ಅಂಕಣ

ನಮ್ಮಪೂರ್ವಜರ ನಂಬಿಕೆಗಳಲ್ಲೂ ವಿಜ್ಞಾನವಿದೆ

ನಮ್ಮಪೂರ್ವಜರ ನಂಬಿಕೆಗಳಲ್ಲೂ ವಿಜ್ಞಾನವಿದೆ

ಅಮ್ಮ ಹೇಳ್ತಿದ್ದಳು ಗ್ರಹಣ ಕಾಲದಲ್ಲಿ ಸೂರ್ಯಚಂದ್ರರನ್ನು ನೋಡಬಾರುದು, ಹೊರಗಡೆ ಓಡಾಡಬಾರದು ಅನ್ನ ಆಹಾರಗಳನ್ನು ಸೇವಿಸಬಾರದು ಅದು ಒಳ್ಳೆಯದಲ್ಲವೆಂದು. ಬರೇ ಅಂತೆಕಂತೆಗಳೆಂಬ ನಂಬಿಕೆಗಳ ಮೇಲೆ ನಿಂತಿರುವ ಹಿರಿಯರ ಇಂತಹ ಮಾತುಗಳನ್ನು ನಾನು ಅದಾಗಲೇ ಮೌಢ್ಯದ ಪಟ್ಟಿಗೆ ಸೇರಿಸಿದ್ದರಿಂದ ಅಮ್ಮನಿಗೆ ಅದೆಷ್ಟೋ ಬಾರಿ ಬುದ್ಧಿ ಹೇಳುವ ಮಟ್ಟದಲ್ಲಿನಿಲ್ಲುತ್ತಿದ್ದೆ! ಆದರೆ ಕಾಲ ಉರುಳಿದಂತೆ ವಿಜ್ಞಾನ ಕೂಡ ಇದೇ ಮಾತುಗಳನ್ನು ಒಪ್ಪಿ ಅಂಗೀಕರಿಸಿಬಿಟ್ಟಿತು ನೋಡಿ! ಗ್ರಹಣಕಾಲದಲ್ಲಿ ಅಪಾಯಕಾರಿಯಾದ ಕಿರಣಗಳು ಹೊರಚೆಲ್ಲುತ್ತವೆಯಾದ್ದರಿಂದಬರೀಗಣ್ಣಲ್ಲಿ ಸೂರ್ಯಚಂದ್ರರನ್ನು ನೋಡಬಾರದು ಎಂದೇ ವಿಜ್ಞಾನ ಕೂಡ ಸಾರಲು ಶುರುಮಾಡಿತು! ಅದೆಷ್ಟೋ ಕೋಟಿ ಮೈಲುಗಳಷ್ಟು ದೂರದಲ್ಲಿರುವ ಸೂರ್ಯಚಂದ್ರರ ಮೇಲಾಗುವಗ್ರಹಣಗತಿಯನ್ನುಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳಿಲ್ಲದೆ ಲೆಕ್ಕಹಾಕಿ ಅದರಿಂದ ದೊರೆಯುವ ಅಪಾಯವನ್ನು ಗಣಿಸಿದರಲ್ಲ ನಮ್ಮ ಪೂರ್ವಜರು ಅದ್ಹೇಗೆ ಸಾಧ್ಯವಾಯಿತು ಅವರಿಗೆ!? ಎಂಬುದುದೊಡ್ಡ ಪ್ರಶ್ನೆಯೇ. ಆದರೂ ಅಂದು ಒಪ್ಪದ ನಾನು ಇದೀಗ ವೈಜ್ಞಾನಿಕ ಆಧಾರ ದಕ್ಕಿದಾಗಲಂತೂ ಕಣ್ಣು ಮುಚ್ಚಿಯೇ ಒಪ್ಪಿಕೊಂಡುಬಿಟ್ಟೆ!

ಆಕೆ ಸರಿಸುಮಾರು 20ವರ್ಷದ ತರುಣಿ. ಬಡಕುಟುಂಬ. ಅವಾಗಾವಾಗ ಬಿಡದೆ ಕಾಡುತ್ತಿದ್ದ ಹೊಟ್ಟೆನೋವು ಒಂದು ದಿನ ವಿಪರೀತ ಮಟ್ಟಕ್ಕೆ ಹೋಯಿತು. ತಪಾಸಣೆ ನಡೆಸಿದ ವೈದ್ಯರು ಅಪಂಡಿಕ್ಸ್ಉಲ್ಬಣವಾಗಿದೆಯೆಂದು ಇಂತಿಷ್ಟು ದಿನಗಳೊಳಗಡೆ ಶಸ್ತ್ರಚಿಕಿತ್ಸೆಯಾಗದಿದ್ದರೆ ಜೀವಕ್ಕೇ ಅಪಾಯವೆಂದು ಹೇಳಿದರು! ಮೊದಲೇ ಬಡಕುಟುಂಬವಾಗಿದ್ದ ಅವರಿಗೆ ಶಸ್ತ್ರಚಿಕಿತ್ಸೆಯ ದುಡ್ಡು ಭರಿಸುವುದುಅಷ್ಟು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ಅವರು ಮೊರೆಹೋದದ್ದು ಜೋತಿಷ್ಯ ಮಂತ್ರ ತಂತ್ರಗಳೆಂಬ ಇನ್ನೊಂದು ಅವಕಾಶದೆಡೆಗೆ! ಕವಡೆ ಬಿಚ್ಚಿದ ಜೋತಿಷ್ಯಿಯೊಬ್ಬ ನಿಮ್ಮ ಮನೆಯೊಳಗೆಭೂತವಿದೆಯೆಂದೂ ಅದನ್ನು ಆರಾಧಿಸಿದರೆ ಖ೦ಡಿತಾ ಸಮಸ್ಯೆ ಬಗೆಹರಿಯುವುದೆಂದೂ ಹೇಳಿದ. ಕೂಡಲೇ ಕುಟುಂಬವು ಒಪ್ಪಿ ಭೂತಾರಾಧನೆಯನ್ನು ಪ್ರಾರಂಭಿಸಿತು. ಪವಾಡವೆಂದರೂ ಸರಿಯೇ.ತರುಣಿಯ ಅಪಂಡಿಕ್ಸ್ ನೋವು ಅಪರೇಷನ್ ಇಲ್ಲದೆಯೇ ಕರಗಿಹೋಯಿತು! ಈ ಘಟನೆ ನಡೆದು ಸುಮಾರು ಇಪ್ಪತ್ತು ವರುಷ ಸಂದಿರಬಹುದು.ಇವತ್ತಿಗೂ ಆಕೆ ಆರೋಗ್ಯವಾಗಿಯೇ ಇದ್ದಾಳೆ! ಇದುಕಾಕತಾಳೀಯವೇ ಇರಬಹುದು. ಆದರೆ ಯಾವುದನ್ನು ತಿರಸ್ಕರಿಸಲಿ ಯಾವುದನ್ನು ಪುರಸ್ಕರಿಸಲಿ ಎಂಬುದೇ ಇಲ್ಲಿ ಪ್ರಶ್ನೆಯಾಗಿರುವುದು!

