ಅಂಕಣ

ಜೈ ಹಿಂದ್ ಎಂದವನಿಗೆ ಜನ್ಮದಿನದ ಶುಭಾಶಯಗಳು..

ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅನೇಕ ಮಹನೀಯರಲ್ಲಿ ಈ ಸುಭಾಶ್ಚಂದ್ರ ಬೋಸ್ ಅತ್ಯಂತ ಪ್ರಾಮಾಣಿಕರು ಮತ್ತು ಪ್ರಭಾವಿಗಳು… ಇವರು ದೇಶದ ಸೇವೆಗಾಗಿಯೇ ಹುಟ್ಟಿದವರೆಂದರೆ ತಪ್ಪಾಗಲಾರದು.!!! ಅವರ ಪ್ರತಿ ಹೆಜ್ಜೆಯು ದೇಶಕ್ಕೋಸ್ಕರ ಸಮರ್ಪಣೆ ಮಾಡಿದ್ದರು.. ಇದೀಗ ಭಾರತ ಸರ್ಕಾರವು ಇವರಿಗೆ ‘ಭಾರತ ರತ್ನ’ ನೀಡಿ ಗೌರವಿಸಬೇಕೆಂದು ಚಿಂತಿಸುತ್ತಿದೆ. ಒಂದು ವೇಳೆ ಅವರಿಗೆ ‘ಭಾರತ ರತ್ನ’ವು ದೊರಕದ್ದರೂ ಅವರೊಬ್ಬ ಬೆಲೆ ಕಟ್ಟಲಾಗದ ‘ರತ್ನ’ವೇ ಎನ್ನುವುದರಲ್ಲಿ ಅನುಮಾನ ಇಲ್ಲ.. ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ದೊರಕುವುದು ಕಷ್ಟಸಾಧ್ಯವೆಂದು ಅರಿತು ತೀವ್ರಗತಿಯ ಹೋರಾಟದತ್ತ ಮುಖಮಾಡಿದರು. ಅದಕ್ಕಾಗಿಯೇ ಕಾಂಗ್ರೆಸ್’ನ ಸದಸ್ಯತ್ವವನ್ನು ಬಿಟ್ಟು ಸೈನ್ಯವನ್ನು ಕಟ್ಟವ ಯೋಜನೆಯೊಂದನ್ನು ರೂಪಿಸಿದರು..

