Featured ಅಂಕಣ

ಬಿಯಾನಿ ಕಟ್ಟಿದ ಭಾರತದ ಭವಿಷ್ಯ…

ಅದೊಂದು ವ್ಯವಸ್ಥಿತವಾಗಿ ನಿರ್ಮಿಸಿರುವ ಹವಾನಿಯಂತ್ರಿತ ದೊಡ್ಡ ಅಂಗಡಿ. ಅಲ್ಲಿ ಸಿಗದ ವಸ್ತುಗಳೇ ಇಲ್ಲ, ಎರಡು ರೂಪಾಯಿ ಚಾಕ್ಲೆಟ್’ನಿಂದ ಹಿಡಿದು ಎರಡು ಲಕ್ಷ ಬೆಲೆ ಬಾಳುವ ಟೀವಿಯೂಸಿಗುಯವ ಸ್ಥಳ ಅದು. ಅಬ್ಬಾ ! ಅದೆಷ್ಟು ಚಂದವಾಗಿ ವಸ್ತುಗಳನ್ನು ಅಲ್ಲಿ ಜೋಡಿಸಿರುತ್ತಾರೆ. ಅವುಗಳನ್ನು ನೋಡಲೇ ಚಂದ. ವ್ಯವಸ್ಥಿತವಾಗಿ ಜೋಡಿಸಿರುವ ವಸ್ತುಗಳನ್ನು ನೋಡಿದ ಕೂಡಲೇ ಒಂದುಧನಾತ್ಮಕವಾದ ಆಕರ್ಷಣೆ ಅಲ್ಲಿರುವ ವಸ್ತುಗಳ ಮೇಲೆ ಆಗಿಬಿಡುತ್ತೆ. ಬಹುಶಃ ನಿಮಗೆ ಈಗ ಮನಸ್ಸಿನಲ್ಲಿ ಸುಳಿದ ಹೆಸರು “ ಬಿಗ್ ಬಜಾರ್” ತಾನೇ ? ಹೌದು ಇದು ಬಿಗ್ ಬಜಾರ್’ನ ಕಥೆ. ಸಾಮಾನ್ಯ ಮಾರ್ವಾಡಿ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಹುಡುಗನೊಬ್ಬ ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಅಮೋಘ ಬದಲಾವಣೆಯನ್ನು ತರುವುದಕ್ಕೆ ಕಾರಣವಾಗುತ್ತಾನೆ ಅಂದರೆ ಆಶ್ಚರ್ಯವೇ ಸರಿ.

