ಅಂಕಣ

ವಿಶ್ವವಿದ್ಯಾಲಯದಲ್ಲೇಕೆ ಮೊಳಕೆಯೊಡೆಯಿತು ವಿಷದ ಬೀಜ.!?

ಹಾಗಂತ ಒಂದು ಗುಮಾನಿ ಈ ಮೊದಲಿನಿಂದಲೂ ಇತ್ತು. ಸಾಲದಕ್ಕೆ “A large chunk of anti-national groupings which have the singular aim of disintegrating India”  ಎಂದು ಕಳೆದ ನಂವೆಂಬರ್‍ನಲ್ಲೇ ನಮ್ಮ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿ ‘ಪಾಂಚಜನ್ಯ’ ಕೂಡದೆಹಲಿಯ ಜವಹಾರ್‍ಲಾಲ್‍ ನೆಹರು ವಿಶ್ವವಿದ್ಯಾಲಯದ (ಜೆಎನ್‍ಯು) ಬಗ್ಗೆಯೇ ಒಂದು ಸವಿವರವಾದ ಲೇಖನವೊಂದನ್ನು ಬರೆದಿತ್ತು! ಅದು ಅಂದಿನ ತನ್ನ ಲೇಖನದಲ್ಲಿ ಅದೇಗೆ ಜೆಎನ್‍ಯು ರಾಷ್ಟ್ರವಿರೋಧಿಗಳಿಗೆ ಆಶ್ರಯತಾಣವಾಗುತ್ತಿದೆ, ಮಾವೋ ವಾದವನ್ನು ಪೋಷಿಸುತ್ತಿದೆ, ವಿದ್ಯಾರ್ಥಿ ಘಟಕ ಅದೇಗೆವರ್ತಿಸುತ್ತಿದೆ ಎಂಬುದರ ಬಗ್ಗೆ ವಿವರವಾಗಿ ಬರೆದಿತ್ತಲ್ಲದೆ, 2010ರಲ್ಲಿ ದಾಂತೇವಾಡದಲ್ಲಿ ನಮ್ಮ 75 ಮಂದಿ ಸಿಆರ್‍ಪಿ ಯೋಧರನ್ನು ನಕ್ಸಲರು ಕೊಂದು ಹಾಕಿದ್ದನ್ನು ಇದೇ ವಿಶ್ವವಿದ್ಯಾಲಯದ ಅಡ್ನಾಡಿ ವಿದ್ಯಾರ್ಥಿಗಳ ಗುಂಪೊಂದು ಸಿಹಿ ತಿಂಡಿ ಹಂಚಿ ಸಂಭ್ರಮಿಸಿರುವ ವಿಚಾರವನ್ನೂ ಕೂಡ ತನ್ನ ಲೇಖನದಲ್ಲಿ ಎತ್ತಿ ಹಿಡಿದುಅಪಾಯದ ಮುನ್ಸೂಚನೆಯನ್ನು ನೀಡಿತ್ತು! ಆದರೆ ಆವಾಗೆಲ್ಲಾ ನಮಗೆ ಅದು ಅಷ್ಟೊಂದು ಗಂಭೀರವಾದ ವಿಷಯವೆಂದೆನ್ನಿಸಿಯೇ ಇಲ್ಲ. ಮೇಲಾಗಿ ಇವೆಲ್ಲವಾವನ್ನು ಬರೆದು ಕಳವಳ ವ್ಯಕ್ತಪಡಿಸಿದ್ದು ಒಂದು ‘ಕೇಸರಿ’ ಪತ್ರಿಕೆಯಾದ್ದರಿಂದ ಸಹಜವಾಗೇ ತನ್ನ ಮೂಗಿನ ನೇರಕ್ಕೆ ಬರೆದು ‘ಎಡ ಪಂಥ’ದ ವಿಚಾರಧಾರೆಗಳನ್ನುತುಳಿಯುತ್ತಿದೆ ಎಂಬಂತೆ ಪರಿಭಾವಿಸಲಾಗಿತ್ತು! ಹಾಗೇನೆ ಜೆಎನ್‍ಯುನ ಈ ಎಲ್ಲಾ ‘ಎಡ’ಬಿಡಂಗಿ ವಿಚಾರಧಾರೆಗಳನ್ನೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿಟ್ಟು ಪ್ರೋತ್ಸಾಯಿಸಲಾಯಿತು ಬೇರೆ!

