Featured ಪರಿಸರದ ನಾಡಿ ಬಾನಾಡಿ

ಬಾನಾಡಿ ಲೋಕದಲ್ಲೊಂದು ಬಾನಾಡಿ – swift  ಭಾಗ 2

 

ಮೂರು ವಾರಗಳ ಹಿಂದೆ ಅವಿಶ್ರಾಂತ ಬದುಕು ನಡೆಸುವ ಬಾನಾಡಿ ಲೋಕದ “ಬಾನಾಡಿ” swift ಗಳ ಬಗೆಗೆ ಓದಿರುವಿರಿ. ಆದರೆ ನಾವು ಮನುಜರು ಭೂನಾಡಿಗಳು ಹಾಗಾಗಿ ನಮಗೆ ಹಲವೊಂದು ಕಾರಣಗಳಿಗಾಗಿ ವಿಶ್ರಾಂತಿ ಬೇಕಾಗಿಬಿಡುತ್ತದೆ. ಆದ್ದರಿಂದ ಮೂರು ವಾರಗಳ ವಿಶ್ರಾಂತಿಗಾಗಿ ನನ್ನನ್ನು ಹೀಗೆ ನಕ್ಕು ಕ್ಷಮಿಸಿ ಬಿಡಿ. ಓಹೋ ಈಗ ಬಾನ ನೋಡಿ ಅಲ್ಲಿ ಇನ್ನೂ ಹಾರುತಿದೆ ಬಾನಾಡಿ.

Swift  ಗಳಲ್ಲಿ swift, Swiftlet ಮತ್ತು Needle tail ಎಂದು ಇವುಗಳಿಗಿರುವ ವಿವಿಧ ಶುಭನಾಮಗಳ ಬಗ್ಗೆಯೂ ತಿಳಿದಿರುವಿರಿ. ನಮ್ಮ ಕರ್ನಾಟಕದಲ್ಲಿ ಲಭ್ಯವಿರುವ sತಿiಜಿಣ ಗಳ (ಬೈರುಂಡೆ) ಬಗೆಗೆ ಈ ಲೇಖನದಲ್ಲಿ ವಿವರಿಸುವೆ.

ಪ್ರಭೇದವನ್ನು ತೆಗೆದು ಕೊಂಡರೆ ಇಲ್ಲಿ

  1. Little swift
  2. Asian Palm swift
  3. Alpine Swift ಎಂಬ ಮೂರು ಒಳ ಪ್ರಭೇದಗಳು ಲಭ್ಯ.

Swiftlet ನಲ್ಲಿ ಕೇವಲ Indian Swiftlet ಅನ್ನು ಮಾತ್ರ ನಾವಿಲ್ಲಿ ಕಾಣಬಹುದು

ಇನ್ನು  needletail  ಪ್ರಭೇದದಲ್ಲಿ 1.white rumped needletail  ಮತ್ತು  2.Brown backed needletail ಎಂಬ ಎರಡು ಒಳ ಪ್ರಭೇದಗಳುಂಟು.

ಈ ಮೂರು ಪ್ರಭೇದಗಳಲ್ಲದೆ Crested treeswift ಎಂಬ ನಾಲ್ಕನೇ ಪ್ರಭೇದವೂ ಇದೆ.

ಇಷ್ಟೂ ಬಾನಾಡಿಗಳ ಬಗೆಗೆ ವಿವರಿಸುವ ಪ್ರಯತ್ನ ಮಾಡುವೆ. ಎಲ್ಲಾ ಪ್ರಭೇದಗಳನ್ನು ನಾನು ಹಲವು ಭಾರಿ ನೋಡಿರುವೆನಾದರೂ ಇತರೆ ಪಕ್ಷಿಗಳಂತೆ ಅದರೊಂದಿಗೆ ಒಡನಾಟ ಮಾಡುವ ಸೌಭಾಗ್ಯ ನನಗಿಲ್ಲ. ನನಗೆಂದು ಅಲ್ಲ, ಹಲವು ಅನುಭವಿ ಪಕ್ಷಿವೀಕ್ಷಕರಿಗೂ ಇದರ ಅಧ್ಯಯನ ಮಾಡಲು ಸಾದ್ಯವಾಗಿಲ್ಲ. ಹಾಗಾಗಿ ನನಗೆ ತಿಳಿದಿರುವಷ್ಟು ಮತ್ತು ಅಲ್ಲಿ ಇಲ್ಲಿ ಓದಿದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

