ಅಂಕಣ

ಸೂರ್ಯ ಪುತ್ರ ರಾಷ್ಟ್ರಗಳ ಪಿತೃದೇವತೆಯಾಗಿ ನೇತೃತ್ವ ವಹಿಸುತ್ತಿರುವ ಭಾರತ

ಕಳೆದ ಒಂದು ವರ್ಷದಿಂದ, ಇಡೀ ವಿಶ್ವದಲ್ಲಿ “Global Warning”ನ ಕುರಿತಾಗಿ ಯಾವ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಚರ್ಚೆ ನಡೆಯುತ್ತಾಬಂದಿದೆ. ಅದರ ಕುರಿತಾಗಿಯೇ “COP21” ಎಂಬ ಶೃಂಗ ಸಭೆಯನ್ನು ಸಂಯುಕ್ತ ರಾಷ್ಟ್ರಗಳು ಪಾರಿಸ್’ನಲ್ಲಿ 2015ದರ 30 ನವೆಂಬರ್’ನಲ್ಲಿ ನಡೆಸಿತು. ಇದರ ಕುರಿತಾಗಿ ನಮಗೆ ಹೆಚ್ಚು ಮಾಹಿತಿ ಸಹಜವಾಗಿಯೇ ಲಭ್ಯವಾಯಿತು. ಆದರೆ ಇದರ ಮಗ್ಗಲಲ್ಲಿಯೆ, ಭಾರತ ಮತ್ತು ಫ಼್ರಾಂಸ್ (France) ದೇಶಗಳ ನೇತೃತ್ವದಲ್ಲಿ ಹೊಸ ಕ್ರಾಂತಿಯೊಂದರ ಜನನವಾಯಿತು. ಅದೇ “ಸೂರ್ಯ-ಪುತ್ರ” ರಾಷ್ಟ್ರಗಳ ಒಕ್ಕೂಟ ಅಥವ “International Agency for Solar Policy and Application” (IASPA).
“ಸೂರ್ಯ-ಪುತ್ರ” ರಾಷ್ಟ್ರಗಳ ಒಕ್ಕೂಟ ಸರಿ ಸುಮಾರು 107 ರಾಷ್ಟ್ರಗಳಿಂದ ಕೂಡಿದ್ದು, $1 tn ನಷ್ಟು ಬಂಡವಾಳವನ್ನು ಹೂಡಿಕೆ ಮಾಡಲು ನಿಶ್ಚಯಿಸಿದೆ. ವಿಶೇಷ ಏನಪ್ಪಾ ಅಂದ್ರೆ, ಇದರ ನೇತೃತ್ವವನ್ನು ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರು ವಹಿಸಿದ್ದಾರೆ. ಸೂರ್ಯನ ಕಿರಣಗಳು ಪುಷ್ಕಳವಾಗಿ ಇರುವಂಥಹ ದೇಶಗಳು ಸೇರಿ, ಅತಿ ಕಡಿಮೆ ಬೆಲೆಯ ವಿದ್ಯುತ್ ಇತ್ಯಾದಿ ಸೂರ್ಯ ಶಕ್ತಿ ಪ್ರೇರಿತ ತಂತ್ರಜ್ಞಾನಗಳನ್ನು ಆವಿಶ್ಕಾರ ಮಾಡುವ ಒಂದು ಪ್ರಯತ್ನ ಇದಾಗಿದೆ.