ಅದೊಂದು ಬೆಳಗ್ಗೆ ವಿಜ್ಞಾನಿಗಳ ದಂಡು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿತ್ತು. ಅರೇ ವಿಜ್ಞಾನವನ್ನು ಅರೆದು ಕುಡಿದ ವಿಜ್ಞಾನಿಗಳಿಗೆ ದೇವರೆಂಬ ನಂಬಿಕೆಯ ಮುಂದೆ ಅದೇನು ಕೆಲಸವೆಂದುಯೋಚಿಸುತ್ತಿರುವಾಗಲೇ ತಿಳಿಯಿತು ಅಂದು  ಇಸ್ರೋ ಮಂಗಳ ಗ್ರಹಕ್ಕೆರಾಕೇಟ್ ಉಡಾವಣೆ ನಡೆಸಿ ಇತಿಹಾಸ ನಿರ್ಮಿಸಲಿದೆ ಅದಕ್ಕೆ ಪೂರ್ವಭಾವಿಯಾಗಿ ತಿಮ್ಮಪ್ಪನ ಆಶೀರ್ವಾದಬೇಡುತ್ತಿದ್ದಾರೆಂದು! ಅಂದಿನ ಬಹುನಿರೀಕ್ಷೆಯ ರಾಕೇಟ್ ಉಡಾವಣೆ ಯಶಸ್ವಿಯೂ ಆಯಿತು. ಈ ಯಶಸ್ವಿ ಕಾರ್ಯಾಚರಣೆಯ ಹಿಂದಿರುವುದು ವಿಜ್ಞಾನ ತಂತ್ರಜ್ಞಾನಗಳೇ ಹೊರತು ‘ನಂಬಿಕೆಆಚಾರಗಳಲ್ಲ’ ಎಂಬ ಸತ್ಯ ಎಲ್ಲರಿಗೂ ಗೊತ್ತಿರುವಂತಹುದೇ ಬಿಡಿ. ಇಷ್ಟಿದ್ದರೂ ನಂಬಿಕೆಯ ಬೆನ್ನು ಬಿದ್ದು ದೇವರ ಮುಂದೆ ಮಂಡಿಯೂರಿ ಪ್ರಾರ್ಥಿಸಿದ್ದಾರಲ್ಲಾ ನಮ್ಮ ವಿಜ್ಞಾನಿಗಳು… ಏಕೆ!?ವಿಜ್ಞಾನಿಗಳನ್ನೂ ಮೂಢರೆನ್ನಬೇಕೆ ಹಾಗಾದರೆ!?

ಇಂತಹ ಒಂದಕ್ಕೊಂದು ವೈರುಧ್ಯವಾಗಿರುವ, ಕನ್ಫ್ಯೂಸ್ ಮಾಡಿಸುವ ವಿಚಾರಗಳು ಸಾಕಷ್ಟಿವೆ. ನಂಬಿಕೆಗಳೆಂದರೆ ಹಾಗೇ.ಅವುಗಳೇ ಕಾರಣವೇ ಅಥವಾ ಅವುಗಳ ಪರಿಣಾಮವೇ ಎಂಬುದಕ್ಕೆಉತ್ತರಹುಡುಕುವುದು ಕಷ್ಟ.ಆದರೆ ಮಾನಸಿಕ ಸಾಂತ್ವಾನವನ್ನು ನೀಡಿ, ಭರವಸೆಯನ್ನು ಕಟ್ಟಿಕೊಡುವ ಕೆಲಸವನ್ನಂತು ಈ ನಂಬಿಕೆಗಳು ಹಿಂದಿನಿಂದಲೂ ಮಾಡಿಕೊಂಡು ಬಂದಿವೆ. ನಂಬಿಕೆ ಹಾಗೂವಿಜ್ಞಾನಗಳೆಂಬ ಎರಡು ವಿಚಾರಗಳನ್ನು ಹಿಡಿದು ಯಾವುದು ಗಣ್ಯ ಯಾವುದು ನಗಣ್ಯ ಎಂದುಬಿಟ್ಟರೆ ಉತ್ತರಿಸಲಿಕ್ಕಾಗದು. ಇವೆರಡರ ನಡುವೆ ಜಿಜ್ಞಾಸೆಗಳು ನಡೆದಾಗ ಮೇಲಿನಂತಹ ಹತ್ತುಹಲವಾರು ಉದಾಹರಣೆಗಳು ಒಂದರ ಹಿಂದೆ ಒಂದರಂತೆ ಎದಿರಾಗತೊಡಗುತ್ತವೆ. ಅರ್ಥವಾಗದೇ ಉಳಿದಿರೋ ನಂಬಿಕೆಗಳ ಮೇಲೆ ಪ್ರಶ್ನೆಗಳನ್ನು ಇಕ್ಕಿ ಅದಕ್ಕೆ ಪರಿಪೂರ್ಣ ಉತ್ತರ ದಕ್ಕದೇಹೋದಾಗ ಇಲ್ಲವೇ ವೈಜ್ಞಾನಿಕವಾಗಿ ರುಜುವಾತು ಪಡಿಸಲು ಸಾಧ್ಯವಾಗದೇ ಹೋದಾಗ ಅದನ್ನು ಮೌಢ್ಯವೆಂದು ಅಲ್ಲಗಳೆಯುವುದು ತೀರಾ ಸುಲಭ ಬಿಡಿ. ಆದರೆ ಅದು ವಿಜ್ಞಾನಕ್ಕೆ ದಕ್ಕುವಜಯವಲ್ಲ! ವಿಜ್ಞಾನದ ನಿಲುಕಿಗೆ ಸಿಕ್ಕಿಲ್ಲವೆಂಬ ಒಂದೇ ಕಾರಣಕ್ಕೆಅದನ್ನು ವೈಜ್ಞಾನಿಕವಲ್ಲ ಎನ್ನುವುದು ಖಂಡಿತಾ ಒಪ್ಪತಕ್ಕ ವಿಚಾರವಲ್ಲ. ಯಾಕೆಂದರೆ ವಿಜ್ಞಾನವೇನೂ ಪರಿಪಕ್ವವಾಗಿರುವ ಅಥವಾಸಮಗ್ರವಾಗಿ ಬೆಳೆದು ನಿಂತಿರುವ ಜ್ಞಾನವೇನಲ್ಲ. ಅದೂ ಕೂಡ ನಿರಂತರ ಬೆಳೆಯುತ್ತಲೇ ಇರುವ ಒಂದು ಜ್ಞಾನವಷ್ಟೇ! ಆದ್ದರಿಂದ ಬೆಳೆಯುತ್ತಿರುವ ವಿಜ್ಞಾನಕ್ಕೆಇಂದಿನ ಮೌಢ್ಯಇಲ್ಲವೇ ‘ಕುಜ್ಞಾನ’ಮುಂದೊಂದು ದಿನ ‘ವಿಜ್ಞಾನ’ವೆನ್ನಿಸಲೂಬಹುದು. ಅದೆಷ್ಟೊ ನಮ್ಮ ನಂಬಿಕೆಗಳು ಇಲ್ಲವೇ ಮೌಢ್ಯವೆಂದು ಹೀಗಳೆಯಲ್ಪಟ್ಟ ನಮ್ಮ ಪೂರ್ವಜರ ಚಿಂತನೆಗಳು ಅದಾಗಲೇ ವೈಜ್ಞಾನಿಕ ಸತ್ಯಗಳೆಂದುರುಜುವಾತಾಗಿರುವುದು ನಮ್ಮ ಕಣ್ಣಮುಂದೆಯೇ ಇದೆಯಲ್ಲಾ! ಉದಾಹರಣೆಗೆ ಮನೆ ಮುಂದೆ ಇರುವ ತುಳಸೀ ಗಿಡ. ತುಳಸಿ ಗಿಡವನ್ನು ನೆಟ್ಟು ಮುಂಜಾನೆದ್ದು ನೀರುಯ್ದು ಪೂಜಿಸಿದರೆ ಶುಭಎನ್ನುವುದು ನಮ್ಮ ಪೂರ್ವಜರ ನಂಬಿಕೆಯಾಗಿತ್ತಷ್ಟೇ. ತುಳಸಿ ಸಸಿ ವೈದ್ಯಕೀಯ ಗುಣವುಳ್ಳದ್ದು, ಸಸ್ಯವರ್ಗಗಳಲ್ಲೇ ಪರಮ ಶ್ರೇಷ್ಟತೆಯನ್ನು ಹೊಂದಿರುವಂತಹುದು ಎಂಬ ಸತ್ಯವನ್ನು ಅದೇಗೆ ಅವರುಕಂಡುಕೊಂಡರು ಎಂಬುದು ಅಸ್ಪಷ್ಟ. ಆದರೆ ಪೂರ್ವಜರಿಂದ ಪಡೆದ ಪದ್ಧತಿಗಳನ್ನು ಜತನದಿಂದ ಕಾಯ್ದು ನಮ್ಮವರು ಇಲ್ಲಿಯವರೆಗೂ ದಾಟಿಸಿಕೊಂಡು ಬಂದಿರುವುದು ವೈಜ್ಞಾನಿಕ ಚಿಂತನೆಯಿಂದಲ್ಲಬದಲಾಗಿ ಅವರಿಟ್ಟಿರುವ ನಂಬಿಕೆಗಳಿಂದ ಎಂಬುದು ಸ್ಪಷ್ಟ. ಆದರೆ ಒಂದುಕಾಲದಲ್ಲಿ ಬರೇ ನಂಬಿಕೆ, ಮೌಢ್ಯವೆಂಬಂತಿದ್ದ ಈ ಪದ್ಧತಿಯನ್ನುಇಂದು ವಿಜ್ಞಾನ ಕೂಡ ವೈಜ್ಞಾನಿಕ ಸತ್ಯ ಎಂದು ಒಪ್ಪಿಪುರಸ್ಕರಿಸಿದೆ. ಇಂತಹುದು ಹಲವಾರಿದೆ.ಹುಣಸೇ ಮರವು ಭೂತಗಣಗಳಿಗೆ ಆಶ್ರಯವೀಯುತ್ತದೆಯಾದ್ದರಿಂದ ಅದರಡಿಯಲ್ಲಿ ಮಲಗಬಾರದೆನ್ನುವುದು, ಅಶ್ವತ್ಥ ಮರಕ್ಕೆ ಬೆಳಗ್ಗೆದ್ದು ಸುತ್ತುಹೊಡೆಯಬೇಕು ಎನ್ನುವುದು, ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎನ್ನುವುದುಗಳೆಲ್ಲಾ ನಮ್ಮ ಪೂರ್ವಜರ ನಂಬಿಕೆಗಳು. ಆದರೆ ಇಂದು ವಿಜ್ಞಾನ ಕೂಡ ಇವೆಲ್ಲವನ್ನೂ ಹೌದು-ಹೌದೆನ್ನುತ್ತದೆ.ಮೊದಲನೆಯದಕ್ಕೆ ಹುಣಸೆ ಮರವು ಕಾರುವ ಕಾರ್ಬನ್ ಡೈ ಆಕ್ಸೈಡ್ ಕಾರಣವೆಂದರೆ, ಎರಡನೇ ಸತ್ಯಕ್ಕೆಅಶ್ವತ್ಥ ಮರವು ಕಕ್ಕುವ ಆಮ್ಲಜನಕ ಕಾರಣವೆನ್ನುತ್ತದೆ ವಿಜ್ಞಾನ. ಇನ್ನು ಮೂರನೆಯದಕ್ಕೆಭೂಮಿಯ ಗುರತ್ವಾಕರ್ಷಣಾ ಶಕ್ತಿಯ ಕಾರಣವನ್ನು ನೀಡಿ ನಮ್ಮ ನಂಬಿಕೆಗಳನ್ನೇ ವಿಜ್ಞಾನ ಸತ್ಯಗಳೆಂದು ಒಪ್ಪಿಕೊಂಡಿವೆ. ವಿಜ್ಞಾನ ಒಪ್ಪುವ ಮೊದಲೇ ಈ ಸತ್ಯಗಳನ್ನು ನಮ್ಮವರು ಆಚರಿಸುತ್ತಿದ್ದರುಎಂದರೆ ಅವರು ಕೂಡ ಒಂದಲ್ಲ ಒಂದು ವಿಧದಲ್ಲಿ ನಮ್ಮಷ್ಟೇ ಅಥವಾ ನಮಗಿಂತಲೂ ಬುದ್ಧಿವಂತರಾಗಿದದ್ದರು ಎಂದರ್ಥವಲ್ಲವೇ? ಪೂರ್ವಜರ ಇಂತಹ ನಂಬಿಕೆಗಳಲ್ಲಿ ಕೆಲವೊಂದು ವೈಜ್ಞಾನಿಕತೆಯನಿಲುಕಿಗೆ ಸಿಕ್ಕಿವೆ. ಇನ್ನೆಷ್ಟೋ ನಿಗೂಢವಾಗಿಯೇ ಇದೆ. ಆದರೆ ವಿಜ್ಞಾನದ ಪರಿಧಿಗೆ ಸಿಕ್ಕಿಲ್ಲವೆನ್ನುವ ಒಂದೇ ಕಾರಣಕ್ಕೆ ನಮ್ಮ ಪೂರ್ವಜರು ಹೇಳಿಕೊಟ್ಟ ಆಚರಣೆಗಳೆಲ್ಲವನ್ನೂ ಹೀಗಳೆಯುವುದು,ಮೌಢ್ಯವೆನ್ನುವುದು ಅದು ನಮ್ಮ ಮೂರ್ಖತನವೆನಿಸದೆ!?

