Featured ಅಂಕಣ

ಭಾವನೆಗಳನ್ನು ಘಾಸಿಗೊಳಿಸಬಹುದು, ನಂಬಿಕೆಗಳನ್ನಲ್ಲ!

ಕಡೆಗೂ ಆ ದಿನ ಬಂದೇ ಬಿಡ್ತು. ಅಂತಹಾ ಒಂದು ಕ್ಷಣಕ್ಕಾಗಿಯೇ ಶಿಷ್ಯ ಕೋಟಿ ಒಂದೂವರೆ ವರ್ಷಗಳಿಂದ ಕಾಯುತ್ತಾ ಇದ್ದಿದ್ದು. ಅಂತಹಾ ಒಂದು ಸನ್ನಿವೇಶಕ್ಕಾಗಿ ನಾವು ಮಾಡದ ಪೂಜೆಗಳಿಲ್ಲ, ಪ್ರಾರ್ಥನೆಗಳಿಲ್ಲ, ಜಪ-ತಪ, ಕುಂಕುಮಾರ್ಚನೆಗಳಿಲ್ಲಾ. ನಮ್ಮ ಪರಮೋಚ್ಛ ಗುರುಗಳಾದ ಶ್ರೀ ರಾಘವೇಶ್ವರ ಸ್ವಾಮೀಜಿಯವರ  ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅವರನ್ನು ಹೃದಯದಲ್ಲಿಟ್ಟು ಆರಾಧಿಸುತ್ತಿರುವ ಸಾವಿರಾರು ಶಿಷ್ಯರ ಪೂಜ್ಯ ಭಾವನೆಗಳನ್ನು ಘಾಸಿ ಮಾಡಬಹುದು ಆದರೆ ಗುರುಗಳ ಮೇಲೆ ನಾವಿಟ್ಟ ನಂಬಿಕೆಯನ್ನಲ್ಲ ಎಂದು ಹಿಂದೊಮ್ಮೆ ಹೇಳಿದ್ದೆ. ನಮ್ಮೆಲ್ಲಾ ನಂಬಿಕೆಗಳಿಗೆ ಪೂರಕವಾಗುವಂತಹಾ,  ನಾವು ಗುರುಗಳ ಮೇಲೆ ಇಟ್ಟಿದ್ದಂತಹ ನಂಬಿಕೆ ಇಮ್ಮಡಿಯಲ್ಲ್ಲ ನೂರ್ಮಡಿಯಾಗುವಂತಹ ತೀರ್ಪನ್ನು ಬೆಂಗಳೂರು ಸೆಷನ್ಸ್ ನ್ಯಾಯಾಲಯ ನೀಡಿದೆ.

ಅದೇಕೋ ಗೊತ್ತಿಲ್ಲ ಮೊತ್ತ ಮೊದಲ ಬಾರಿಗೆ ನನ್ನ ಕೈ ನಡುಗುತ್ತಿದೆ ಕಣ್ಣಂಚಿನಲ್ಲಿ ನೀರು ಜಿನುಗುತ್ತಿದೆ. ಇಷ್ಟೆಲ್ಲಾ ಆಗಿಯೂ ಏನೂ ಆಗದೇ ಇರುವಂತೆ ಸಮಚಿತ್ತವನ್ನು ಕಾಯ್ದುಕೊಂಡಿರುವ ಗುರುಗಳ ಮಂದಸ್ಮಿತವನ್ನು ನೆನೆಸುವಾಗ ಆನಂದ ಭಾಷ್ಪ ಹೊರ ಹೊಮ್ಮುತ್ತಿದೆ.