ಕೆಲವರ ಬದುಕು ಕೇವಲ ಬದುಕಲ್ಲ ಅದೊಂದು ಪಾಠ. ಈಗ ನಾನು ಹೇಳ ಹೊರಟಿರುವುದು ಕಿಶೋರ್ ಬಿಯಾನಿ ಎಂಬ ಸಾಧಕನ ಬಗ್ಗೆ. ಕನಸುಗಳನ್ನು ಕಾರಣಾಂತರಗಳಿಂದ ಮಿತಿಗೊಳಿಸಿಕೊಂಡುಪರಿತಪಿಸುವ ಅದೆಷ್ಟೋ ಮನಸ್ಸುಗಳಿಗೆ ಕಿಶೋರ್ ಬಿಯಾನಿ, ರಿತೆಶ್ ಅಗರ್ವಾಲ್, ವಿಜಯ್ ಕುಮಾರ್ ಶರ್ಮರಂತಹ ಅನೇಕರು ಪ್ರೇರಣೆಯಾಗುತ್ತಾರೆ. ಜೀವನವನ್ನು ತುಂಬಾ ಸರಳವಾಗಿತೆಗೆದುಕೊಳ್ಳಬೇಕು ಆಗ ಮಾತ್ರ ಪ್ರಸ್ತುತವನ್ನು ಅನುಭವಿಸಲು ಸಾಧ್ಯ. ಒಂದು ದೊಡ್ಡ ಕನಸು ಕಂಡ ಮಾತ್ರಕ್ಕೆ ಬದುಕು ಮುಗಿದುಹೋಗುವುದಿಲ್ಲ, ಕಂಡ ಕನಸನ್ನು ನನಸು ಮಾಡಲು ಪಾಡಬೇಕಾದಪರಿಪಾಟಲವಿದೆಯಲ್ಲ ಅದು ಸುಲಭದಲ್ಲ. ಹಾಗಾದರೆ ಯಾರು ಈ ಕಿಶೋರ್ ಬಿಯಾನಿ? ಭಾರತದ ಚಿಲ್ಲರೆ ಮಾರುಕಟ್ಟೆಯ ಚಿತ್ರಣವನ್ನೇ ಬದಲಿಸಿದ ಈತನ ರೋಚಕ ಜೀವನ ಕಥೆ ನಿಜವಾಗಿಯೂನಮಗೆಲ್ಲ ಪ್ರೇರಣೆಯೇ ಸರಿ. ಫ್ಯೂಚರ್ ಗ್ರೂಪ್ ಎಂಬ ಬಿಲಿಯನ್ ಡಾಲರ್ ಕಂಪನಿಯ ಸ್ಥಾಪಕ ಈ ಕಿಶೋರ್ ಬಿಯಾನಿ.  ಅದೆಷ್ಟೋ ಮಾಲ್’ಗಳು ಇಂದು ಜೀವ ತಳೆದಿರಬಹುದು, ಅದೆಷ್ಟೋಸೂಪರ್ ಮಾರ್ಕೆಟ್’ಗಳು ತಲೆ ಎತ್ತಿರಬಹುದು ಆದರೆ ಎಲ್ಲಕ್ಕಿಂತಲೂ ಸ್ವಲ್ಪ ಭಿನ್ನ ಅನ್ನಿಸುವುದು ನಮ್ಮ ಬಿಗ್ ಬಜಾರ್. ಧೈರ್ಯ ಮತ್ತು ಮುನ್ನುಗ್ಗುವ ಛಲವೊಂದಿದ್ದರೆ ಹೊಸತನಕ್ಕೆ ನಮ್ಮನ್ನು ನಾವುತೆರೆದುಕೊಳ್ಳಬಹುದು ಎಂಬುದನ್ನೂ ತೋರಿಸಿದವರು ಕಿಶೋರ್ ಬಿಯಾನಿ. ಕಿಶೋರ್ ಬಿಯಾನಿಯವರನ್ನು ಸಾಮ್ ವಾಲ್ಟರ್ ಆಫ್ ಇಂಡಿಯ ಎಂದು ಕರೆಯುತ್ತಾರೆ. ಭಾರತದಲ್ಲಿ ಚಿಲ್ಲರೆಮಾರುಕಟ್ಟೆಯ ದಿಕ್ಕು ಬದಲಾಯಿಸಿ ಮಧ್ಯಮವರ್ಗದ ಜನರನ್ನೂ ಕೂಡ ಹೊಸತನದ ವ್ಯವಸ್ಥೆಗೆ ಒಗ್ಗಿಕೊಳ್ಳುವಂತೆ ಮಾಡಿದ್ದು ಕಿಶೋರ್ ಬಿಯಾನಿ.