ಆಗಿನ ಮುಸ್ಲೀಂ ಲೀಗ್ ಮತ್ತು ಬ್ರಿಟೀಷರ ದೇಶ ವಿಭಜನೆಯ ಕುತಂತ್ರದ ಅರಿವು ಮೊದಲೇ ಇದ್ದಿತ್ತು… ಈ ವಿಷಯವನ್ನು ಹಲವು ಬಾರಿ ಕಾಂಗ್ರೇಸ್’ನ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಗಾಂಧೀಜಿಯಿದ್ದ ಆ ಸಭೆಯು ಸುಭಾಶ್’ರವರ ಮಾತಿಗೆ ಕವಡೆ ಕಾಸಿನ ಮೌಲ್ಯ ಕೊಟ್ಟಿಲ್ಲ. ಇದನ್ನೆಲ್ಲಾ ಗಮನಿಸಿದರೆ ಸ್ವಾತಂತ್ಯ ಪೂರ್ವದ ಕಾಂಗ್ರೇಸ್ ನಲ್ಲಿಯೂ ತೀವ್ರವಾದ ಭಿನ್ನಮತವಿತ್ತು ಮತ್ತು ದೇಶದ ವಿಚಾರದಲ್ಲಿ ಯಾವುದೇ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಧೈರ್ಯ ಮತ್ತು ಸಾಮರ್ಥ್ಯವಿರಲಿಲ್ಲ ಎಂದು ಒಬ್ಬ ಸಾಮಾನ್ಯ ಪ್ರಜೆಯೂ ಅರಿತುಕೊಳ್ಳಬಹುದು. ಬಹಳ ಹಿಂದಿನಿಂದಲೇ ಹಿಂದೂ -ಮುಸ್ಲೀಂ ರಲ್ಲಿದ್ದ ಸಣ್ಣ ಬಿರುಕನ್ನು ಕಂದಕವನ್ನಾಗಿ ಮಾಡಿದ ಕೀರ್ತಿಯೂ ಕಾಂಗ್ರೇಸ್ ಗೆ ಸೇರಬೇಕು. ಹಲವು ಬಾರಿ ಸ್ವತಃ ಗಾಂಧಿಯವರೇ ಸುಭಾಶ್’ರ ವಿಚಾರಗಳನ್ನು ಟೀಕಿಸಿದ್ದರು.!!! ಸುಭಾಶ್’ರು ಸೈನ್ಯ ಕಟ್ಟುವುದಕ್ಕೋಸ್ಕರ ಅರೆಸ್ಸಸ್’ನ ಜೊತೆ ಹಲವಾರು ಸುತ್ತಿನ ಮಾತುಕತೆಯನ್ನು ನಡೆಸಿದ್ದರು. ಆರೆಸ್ಸಸ್’ನ ಸಂಘ ಧ್ಯೇಯ ಮತ್ತು ಅನುಶಾಸನ ಕಾರ್ಯಪದ್ಧತಿಯನ್ನು ಶ್ಲಾಘಿಸಿದ್ದರು. ಅವರ ದುರದೃಷ್ಟವೊ ಎಂಬಂತೆ ಆರೆಸ್ಸಸ್’ನ ಜೊತೆಗೂಡಿ ಸೈನ್ಯ ಕಟ್ಟುವ ಕಾರ್ಯವು ಹಲವು ಅನಿವಾರ್ಯ ಕಾರಣಗಳಿಂದ ಕೈಗೂಡಲಿಲ್ಲ. ಆದರೂ ಛಲ ಬಿಡದೆ ಕಷ್ಟಪಟ್ಟು ತಮ್ಮ ಸಮಾನ ಮನಸ್ಕರನ್ನೆಲ್ಲಾ ಸೇರಿಸಿ ಸೈನ್ಯವನ್ನು ಸ್ಥಾಪಿಸಿಯೇ ಬಿಟ್ಟರು…

ಅವರಿಗಿದ್ದ ಉದ್ದೇಶವಿಷ್ಟೆ ಭಾರತಕ್ಕೆ ಬಹು ಬೇಗ ಸ್ವಾತಂತ್ಯ ದೊರಕುವುದು. ಹಲವು ಮುಖಂಡರು ಹಲವಾರು ಬಾರಿ ಇವರೊಬ್ಬ ಉಗ್ರಗಾಮಿ ಎಂದದ್ದೂ ಇದೆ. ಇದಕ್ಕೆಲ್ಲಾ ಸುಭಾಶರು ತಲೆಕೆಡಿಸಿಕೊಂಡವರಲ್ಲ …. ಈ ಸೈನ್ಯದಿಂದಲೇ ಸುಭಾಶ್’ರಿಗೆ ‘ನೇತಾಜೀ’ ಎಂಬ ಬಿರುದೂ ಬಂತು. ಮೊದಲು ಅಜಾದ್ ಹಿಂದ್ ಪೌಜ್ ಎಂದು ನಾಮಾಂಕಿತವಾಗಿದ್ದ ಬೋಸ್’ರವರ ಸೇನೆ ಮುಂದಿನ ದಿನಗಳಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿ (ಐ.ಎನ್.ಎ) ಯಾಗಿ ರೂಪುಗೊಂಡಿತು. ಪೂರ್ವ ಏಷ್ಯಾದಲ್ಲೆಲ್ಲಾ ಸಂಚರಿಸಿ ತಮ್ಮ ಸೇನೆಯನ್ನು ಬಲಪಡಿಸುವಲ್ಲಿ ಶ್ರಮಿಸಿದರು. ಹಲವಾರು ನಿವೃತ್ತ ಯುದ್ಧ ಕೈದಿಗಳೆಲ್ಲಾ ಸೈನ್ಯವನ್ನು ಸೇರಿಕೊಂಡರು. ‘ಜೈ ಹಿಂದ್’ ಎನ್ನುವುದು ಇವರ ಸೇನೆಯ ಘೋಷವಾಕ್ಯವಾಗಿತ್ತು. ಅಂದು ಘೋಷಿಸಿದ್ದ ‘ಜೈ ಹಿಂದ್’ ಎನ್ನುವುದು ಈಗಲೂ ಚಾಲ್ತಿಯಲ್ಲಿರುವುದು ನಮ್ಮ ಹೆಮ್ಮೆ. “ನನಗೆ ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ಯ ಕೊಡುತ್ತೇನೆ.” ಎನ್ನುವ ಅಂದು ಆಡಿದ ಸುಭಾಶರ ಮಾತು ಈಗ ಕೇಳಿದರೂ ನಮ್ಮಲ್ಲಿರುವ ದೇಶಭಕ್ತಿಯನ್ನು ಬಡಿದೆಬ್ಬಿಸುತ್ತದೆ..