ಅದು ಎರಡು ವರ್ಷದ ಹಿಂದಿನ ಕತೆ. ೨೦೧೪ ಆಗಸ್ಟ್’ನಲ್ಲಿ   ಪ್ರೇಮಲತಾ ಎಂಬುವವಳು, ಶ್ರೀಗಳು ತನ್ನ ಮೇಲೆ ೧೬೯ ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದ್ದಳು. ನೂರಾ ಅರುವತ್ತೊಂಬತ್ತು ಭಾರಿ ಅನ್ನೋವಾಗ್ಲೇ  ಸಾಮಾನ್ಯ ಜ್ಞಾನ ಇರುವ ಯಾರಾದರೂ ಟಕ್ಕನೆ ಇದರಲ್ಲೇನೋ ಕುತಂತ್ರ ಇದೆ ಅಂತ ಗೆಸ್ ಮಾಡಬಹುದಾದಂತಹ ಆರೋಪ ಅದಾಗಿತ್ತು. ಗುರುಗಳ ನೈಜ ಶಿಷ್ಯರಾರೂ ಇದನ್ನು ಸುತಾರಾಂ ಒಪ್ಪಲಿಲ್ಲ. ಸಮಾಜವೂ ಒಪ್ಪಲಿಲ್ಲ. ಆದರೆ ಧರ್ಮದ್ರೋಹಿಗಳೇನು ಸಾಧಾರಣದ ಮೂರ್ತಿಗಳಾಗಿರಲಿಲ್ಲ.  ಎಲ್ಲರೂ ಒಬ್ಬರನ್ನೊಬ್ಬರು ಮೀರಿಸುವ ಫಟಿಂಗರೇ. ತಮಗಿದ್ದ ಹೈ ಇನ್’ಫ್ಲುಯೆನ್ಸ್ ಬಳಸಿಕೊಂಡು ಶ್ರೀಗಳ ಬಂಧನಕ್ಕೆ ಶತಾಯ ಗತಾಯ ಪ್ರಯತ್ನಿಸಿದವು. ಟಿ.ಆರ್.ಪಿಗಾಗಿ ಜೊಲ್ಲು ಸುರಿಸುವ ಮಾಧ್ಯಮಗಳೂ ಸಹ ದ್ರೋಹಿಗಳ ಜತೆ ಕೈ ಜೋಡಿಸಿದವು.

ಮತ್ತೆ ನಡೆದಿದ್ದೆಲ್ಲವೂ ನೀವು ನೋಡಿಯೇ ಇರುತ್ತೀರ, ಪ್ರೇಮಲತಾ ಮಾಧ್ಯಮದ ಮುಂದೆ ಬಂದು ಲೀಟರ್’ಗಟ್ಟಲೆ ಮೊಸಳೆ  ಕಣ್ಣೀರು ಸುರಿಸಿದಳು. ಪಿಯುಸಿ ಮಕ್ಕಳ ರಸಾಯನ ಶಾಸ್ತ್ರ ಪೇಪರ್ ಲೀಕ್ ಆಯ್ತಲ್ಲ, ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಕಣ್ಣೀರು ಆಕೆಯ ಕಡೆಯಿಂದ ಲೀಕ್ ಆಯ್ತು. “ಪಾಪ..ಯಾವ ಹೆಣ್ಣು ಮಗಳು ತಾನೇ ತನ್ನ ಮೇಲೆ ಅತ್ಯಾಚಾರ ಆಯ್ತು ಅಂತ ಸುಳ್ಳು ಹೇಳ್ತಾಳೆ ಹೇಳು” ಎನ್ನುತ್ತಾ ಆಕೆಯ ಕಣ್ಣೀರನ್ನೇ ಅತ್ಯಾಚಾರ ಆಗಿದೆ ಎನ್ನುವುದಕ್ಕೆ ಪ್ರಬಲ ಸಾಕ್ಷಿಯನ್ನಾಗಿ ಮಾಡಲಾಯ್ತು. ದೇಶದಲ್ಲಿ ಅದೆಷ್ಟೋ ಅಮಾಯಕರ ಮೇಲೆ ಅತ್ಯಾಚಾರಗಳಾದರೂ ಸೊಲ್ಲೆತ್ತದೆ, ಹೈ ಫೈ ಕೇಸುಗಳಲ್ಲಿ ಮಾತ್ರ   ಮಾಂಸ ಎಸೆದಾಗ ಹುಚ್ಚೆದ್ದು ಓಡಿ ಬರುವ ಬೀದಿ ನಾಯಿಗಳಂತೆ ಮಹಿಳಾವಾದಿಗಳು  ಓಡಿ ಬಂದರು. ಎಫ್.ಬಿಯಲ್ಲಿ ಸ್ಟೇಟಸುಗಳನ್ನು ಹಾಕಿಕೊಂಡು ಚಪಲ ತೀರಿಸಿಕೊಂಡರು.