ಕಿಶೋರ್ ಬಿಯಾನಿ ಆಗಸ್ಟ್ 9, 1961 ರಂದು ರಾಜಸ್ತಾನಿ ಮಧ್ಯಮವರ್ಗದ ಮನೆತನದಲ್ಲಿ ಜನಿಸುತ್ತಾರೆ. ಮೊದಲಿನಿಂದಲೂ ಸಾಮಾಜಿಕ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದ ಹುಡುಗನಾಗಿದ್ದ ಕಿಶೋರ್ಶಾಲೆಯಲ್ಲಿ ಕೆಲವೊಂದು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದ. ಒಮ್ಮೆ ಆತ ಹತ್ತನೇ ತರಗತಿಯಲ್ಲಿದ್ದಾಗ ಡಿಸ್ಕೋ ದಾ೦ಡಿಯಾ ರಾಸ್ ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿಎಲ್ಲರನ್ನು ಆಶ್ಚರ್ಯಚಕಿತನನ್ನಾಗಿ ಮಾಡಿದ್ದ. ಅದು ಸುಮಾರು 2000 ಜನ ಸೇರಿದ್ದ ದೊಡ್ಡ ಕಾರ್ಯಕ್ರಮವಾಗಿತ್ತು. ಯಾವಾಗಲೂ out of the box ಯೋಚನೆ ಮಾಡುತ್ತಿದ್ದ ಕಿಶೋರ್ ಫ್ಯೂಚರ್ಗ್ರೂಪ್ ಎಂಬ ಸಾಮ್ರ್ಯಜ್ಯ ಕಟ್ಟಿದ್ದೂ ಕೂಡ ಇದೇ ತರಹದ ಯೋಚನೆಗಳಿಂದ. ಮಾರ್ವಾಡಿಯಾಗಿದ್ದರಿಂದ ಅವರ ತಂದೆ ನಡೆಸಿಕೊಂಡು ಬಂದಿದ್ದ ಬಟ್ಟೆ ಅಂಗಡಿಯೊಂದಿತ್ತು. ಅವರ ತಂದೆ ಆಸೆ ಕೂಡಮುಂದೆ ಕಿಶೋರ್ ಕೂಡ ಅದೇ ವ್ಯವಹಾರವನ್ನು ಮುಂದುವರೆಸಬೇಕೆಂಬುದಾಗಿತ್ತು. ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದ ಕಿಶೋರ್ ತಂದೆಯ ಆಸೆಯಂತೆ ತಮ್ಮ ಕುಟುಂಬದ ಬಟ್ಟೆ ತಯಾರಿಕವ್ಯಾಪಾರದಲ್ಲಿ ತೊಡಗಿಕೊಂಡರು. ಆದರೆ ಆ ಯುವ ಮನಸ್ಸು ಇನ್ನೂ ಏನಾದರೂ ಮಾಡಬೇಕೆಂಬ ಹೊಸತನಕ್ಕೆ ತುಡಿಯುತ್ತಿತ್ತು. ಮುಂದೆ ಮುಂಬೈನಲ್ಲಿ “ಮಂಜ್ ವೇರ್” ಎಂಬ ಬಟ್ಟೆ ತಯಾರಿಕಾಸಂಸ್ಥೆಯನ್ನು ಸ್ಥಾಪಿಸಿದ ಕಿಶೋರ್ ಅಲ್ಲಿ ತಯಾರಿಸಿದ ಬಟ್ಟೆಗಳನ್ನು ಸ್ಥಳೀಯ ಸಣ್ಣ ಸಣ್ಣ ಬಟ್ಟೆ ವ್ಯಾಪಾರಿಗಳಿಗೆ ತಲುಪಿಸುವ ಕೆಲಸ ಮಾಡಿದರು. ಆದರೆ ಅವರ ಕಂಪನಿಯನ್ನು ಕೇವಲ ಎಂಬಂತೆಕಂಡು ಯಾವುದೇ ಹೂಡಿಕೆದಾರರ ಸಭೆಗಳಿಗೆ ಆಹ್ವಾನಿಸದೇ ಅವಮಾನಿಸುತ್ತಿದ್ದರು. ಆದರೆ ಇದನ್ನೆಲ್ಲ ಸವಾಲಾಗಿ ಸ್ವೀಕರಿಸಿದ ಕಿಶೋರ್ ಕುಗ್ಗದೇ ಹಗಲಿರುಳು ಕಂಪನಿಯ ಏಳ್ಗೆಗೆ ದುಡಿದರು. ನೀವೆಲ್ಲಪ್ಯಾಂಟಲೂನ್ಸ್ ಎಂಬ ಬಟ್ಟೆ ಶೋ ರೂಂ ಬಗ್ಗೆ ಕೇಳಿರ್ತೀರಾ ಅಲ್ವಾ? ಅದನ್ನು ಮೊದಲು ಶುರು ಮಾಡಿದ್ದು ಇದೆ ಕಿಶೋರ್ ಬಿಯಾನಿ ಆದರೆ ಮುಂದೆ ಕಾರಣಾಂತರದಿಂದ 2012 ರಲ್ಲಿ ಪ್ಯಾಂಟಲೂನ್’ನ51% ಷೇರ್’ಅನ್ನು ಆದಿತ್ಯ ಬಿರ್ಲಾ ಗ್ರೂಪ್  ಖರೀದಿಸಿ ಅದರ ಒಡೆತನವನ್ನು ತನ್ನದಾಗಿಸಿಕೊಂಡಿತ್ತು. ಅದಾಗಲೇ ಪ್ಯಾಂಟಲೂನ್ಸ್ ಬಹುರಾಷ್ಟ್ರೀಯ ಕಂಪನಿಯಾಗಿ ಬೆಳೆದು ನಿಂತಿತ್ತು.ಪ್ಯಾಂಟಲೂನ್ಸ್’ನ ನಂತರ ಕಿಶೋರ್ ಶುರು ಮಾಡಿದ್ದು WBB – White Blue Brown ಎಂಬ ಹೊಸ ಬ್ರಾಂಡ್’ಅನ್ನು ನಿಮಗೆಲ್ಲ ತಿಳಿದಿರಲಿ ಈಗ WBB ಕೂಡ ವೇಗವಾಗಿ ಬೆಳೆಯುತ್ತಿದೆ. ಒಂದುಹಂತದಲ್ಲಿ ಕಿಶೋರ್ ಹೊಸತೇನಾದರೂ ಮಾಡುವ ಭರದಲ್ಲಿ ಎಡವಿದ್ದರು ಪರಿಣಾಮ ಸುಮಾರು 16 ಲಕ್ಷ ಸಾಲವನ್ನ ಮಾಡಿದ್ದರು. ಆದರೆ ವರ್ಷಕ್ಕೆ ಅವರು ಗಳಿಸುತ್ತಿದ್ದುದು 8 ಲಕ್ಷ ಮಾತ್ರವಾಗಿತ್ತು.ಕಿಶೋರ್ ಜೀವನದಲ್ಲಿ ತುಂಬಾ ಏರು ಪೇರು ಕಂಡ ಸಮಯ ಅದಾಗಿತ್ತು.