ಆದರೆ ಇಂದು ಎಲ್ಲವೂ ಬುಡಮೇಲಾದ ಅನುಭವವಾಗುತ್ತಾ ಇದೆ! ಪರಿಸ್ಥಿತಿ ಕೈಮೀರಿದೆಯೇನೋ ಎಂದೆನ್ನಿಸುತ್ತಿದೆ. ಇಲ್ಲವೆಂದಾದರೆ, ಈ ದೇಶದಲ್ಲೇ ತಿಂದುಂಡುಕೊಂಡು, ಈ ದೇಶದ ಋಣದಿಂದಲೇ ವಿದ್ಯಾಭ್ಯಾಸ, ಸಂಶೋಧನೆಗಳನ್ನು ಕೈಗೆತ್ತಿಕೊಂಡು ಕೊನೆಗೆ ಇದೇ ದೇಶಕ್ಕೆ ಕೊಳ್ಳಿ ಇಡುವ ದುರ್ಬುದ್ಧಿಯನ್ನು ಈನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೋರಿಸುತ್ತಾರೆಂದಾದರೆ, ಮತ್ತೊಂದಷ್ಟು ಮಂದಿಯ ಬೆಂಬಲ ಅವರಿಗಿದೆ ಎಂದಾದರೆ ಅಂತವರಿಗೆ ಏನನ್ನಬೇಕು ಹೇಳಿ!? ಅಷ್ಟಕ್ಕೂ ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳ ತಲೆಯೊಳಗೆ ತುಂಬಿಸಿ ಕಳುಹಿಸಬೇಕಾದ ವಿದ್ಯಾದೇಗುಲಗಳಲ್ಲಿ ರಾಷ್ಟ್ರವಿರೋಧಿ ವಿಚಾರಗಳುಮೊಳಕೆಯೊಡೆದದ್ದಾದರೂ ಹೇಗೆ? ಎಲ್ಲಿಂದ ಬಂತು ಈ ರಾಷ್ಟ್ರವಿರೋಧಿ ಚಿಂತನೆ? ಕೇಂದ್ರೀಯ ವಿಶ್ವವಿದ್ಯಾಲಯವಾಗಿರುವ ಜೆಎನ್‍ಯುಗೆ ರಾಷ್ಟ್ರದ ಘನತೆಯನ್ನು ಮುಗಿಲೆತ್ತರಕ್ಕೆ ಏರಿಸಲಿ ಎಂಬ ಕಾರಣಕ್ಕೆ ನಮ್ಮ ಸರಕಾರವು ಪ್ರತೀ ವರ್ಷ ಕಡಮೆಯೆಂದರೂ ಕೋಟಿಯ ಮೇಲೆ ಹಣವನ್ನು ಸುರಿಯುತ್ತಾ ಬಂದಿದೆ.ಅಭಿವ್ಯಕ್ತಿ ಸ್ವಾತಂತ್ರ್ಯ, ದಿಟ್ಟತನ, ಹೊಸ ಹೊಸ ವಿಚಾರಗಳ ಬಗೆಗೆ ಚರ್ಚೆ ಇವೇ ಮೊದಲಾದವುಗಳಿಗೆ ಇಲ್ಲಿ ವೇದಿಕೆಯಿದೆ ಎಂಬ ಹೆಗ್ಗಳಿಕೆಯೂ ಇದೆ. ಇದೇನೋ ಒಳ್ಳೆಯದೇ. ಆದರೆ ನೆಹರು ಬೆಂಬಲಿತ ಮಾರ್ಕ್ಸ್ ಚಿಂತನೆಗಳಿಗೆ ಜೋತು ಬಿದ್ದಿರುವ ಈ ವಿಶ್ವವಿದ್ಯಾಲಯವು ಮೊದ ಮೊದಲು ‘ವರ್ಗ ಸಂಘರ್ಷ’ದ ಬಗ್ಗೆಚುರುಕಾಗಿತ್ತಾದರೂ ಮುಂದೆ ಸೋವಿಯತ್‍ ಬ್ಲಾಕ್‍ ಪತನವಾದ ಬಳಿಕ ಅದು ತನ್ನ ಸಿದ್ಧಾಂತವನ್ನು ‘ವರ್ಗ ಸಂಘರ್ಷ’ದ ಕಡೆ ತಿರುಗಿಸಿದ್ದು ಮಾತ್ರ ಇಂದು ತೀರಾ ಅಪಾಯಕಾರಿಯಾಗಿ ಗೋಚರಿಸುತ್ತಿದೆ. ನಿಜ ಹೇಳಬೇಕೆಂದರೆ ಅದ್ಯಾವುದೋ ಒಂದು ಕಾಲದಲ್ಲಿ ಆಚರಣೆಯಲ್ಲಿದ್ದ ಪುರೋಹಿತ ಶಾಹಿ ವರ್ಗದದಬ್ಬಾಳಿಕೆಯನ್ನೇ ಎತ್ತಿ ಹಿಡಿಯುತ್ತಾ, ಆ ಬಗ್ಗೆ ಒಂದಷ್ಟು ಹೊಸ ಹೊಸ ಕತೆಗಳನ್ನು ಹೆಣೆಯುತ್ತಾ ವಿದ್ಯಾರ್ಥಿಗಳ ತಲೆ ತುಂಬುವ ಕಾರ್ಯ ವಿಶ್ವವಿದ್ಯಾಲಯದಲ್ಲಿ ಎಂದು ಪ್ರಾರಂಭವಾಯಿತೋ ಅಲ್ಲಿಂದಲೇ ಹುಟ್ಟಿಕೊಂಡಿದೆ ಈ ಎಲ್ಲಾ ಸಮಸ್ಯೆಗಳು!

