ಅಂಕಣ

ತಲೇನಾಗೆ ಕೂದ್ಲು ಮತ್ತು ಮಿದ್ಳು ಎರ್ಡೂ ಇಲ್ದೀರೋರ ಮಾತ್ ಕೇಳೀದ್ರೆ ಇಂಗೇ ಆಗೋದು ಕಣಲಾ….!!!

ಗೋಪಾಲಣ್ಣಂಗೆ ಯ್ಯಾಪಿ ನ್ಯೂ ಯಿಯರ್ ಅಂತೇಳಿ ಹೋಗಿದ್ದ ಮುರುಗನ್ ಸಂಕ್ರಾಂತಿ ಟೇಮ್ನಾಗೆ ಇಸ್ವವಾಣಿ ನ್ಯೂಸ್ ಪೇಪರ್ ಇಡ್ಕೊಂಡು ಹಾಜಾರಾಗಿತ್ತು. ಅಷ್ಟೋತ್ಗಾಗ್ಲೇ ಗೋಪಾಲಣ್ಣನ್ ಹಟ್ಟಿ ಮುಂದೆ ಕಲ್ಲೇಶಿನೂ ಜಮಾಯಿಸ್ಬಿಟ್ಟಿತ್ತು. ಏನ್ಲಾ ಇಚಾರ ಹೊಸ ವರ್ಷದಾಗ ಮಿ.ಮುರುಗನ್? ಅಂತಾ ಗ್ವಾಪಾಲಣ್ಣ ಮಾತು ಆರಂಭಿಸ್ತು. ಏನಿಲ್ಲಾ ಗೋಪಾಲಣ್ಣಿ ಕನ್ನಡಕ್ಕೊಂದು ಒಸ ನ್ಯೂಸ್ ಪೇಪರ್ ಬಂದೈತೆ ಕಣಣ್ಣಾ, ನಮ್ಮ್ ಇಸ್ವೇಸ್ವರ್ ಭಟ್ರದ್ದು ಅಂತೇಳ್ತು ಮುರುಗನ್. ಓ ಭಟ್ರದ್ದಾ? ಪಿಚ್ಚರ್’ಗೆ ಯೋಗ್ರಾಜು ಭಟ್ಟು, ಪ್ಯಾಪರ್’ಗೆ ಇಸ್ವೇಸ್ವರ್ ಭಟ್ಟು, ಬೋ ಪಸಂದಾಗಿರ್ತದೆ”

ಅದಿರ್ಲಿ ನಿಮ್ಮ್ ಕೇಜ್ರಿವಾಲು ಡೆಲ್ಲಿನಾಗೆ ಏನೋ ಒಸ ರೂಲು ಸ್ಟಾರ್ಟ್ ಮಾಡೈತಂತೆ?? ಸದಾ ಕೆಮ್ಕಂಡಿರೋ ಆವಯ್ಯ ಟ್ರಾಫಿಕ್ ರೂಲ್’ನಾಗೇ ಬಾಳ ಚೇಂಜ್ ಮಾಡೈತಂತೆ ಕಲ್ಲಾ ಅಂತು ಮುರುಗನ್. ಹೂ ಕಲ್ಲಾ ಕುಡುಕ್ರ ಸಮಸೈ ಕುಡುಕ್ರಿಗೇ ಅರ್ಥವಾದಂತೆ ಕೆಮ್ಮೋರ ಕಷ್ಟ ಕೆಮ್ಮೋರಿಗೇ ಅರ್ಥವಾಗತ್ತೆ. ಹಂಗೇನೇಯಾ ಕೇಜ್ರಿವಾಲು ಒಸ ರೂಲು ಮಾಡ್ಬಿಟ್ಟೈತೆ ಅಂತೇಳ್ತು ಗೋಪಾಲಣ್ಣ.

