ದಿನಾಂಕ 9-10-2015 ರಂದು ಮೂಡಬಿದ್ರೆ ಸ್ತಬ್ಧವಾಗಿತ್ತು… ಅಲ್ಲಿ ಅಮಾಯಕನೊಬ್ಬನ ಹೆಣವೊಂದು ಉರುಳಿತ್ತು… ನಡು ರಸ್ತೆಯಲ್ಲಿ ಆ ಕೊಲೆ ನಡೆದಿತ್ತು.. ಬೀದಿ ಹೆಣವಾಗಿದ್ದ ಸಂಘ ಪರಿವಾರದ ಕಾರ್ಯಕರ್ತ..ಇದೊಂದು ಸಾಮಾನ್ಯ ಕೊಲೆ ಎನ್ನುವ ರೀತಿಯಲ್ಲಿ ಪೋಲೀಸರು ದೂರು ದಾಖಲಿಸಿಕೊಂಡಿದ್ದರು… ಅದು ಯಾವ ಒತ್ತಡ ಅವರ ಮೇಲಿತ್ತೋ ಇದ್ದಕ್ಕಿದ್ದಂತೆ ರೌಡಿ ಎನ್ನುವ ಹಣೆಪಟ್ಟಿ ಕಟ್ಟಿಬಿಟ್ಟರು ಬಲಿಯಾದ ಆ ಮುಗ್ಧ ಜೀವಕ್ಕೆ .. ಆ ಮುಗ್ಧ ಜೀವಕ್ಕೆ ಬೆಲೆಯಿಲ್ಲವೇ. ??? ನಮ್ಮ ಪೋಲಿಸರೋ ಯಾವ ಒತ್ತಡ ಬಂದರೆ ಸಾಕು ಕೇಸನ್ನೇ ಅದಲು ಬದಲು ಮಾಡಿ ಬಿಡುತ್ತಾರೆ ..ಅಂತಹಾ ಅನೇಕ ಉದಾಹರಣೆ ನಮ್ಮಲ್ಲಿ ಇನ್ನೂ ಜೀವಂತವಾಗಿದೆ… ಆರು ಕೊಟ್ಟರೆ ಅವರು ಮೂರು ಕೊಟ್ಟರೆ ಇವರು ಎನ್ನುವ ಸಿದ್ಧಾಂತ ಅವರದ್ದು… ಇದೆಲ್ಲಾ ಜೀವನೋಪಾಯದ ಮಾರ್ಗಗಳು.. .
ಅಂದು ಸತ್ತು ಬೀದಿ ಹೆಣವಾಗಿದ್ದ ಮುಗ್ಧ ಜೀವ ಒಬ್ಬ ಸಾಮಾನ್ಯ ಹೂ ಮಾರುವವನ ಮಗ. ಅದಲ್ಲದೆ ಬಜರಂಗ ದಳದ ಓರ್ವ ನಿಷ್ಟಾವಂತ ಕಾರ್ಯಕರ್ತ.. ಯಾವುದೇ ರೌಡಿಯೂ ಅಲ್ಲ …. ಸಾವಿರಾರು ಕಾರ್ಯಕರ್ತರು ಬೀದಿಗಿಳಿದರು… ಬಂದ್ ಮಾಡಿಸಿದರು… ನ್ಯಾಯಕ್ಕಾಗಿ ಹೋರಾಡಿದರು.. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಎಂದು ಹಾದಿ ಬೀದಿಗಳಲ್ಲಿ ಕೂಗಾಡಿದರು. ಆದರೂ ಯಾವುದೇ ಪ್ರಯೋಜನವಗಲಿಲ್ಲ… ನಮ್ಮ ರಾಜ್ಯದ ಗೃಹ ಸಚಿವರು ಮಾತ್ರ ಇದೊಂದು ಸಾಮಾನ್ಯ ಕೊಲೆ ಎಂದು ಕೈತೊಳೆದುಕೊಂಡರು.. ಜಿಲ್ಲಾ ಉಸ್ತುವಾರಿ ಸಚಿವರಂತೂ ಮೃತನ ಮನೆಗೆ ಭೇಟಿ ನೀಡುವುದೇ ನಮ್ಮ ಉದ್ಯೋಗ ಅಲ್ಲ… ಎಂಬ ನಿರ್ಲಕ್ಷ್ಯದ ಮಾತನ್ನು ಹೇಳಿ ಜನತೆಯಿಂದ ಹಿಗ್ಗಾಮುಗ್ಗಾ ನಿಂದಿಸಿಕೊಂಡರು.. ಪರಿಹಾರದ ಮೊತ್ತವನ್ನಾದರೂ ಕೊಡಬಹುದಿತ್ತು ಅದೂ ಇಲ್ಲ…!!!