ಹಾಗಂತ ಇದನ್ನು ಕೇವಲ ಜೆಎನ್‍ಯುಗೆ ಸಂಬಂಧಪಟ್ಟ ಕತೆ ಎಂದುಕೊಂಡರೆ ನಾವು ಮತ್ತೊಮ್ಮೆ ಮುಟ್ಟಾರಳೆನ್ನಿಸಿಕೊಳ್ಳಬೇಕಷ್ಟೇ! ಯಾಕೆಂದರೆ ಇಂದು ದೇಶದ ಬಹುತೇಕ ವಿಶ್ವವಿದ್ಯಾಲಯಗಳು ಬೆಳೆದು ಬಂದಿರುವುದು ಇದೇ ಮಾದರಿಯಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಅಲ್ಲೆಲ್ಲಾ ನಡೆಯುತ್ತಿರುವುದುಇಂತಹುದೇ ವಿಚಾರಗಳು! ಕೆಲವೇ ಕೆಲವು ದಿನಗಳ ಕೆಳಗೆ ಸುದ್ದಿಯಾದ ಹೈದರಾಬಾದ್‍ ವಿಶ್ವವಿದ್ಯಾಲಯದ ವಿಚಾರ ಕೂಡ ಇದೇ ಸಾಲಿಗೆ ಸೇರುವಂತಹುದು. ವಿಚಿತ್ರವೆಂದರೆ ಅಲ್ಲಿ ಕಳೆದ ವರ್ಷವೇ ಈ ಅಫ್ಜಲ್‍ಗುರು, ಕಸಬ್‍ ಮುಂತಾದ ದೇಶದ್ರೋಹಿಗಳನ್ನು ಸ್ಮರಿಸುವ ಕಾರ್ಯಕ್ರಮವೊಂದನ್ನುಆಯೋಜಿಸಲಾಗಿತ್ತಂತೆ! ಅಂದರೆ ಅಲ್ಲೂ ಬೆಳೆದು ನಿಂತಿರುವುದು ಇಂತಹ ಒಂದಷ್ಟು ರಾಷ್ಟ್ರವಿರೋಧಿ ತಲೆಗಳೇ ಎಂಬುದನ್ನು ನಾನಿಲ್ಲಿ ಬೇರೆ ಹೇಳಬೇಕಾಗಿಲ್ಲ! ಹೈದರಾಬಾದ್‍ ವಿಶ್ವವಿದ್ಯಾಲಯದ ಅಂದಿನ ಕಮ್ಯುನಿಷ್ಟ್‍ ಪ್ರೇರಿತ ಆ ‘ಘನಂದಾರಿ’ ಕಾರ್ಯಕ್ರಮವನ್ನು ಅಲ್ಲಿನ ಬಲಪಂಥೀಯ ಸಂಘಟನೆಯುಪ್ರಶ್ನಿಸಿತ್ತಾದರೂ ಕೊನೆಗೆ ಪರ್ಯಾವಸನಗೊಂಡದ್ದು ಮಾತ್ರ ಬಲಪಂಥೀಯನೋರ್ವನ ಕಗ್ಗೊಲೆಯಲ್ಲೇ! ಆದರೆ ಆವಾಗೆಲ್ಲಾ ಸುಮ್ಮನಿದ್ದ ಅಲ್ಲಿನ ‘ಬುದ್ಧಿವಂತರ’ ಗುಂಪು ಮುಂದೆ ಗಲಭೆಗೆ ಕಾರಣಕರ್ತನಾಗಿ ವಿಶ್ವವಿದ್ಯಾಲಯದಿಂದ ಡಿಬಾರ್‍ ಆಗಲ್ಪಟ್ಟ ‘ಎಡ’ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಎಂದಾದಾಗಮಾತ್ರ ದೊಡ್ಡ ಮಟ್ಟದಲ್ಲಿಯೇ ಪ್ರತಿಭಟನೆಗೆ ಇಳಿದುಬಿಟ್ಟಿತ್ತು! ಇದು ಆ ವಿಶ್ವವಿದ್ಯಾಲಯದ ಒಂದು ಮುಖದ ಪರಿಚಯವಷ್ಟೇ!