ಆ ಬಳಿಕ ಎಲ್ಲಿ ನೋಡಿದರೂ ಇದೇ ಸುದ್ದಿ. ಸ್ವಾಮಿಗಳು ಅತ್ಯಾಚಾರ ಮಾಡಿರದಿದ್ದರೆ ಬಟ್ಟೆಯಲ್ಲಿ ಅವರ ವೀರ್ಯ ಸಿಕ್ತಿತ್ತಾ? ಡಿ.ಎನ್.ಎ ಪರೀಕ್ಷೆಯಲ್ಲಿ ಅದು ಅವರದ್ದೇ ಅಂತ ಪ್ರೂವ್ ಆಗಿದೆಯಂತಲ್ಲಾ? ಅತ್ಯಾಚಾರ ಮಾಡಿಯೇ ಇಲ್ಲವೆಂದಾಗ ಶ್ರೀಗಳ್ಯಾಕೆ ದೈಹಿಕ ಪರೀಕ್ಷೆಗೆ ಒಪ್ಪುತ್ತಿಲ್ಲ? ಎಂಬಿತ್ಯಾದಿ ಕುಹಕದ ಮಾತುಗಳನ್ನು ನಾವು ಕೇಳಬೇಕಾಯ್ತು. ಅತ್ಯಾಚಾರ ಮಾಡಿದವರು ಪೀಠದಲ್ಲಿರಲು ಅರ್ಹರಲ್ಲ, ಕೂಡಲೇ ಪೀಠತ್ಯಾಗ ಮಾಡಲಿ ಎಂದು  ಅಯೋಗ್ಯ ಶಿಖಾಮಣಿಗಳೂ  ಆಗ್ರಹಗಳನ್ನು ಮಾಡಿದರು. ಸರಿಯಾಗಿ ಜನಿವಾರ ಧಾರಣೆಯನ್ನೇ ಮಾಡದ ಮೂಢರು ಶ್ರೀಗಳಿಗೆ ಶಾಸ್ತ್ರ ಸಂಪ್ರದಾಯಗಳ ಪಾಠ ಹೇಳಲು ಕಲಿತರು.

ಸುಮ್ಮನೆ ಊಹಿಸಿ… ಈಗ ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕಾರ ಶ್ರೀಗಳು ನಿರ್ದೋಷಿ, ಪ್ರೇಮಲತಾ ಮಾಡಿರುವ ಯಾವ ಆರೋಪಗಳಲ್ಲೂ ಹುರುಳಿಲ್ಲ ಎಂಬುದು ಸಾಬೀತಾಗಿದೆ. ತಪ್ಪು ಮಾಡಿಲ್ಲವೆಂದಾದರೆ ಶ್ರೀಗಳು ಯಾಕೆ ದೈಹಿಕ ಪರೀಕ್ಷೆಗೆ ಒಪ್ಪುತ್ತಿಲ್ಲ ಎಂದು ಪ್ರಶ್ನಿಸಿದವರೆಲ್ಲಾ ಕಿವಿಯರಳಿಸಿ ಕೇಳಿ ಒಂದು ಮಾತನ್ನು, ಒಂದು ವೇಳೆ ಶ್ರೀಗಳು ದೈಹಿಕ ಪರೀಕ್ಷೆಗೆ ಒಳಪಟ್ಟಿದ್ದರೆ ಇವತ್ತಿನ ಪರಿಸ್ಥಿತಿ ಏನಾಗುತ್ತಿತ್ತು? ಸನ್ಯಾಸ ದೀಕ್ಷೆಗೆ ವಿರುದ್ಧವಾಗಿ ವೀರ್ಯ ಪರೀಕ್ಷೆಗೊಳಪಡುತ್ತಿದ್ದರೆ ಎಳ್ಳಷ್ಟೂ  ತಪ್ಪು ಮಾಡದೇ ಇದ್ದರೂ ಶ್ರೀಗಳು ಅನ್ಯಾಯವಾಗಿ ಪೀಠತ್ಯಾಗ ಮಾಡಬೇಕಾಗುತ್ತಿರಲಿಲ್ಲವೇ? ಹಾಗಾದ್ರೆ ನಿಮ್ಮ ಉದ್ದೇಶವೇನು? ಶ್ರೀಗಳ ಪೀಠತ್ಯಾಗವೊಂದೆಯಾ? ಕೇವಲ ಅಷ್ಟಕ್ಕೋಸ್ಕರ ಒಂದು ಸಮಾಜದ ಕಣ್ಮಣಿಯಾಗಿರುವ ಮುಗ್ಧ ಸಂತನ ಮೇಲೆ ಅಂತಹಾ ಹೀನ ಆರೋಪ ಮಾಡುತ್ತೀರಲ್ಲ? ನೀವು ಮನುಷ್ಯರಾ?  ಅತ್ಯಾಚಾರ ಆಗಿದೆ ಎಂದು ಆರೋಪಿಸಿದ ನಿಮ್ಮ ಮೇಲೆ ಕೋರ್ಟ್ ತನ್ನ ತೀರ್ಪಿನ ಮುಖಾಂತರ ಅತ್ಯಾಚಾರ ಮಾಡಿತಲ್ಲ? ಈಗ ಏನ್ ಹೇಳ್ತೀರಾ?