 ಇದಾದ ಕೆಲವೇ ದಿನಗಳಲ್ಲಿ ಭಾರತದ ಚಿಲ್ಲರೆ ಮಾರುಕಟ್ಟೆಯಕಡೆಗೆ ಕಿಶೋರ್ ಬಿಯಾನಿ ಹೊರಳಿದರು. ಒಂದು ಸಮಗ್ರ ಅಧ್ಯಯನ ಮಾಡಿದ ಕಿಶೋರ್ ಭಾರತದ ಜನತೆಯನ್ನು ಮೂರುವಿಭಾಗವನ್ನಾಗಿ ಮಾಡಿದರು. ಇಂಡಿಯ ಒನ್, ಇಂಡಿಯ ಟೂ ಮತ್ತು ಇಂಡಿಯ ತ್ರೀ  ಎಂಬ ವಿಭಾಗ ಮಾಡಿದ್ದರು ಕಿಶೋರ್. ಅತಿ ಹೆಚ್ಚು ಹಣವನ್ನು ವಿನಿಯೋಗಿಸುವ ಶಕ್ತಿ ಹೊಂದಿರುವ ಜನರನ್ನುಇಂಡಿಯ ಒನ್ ವಿಭಾಗಕ್ಕೆ, ಸಾಮಾನ್ಯ ಮಧ್ಯಮವರ್ಗದ ಜನರನ್ನು ಇಂಡಿಯ ಟೂ ವಿಭಾಗಕ್ಕೆ ಮತ್ತು ವಿನಿಯೋಗಿಸುವ ಶಕ್ತಿ ಕಡಿಮೆ ಹೊಂದಿರುವವರನ್ನು ಇಂಡಿಯ ತ್ರೀ ವಿಭಾಗಕ್ಕೆ ಸೇರಿಸಿದಕಿಶೋರ್ ಇಂಡಿಯ ಟೂ ವಿಭಾಗದ ಜನರನ್ನು ಮೂಲವನ್ನಾಗಿಸಿಕೊಂಡು ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಧುಮುಕಿದರು. ಹಾಗಾಗಿಯೇ ಬಿಗ್ ಬಜಾರ್ ಅದ್ಭುತವಾಗಿ ಯಶಸ್ಸನ್ನು ಗಳಿಸಿತು. 1980 ರಿಂದ2000 ನೇ ಇಸ್ವಿಯವರೆಗೆ ಕಿಶೋರ್ ಅದೆಷ್ಟೋ ಹೊಸ ಹೊಸ ವ್ಯಾಪಾರ ಉದ್ಯಮಗಳನ್ನು ಮಾಡಲು ಹೋಗಿ ಕೈ ಸುಟ್ಟುಕೊಂಡರು. ಆದರೂ ಕೈ ಕಟ್ಟಿ ಕೂರಲಿಲ್ಲ ಪರಿಣಾಮ 2000 ನೇ ಇಸ್ವಿಯಲ್ಲಿಬಿಗ್ ಬಜಾರ್ ಎಂಬ ಹೊಸ ಉದ್ಯಮ ಯಶಸ್ವಿಯಾಯಿತು.

ಕಿಶೋರ್ ಇವತ್ತಿಗೂ ಒಂದು ಮಾತನ್ನು ಹೇಳುತ್ತಾರೆ ಅದು “ನನ್ನ ಕುಟುಂಬದ ಬೆಂಬಲವಿಲ್ಲದೆ ಇದ್ಯಾವುದು ಸಾಧ್ಯವಾಗುತ್ತಿರಲಿಲ್ಲ” ಎಂದು. ಅವಿಭಕ್ತ ಕುಟುಂಬದ ಅಷ್ಟೂ ಜನ ಕಿಶೋರ್ ಅವರ ಹೊಸಹೊಸ ಸಾಹಸಗಳಿಗೆ ಬೆಂಬಲವಾಗಿ ನಿಂತರು. ಹಾಗಾಗಿಯೇ ಇವತ್ತು ಫ್ಯೂಚರ್ ಗ್ರೂಪ್’ನ ಮಹತ್ವದ ಹುದ್ದೆಗಳಲ್ಲಿ ಬಿಯಾನಿ ಕುಟುಂಬದ ಅನೇಕರನ್ನು ಕಾಣಬಹುದು.