ವಿಪಕ್ಸ ನಾಯಕ ಈಸ್ವರ್ರು ಕಥೆ ಏನ್ಲಾ?? ಪರಿಷತ್ ಫೈಟ್’ನಾಗೆ ಸೋತ್ರೆ ಶಿಮೊಗ್ಗದಲ್ಲಿ ಮಟ ಸ್ಥಾಪನೆ ಮಾಡ್ತೀನಿ ಅಂದಿತ್ತು. ಎಲ್ಲೋಯ್ತ್ಲಾ ಈವಾಗ ಅವಯ್ಯ? ಅಂತ ಕುಟುಕ್ತು ಮುರುಗನ್ ಗೋಪಾಲಣ್ಣಂಗೆ. ಉಗೀರಿ ನನ್ನ ಮಗನ ಮುಖಕ್ಕೆ, ರಾಜ್ಕೀಯ ಅಂದ್ಮೇಲೆ ಸೋಲು ಗೆಲುವು ಬರುತ್ತೆ ಓಗುತ್ತೆ. ಅಂಗೇಳಿ ಮಟ ಸೇರಕ್ಕಾಗುತ್ತೇನ್ಲಾ?? ಇವಾಗ ನಮ್ಮ್ ದೊಡ್ಡ್ ಗೌಡ್ರ‍ನ್ನು ನೋಡ್ಲಾ, ಹುಟ್ಟೂರ್ ಹಾಸ್ನದಲ್ಲೇ ಪಟೇಲ್ ಸಿವರಾಂನ್ನ ಗೆಲ್ಸೋಕೆ ಆಗಿಲ್ಲಾ. ಆದ್ರೂ ಎಂಗೆ ಪಂಚೆ ಎತ್ಕಟ್ಟಿ ಪಂಚಾಯತ್ ವೋಟ್ಗೆ ಪ್ರಚಾರ ಮಾಡ್ತೈತೆ ನೋಡ್ಲಾ ಅಂತ ಒಂದೇ ಉಸ್ರಲ್ಲಿ ಒದ್ರಿ ಬಿಡ್ತು ಗೋಪಾಲಣ್ಣ.

ಒಂದು ವಿಸ್ಯ ಕೇಳ್ಪಟ್ಟೆ, ಯಡ್ರು ಮತ್ತು ಸೋಭಕ್ಕ ಮದ್ವೆ ಆಗಿದ್ವಂತೆ ಹೌದೇನ್ಲಾ?? ಏನ್ಲಾ ಮಾಟರ್ರ್?? ಅಂತ ಗ್ವಾಪಲಣ್ಣನ್ ಕೆಣಕ್ತು ಕಲ್ಲೇಶಿ.

ಗೋಪಾಲಣ್ಣ ಕಣ್ಣ್ ಕೆಂಪಗೆ ಮಾಡ್ಕೋಂಡು ” ಯಾರ್ಲಾ ಯೋಳಿದ್ದು?? ಆ ಪರಂಗಿ ಪದ್ಮನಾಭನೇನ್ಲಾ?? ಈ ಉಚ್ಚ ವೆಂಕಟ್ , ಬಗ್ವಾನ್ ಮತ್ತು ಪದ್ಮನಾಭನಂತವ್ರ ಮಾತನ್ನು ನಂಬೋಕಾಗುತ್ತೇನ್ಲಾ?? ಬಿಜೆಪಿ ರಾಜ್ಯಾಧ್ಯಕ್ಸ ಆಗಾಕೆ ಯೆಡ್ರು ಪೈಜಾಮ, ಕುರ್ತಾ ಒಲ್ಸಿ ರೆಡಿಯಾಗಿದ್ದನ್ನು ಕಂಡು ತಿಕ ಉರ್ಕೊಂಡ ಬಿಜೆಪಿಯ ಕೆಲ ಪಿಸಾಚಿ ಮುಂಡೇವು ಪದ್ಮನಾಭನ್ನ ಎದ್ರು ಬಿಟ್ಕೊಂಡು ತಮ್ಮ ಬೇಳೆ ಬೇಯಿಸ್ಕೊತಿದಾವ್ಲಾ ತಿರುಬೋಕೆ ನನ್ನ ಮಗನೇ.. ಯೆಡ್ರು ಮೇಲಿನ ಎಲ್ಲಾ ಕೇಸ್ಗಳೂ ಕೋರ್ಟ್ನಾಗೆ ಬಿದ್ದಾವೆ, ಅದು ಅಪರಂಜಿ ಚಿನ್ನ ತಿಳ್ಕೋಳ್ಲಾ ಅವಿವೇಕಿ ನನ್ ಮಗನೆ” ಅಂತ ಮಕಕ್ಕೆ ಬಡ್ದಾಂಗೆ ಏಳ್ತು.