ಇನ್ನು ದಿಲ್ಲಿಯಲ್ಲಿ ಇಂದು ನಡೆಯುತ್ತಿರುವ ಘಟನೆಗೆ ದೇಶವೇ ಅಸಹ್ಯ ಪಡುತ್ತಿದ್ದರೆ ಅತ್ತ ಜೋಧಪುರದ ಇನ್ನೊಂದು ವಿಶ್ವವಿದ್ಯಾಲಯವು ದಿಲ್ಲಿ ದುರ್ಘಟನೆಯನ್ನೇ ಬೆಂಬಲಿಸಿ ನಾವು ಕೂಡ ನಿಮ್ಮೊಂದಿಗಿದ್ದೇವೆ ಎಂದು ಪ್ರತಿಭಟನೆಗೆ ಇಳಿದಿದೆ! ಅರೇ, ಭಯೋತ್ಪಾದಕರಿಗೂ ಇಲ್ಲಿ ಇಷ್ಟೊಂದು ಬೆಂಬಲವೇ ಎಂದು ನೀವುಮೂಗಿನ ಮೇಲೆ ಬೆರಳಿಟ್ಟರೆ ಪ್ರಯೋಜನವಿಲ್ಲ ಯಾಕೆಂದರೆ ಯುನಿವರ್ಸಿಟಿಯ ಇಂತಹ ‘ಎಡ’ಬಿಡಂಗಿ ಕಾರ್ಯಕ್ರಮಗಳು ಯುನಿರ್ವಸಿಟಿಯ ಪರಿಭಾಷೆಯಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂದು ಕರೆಯಲ್ಪಡುತ್ತದೆಯಂತೆ!! ಇನ್ನು ಇವೆಲ್ಲವುಗಳನ್ನು ಎಲ್ಲೋ ದೂರದ ವಿಶ್ವವಿದ್ಯಾಲಯದಲ್ಲಷ್ಟೇ ನಡೆಯುತ್ತಿದೆ ಎಂದುಕೊಂಡರೆಅದು ಇನ್ನೊಂದು ತಪ್ಪಾದೀತು. ಯಾಕೆಂದರೆ ಸರಿಯಾಗಿ ಕೆದಕಿದರೆ ಈ ದೇಶದ ಹಲವಾರು ವಿಶ್ವವಿದ್ಯಾಲಯಗಳು ಒಂದರ ಹಿಂದೆ ಒಂದರಂತೆ ಬೆತ್ತಲಾಗುವುದು ಖಂಡಿತ! ಹೆಚ್ಚೇಕೆ, ಸುಮಾರು ಏಳೆಂಟು ವರ್ಷಗಳ ಹಿಂದೆ ಕ್ರಾಂತಿಕಾರಿ ಕವಿ ‘ಗದ್ದರ್‍’ನನ್ನು ಕರೆಸಿ ನಕ್ಸಲ್‍ ಪರ ಭಾಷಣ ಬಿಗಿಸಿದ ವಿಶ್ವವಿದ್ಯಾಲಯವೊಂದುನಮ್ಮ ಬಗಲಲ್ಲೇ ಇದೆ! ಸುತ್ತ ಮುತ್ತ ಸಿಕ್ಕಿಬಬಿದ್ದಿರುವ ನಕ್ಸಲರಲ್ಲಿ ಅನೇಕರು ಇದೇ ವಿಶ್ವವಿದ್ಯಾಲಯದ ಮಾಸ್ಟರ್‍ ಡಿಗ್ರಿ ಹೋಲ್ಡರ್ಸ್‍ಗಳು ಬೇರೆ!

ದೇಶ ಮೂರಾಬಟ್ಟೆಗೆ ಹರಿದು ಹಂಚಿ ಹೋದರೂ ಚಿಂತಿಲ್ಲ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರ ನಿರಂತರ ಚಾಲನೆಯಲ್ಲಿರಬೇಕು ಎನ್ನುವ ಮನೋಸ್ಥಿತಿಯ ಇವರುಗಳಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಕನಿಷ್ಟ ಜ್ಞಾನವಾದರೂ ಇರಬೇಕಿತ್ತು! ಮೆಟ್ಟಿರುವ ಭೂಮಿ, ತಿಂದಿರುವ ಅನ್ನದ ಋಣಕ್ಕಾದರೂ ಒಂದಷ್ಟುಮರ್ಯಾದೆ ಕೊಡುವ ನಿಯತ್ತು ಇರಬೇಕಿತ್ತು! ಇಂದು ದೇಶವು ದಿಲ್ಲಿ ವಿಶ್ವವಿದ್ಯಾಲಯದ ಬಗ್ಗೆ ಛೀ ಥೂ ಎಂದು ಉಗಿಯುತ್ತಿದ್ದರೆ ಅತ್ತ ಪ್ರೊಫೇಸರ್‍ಗಳು, ವಿದ್ಯಾರ್ಥಿಗಳು ನಾವೇನು ದೇಶವಿರೋಧಿ ಘೋಷಣೆ ಕೂಗಿಲ್ಲ, ದೇಶದ ಮೇಲೆ ನಮಗೂ ಅಪಾರ ಗೌರವವಿದೆ, ಇವೆಲ್ಲಾ ನಮ್ಮ ವಿರುದ್ಧ ನಡೆಯುತ್ತಿರುವ ಪಿತೂರಿಎಂದು ಮುಲಾಮು ಹಚ್ಚಲು ಪ್ರಾರಂಭೀಸಿದ್ದಾರೆ! ಆದರೆ ಇವರ ಮಾತುಗಳನ್ನು ನಂಬುವವರ್ಯಾರು!? ಇವರು ದೇಶದ ವಿರುದ್ಧ ಘೋಷಣೆ ಕೂಗಿದ್ದಾರೋ ಇಲ್ಲವೋ ಅದು ಬೇರೆ ಮಾತು. ಆದರೆ ಅಂದು ಅವರು ನಡೆಸಿದ ಕಾರ್ಯಕ್ರಮವಾದರೂ ಎಂತಹುದು!? ದೇಶ ದ್ರೋಹಿ ಅಫ್ಜಲ್‍ಗುರುವನ್ನು ಹುತಾತ್ಮನೆಂದುಗೌರವಿಸುವ ಕಾರ್ಯಕ್ರಮವಲ್ಲವೇ!? ಅಸಲಿಗೆ ಆ ಕಾರ್ಯಕ್ರಮವೇ ಒಂದು ದೇಶ ವಿರೋಧಿಯಾಗಿರುವಾಗ ಇನ್ನು ಅಲ್ಲಿ ಅದೇನು ಘೋಷಣೆ ಕೂಗಿದರು ಎಂಬುದು ಅಗತ್ಯವೇ ಇಲ್ಲದ ವಿಚಾರ ಬಿಡಿ! ಅಂಗೈ ಹುಣ್ಣಿಗೆ ಕನ್ನಡಿ ಏಕೆ ಎನ್ನುವ ಹಾಗೆ ಇಂತಹ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳು ದೇಶವಿರೋಧಿಯಲ್ಲದೆಇನ್ನೇನು ಮಹಾತ್ಮ ಗಾಂಧೀ ಪರ ಘೋಷಣೆ ಕೂಗಲು ಸಾಧ್ಯವೇ ಎಂಬುದನ್ನು ನಾವಿಲ್ಲಿ ಮೊದಲು ಅರ್ಥೈಸಿಕೊಳ್ಳಬೇಕು!

