(೦೧)
ಬಂತು ಯುಗಾದಿ
ಬೇವು ಬೆಲ್ಲ ತಗಾದೆ
– ಸಿಕ್ಕದ ಲೆಕ್ಕ !
(೦೨)
ಬೇವಿನ ಹೂವ್ವ
ವಾರ್ಷಿಕ ಸಂಭ್ರಮಕೆ
– ಬೆಲ್ಲದ ನಗು ..!
(೦೩)
ಹಬ್ಬದುಡುಗೆ
ಹಬ್ಬದಡಿಗೆ ಭರ್ಜರಿ..
– ಕೊಂಡೆಲ್ಲ ತಂದು !
(೦೪)
ಯಾರಿಗೆ ಬೇಕು
ಯುಗಾದಿ ಆಶೀರ್ವಾದ ?
– ಬಿಡುವೆ ಇಲ್ಲ..
(೦೫)
ಶುಭ ಕೋರಿಕೆ
ಉಳಿತಾಯ ಖರ್ಚಲಿ
– ‘ಇ’ವಿನಿಮಯ !
(೦೬)
ದೂರದೂರಲಿ
ಅವರವರ ಹಬ್ಬದೆ ;
– ಹೆತ್ತವರೆಲ್ಲಿ ?
(೦೭)
ಮಾವಿನ ಎಲೆ
ಬೇವಿನೆಲೆ ತೋರಣ.
– ಹಳತ ಮೌನ..
(೦೮)
ಬಿರು ಬಿಸಿಲು
ಹೊಸತಿಗೆ ಹೊಸಿಲು
– ಮುನ್ನೆಚ್ಚರಿಕೆ !
(೦೯ )
ಹಬ್ಬದ ದಿನ
ಎಲ್ಲರ ದೋಸೆ ತೂತು
– ಒಂದೇ ಅಡಿಗೆ !
(೧೦)
ಕ್ಷುಲ್ಲಕ ನರ
ವರ್ಷದಲೆಂತ ಯುಗ ?
– ಹುಚ್ಚು ಬಯಕೆ ||
– ನಾಗೇಶ ಮೈಸೂರು