ಹೀಗೆ ಸೈನ್ಯ ಕಟ್ಟಿ ಬೆಳೆಸಿ ಭಾರತದ ಸ್ವಾತಂತ್ರ್ಯಕ್ಕಾಗಿ ತೀವ್ರವಾದ ಹೋರಾಟಕ್ಕೆ ಇಳಿದರು. ಎಲ್ಲವೂ ಸರಿಯಿತ್ತು ತಮ್ಮ ಯೋಜನೆಯ ಪ್ರಕಾರ ಅಂತಿಮ ಹಂತದ ಕಾರ್ಯಾಚರಣೆಯ ಸಿದ್ಧತೆಯಲ್ಲಿರುವಾಗ ಅಂದರೆ ,18ಆಗಸ್ಟ್ 1945ರಂದು ಜಪಾನಿನ ಆಕಾಶವಾಣಿಯಲ್ಲಿ ಬೋಸ್’ರವರು ವಿಮಾನ ಅಪಘಾತದಲ್ಲಿ ಸಾವಿನ್ನಪ್ಪಿದರು ಎಂಬ ಸುದ್ದಿಯನ್ನು ಬಿತ್ತರಿಸಿತ್ತು. ಈ ಸುದ್ದಿ ತಿಳಿದಾಕ್ಷಣ ಇಡೀ ದೇಶವೇ ಒಮ್ಮೆ ಸ್ತಬ್ಧವಾಗಿತ್ತು. ಇಲ್ಲಿ ನಮಗಿರುವ ಅನುಮಾನ ಇಷ್ಟೆ ಈ ಸುಭಾಶ್ಚಂದ್ರ ಬೋಸ್’ರನ್ನು ಯಾರೋ ಕೊಂದರೋ? ಅಥವಾ ಅಪಘಾತದಲ್ಲಿ ಮಡಿದರೋ? ಎಂಬುವುದು… ಆ ವಿಮಾನವನ್ನು ಏರಿದ್ದರು ಅನ್ನುವುದಕ್ಕೆ ಸ್ಪಷ್ಟ ಉತ್ತರವು ಇಂದಿನವರೆಗೆ ಸಿಗಲಿಲ್ಲ. ಇಂದಿಗೂ ಇವರ ಸಾವಿನ ರಹಸ್ಯ ಬಿಡಿಸಲಾಗದ ಕಗ್ಗಂಟಾಗಿಯೇ ಉಳಿದಿದೆ.ಸಾವಿನ ರಹಸ್ಯವನ್ನು ಹೊರಗೆಡಹಲು ಮನಮೋಹನ ಸಿಂಗ್ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು … ಆ ಸಮಿತಿಯು ಅಧ್ಯಯನ ನಡೆಸಿ ವರದಿಯೊಂದನ್ನು ಸಿದ್ಧಪಡಿಸಿತ್ತು… ಆ ವರದಿಯಲ್ಲಿ ಯಾವ ಮಾಹಿತಿಯಿದೆ ಎನ್ನುವುದು ಬಹಿರಂಗಪಡಿಸಲೇ ಇಲ್ಲ… ಆ ವರದಿಯಲ್ಲಿರುವ ಮಾಹಿತಿಯನ್ನು ಬಹಿರಂಗಪಡಿಸದೆ ಇರುವ ಉದ್ದೇಶವೇನು? ಎಂಬುವುದೇ ಅರ್ಥವಾಗುತ್ತಿಲ್ಲ.. ಅದರಲ್ಲೇನಾದರು ನಮ್ಮೊಳಗಿನ ಹಲವು ಮುಖಂಡರ ಕುಕೃತ್ಯವೇನಾದರು ಇರಬಹುದೇ??? ಅಥವಾ ಬೋಸ್’ರವರು ಅಂದು ವಿಮಾನ ಅಪಘಾತದಲ್ಲಿ ಸಾಯದೆ ತದನಂತರ ಯಾರಾದರು ಕೊಂದಿರಬಹುದೇ??? ಸುದ್ದಿಯನ್ನು ಪ್ರಸಾರ ಮಾಡಿದ ಅಕಾಶವಾಣಿ ಸಂಸ್ಥೆಯೇ ಕೆಲವೊಮ್ಮೆ ಅನುಮಾನ ವ್ಯಕ್ತಪಡಿಸಿದ ಉದಾಹರಣೆ ಇದೆ. ಯಾವುದೇ ವಿಚಾರವಾದರೂ (ವಿವಾದಿತ ಮತ್ತು ಅನುಮಾನಾಸ್ಪದವಾದ) ಕೂಲಂಕೂಷವಾಗಿ ವಿಮರ್ಶಿಸಿದ ನಂತರ ಬಹಿರಂಗಪಡಿಸಬೇಕು. ಅಂದು ಸುಭಾಶ್’ರು ಕಣ್ಮರೆಯಾಗದಿದ್ದರೆ ಅಥವಾ ಬದುಕುಳಿದಿದ್ದರೆ ಭಾರತವು ಎರಡು ವರ್ಷಗಳಷ್ಟು ಮುಂಚಿತವಾಗಿ ಸ್ವತಂತ್ರ ರಾಷ್ಟ್ರವಾಗುತ್ತಿತ್ತು.. ಬ್ರಿಟೀಷರು ಎರಡು ವರ್ಷಗಳ ಕಾಲ ನಮ್ಮ ದೇಶದ ಸಂಪತ್ತಿನ ಕೊಳ್ಳೆ ಹೊಡೆಯುವುದನ್ನು ತಪ್ಪಿಸಬಹುದಿತ್ತು..!!! ಕಾಂಗ್ರೇಸ್’ಗೆ ದೇಶದ ಸ್ವಾತಂತ್ಯದ ಬಗ್ಗೆ ಆಸಕ್ತಿಯೇ ಇರಲಿಲ್ಲ… ಎರಡು ವರ್ಷಗಳ ಹಿಂದೆಯೇ ನಾವು ಸ್ವತಂತ್ರರಾಗುತ್ತಿದ್ದರೆ ತೀವ್ರ ಹಿನ್ನಡೆ ಅಥವಾ ಮುಜುಗರಕ್ಕೆ ಒಳಗಾಗುತ್ತಿದ್ದದ್ದು ಕಾಂಗ್ರೇಸ್ ಪಕ್ಷವೇ ಹೊರತು ಇನ್ನಾವುದೂ ಅಲ್ಲ. ಮುಂದಿನ ದಿನಗಳಲ್ಲಿ ಐಎನ್ಯೆ ಪ್ರಬಲಗೊಳ್ಳುತ್ತಿತ್ತು ಮತ್ತು ಸುಭಾಶ್ಚಂದ್ರ ಬೋಸ್ ರೇ ಭಾರತದ ಪ್ರಧಾನಿಯಾಗುವ ಸಂಭವ ಹೆಚ್ಚಿತ್ತು..!!! ಅಧಿಕಾರಕ್ಕಾಗಿ ಕಾಂಗ್ರೇಸ್ಸಿನ ಹಲವು ವರ್ಷಗಳು ಪಟ್ಟ ಶ್ರಮ ನೀರಿನಲ್ಲಿ ಉಪ್ಪು ತೊಳೆದಂತಾಗುತ್ತಿತ್ತು. ಕಾಂಗ್ರೇಸ್ ಪಕ್ಷದ ಅಂದಿನ ಪ್ರಮುಖ ನಾಯಕರೆನಿಸಿಕೊಂಡವರು ಭಾರತವನ್ನು ಆಳುವ ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕು ಎನ್ನುವ ಉದ್ದೇಶ ಅವರಲ್ಲಿ ಮನೆಮಾಡಿತ್ತು. ಈ ಅಂಶಗಳನ್ನೆಲ್ಲಾ ನಾವು ಗಮನಿಸಿದಾಗ ಯಾರದ್ದೋ ಸಹಾಯ ಪಡೆದು ಸುಭಾಶ್ಚಂದ್ರರನ್ನು ಸ್ವಾತಂತ್ರ್ಯ ಹೋರಾಟದಿಂದ ದೂರ ಸರಿಯುವಂತೆ ಮಾಡಲು ಕಣ್ಮರೆ ಮಾಡಿದ್ದರೋ ಅಥವಾ ಕೊಲೆಯನ್ನೇ ಮಾಡಿದ್ದಾರೋ ಎನ್ನುವ ಅನುಮಾನ ವ್ಯಕ್ತವಾಗುತ್ತದೆ… ಇವೆಲ್ಲಾ ಸುಭಾಶ್ಚಂದ್ರ ಸಾವಿನ ರಹಸ್ಯವು ಹೊರಬರದೇ ಇರಲು ಪ್ರಮುಖ ಕಾರಣವಾಗಿರಬಹುದು.