ಎಲ್ಲಾ ರಾಷ್ಟ್ರಗಳಿಗೂ ಊರ್ಜಾಶಕ್ತಿಯ ಅವಶ್ಯಕತೆಯಿದೆ. ಅದರಲ್ಲೂ ಇನ್ನು ಅಭಿವೃದ್ಧಿಯನ್ನು ಕಾಣದ ದೇಶಗಳಿಗೆ ಹೆಚ್ಚಿನ ಅವಶ್ಯಕತೆಯಿದೆ. ಅಭಿವೃದ್ಢಿಯೆಂದರೆ “ಇಂಧನ” ಬಳಕೆ ಅನಿವಾರ್ಯವಾಗುತ್ತದೆ. ಇಂಧನ ಬಳಕೆಯಿಂದ ಅಭಿವೃದ್ಧಿಯೇನೋ ಆಗುತ್ತೆ, ಆದರೆ ಅದರ ದುಷ್ಪರಿಣಾಮಗಳಿಂದ “Global Warming”ನಂಥಯ ಅಪಾಯಗಳು ನಮ್ಮೆಲ್ಲರನ್ನು ತಿಂದುಹಾಕುತ್ತದೆ. ಇಂಥಹ ಗೊಂದಲದ ಪರಿಸ್ಥಿತಿಯಲ್ಲಿ ಸಮಸ್ಯೆಗೆ ಸಮಾಧಾನ ಹುಡುಕುವುದು ಕಠಿಣವೇ ಸರಿ. ಸಮಸ್ಯೆ/ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸುವಲ್ಲಿ ನಿಪುಣರಾದ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೂ ಒಂದು ನೂತನ ಸಮಾಧಾನವನ್ನು ನಮ್ಮ ಮುಂದಿಟ್ಟಿದ್ದಾರೆ. ಯಾವ ದೇಶಗಳಲ್ಲಿ ಒಂದು ವರ್ಷದಲ್ಲಿ 300ರಕ್ಕೂ ಹೆಚ್ಚು ದಿನಗಳು ಸೂರ್ಯನ ತೀವ್ರ-ಕಿರಣಗಳು ಬೀಳುತ್ತದೆಯೋ, ಆ ದೇಶಗಳನ್ನು ಸೇರಿಸಿ ಸೂರ್ಯ ಶಕ್ತಿಯ ಸಂಶೋಧನೆ ಮತ್ತು ಉತ್ಪಾದನೆ ಮಾಡುವ ಪ್ರಯಾಸ ಇದಾಗಿದೆ. ಈ ಒಕ್ಕೂಟವು 21ನೇ ಶತಮಾನದಲ್ಲಿ ವಿಶ್ವದಲ್ಲಿನ ಹೊಸ ಶಕ್ತಿಯಾಗಿಯೂ ಕೂಡ ಹೊರಹೊಮ್ಮಲಿದೆ. ಈ ಒಕ್ಕೂಟದ ಸಚಿವಾಲಯದ ಪ್ರತಿಷ್ಠಾಪನೆಯು ಭಾರತ ದೇಶದ ಗುರ್ಗಾವ್ (Gurgaon) ನಗರದಲ್ಲಿ 2016ರ ಜನವರಿ 25 ನೇ ದಿನಾಂಕದಂದು ನಡೆಯಿತು.