“ಕೂಲ್ ಡೌನ್ ಗ್ವಾಪಾಲಣ್ಣ… ಇದೆಲ್ಲಾ ಬುಡ್ಲಾ ರಾಉಲ್ಲು ಗಾಂಧಿಗೇನಾಯ್ತ್ಲಾ?? ಓದಲ್ಲಿ ಬಂದಲ್ಲಿ ಅಸಯಿಷ್ಣುತೆ ಬಗ್ಗೆ ಬಾಷ್ಣ ಬಿಗೀತೈತೆ?? ಮೊನ್ನೆ ಅದೆಲ್ಲೋ ಬೆಂಗ್ಳೂರ್ನ ಕಾಲೇಜ್ನಾಗೆ ಸಯಿಷ್ಣುತೆ ಬಗ್ಗೆ ಮಾತಾಡಿದ್ದಕ್ಕೆ ಹುಡ್ಗೀರ್ ಸರ್ರ್ಯಾಗ್ಗೇ ಮಕಕ್ಕೆ ಮಂಗ್ಳಾರ್ತಿ ಮಾಡಿ ಕಳ್ಸವ್ರಂತೆ. ಇದು ಹಿಂಗೆ ಪೆದ್ದ್ ಪೆದ್ದ್ ಆಡ್ತಿದ್ರೆ ಕಾಂಗ್ರೆಸ್ ಪಾರ್ಟಿ ಕಥೆ ಏನ್ಲಾ?? ಪಂಚಾಯ್ತಿ ಎಲೆಕ್ಸನ್ ಗೆ ಉಚ್ಚ ವೆಂಕಟ್ ಕಟ್ತಿರೋ ಹೊಸ ಪಕ್ಸದಿಂದ್ಲೇ ಸ್ಪರ್ಧೆ ಮಾಡೋದೇ ಬೆಟರ್ರು” ಅಂತು ಕಲ್ಲೇಶಿ.

ಅಲ್ಲಾ ಮುರುಗನ್ ನಿಮ್ಮ್ ಸಿದ್ದಣ್ಣನ್ ಕಥೆ ಏನ್ಲಾ?? ನಿಮ್ಮ್ ಸಿದ್ದಣ್ಣಾನೂ ಇತ್ತೀಚ್ಗೆ ಒಮ್ಮೊಮ್ಮೆ ಪೆದ್ದ್ ಪೆದ್ದಾಗಿ ಇನ್ನು ಕೆಲವೊಮ್ಮೆ ಹುಚ್ಚುಚ್ಚಾಗೆ ಆಡ್ತದೆ. ಪರಿಷತ್ ಚುನಾವಣೇಲಿ ಗೆದ್ದು ಬೀಗಿ ಯಾರೋ ಆಫೀಸರ್’ಗೆ ಕಪಾಳಕ್ಕೆ ಬಾರುಸ್ತಂತೆ ಹೌದೇನ್ಲಾ?? ನಿನ್ನೆ ಟೀವಿನಾಗೆ ತೋರಿಸ್ತಿದ್ರು ಅಂತೇಳ್ತು ಗ್ವಾಪಾಲು.. ಹೂ ಕಲ್ಲಾ ತಲೇನಾಗೆ ಕೂದ್ಲು ಮತ್ತು ಮಿದ್ಳು ಎರ್ಡೂ ಇಲ್ದೀರೋರ ಮಾತ್ ಕೇಳೀದ್ರೆ ಇಂಗೇ ಆಗೋದು ಕಣಲಾ ಅಂತೇಳ್ತು ಮುರುಗನ್.

ಯಾರಾರ ಏನಾರ ಮಾಡ್ಲಿ, ನಡೀ ಪಂಚಚಾಯ್ತಿ ಎಲೆಕ್ಸನ್ ಬರ್ತೈತಿ, ಏನಾರ ಕಮಾಯಿ ಮಾಡಾಕಾಯ್ತದಾ ನೋಡಾಣ ಅಂತ ಗ್ವಾಪಾಲಣ್ಣ ಹೊಂಟ. “ಬೋಳು ಮಂಡೇ ಜಂಗಮ ದೇವ ಸಜೆಸ್ಸನ್ನು ಕೊಡ್ತವ್ನೆ ಸೀಯಮ್ಮಿಗೇ…” ಅಂತ ಭಾಳ ಪೀಲಿಂಗ್’ನಲ್ಲೆ ಹಾಡೇಳಿ ಕಾಲ್ಕೀಳ್ತು ಮುರುಗನ್..!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!