ಇತ್ತೀಚೆಗೆ ಎಲ್ಲೆಲ್ಲಿಂದಲೋ ಯಾವ್ಯಾವುದೋ ಗೊಂದಲಮಯ ಸುದ್ದಿ ಬರುತ್ತಲೇ ಇದೆ.. ಹಾಗೆ ಸತ್ತರಂತೆ … !!! ಹೀಗೆ ಸತ್ತರಂತೆ… !!! ಎಂದು.

ಬ್ರಿಟಿಷ್’ರ ಅಧಿಕೃತ ಅಂತರ್ಜಾಲವೊಂದು ಅವರು ವಿಮಾನ ಅಪಘಾತದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪ್ರಕಟಿಸಿತ್ತು..

ಅದಕ್ಕೆ ಪುಷ್ಟಿ ನೀಡುವಂತೆ ಅಂತಿಮ ಸಂಸ್ಕಾರದ ದಾಖಲೆಯನ್ನೂ ಬಿಡುಗಡೆ ಮಾಡಿದೆ…ಆದರೆ ಕೆಲವು ದಿನಗಳ ಹಿಂದೆ ಪ್ರಮುಖ ಪತ್ರಿಕೆಯೊಂದು ಟಾಷ್ಕೆಂಟ್ ಒಪ್ಪಂದದ ವೇಳೆ ಬೋಸ್ ಇರುವ ಚಿತ್ರವೊಂದನ್ನು ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿತ್ತು …

ಇತ್ತೀಚೆಗೆ ಪಶ್ಚಿಮ ಬಂಗಾಳದ ಮಮತಾ ನೇತೃತ್ವದ ಸರ್ಕಾರ ಕೆಲವೊಂದು ಕಡತಗಳನ್ನು ಬಿಡುಗಡೆಗೊಳಿಸಿತ್ತು.. ಅದರಲ್ಲಿ ಅಂತಹಾ ಮಹತ್ವ ಇರುವಂತಹಾ ವಿಷಯಗಳೇನು ಇರಲಿಲ್ಲ… ಕೆಲವರ ಪ್ರಕಾರ ಈ ವಿಮಾನ ಅಪಘಾತದ ನಂತರ ಬೋಸ್’ರವರು ಬದುಕಿದ್ದರು…ಗುಮ್ನಾಮಿ ಬಾಬಾ ಹೆಸರಿನಲ್ಲಿ ಉತ್ತರ ಪ್ರದೇಶದಲ್ಲಿ ಫೈಜಾಬಾದ್ ನಲ್ಲಿ ಒಂದು ಆಶ್ರಮ ಕಟ್ಟಿಕೊಂಡು ಅಜ್ಞಾತ ವಾಸ ಮಾಡುತ್ತಿದ್ದರು ಎನ್ನುತ್ತಾರೆ ಹಲವರು.. !!!

ಗುಮ್ನಾಮಿ ಬಾಬಾ ಕಾಲವಾದ ನಂತರ ಅವರ ವಸ್ತುಗಳನ್ನೆಲ್ಲಾ ಗಮನಿಸಿದಾದ ಬೋಸ್ ರವರು ಉಪಯೋಗಿಸುತ್ತಿದ್ದ ಅನೇಕ ವಸ್ತುಗಳು ಪತ್ತೆಯಾಗಿದ್ದವು… !!!

ಬ್ರಿಟೀಷರ ಮತ್ತು ಭಾರತ ನಡುವಿನ ಒಪ್ಪಂದದ ಪ್ರಕಾರ ಬೋಸ್ ರವರನ್ನು ಜೀವಂತವಾಗಿ ಹಿಡಿದು ಬ್ರಿಟಿಷ್ ಸರ್ಕಾರಕ್ಕೆ ಒಪ್ಪಿಸಬೇಕಿತ್ತು… ಬ್ರಿಟೀಷರಿಗೂ ಒಂದು ಮೂಲೆಯಲ್ಲಿ ಬೋಸ್’ರವರ ಬಗ್ಗೆ ಅನುಮಾನ ಮತ್ತು ಭಯವೂ ಇತ್ತು..

ಇಷ್ಟೆಲ್ಲಾ ಸೂಕ್ಷ್ಮ ವಿಚಾರಗಳನ್ನು ಗಮನಿಸಿದಾಗ ಸುಭಾಶ್ಚಂದ್ರರನ್ನು ಉದ್ದೇಶ ಪೂರ್ವಕವಾಗಿ ಅಪಘಾತದ ಹೆಸರಿನಲ್ಲಿ ಕೊಂದರೋ ಅಥವಾ ಸ್ವಾತಂತ್ರ್ಯ ಹೋರಾಟದಿಂದ ದೂರವಿಡಲು ಕಣ್ಮರೆ ಮಾಡಿ ತದನಂತರ ಕೊಲೆ ಮಾಡಿದರೋ ಅಥವಾ ನಿಜವಾಗಿಯೂ ವಿಮಾನ ಅಪಘಾತದಲ್ಲೇ ಸಾವಿಗೀಡಾದರೋ ಎನ್ನುವಂತಹ ಅನುಮಾನ ಮೂಡುವುದು ಸಹಜ ಮತ್ತು ಸಮಂಜಸವೇ ಸರಿ.. ಮೋದಿ ಸರ್ಕಾರ ಅವರ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದೆ… ಕಾದು ನೋಡೋಣ…

ಏನೇ ಇರಲಿ.. ದೇಶ ಕಂಡ ಧೀಮಂತ ನಾಯಕನಿಗೆ ಜನ್ಮದಿನದ ಶುಭಾಶಯಗಳು.. ಜೈಹಿಂದ್!
 Jagath Bhat

Facebook ಕಾಮೆಂಟ್ಸ್

ಲೇಖಕರ ಕುರಿತು

Jagath Bhat

ಜಗತ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಯಕ್ಷಗಾನ, ಛಾಯಾಗ್ರಹಣ ಮತ್ತು ಬರವಣಿಗೆ ಇವರ ಹವ್ಯಾಸ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!