ಈ ಕೇಸಿನ ವಿಚಾರವಾಗಿ ನಾವು ಅನುಭವಿಸಿದ್ದು ಒಂದಾ ಎರಡಾ? ಅಬ್ಬಾ..  ಒಂದೊಂದನ್ನು ನೆನೆಯುವಾಗಲೂ ಕೋಪ ನೆತ್ತಿಗೇರುತ್ತದೆ. ಕೆಲವರು ಇದುವರೆಗೂ ಮಠಕ್ಕೆ ಬಾರದವರು, ಗುರುಗಳನ್ನು ಒಮ್ಮೆಯೂ ನೋಡದವರು, ಅವರ ಮಾತನ್ನು ಕೇಳದ ಬೀದಿಬದಿಯ ಪುಂಡರೂ ಸಹ ನಮಗೆ ಉಪದೇಶ ಮಾಡಿದವರಿದ್ದಾರೆ. “೧೬೯ ಸಲ ರೇಪ್ ಸಾಧ್ಯನಾ? ಅಷ್ಟು ಬಾರಿ ಅವಳೇನು ಕಡ್ಲೆಪುರಿ ತಿನ್ನುತ್ತಿದ್ದಳಾ?” ಎಂದು ಪ್ರಶ್ನಿಸಿದಾಗ “ರೇಪ್ ಆಗಿರಲಿಕ್ಕಿಲ್ಲ, ಅದು ಒಪ್ಪಿತ ಸೆಕ್ಸ್ ಆಗಿರಬಹುದು” ಅಂತ ಹಿಂಬರಹ ಕೊಟ್ಟವರೆಷ್ಟು ಜನ?  ಗುರುಗಳ ಅನುಯಾಯಿಗಳಲ್ಲದ ಇತರ ಸಮಾಜದವರು “ನಿಮ್ಮ ಸ್ವಾಮಿಗಳು ಹಾಗಂತೆ, ಹೀಗಂತೆ, ನಮ್ಮ ಸ್ವಾಮಿಗಳೇ ಶ್ರೇಷ್ಠ ಎನ್ನುತ್ತಾ ಹೀಯಾಳಿಸಿದವರೆಷ್ಟು ಜನ? ಶ್ರೀಗಳಿಗೂ, ಕೇಸಿಗೂ, ಪ್ರೇಮಲತಾ ಕುಟುಂಬಕ್ಕೂ ಸಂಬಂಧವೇ ಪಡದಿದ್ದರೂ ಬೇರೆ ಯಾವುದೋ ದ್ವೇಷದಿಂದಾಗಿ ಶ್ರೀಗಳನ್ನು ಹಣಿಯಲೇಬೇಕೆಂದು ಪ್ರಯತ್ನಿಸಿದವರೆಷ್ಟು ಜನ? ಎಲ್ಲ ಬಿಡಿ ಶ್ರೀಗಳಿಗೆ ಕೊಲ್ಲೂರಿನಲ್ಲಿ ವರ್ಷಕ್ಕೊಮ್ಮೆ ಮೂಕಾಂಬಿಕೆಯ  ಪೂಜೆ ಮಾಡುವ ವಿಶೇಷ ಅಧಿಕಾರವಿದೆ. ಅದಕ್ಕೆ ದ್ರೋಹಿಗಳು ಅಡ್ಡಗಾಲು ಹಾಕಿದರು. ಆರೋಪ ಹೊತ್ತವರು ದೇವಸ್ಥಾನಕ್ಕೆ ಬರಬಾರದೆಂದು ಯಾವ  ಕೋರ್ಟ್, ಸಂವಿಧಾನ ಹೇಳದಿದ್ದರೂ ಉಪ್ಪಿನಂಗಡಿ ದೇವಸ್ಥಾನದ ಬ್ರಹ್ಮಕಲಶದ ಸಮಯದಲ್ಲಿ ಆಶೀರ್ವಚನ ನೀಡಬೇಕಿದ್ದ ಶ್ರೀಗಳಿಗೆ ದೇವಾಲಯ ಪ್ರವೇಶಕ್ಕೆ ನಿಷೇಧ ಹೇರಿದರು. ಆ ಮೂಲಕ ಇಡೀ ಸಮಾಜದಲ್ಲಿ ರಾಘವೇಶ್ವರ ಶ್ರೀಗಳ ಮೇಲೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಲಾಯ್ತು. ಶ್ರೀಗಳ ಮೇಲೆ ಒಂದಲ್ಲಾ ಒಂದು ಸುಳ್ಳು ದೂರು ದಾಖಲಿಸಿ ಅವರನ್ನು ಬೆಂಗಳೂರು ಬಿಟ್ಟು ಹೊರ ಹೋಗದಂತೆ ಮಾಡಿ ರಾಮಚಂದ್ರಾಪುರ ಮಠ, ಗೋಕರ್ಣ ಮುಂತಾದೆಡೆ ಶ್ರೀಗಳು ಪರಂಪರಾಗತವಾಗಿ ಮಾಡಿಕೊಂಡು ಬರುತ್ತಿದ್ದ ಪೂಜಾ ಕೈಂಕರ್ಯಗಳಿಗೆ ಅಡ್ಡಿ ಮಾಡಲಾಯ್ತು. ದೇಶದೆಲ್ಲೆಡೆ ಶ್ರೀಗಳು ಪಡೆದುಕೊಂಡಿದ್ದ ಪ್ರತಿಷ್ಠೆಗೆ ಮಸಿ ಬಳಿಯುವ ಪ್ರಯತ್ನಗಳಾಯ್ತು.