ಈ ಅಮಾಯಕನ ಕೊಲೆಗೆ ಕಾರಣ ಇಷ್ಟೇ . ಅವನೊಬ್ಬ ಗೋವಿನ ಭಕ್ತನಾಗಿದ್ದ .. ಗೋವಿನ ಅಕ್ರಮ ಸಾಗಾಟವನ್ನು ವಿರೋಧಿಸುತ್ತಿದ್ದ.. ಅನೇಕ ಬಾರಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನಗಳನ್ನು ತಡೆದು ಪೋಲೀಸರಿಗೆ ಒಪ್ಪಿಸಿದ್ದ.. ಅಷ್ಟಕ್ಕೂ ಆ ಮುಗ್ಧ ಬಲಿಪಶುವಿನ ಹೆಸರು ಪ್ರಶಾಂತ್ ಪೂಜಾರಿ.
ಇದೆಲ್ಲಾ ತಣ್ಣಗಾಗುತ್ತಿದ್ದಂತೆ ನಮ್ಮ ರಾಜ್ಯ ಸರ್ಕಾರ ಸುಮ್ಮನಿರುತ್ತದೆಯೇ … ಸಾಧ್ಯವೇ ಇಲ್ಲ,.. ಏನಾದರೊಂದು ಮಾಡಿಯೇ ‘ಸಿದ್ಧ’ ಎಂದು ತನ್ನೆಲ್ಲಾ ಕಾರ್ಯವನ್ನು ಬದಿಗಿಟ್ಟು ಟಿಪ್ಪುವಿನ ಜನ್ಮದಿನಾಚರಣೆಯನ್ನು ಆಚರಿಸಲು ಸರ್ಕಾರಿ ಆದೇಶವನ್ನು ಹೊರಡಿಸಿತ್ತು… ಮೊದಲೇ ನಮ್ಮ ರಾಜ್ಯದಲ್ಲಿ ವಾತಾವರಣ ಬೂದಿಮುಚ್ಚಿದ ಕೆಂಡದಂತಿತ್ತು… ಇಷ್ಟು ಸಾಕಿತ್ತು ಆರಿದ್ದ ಬೆಂಕಿ ಮತ್ತೆ ಹೊತ್ತಿ ಉರಿಯಲು. ಈ ಆಚರಣೆಗೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಯಿತು.. ಸರ್ಕಾರ ಮಾತ್ರ ತುಟಿಕ್ ಪಿಟಿಕ್ ಎನ್ನಲೇ ಇಲ್ಲ… ಆಚರಣೆಯ ದಿನ ಬಂದಾಯಿತು… ಆ ಅಚರಣೆಯ ಬೆಂಬಲಿಸಿ ರಾಜ್ಯದ ಕೆಲವು ಕಡೆ ಮೆರವಣಿಗೆಗಳು ನಡೆಯಿತು. ಕೊಡಗು ಎಂದರೆ ಅದು ಶಾಂತಿಯ ತಾಣ.. ಕರ್ನಾಟಕದ ಕಾಶ್ಮೀರ ಎನ್ನುವ ಹೆಸರೂ ಇದೆ.. ಅಂತಹಾ ಕೊಡಗಿನ ಕೇಂದ್ರಸ್ಥಾನ ಮಡಿಕೇರಿಯಲ್ಲಿ ಜಿಲ್ಲಾಡಳಿತವು ಟಿಪ್ಪು ಜಯಂತಿಯ ಮೆರವಣಿಗೆಗೆ ಅವಕಾಶ ಕೊಟ್ಟಿತ್ತು.. ಅದು ಹೇಳಿ ಕೇಳಿ ಟಿಪ್ಪುವಿನ ವಿರೋಧಿ ತಾಣ.. ಟಿಪ್ಪುವನ್ನು ಕನಸಲ್ಲಿ ಕಂಡರೂ ಕತ್ತಿ ಬೀಸುವಷ್ಟು ಧ್ವೇಷ ಸಾಧಿಸುತ್ತಾರೆ ಅಲ್ಲಿನ ಜನರು.. ಇನ್ನು ಆ ಟಿಪ್ಪುವಿನ ಪರವಾಗಿ ಮೆರವಣಿಗೆಗೆ ಅವಕಾಶ ಕೊಟ್ಟರೆ ಕೇಳಬೇಕೇ??
ಅದೇನೋ ತಿಳಿಯೇ ಅಂದು ಅಲ್ಲಿಯ ಜನ ಸುಮ್ಮನಿದ್ದರು…ಮೆರವಣಿಗೆ ಸಾಗುತ್ತಾ ಸಾಗುತ್ತಾ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ಏನಾಯಿತೋ .. ಮೆರವಣಿಗೆಯಲ್ಲಿದ್ದ ಕೆಲವೊಂದು ಕಿಡಿಗೆಡಿಗಳು ಕಲ್ಲು ತೂರಾಟ ಪ್ರಾರಂಭಿಸಿದರು.. ಅಲ್ಲಿಗೆ ಶುರುವಾಯಿತು ಗಲಭೆ … ಶಾಂತಿಯ ಸಾಗರಕ್ಕೆ ಕಲ್ಲೆಸೆದು ಅದರ ಅಲೆಯ ಅಬ್ಬರವನ್ನು ಹೆಚ್ಚಿಸಿತು.. ಅಲ್ಲಿಯೂ ಒಂದು ಕೊಲೆ ನಡೆದೇ ಹೋಯಿತು… ಒಬ್ಬ ಭಾಜಪದ ಪ್ರಮುಖ ವ್ಯಕ್ತಿಯನ್ನು ಆಟ್ಟಾಡಿಸಿ ಆಸ್ಪತ್ರೆಯ ಆವರಣದೊಳಗೆ ಕಲ್ಲೆಸೆದು ಕೊಂಡರು… ಅದಕ್ಕೆ ಸಕಾರತ್ಮಕವಾದ ದಾಖಲೆಯೂ ಇದೆ…
ಈ ಕೊಲೆ ನಡೆದಾದ ರಾಜ್ಯದ ಮುಖ್ಯಮಂತ್ರಿಗಳು ಏನೆಂದರು ??ಅಕಸ್ಮಾತಾಗಿ ಓಡುವಾಗ ಕಟ್ಟಡದ ಮೇಲಿಂದ ಬಿದ್ದು ಸತ್ತರು ಎಂದು ಇವರೇ ಪ್ರತ್ಯಕ್ಷದರ್ಶಿಗಳು ಎಂಬಂತೆ ಹೇಳಿಕೆಯನ್ನು ಕೊಟ್ಟರು… ಕನಿಷ್ಠ ಪಕ್ಷ ಮೃತದೇಹವನ್ನಾದರೂ ನೋಡುವ ಸೌಜನ್ಯವನ್ನು ತೋರಲಿಲ್ಲ ಅಂದು.. ಎಲ್ಲರ ಬಾಯಲ್ಲೂ ಛೀ… ಥೂ.. ಎಂದು