟೇ ಟ್ರೈ ಮಾಡಿದ್ರೂ ಆಗಿಲ್ವಲ್ಲೋ ಅಂತ ಮುರುಗನ್ ಕಿಚಾಯಿಸ್ತು ಕಲ್ಲೇಶೀ..

ಉಗೀರೀ ನನ್ ಮಗನ ಮಕಕ್ಕೆ. ಪಂಚಾಯ್ತಿ ಎಲೆಕ್ಸನ್ ಎಲ್ಲಾ ಏನಿದ್ರೂವೇ ಕುಮಾರಣ್ಣ ಮತ್ತು ರೇವಣ್ಣ ನೋಡ್ಕೋತಾರೆ ಕಣ್ಲಾ. ದೊಡ್ಗೌಡ್ರು ಏನಿದ್ರೂ ಲೋಕಲ್ ಇಚಾರ್ದಾಗೆ ತಲೆ ಆಕಲ್ಲ. ತಿಳ್ಕೊಳ್ಲಾ ಭಿಕನಾಶೀ ಅಂತ ಕ್ವಾಪ ಮಾಡ್ಕೋಂಡು ಯೋಳ್ಬಿಡ್ತು ಮುರುಗನ್!

ಬರ ಪ್ರವಾಸಕ್ಕೆ ಓಗಿದ್ದ ಶಿದ್ದಣ್ಣಂಗೆ ಜನ ಲೆಫ್ಟೂ ರೈಟೂ ತಗೊಂಡವೆ ಕಣ್ಲಾ!! ಕುಡ್ಯೋಕೆ ನೀರೂ ಇಲ್ಲ. ತೊಳ್ಕಳೋಕೂ  ಇಲ್ಲ… ಆಲ್ಕೋಹಾಲ್ ಕುಡ್ಯೋಕ್ ಕಾಸಿಲ್ಲ ಸಾಮಿ. ಎಣ್ಣೆ ಭಾಗ್ಯ ಕೊಡ್ರಿ ಸಿವಾ ಅಂತ ಶಿದ್ದಣ್ಣ ಕಾರ್ ಮುಂದೆ ಓರಾಟ ಮಾಡವ್ವೆ ಅಂತ ಕಣ್ಲಾ ಅಂತೇಳ್ತು ಕಲ್ಲೇಶೀ…

ಎಣ್ಣೆ ಇಶ್ಯಾ ಯೋಳ್ದಾಗ ನೆನ್ಪಾಯ್ತು ಕಣ್ಲಾ!! ಬಾರಲಾ ತೆಮಿಳ್ನಾಡು ಕಡೇ ಓಗ್ಬರೋಣಾ.. ಎಲೆಕ್ಸನ್ ಅಂತಾ ಟೀವೀ, ಟೇಪ್ ರಿಕಾರ್ಡರು, ಸ್ಮಾರ್ಟ್ ಫೋನ್ ಮತ್ತು ಎಣ್ಣೆ ಬಿಟ್ಟೀಯಾಗಿ ಕೊಡ್ತಾವ್ರಂತೆ ಜಯಮ್ಮ ಮತ್ತು ಕರುಣಾನಿಧಿ ಪಾರ್ಟಿನೋರು!! ಎತ್ತಲಾ ನಿನ್ನ ಗಾಡೀನ ಅಂತ ಗೋಪಾಲಣ್ಣ ಪಾನ್ ಶಾಪ್ ಬಂದ್ ಮಾಡ್ತು.!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!