ರಾಜಕಾರಣಿಗಳು, ತಲೆ ಸರಿ ಇಲ್ಲದ ಸಮಾನ ಮನಸ್ಕರು ಇವರೆಲ್ಲ ಸಾಲದೆಂಬಂತೆ ತಮ್ಮ ಸಾಹಿತ್ಯಗಳಲ್ಲಿ   ಹೆಚ್ಚಾಗಿ ನಾಸ್ತಿಕತೆಯನ್ನೇ ಸಾರುವ, ಇತರ ಸಮುದಾಯಗಳಲ್ಲಿ ಏನೇ ಅನಾಚಾರಗಳಾದರೂ ಬಾಯಿ ಮುಚ್ಚಿಕೊಂಡು ಕೂರುವ ಚಂಪಾ ಇತ್ಯಾದಿ ಕೆಲಸವಿಲ್ಲದ ಸಾಹಿತಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಶ್ರೀಗಳನ್ನು ಬಂಧಿಸುವಂತೆ ಒತ್ತಡವನ್ನೂ ತಂದರು. ಪಾಪ, ಕಡೆಗೂ ಅದು ವರ್ಕೌಟ್ ಆಗಲಿಲ್ಲ.

ಇನ್ನು ಈ ಕೇಸಿನ ವಿಚಾರದಲ್ಲಿ ನಮ್ಮ ಮಾಧ್ಯಮಗಳು ನಿರ್ವಹಿಸಿದ ಪಾತ್ರವನ್ನು ಹೇಳದೇ ಇದ್ದರೆ ನನಗೂ ಗುರುಶಾಪ ತಟ್ಟೀತು. “ಪ್ರೇಮಲತಾ ಜೊತೆ ಕಾಮಕಥಾ, ಹೋರಿಯಂತಾದ ಗೋ ಸ್ವಾಮಿ,, ಕಾಮಿ ಸ್ವಾಮಿ” ಇದು,  ಸಾಬೀತಾಗದ ಕೇಸಿನ ಕುರಿತಾಗಿ ನಮ್ಮ ಸೋ ಕಾಲ್ಡ್ ಜವಾಬ್ದಾರಿಯುತ ಮಾಧ್ಯಮಗಳು ವಾರಗಟ್ಟಲೆ  ಬಿತ್ತರಿಸಿದ ಕಾರ್ಯಕ್ರಮಗಳು. ಸದಾ ಟಿ.ಆರ್.ಪಿ ತೀಟೆ ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಲ್ಲುವ   ರಂಗನಾಥನಾದಿಯಾಗಿ ನ್ಯೂಸೂಳೆಗಳು  ರಂಗು ರಂಗಿನ ಭಾಷೆಗಳನ್ನು ಬಳಸಿ   ಟಿ.ಆರ್.ಪಿ ತೀಟೆ ತೀರಿಸಿಕೊಂಡಿದ್ದೇ ತೀರಿಸಿಕೊಂಡಿದ್ದು. ಏಕ ಪಕ್ಷೀಯ ತೀರ್ಪು ನೀಡಿದ್ದೇ ನೀಡಿದ್ದು. ಅವತ್ತೊಮ್ಮೆ ಶ್ರೀಗಳ ಬಂಧನ ಅಂತ ಬ್ರೇಕಿಂಗ್ ನ್ಯೂಸನ್ನೂ ಮಾಡಿದವು.  ಇವತ್ತು ನ್ಯಾಯಾಲಯ ತನ್ನ  ತೀರ್ಪು ನೀಡಿದಾಗ ಯಾವೊಂದು  ಮಾಧ್ಯಮವೂ ಅದನ್ನೊಂದು ದೊಡ್ಡ ಸುದ್ದಿ ಮಾಡಲಿಲ್ಲ, ರಾತ್ರಿಯ ಬುಲೆಟಿನ್’ನಲ್ಲಿ  ಒಂದು ಸಾಲಿನ ವಾರ್ತೆಯನ್ನೂ ಓದಲಿಲ್ಲ.   ಸುಳ್ಳನ್ನು ವೈಭವೀಕರಿಸಿ ಟಿ.ಆರ್.ಪಿ ಪಡೆಯುವಾಗ ತೋರಿಸಿದ ಇಂಟ್ರೆಸ್ಟನ್ನು ಸತ್ಯವನ್ನು ಜನರಿಗೆ ತಿಳಿಸುವಲ್ಲಿ  ಯಾವೊಂದು ನ್ಯೂಸೂಳೆಗಳೂ ತೋರಲಿಲ್ಲ.