ಉಗಿದ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸಿಲ್ಲದಿದ್ದರೂ ಮೃತರ ಮನೆಗೆ ಭೇಟಿ ನೀಡಿದ್ದರು.. ಗಲಭೆಯಲ್ಲಿ ಗಾಯಗೊಂಡಿದ್ದ ಇಬ್ಬರು ಮುಸ್ಲೀಂ ಯುವಕರು ಮೃತಪಟ್ಟಿದ್ದರು .. ಅವರ ಮೃತದೇಹವನ್ನು ನೋಡಿದ ನಂತರವೇ ಗಲಭೆಯಲ್ಲಿ ಮೃತಪಟ್ಟ ಮನೆಗೆ ಒಲ್ಲದ ಮನಸ್ಸಿನಿಂದ ಭೇಟಿಕೊಟ್ಟರು… ಹೆಣದ ಮುಂದೆ ರಾಜಕೀಯ ಬೇಡ ಎಂದು ಮೊಸಳೆ ಕಣ್ಣೀರು ಸುರಿಸಿದರು…. ಟಿಪ್ಪುವಿನ ಜನ್ಮದಿನವಿದ್ದದ್ದು ನವೆಂಬರ್ 20… ಆದರೆ ಸರ್ಕಾರ ಅದೇಕೆ ನವೆಂಬರ್ 10ಕ್ಕೆ ಭಾರೀ ಆಸಕ್ತಿ ವಹಿಸಿ ಆಚರಿಸಲು ಇಚ್ಛೆಪಟ್ಟಿತ್ತು..??? ಅದಕ್ಕೂ ರಾಜಕೀಯದ ನಂಟಿದೆ.. ನವೆಂಬರ್ 20 ರ ಒಳಗೆ ಜಿಲ್ಲಾ ಪಂಚಾಯಿತಿಯ ಮತದಾನದ ಸಿದ್ಧತೆಯಲ್ಲಿತ್ತು… ರಾಜ್ಯ ಸರ್ಕಾರದ್ದು ಅಭಿವೃದ್ಧಿ ಕಾರ್ಯಗಳೆಲ್ಲಾ ನಿಂತೇ ಹೋಗಿತ್ತು. ಎಲ್ಲರ ಬಾಯಲ್ಲಿ ಮೋದಿಯವರ ಹೆಸರು ಮನೆ ಮಾಡಿತ್ತು.. ಭಾಜಪಕ್ಕೆ ಬೀಳುತ್ತಿದ್ದ ಮತವನ್ನು ವಿಭಜಿಸಲು ಏನಾದರೊಂದು ಕಾರಣ ಸಿಗಬೇಕಿತ್ತು.. ಅದಕ್ಕಾಗಿ 10 ದಿನ ಮುಂಚಿತವಾಗಿ ಟಿಪ್ಪು ಜಯಂತಿಯನ್ನು ಆಚರಿಸಿದ್ದು.!!!
ಇಲ್ಲಿಯೂ ಅಷ್ಟೇ ಭಾಜಪದ ನಾಯಕರು ಬಿಟ್ಟರೆ ಬೇರೆ ಯಾವೊಬ್ಬ ಪಕ್ಷದ ಮುಖಂಡನೂ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಲಿಲ್ಲ… ಈ ಘಟನೆಯಲ್ಲಿ ಬಲಿಯಾದದ್ದು ಯಾರು ??? ಅದೇ ಭಾಜಪ ದ ಸಕ್ರೀಯ ಕಾರ್ಯಕರ್ತ ಕುಟ್ಟಪ್ಪ..