Global Warmingನ ಪರಿಣಾಮವಾಗಿ ದ್ವೀಪ-ದೇಶಗಳಿಗೆ (Island Nations) ಒಂದು ದೊಡ್ಡ ಆಪತ್ತು ಒದಗಿ ಬರುತ್ತಿದೆ. Global Warming ಇಂದ ಸಮುದ್ರಮಟ್ಟದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯನ್ನು ನಾವು ಕಾಣುತ್ತಿದ್ದೇವೆ. ಸಮುದ್ರಮಟ್ಟದ ಏರಿಕೆಯಿಂದ ದ್ವೀಪ-ದೇಶಗಳು ಮುಳುಗಿಹೋಗುವ ಆತಂಕ ಸಹಜವಾಗಿಯೇ ಇದೆ. ಈ ದೇಶಗಳಲ್ಲಿ ವಾಸಿಸುತ್ತಿರುವ ಜನರು ನಿತ್ಯ ಭಯದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಅರಣ್ಯನಾಶ, ವಾಯು ಮಾಲಿನ್ಯ, ಇಂಧನದ ವಿಪರೀತ ಬಳಕೆಯಿಂದಾಗಿ ಈ global warming ಎಂಬ ಭೂತ ಜನಿಸಿರುವುದು ನಮಗೆಲ್ಲರಿಗು ತಿಳಿದಿರುವ ವಿಷಯ. ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬಂತೆ, ವಿಶ್ವದ ಕಾವನ್ನು (global warming) ಇಳಿಸಲು ಸೂರ್ಯನ ಕಾವನ್ನು (heat) ಬಳಸಿ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸಿ, ಇಂಧನ ಬಳಕೆಯನ್ನು ಅಪ್ರಧಾನ ಮಾಡಬಹುದು. ಭೂಮಂಡಲದ ಕಾವನ್ನು ಇಳಿಸಲು ಸೂರ್ಯನ ಕಾವೆ ನಮ್ಮ ಉಪಯೋಗಕ್ಕೆ ಬರತಕ್ಕದ್ದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಈ ಯೋಜನೆಯ ಅಡಿಯಲ್ಲಿ ಭಾರತವು 5000MWನಷ್ಟು ಉತ್ಪಾದನೆ ಮಾಡುವ ಸಾಮರ್ಥ್ಯ ಉಳ್ಳ ಕಾರ್ಖಾನೆಯನ್ನು ಈಗಾಗಲೆ ಸ್ಥಾಪಿಸಿದೆ. ಕೇವಲ ಸೌರಶಕ್ತಿ ಉತ್ಪಾದನೆಯಲ್ಲದೆ, ವಿಶ್ವಕಲ್ಯಾಣ, ಹಾಗು ಒಂದು ದೊಡ್ಡ ವೈಶ್ವಿಕ ಒಕ್ಕೂಟದ ನೇತೃತ್ವ ಇಂದು ಭಾರತ ವಹಿಸುತ್ತಿರುವುದು ನಮಗೆಲ್ಲರಿಗು ಹೆಮ್ಮೆಯ ಸಂಗತಿ. ಭಾರತದ ಮತ್ತು ಇನ್ನು ಹಲವು ರಾಷ್ಟ್ರಗಳ ವಿಜ್ಞಾನಿಗಳ ಕೊಡುಗೆಯಿಂದ, ಈ ಯೋಜನೆಯಡಿಯಲ್ಲಿ, ಮುಂದಿನ ಪೀಳಿಗೆಯ ಭಾಗ್ಯವು ಬದಲಾಗಲಿದೆ. “ಸತ್ಯ ಧರ್ಮಗಳ” ದ್ರಷ್ಟಾರನಾಗಿರುವ ಸೂರ್ಯ ಭಗವಾನನು ಭಾರತ ಮೂಲಕ ಇಡೀ ವಿಶ್ವಕ್ಕೆ ಇಂದು ಬೆಳಕನ್ನು ನೀಡುವವನಾಗಿದ್ದಾನೆ. ತತ್ವದ (Principle) ನೆಲೆಯಲ್ಲಿ ಸತ್ಯವನ್ನು ಸ್ಥಾಪಿಸಿ ಮನದಂಧಕಾರವನ್ನು ಹೋಗಲಾಡಿಸುವ ಭಾಸ್ಕರನು, ತಾಂತ್ರಿಕ (Technological) ನೆಲೆಯಲ್ಲಿಂದು “ವಿದ್ಯುತ್” ಇತ್ಯಾದಿ ಸಾಧನಗಳ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕತ್ತಲನ್ನು ಹೋಗಲಾಡಿಸುವ ಮಹತ್ ಕಾರ್ಯವನ್ನು ಹಮ್ಮಿಕೊಂಡಿದ್ದಾನೆ. 21 ನೇ ಶತಮಾನದಲ್ಲಿ ಭಾರತ “ವಿಶ್ವ-ಗುರು”ವಾಗುವ ಕನಸು ನನಸಾಗುವ ದಿಶೆಯಲ್ಲಿ ಕೂಡ ಈ ಒಂದು ಯೋಜನೆ (ಎಂದರೆ IASPA) ಸಹಾಯಕವಾಗಲಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Vittal

ಪ್ರವೃತ್ತ ವಿದ್ಯಮಾನಗಳ ಚಿಂತಕ, ಲೇಖಕ. ಯೋಗ ತಜ್ಞ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!