  1. Little swift, Apus affinis, ಮಳೆಪಕ್ಷಿ, ಸೂರು ಆಕಾಶ ಗುಬ್ಬಿ :

15ಸೆಂ.ಮೀ ಉದ್ದದ, ನಸುಗಪ್ಪು ದೇಹದ ಈ ಬಾನಾಡಿಗೆ ಬಿಳಿ ಗಂಟಲು ಮತ್ತು ಪೃಷ್ಠ. ಸದಾ ಗುಂಪು ಗುಂಪಾಗಿ ಇರುತ್ತವೆ. ದೇವಸ್ಥಾನ, ಚರ್ಚ್, ಹಳೆ ಹಂಚಿನ ಮನೆ, ಬಾವಿ, ಸಂಕಗಳಲ್ಲಿ ಇವುಗಳ ಸಂತಾನೋತ್ಪತ್ತಿ. ಮೈಸೂರಿನ ಚಾಮುಂಡಿ ಬೆಟ್ಟದ ಎದುರಿನ ಗೋಪುರದಲ್ಲಿ ಇವುಗಳು ಗೂಡು ನಿರ್ಮಿಸುವುದನ್ನು ಆಸಕ್ತರು ಕಾಣಬಹುದು. ಈ ಪ್ರಭೇದವನ್ನು ಕರ್ನಾಟಕದೆಲ್ಲೆಡೆ ಕಾಣಬಹುದು.

Little swift

Little swift

  1. Asian Palm swift (Cypsiurus balasiensis) , ತಾಳೆ ಬಾನಾಡಿ:

ಹೆಸರೇ ಸೂಚಿಸುವಂತೆ ಇದರ ಸೂರು ತಾಳೆ ಮರ. ಹೆಚ್ಚಾಗಿ ತಾಳೆ, ಈಚಲು ಅಥವಾ ಅಡಿಕೆ ಮರದ ಸೋಗೆಯಲ್ಲಿ ಇವು ಗೂಡು ನಿರ್ಮಿಸುತ್ತವೆ.  ತಮ್ಮ ಜೊಲ್ಲನ್ನೇ ಊರ್ಧ್ವತಲಗಳಿಗೆ ಅಂಟಿಸಿ ಗೂಡು ರಚಿಸುವವು. ಸ್ವತಃ ತಾವೇ ಕೂರಲಾಗದಷ್ಟು ಚಿಕ್ಕದಾದ ಈ ಗೂಡಿಗೆ ಹೆಣ್ಣು ಹಕ್ಕಿ ಒಂದು ಇಲ್ಲವೇ ಎರಡು ಮೊಟ್ಟೆಗಳನ್ನು ಜೊಲ್ಲಿನಿಂದ ಅಂಟಿಸುತ್ತವೆ.

Asian Palm Swift

Asian Palm Swift

ಗಾಳಿ ಬೀಸಿ ಗರಿ ಅಲ್ಲಾಡಿದರೂ ಮೊಟ್ಟೆಗಳು ಬೀಳುವುದಿಲ್ಲ. ತಂದೆ ತಾಯಿ ಹಕ್ಕಿಗಳೆರಡೂ ತಮ್ಮ ಬೆರಳುಗಳಿಂದ ನೇತು ಬಿದ್ದು ಮೊಟ್ಟೆಗಳಿಗೆ ಕಾವುಕೊಟ್ಟು ಮರಿ ಮಾಡುವುವು. ಮರಿಗಳೂ ಸಹ ದೊಡ್ಡವಾಗುವವರೆಗೂ ಇದೇ ರೀತಿ ತಲೆ ಮೇಲಾಗಿ ತೂಗು ಬಿದ್ದೇ ಕಾಲ ಕಳೆಯುವುವು. (ಕೃಪೆ: ಕನ್ನಡ ವಿಷಯ ವಿಶ್ವಕೋಶ- ಪ್ರಾಣಿಪ್ರಪಂಚ).