ಇದೀಗ ಸರದಿ ಮೈಸೂರಿನದ್ದು…
ದಿನಾಂಕ 13-03-2016 ರಂದು ಮೈಸೂರಿನ ಜನ ಬೆಚ್ಚಿಬಿದ್ದರು.. ಯಾಕೆಂದರೆ ಇಲ್ಲಿಯೂ ಒಬ್ಬ ಅಮಾಯಕನ ಕೊಲೆ ನಡೆಸಿದ್ದರು… ರಸ್ತೆ ಮಧ್ಯೆ ಅಟ್ಟಾಡಿಸಿ ಕೊಲೆ ನಡೆಸಲಾಗಿತ್ತು. ಈ ಕೊಲೆಗೆ ಕಾರಣವೇನಿಬಹುದು ಎನ್ನುತ್ತಿರುವಾಗ ಕೊಲೆಯಾದ ಅಮಾಯಕ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ಮಸೀದಿಯ ಬಗ್ಗೆ ವಿರೋಧಿಸುತ್ತಿದ್ದ. ಅದು ಒಂದು ಸಮುದಾಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು..
ಇಂತಹಾ ಘಟನೆಗಳೆಲ್ಲಾ ನಡೆದರೆ ಲಾಭ ಯಾರಿಗೆಂದರೆ ಅದು ರಾಜ್ಯ ಸರ್ಕಾರಕ್ಕೆ ಮತ್ತು ದೇಶವನ್ನೇ ಕುಕ್ಕಿ ತಿನ್ನುವ ದೇಶದ್ರೋಹಿಗಳಿಗೆ. ರಾಜ್ಯಾದ್ಯಂತ ಕೋಮು ಗಲಭೆ ಸೃಷ್ಠಿಯಾಗುತ್ತದೆ. ಅದರಿಂದ ಜನರ ನಡುವೆ ಸಾಮರಸ್ಯ ಇರುವುದಿಲ್ಲ… ಮತ ವಿಭಜಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ದುರುದ್ಧೇಶ…
ವೇಮುಲ ಎಂಬುವವನು ಸತ್ತಾಗ, ಅಖ್ಲಾಕ್’ನನ್ನು ಕೊಂದಾಗ ರಂಪಾಟ ನಡೆಸಿದ್ದ ಜಾತ್ಯಾತೀತರೆಲ್ಲಾ ಎಲ್ಲಿದ್ದಾರೆ ಈಗ? ಮೂಡಬಿದ್ರೆ ಮಡಿಕೇರಿ ಇದೀಗ ಮೈಸೂರು ಸೇರಿ ಮೂರು ಅಮಾಯಕರ ಹೆಣ ಬಿದ್ದಾಗ ಇತ್ತ ಕಡೆ ಸುಳಿಯಲೇ ಇಲ್ಲ.. ಈ ಮೂರು ಹೆಣಗಳು ಉರುಳಿದ್ದು ಕೋಮುವಾದಿಗಳದ್ದಲ್ಲವೇ ??? ಅದರ ಪರ ನಿಂತರೆ ಅಲ್ಪಸಂಖ್ಯಾತರ ಮತಕ್ಕೆ ಕುತ್ತಲ್ಲವೆ?? ಚಿಕ್ಕಮಗಳೂರಿನ ಸಮೀಪ ಎನ್ಕೌಂಟರ್ ಗೆ ಬಲಿಯಾದ ಕಬೀರ್’ನ ಮೃತದೇಹ ನೋಡಲು ನಾ ಮುಂದು ತಾ ಮುಂದು ಎಂಬಂತೆ ಅವನ ಮನೆಗೆ ಓಡಿದವರೆಲ್ಲಾ ಎಲ್ಲಿ ಅಡಗಿಕೊಂಡಿದ್ದಾರೆ ಈಗ? ತಮಗೆ ಲಾಭವಾಗುವಂತಹ ಹೆಣಗಳು ಬಿದ್ದಾಗ ರಣಹದ್ದುಗಳಂತೆ ಹಾರಿ ಬಂದವರೆಲ್ಲಾ ಎಲ್ಲಿದ್ದಾರೆ?