ಊರ ಜಾತ್ರೆಲೂ ಗುರುತಿಸುವೆ,
ನಿನ್ನ ಆ ಮುದ್ದು ಕಂಗಳನು.
ನನ್ನ ನೋಡಿದ್ದರೂ ನೋಡದಂತೆ ಇರೋ;
ನಿನ್ನ ಹುಸಿನೋಟವ ಬಲ್ಲೆನು.
ನಿನ್ನ ನೋಡೋದ ನಾ ಬಿಡೆನು…
ಆಟಿಕೆಯ ಅಂಗಡಿಯಲ್ಲೆಲ್ಲೂ ಸಿಗದ,
ನವಿರಾದ ಬೊಂಬೆ ನೀನು.
ನೂರಾರು ಹುಡುಗಿಯರು ಬಳಿಯೇ ಸುಳಿದು
ಹೋದರೂ ಕಾಣೆ ನಾನು!!!
ನಿನ್ನ ಸೀರೆ ಸೆರಗು ನನ್ನ ಕಣ್ಣ ಸವರಿ
ನಿನ್ನನ್ನೇ ಅಲ್ಲಿ ಬಿಟ್ಟು ಹೋಯಿತೇ…???!!!
ಎಂಬ ಹುಚ್ಚು ಕಲ್ಪನೆ ಕಾಡಿದೆ…
ಮುಗಿಲಲ್ಲಿ ಮೂಡಿದ ಮಳೆಬಿಲ್ಲದು,
ನಿನ್ನಂದಕೆ ಬಾಗಿದೆ.
ನಿನ್ನ ಮುಗುಳ್ನಗೆಗೆ ಸೋತ ಹೂವು
ಲಜ್ಜೆಯಲಿ ನುಲಿದಾಡಿದೆ.
ನಿನ್ನ ಕೈಬೆರಳದು ಮುಂಗುರಳ ಸರಿಸಿ
ನನ್ನೇ ನೋಡು, ನೋಡು ಅಂದಿದೆ…!!!
ಓ ಗೆಳತಿ ನಿನಗದು ತಿಳಿಯದೇ…???!!!