ಅದೆಲ್ಲ ಸರಿ.  ಸುಳ್ಳು ಆರೋಪಗಳನ್ನು ಮಾಡಿ ಅಮಾಯಕರ ತೇಜೋವಧೆ ಮಾಡುವವರಿಗೇನು ಶಿಕ್ಷೆ ಎನ್ನುವುದೇ ಈಗ ನಮ್ಮೆಲ್ಲರ ಪ್ರಶ್ನೆ.  ನಮ್ಮ ದೇಶದಲ್ಲಿ ಮಹಿಳಾ ಸಂಬಂಧಿತ ಕಾನೂನುಗಳು ಅದೆಷ್ಟು ದುರುಪಯೋಗವಾಗುತ್ತಿವೆ ಎಂಬುದಕ್ಕೆ ಇದೊಂದು ತಾಜಾ ತಾಜಾ ಉದಾಹರಣೆ. ಏನೇನೂ ತಪ್ಪು ಮಾಡದ ಶ್ರೀಗಳ ಮೇಲೆ ಎಂತೆಂತಾ ಗಂಭೀರ ಆರೋಪ ಮಾಡಿ ಅವರ ಮಾನ ಹರಾಜು ಹಾಕಲೆತ್ನಿಸಿದ್ದು ಮಾತ್ರವಲ್ಲದೆ, ಸಾವಿರಾರು ಕೇಸುಗಳು ನ್ಯಾಯಾಲಯದಲ್ಲಿ ಕೊಳೆತು ಬಿದ್ದಿರುವಾಗ ನ್ಯಾಯಾಲಯದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿದ್ದಕ್ಕೆ ಏನಾದರೂ ಶಿಕ್ಷೆ ಕೊಡಬೇಕಲ್ಲಾ?  ಈ ಸುಳ್ಳು ಆರೋಪಗಳ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವುದನ್ನೂ ಪತ್ತೆ ಹಚ್ಚಬೇಕಲ್ಲಾ? ಇದೇ ಕೇಸಿನ ಸಂಬಂಧವಾಗಿ ಒಂದು ಆತ್ಮಹತ್ಯೆ ಕಮ್  ಕೊಲೆಯೂ ಆಯ್ತು. ಈಗ ಕೇಸೇ ರದ್ದಾಗಿರುವಾಗ ಅದೊಂದು ಕೊಲೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಸೋ ಆ ಕೊಲೆಗಾರರನ್ನು ಹಿಡಿದು ತಕ್ಕ ಶಿಕ್ಷೆ ಕೊಡಬೇಕಲ್ಲಾ?  ಮಾಧ್ಯಮ ಸ್ವಾತಂತ್ರವಿದೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಹೀನಾಮಾನವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಟಿವಿ ಚಾನಲ್’ಗಳಿಗೊಂದು ಸ್ಪಷ್ಟ ಸಂಹಿತೆಯನ್ನು ಹೇರಬೇಕಲ್ಲಾ?  ಕಾನೂನಿನ ದುರುಪಯೋಗವನ್ನು ತಡೆಯುವುದಕ್ಕಾಗಿ ಒಂದು ಬಲಿಷ್ಠ ಕಾನೂನನ್ನು ತರಲು ಇದು ಸಕಾಲ ಅಲ್ವಾ?

ಅಂತೂ ಸತ್ಯ ಮೇವ ಜಯತೇ ಎನ್ನುವ ಮಾತು ಸುಳ್ಳಾಗಲಿಲ್ಲ.   ಗುರುಗಳ ಮೇಲಿನ ನಮ್ಮ ಭಕ್ತಿ, ನಂಬಿಕೆ ನೂರು ಪಟ್ಟು ಜಾಸ್ತಿಯಾಗಿದೆ. ನಮ್ಮ ಸಂವಿಧಾನದ ಮೇಲೆ ಇದ್ದಂತಹ ಭರವಸೆ ಇನ್ನೂ ಹೆಚ್ಚಾಗಿದೆ. ನಮ್ಮ ನಡುವೆಯೇ ಇರುವ ಕೇಡಿಗಳ ಬಗ್ಗೆ ನಾವೆಲ್ಲರೂ  ಜಾಗೃತಗೊಳ್ಳಬೇಕಾಗಿದೆ.

ಲಾಸ್ಟ್ ಪಂಚ್: ಗಾಯಕಿಯ ಕರ್ಕಶ ಗಾಯನವನ್ನು ನಿಲ್ಲಿಸಿದ್ದಾಯ್ತು, ಇನ್ನು ನಟಿಯ ನಾಟಕವೊಂದೇ ಬಾಕಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!