ವಿಶ್ವವಿದ್ಯಾಲಯಗಳು ಎಂದರೆ ಸಮಾಜ ಕಟ್ಟುವ ದೇವಸ್ಥಾನಗಳೆಂದರ್ಥ. ಆದರೆ ಇಲ್ಲೇ ಸಮಾಜ ವಿರೋಧಿ ಚಟುವಟಿಕೆಗಳಾದರೆ ಅದಕ್ಕಾರು ಹೊಣೆ? ಒಬ್ಬೊಬ್ಬ ಪ್ರಾಧ್ಯಪಕನ ಐಷರಾಮಿ ಜೀವನದ ಹಿಂದೆ ನಮ್ಮ ನಿಮ್ಮಂತಹ ಜನರ ತೆರಿಗೆ ಹಣವಿದೆ. ಸರಕಾರದ ಕೃಪಾಕಟಾಕ್ಷವಿದೆ. ಆದರೆ ಇದೇ ಪ್ರೊಫೇಸರ್‍ಗಳುಬೇಕಾಬಿಟ್ಟಿತನದ ಚಿಂತನೆಯಿಂದ ಮೊಳಕೆಯೊಡೆಯುತ್ತಿರುವ ರಾಷ್ಟ್ರವಿರೋಧಿ ಕೂಸುಗಳು ಇಂದು ದೇಶವನ್ನೇ ಸುಟ್ಟು ಹಾಕುತ್ತೇವೆ ಎಂದಾಡುತ್ತಿದ್ದರಾಲ್ಲ ಇದಕ್ಕೇನನ್ನಬೇಕು!? ದೇಶಕ್ಕೆ ಪೂರಕ ವಾತಾವರಣ ನಿರ್ಮಿಸಬೇಕಾಗಿದ್ದ ವಿಶ್ವವಿದ್ಯಾಲಯಗಳೇ ಇಂದು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದೆ ಎಂದರೆಅದರರ್ಥವೇನು? ಅಫ್ಜಲ್‍ ಗುರು ಎಂಬ ಭಯೋತ್ಪಾದಕನನ್ನು ಗಲ್ಲಿಗೆ ಹಾಕಿದ್ದು ತಪ್ಪು ಎನ್ನುವ ಈ ನಮ್ಮ(?) ಜವಹಾರ್‍ಲಾಲ್‍ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ನಿಷ್ಟೆಯನ್ನು ಅದ್ಯಾರ ಪರ ಬೆಳೆಸಿದ್ದಾರೆ ಎಂಬುದನ್ನು ಮೊದಲು ಹೇಳಲಿ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಲೆಯೊಳಗಡೆ ದೇಶ ಪ್ರೇಮದಛಾಯೆಯಿಲ್ಲ ಎಂದಾದರೆ ಅವರು ಅಲ್ಲಿ ಕಲಿತದ್ದಾದರೂ ಏನು!? ಅಲ್ಲಿನ ಪ್ರೊಫೇಶರ್‍ಗಳು ನೀಡಿದ ಮಾರ್ಗದರ್ಶನವಾದರೂ ಎಂತಹುದು. ಇಲ್ಲಿ ಮರವಾಗಿ ಬೆಳೆದ ವಿದ್ಯಾರ್ಥಿಗಳನ್ನಷ್ಟೇ ಅಲ್ಲ ಅವರ ಹಿಂದೆ ಇರುವ ನರಸತ್ತ ಪ್ರೊಫೇಸರ್‍ಗಳನ್ನು ಕೂಡ ಹಿಡಿದು ಕಂಬಿ ಎಣಿಸುವಂತೆ ಮಾಡಬೇಕು ಎಂದೆನ್ನಿಸಲ್ವೇ!?ಎಲ್ಲಕ್ಕೂ ಬೇಜಾರಿನ ವಿಷಯವೆಂದರೆ ಇಂತಹ ಅನಿಷ್ಟ ಚಿಂತನೆಯ ವಿದ್ಯಾರ್ಥಿಗಳನ್ನು ವೋಟ್‍ ಬ್ಯಾಂಕ್‍ ರಾಜಕಾರಣದ ಲೆಕ್ಕಾಚಾರದಲ್ಲಿ ನಮ್ಮ ರಾಷ್ಟ್ರೀಯ ನಾಯಕರುಗಳು ಎಂದು ಗುರುತಿಸಿಕೊಂಡಿರುವವರು ಕೂಡ ಬೆಂಬಲಿಸುತ್ತಿದ್ದಾರಲ್ಲ ಅದು! ಇದು ದೇಶದ ದುರಂತವೋ ಅಥವಾ ಆ ಪಕ್ಷದ ದುರಂತವೋ ಕಾಲವೇನಿರ್ಣಯಿಸಬೇಕಿದೆ!

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!