Asian Palm Swift

Asian Palm Swift

ಈ ತಾಳೆ ಬಾನಾಡಿಯು 13 ಸೆಂ.ಮೀ ಉದ್ದವಿದ್ದು, ಕಡುಬೂದಿ ಬಣ್ಣದಲ್ಲಿರುತ್ತದೆ. ಆಳವಾಗಿ ಸೀಳಿದ ಬಾಲ ಹೊಂದಿರುತ್ತದೆ. ದಿನಪೂರ್ತಿ ಆಕಾಶದಲ್ಲಿ ಇದರದ್ದು ನಿರಂತರ ಬೇಟೆ.

Asian palm swift

Asian palm swift

  1. Alpine Swift, (Tachymarptis melba) ಪರ್ವತ ಬಾನಾಡಿ:

ನೀವೆಂದಾದರೂ ಜೋಗ ಜಲಪಾತ ನೋಡಿರುವಿರಾ? ಅದರ ಎತ್ತರಕ್ಕೆ ದಂಗಾಗಿರುವಿರಾ? ಅಂಥಾ ಕಡಿದಾದ ಕಮರುಗಳಲ್ಲಿ ಇವುಗಳು ಗೂಡು ನಿರ್ಮಿಸುತ್ತವೆ. ಭಾರೀ ವೇಗದಲ್ಲಿ ಗಾಳಿಯ ದಿಕ್ಕಿನಲ್ಲಿ ಹಾರುವ ಇವು ಅದೇ ವೇಗದಲ್ಲಿ ದಿಕ್ಕು ಬದಲಿಸಿಯೂ ಹಾರಬಲ್ಲವು. ಗಂಟೆಗೆ 220 – 250ಕಿ.ಮೀ ವೇಗದಲ್ಲಿ ಹಾರಬಲವು ಎಂದು ನಾವು ಊಹಿಸಬಹುದು. 22 ಸೆಂ.ಮೀ ಉದ್ದದ ಈ ಬಾನಾಡಿಗೆ ಕಡುಗಂದು ಮೇಲ್ಮೈ ಮತ್ತು ಬಿಳಿ ಕೆಳಮೈ. ಎದೆಯ ಮೇಲೆ ಅಗಲವಾದ ಕಂದು ಪಟ್ಟಿ, ಸಣ್ಣ ಚೊಟ್ಟೆ ಬಾಲ.

Alpine swift

Alpine swift

ಮಲೆನಾಡಿನಲ್ಲಿ ಸಾಮಾನ್ಯವಾಗಿ ಕಾಣಿಸುವ ಇವು ಬಯಲು ಸೀಮೆಯಲ್ಲಿ ಮಳೆಗಾಲದಲ್ಲಿ ಮಾತ್ರ ಕಾಣಿಸುತ್ತವೆ.

Alpine swift

Alpine swift

  1. Indian swiftlet (Aerodramus unicolor), ಕಿರು ಬಾನಾಡಿ:

12 ಸೆಂ.ಮೀ ಉದ್ದದ ಈ ಬಾನಾಡಿಗೆ ಕಡುಗಂದು ಮೇಲ್ಮೈ, ಪೇಲವ ಕೆಳಮೈ, ತುಸು ಸೀಳಿದ ಕಪ್ಪು ಬಾಲ. ಕೊಡಗಿನಲ್ಲಿ ಸಾಮಾನ್ಯವಾಗಿ ಕಾಣಿಸುವ ಇವು ಮಳೆಗಾಲದಲ್ಲಿ ಆಹಾರ ಅರಸುತ್ತ ಬಯಲುಸೀಮೆಗೆ ಬರುತ್ತವೆ.