ಸ್ನೇಹಿತರೇ ನಿಮಗೆಲ್ಲ ಪುರುಸೊತ್ತಿದ್ದರೇ ಕಿಶೋರ್ ಬಿಯಾನಿ ಬರೆದಿರುವ ಅವರ ಜೀವನ ಯಶೋಗಾಥೆ “It Happened In India”  ಎಂಬ ಪುಸ್ತಕವನ್ನು ಓದಿ. ಸೋತು ಕೂತಿರುವ ಅದೆಷ್ಟೋಯುವಕರಿಗೆ ಧೈರ್ಯ ತುಂಬಬಲ್ಲ ಓದು ನಿಮ್ಮದಾಗುವುದರಲ್ಲಿ ಅನುಮಾನವೇ ಇಲ್ಲ. ಕಿಶೋರ್ ಒಬ್ಬ ಅಸಾಮಾನ್ಯ ಉದ್ಯಮಿ ಎನ್ನುವುದು ನಿಮಗೆ ಅರಿವಿಗೆ ಬರಬಹುದು.

ಕಿಶೋರ್ ಪ್ರತಿಷ್ಠಿತ E&Y (Ernst & Young) ನೀಡುವ ವರ್ಷದ ಯಶಸ್ವೀ ಉದ್ಯಮಿ ಪ್ರಶಸ್ತಿಯನ್ನು ಪಡೆದಿದ್ದಾರೆ ಮತ್ತು 2006 ರಲ್ಲಿ ಸಿ‌ಎನ್‌ಬಿ‌ಸಿ ಇಂಡಿಯನ್ ಬಿಸಿನೆಸ್ ಲೀಡರ್ ಪ್ರಶಸ್ತಿಯನ್ನುಮತ್ತು ಐ‌ಐ‌ಎಮ್ ಲಕ್ನೋ ನೀಡುವ ಯಂಗ್ ಬಿಸಿನೆಸ್ಸ್ ಲೀಡರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಪ್ರಸ್ತುತ ಕಿಶೋರ್ ಫ್ಯೂಚರ್ ಗ್ರೂಪ್’ನ CEO ಮತ್ತು ಪ್ಯಾಂಟಲೂನ್’ನ MD ಆಗಿದ್ದಾರೆ. ಭಾರತದ ಸುಮಾರು 90 ನಗರಗಳಲ್ಲಿ ಮತ್ತು 60 ಹಳ್ಳಿಗಳಲ್ಲಿ ತಮ್ಮ ಬಿಗ್ ಬಜಾರ್ ಶಾಖೆಯನ್ನುಯಶಸ್ವಿಯಾಗಿ ನಡೆಸುತ್ತಿದ್ದಾರೆ ಕಿಶೋರ್. ಕಿಶೋರ್ ಬಿಯಾನಿಯವರ ಆಸ್ತಿಯ ಮೌಲ್ಯ ಸುಮಾರು 1.3 ಬಿಲಿಯನ್ ಡಾಲರ್ ಮತ್ತು ಫ್ಯೂಚರ್ ಗ್ರೂಪ್’ನ ಆದಾಯ ಸುಮಾರು 960.18 ಕೋಟಿರೂಪಾಯಿಗಳು.

ಸ್ನೇಹಿತರೇ ನಮ್ಮೊಳಗೆ ಅದೆಷ್ಟೋ ಪ್ರೇರಕ ಕಥೆಗಳಿವೆ. ಸೋತ  ನಮ್ಮನ್ನು ಮತ್ತೆ ಮರಳಿ ಪ್ರಯತ್ನ ಮಾಡಲು ಪ್ರೇರೇಪಿಸುವ ಕಥೆಗಳು ಇವು. ಹಾಗಾಗಿಯೇ ಇಂತವರ ಜೀವನವೇ ನಮಗೆಲ್ಲಮಾದರಿ. ಹೊಸತನದ ಬದುಕಿಗೆ ಹೊರಳಬೇಕಾದ ಸಮಯದಲ್ಲಿ “It Happened in India” ನನ್ನನ್ನು ಪ್ರೇರೇಪಿಸಿತು, ಮುಂದೇನು ಎಂದು ಯೋಚನೆಗೆ ‘ನಾನು’ ತಳ್ಳಲ್ಪಟ್ಟಾಗ ಈ ಯಶೋಗಾಥೆಪ್ರೇರಪಣೆಯಾಯಿತು. ನೀವೂ ಒಮ್ಮೆ ಓದಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!