Indian Swiftlet

Indian Swiftlet

ಈ swiftlet ಗಳ ವಿಶೇಷ ಇದರ ಗೂಡು. ಸಂಪೂರ್ಣವಾಗಿ ಜೊಲ್ಲಿನಿಂದ ನಿರ್ಮಾಣಗೊಂಡ ಗೂಡಿಗೆ ಭಾರೀ ಬೇಡಿಕೆ. Edible Swiftlet ಎಂಬ ಹಿಮಾಲಯದ ಪ್ರಭೇದಕ್ಕಂತೂ ಇನ್ನಿಲ್ಲದ ಬೇಡಿಕೆ. ಚೀನೀಯರು ಇದನ್ನು ಕಾಮೋತ್ತೇಜಕ ಎಂದು ನಂಬಿರುವರು. ತಮ್ಮ ಖಾದ್ಯಗಳಲ್ಲಿ ಇದನ್ನು ಬಳಸುತ್ತಾರೆ.  swiftlet soup (ಸೂಪ್) ಅತಿ ದುಬಾರಿ ಖಾದ್ಯವೂ ಹೌದು. ಅತಿ ಹೆಚ್ಚು ಪ್ರೋಟಿನ್‍ನಿಂದ ಕೂಡಿರುವ ಈ ಗೂಡು ಪಶ್ಚಿಮ ಪೆಸಿಫಿಕ್ ದ್ವೀಪಗಳಲ್ಲಿ ವ್ಯಾಪಾರದ ವಸ್ತುವೂ ಹೌದು!!!

  1. Brown backed needletail (Hirundapus giganteus), ಕಂದುಗತ್ತಿನ ಸೂಜಿಬಾಲದ ಬಾನಾಡಿ:

23 ಸೆಂ.ಮೀ ಉದ್ದ, ಕಡುಗಂದು ದೇಹ, ಕೆಂಗಂದು ಗಂಟಲು, ಕಂದು ಬೆನ್ನು ಮತ್ತು ಸೂಜಿಮೊನೆಗಳಂತಿರುವ ಬಾಲ. ಮಲೆನಾಡಿನ ಬೆಟ್ಟ ಪ್ರದೇಷದ ಈ ಪಕ್ಷಿ ಮಳೆಗಾಲದ ಪ್ರಾರಂಭದಲ್ಲಿ ಬಯಲು ಸೀಮೆಯ ಕೆಲ ಪ್ರದೇಷಕ್ಕೂ ಬರುತ್ತವೆ. ಮೊದಲ ಮಳೆಯ ನಂತರ ಏಳುವ ಗೆದ್ದಲು ಹುಳ ಈ ಸೂಜಿಬಾಲದ ಬಾನಾಡಿಗೆ ಅತ್ಯಂತ ನೆಚ್ಚಿನ ಖಾದ್ಯ. ಸದಾ ಎತ್ತರದಲ್ಲಿ ಹಾರುವ ಇವು ಅತಿ ಕೆಳಮಟ್ಟಕ್ಕೆ ಬಂದು  ಹುಳವನ್ನು ಹಿಡಿದು, ಹಾರಿಕೊಂಡೇ ಅದನ್ನು ನುಂಗಿ ಕಣ್ಣು ಮಿಟುಕುನಷ್ಟರಲ್ಲಿ ನಮ್ಮ ಕಣ್ಣ ನೋಟಕ್ಕೆ ಕಾಣದಷ್ಟು ದೂರ ಹೋಗಿ ಬಿಡುತ್ತವೆ. ಮತ್ತೊಮ್ಮೆ ಕಣ್ಣು ಮಿಟುಕಿಸುವಾಗ ಪುನಃ ಪ್ರತ್ಯಕ್ಷ. ಈ ವೇಗದ ಹಕ್ಕಿಗೆ ನನ್ನದೊಂದು ಸಲಾಂ.

brown backed needletail

brown backed needletail

  1. White rumped needletail (Zoonavena sylvatica), ಬಿಳಿ ಪೃಷ್ಠದ ಸೂಜಿಬಾಲದ ಬಾನಾಡಿ:

11ಸೆಂ.ಮೀ ಉದ್ದ, ಹಾರುವಾಗ ಎದ್ದು ಕಾಣುವ ಬಿಳಿಪೇಷ್ಠ ಮತ್ತು ಸೂಜಿಮೊನೆಗಳಿರುವ ಬಾಲ ಇದರ ವಿಶೇಷತೆ. ಕಂದುಗತ್ತಿನ ಸೂಜಿಬಾಲದ ಬಾನಾಡಿಯೊಂದಿಗೆ ಹೆಚಾಗಿ ಬಯಲುಸೀಮೆಗೆ ಬೇಟಿ ಕೊಡುತ್ತವೆ. ಕುದುರೇಮುಖ, ತಡಿಯಾಂಡಮೋಲದಂಥ ಪರ್ವತ ಶೇಣಿಗಳಲ್ಲಿ ಇದರ ವಾಸ.

White rumped needletail

White rumped needletail

  1. Crested tree swift, (Hemiprocne coronata) ಮರ ಬಾನಾಡಿ:

ಮೇಲೆ ವಿವರಿಸಿದ ಬಾನಾಡಿಗಳಿಗಿಂತ ವಿಭಿನ್ನ. ನಮ್ಮ ಪ್ರಾಂತ್ಯದಲ್ಲಿ ಸಂತಾನೋತ್ಪತ್ತಿಯ ಹೊರತಾಗಿಯೂ ಇತರೆ ಸಮಯದಲ್ಲಿ ವಿರಾಮವಾಗಿ ಕುಳಿತು ಕೊಳ್ಳುವ ಏಕೈಕ ಬಾನಾಡಿ ಈ ಮರ ಬಾನಾಡಿ.

crested tree swift

crested tree swift

 23 ಸೆಂ.ಮೀ ಉದ್ದ, ತಿಳಿ ಬೂದು- ನೀಲಿ ಮೇಲ್ಮೈ, ತಿಳಿ ಕೆಂಗಂದು ಕೆನ್ನೆ ಮತ್ತು ಗಲ್ಲ. ಬೂದು ಮಿಶ್ರಿತ ಬಿಳಿ ಕೆಳ ಮೈ. ತಲೆಯ ಮೇಲೆ ಜುಟ್ಟು, ಆಳವಾಗಿ ಸೀಳಿದ ಬಾಲ. ಸಣ್ಣ ಗುಂಪಿನಲ್ಲಿ, ಕಾಡುಗಳಲ್ಲಿ ಇದರ ವಾಸ. ಒಣಗಿದ ಕೊಂಬೆಯಲ್ಲಿ ಗಂಡು ಹೆಣ್ಣು ಅಂಟಿಕೊಂಡು ಕುಳಿತಿರುತ್ತವೆ.

crested-tree2

ಸದಾ ಚಟುವಟಿಕೆಯಿಂದಿರುವ, ಆದರೂ ನಮ್ಮ ಅರಿವಿಗೆ ಬಾರದೆ ನಮ್ಮ ಉಳಿವಿಗೆ ಸಹಕರಿಸುತ್ತಾ ರೋಗಕಾರಕ ಕೀಟಗಳನ್ನು ನಿಯಂತ್ರಣ ಮಾಡುವ ನಮ್ಮ ನಡುವೆ ಇರುವ ಈ ಏಳೂ sತಿiಜಿಣ ಪ್ರಭೇದಗಳಿಗೊಂದು ಪ್ರೀತಿಯ ನಮಸ್ಕಾರ.

ಚಿತ್ರಗಳು: ಡಾ ಅಭಿಜಿತ್ ಎ.ಪಿ.ಸಿ, ಅರ್ನಲ್ಡ್ ಗೋವಿಸ್, ಶಿವಶಂಕರ ಕಾರ್ಕಳ, ವಿಜಯಲಕ್ಷ್ಮಿ ರಾವ್.

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!