ಹೌದು, ಈ ಭೂಮಿ ಮೇಲೆ ಮಾನವಜೀವಿ ಬದುಕುತ್ತಿರುವುದು ಹಾಗೂ ಈವರೆಗೆ ಬದುಕಿ ಬಂದಿರುವುದು ನಂಬಿಕೆಗಳಿಂದ ಎಂಬುದರಲ್ಲಿ ಎರಡು ಮಾತಿಲ್ಲ. ನಂಬಿಕೆಗಳಿಲ್ಲದೇ ಬರೇ ವೈಜ್ಞಾನಿಕಸತ್ಯಗಳಲ್ಲಷ್ಟೇ ಬದುಕುತ್ತೇವೆ ಎನ್ನುವುದು ಆಚರಣೆಗೆ ನಿಲುಕದ ಬರೇ ಮಾತಾಗುತ್ತದೆಯಷ್ಟೇ! ಯಾಕೆಂದರೆ ಹುಟ್ಟಿದ ಮಗುವಿಗೆ ತನ್ನ ತಂದೆ ಯಾರೆಂಬುದು ಕೂಡ ಒಂದು ನಂಬಿಕೆಯ ಮೇಲೆನಿಂತಿರುವ ವಿಷಯವೇ ಹೊರತು ಬೇರೇನಲ್ಲ! ಅಂದರೆ ಅದ್ಯಾವನೂ ಕೂಡ ತನ್ನ ತಂದೆ ಯಾರೆಂಬುದಕ್ಕೆ ವಿಜ್ಞಾನ ಬಯಸುವ ಅದ್ಯಾವುದೇ ಸರ್ಟಿಫಿಕೇಟ್ ಹೊಂದಿರುವುದಿಲ್ಲ! ವಿಜ್ಞಾನ ಸತ್ಯತೆಯನ್ನುನೀಡಬಹುದು, ಬದುಕು ಹಾದಿಗೆ ಸವಲತ್ತುಗಳನ್ನು ನೀಡಿರಬಹುದು. ಆದರೆ ಬದುಕಬೇಕೆನ್ನುವ ಭರವಸೆ ನೀಡುತ್ತಿರುವುದು ನಮ್ಮ ನಂಬಿಕೆಗಳೇ ಹೊರತು ವಿಜ್ಞಾನವಲ್ಲ. ಸಂಪ್ರದಾಯಗಳು,ನಂಬಿಕೆಗಳು ತೋರಿಕೆಗೆ ಅಸಂಬದ್ಧವಾಗಿ ಗೋಚರಿಸಬಹುದು.ಮೂಢನಂಬಿಕೆಗಳೆನ್ನಿಸಬಹುದು.ಆದರೆ ಅದರ ಹಿಂದೆಯೂ ಇರುವುದು ಸಾಮಾಜಿಕ ಕಳಕಳಿಯೇ. ಅಲ್ಲಿ ಹೇಳುವ ವಿಧಾನ ಮಾತ್ರ ಬೇರೆಇರಬಹುದು ಅಷ್ಟೇ. ಒಂದು ನಂಬಿಕೆ ಒಬ್ಬರಿಗೆ ಮೂಢನಂಬಿಕೆಯಾಗಿ ಕಾಣಬಹುದು. ಇನ್ನೊಬ್ಬರಿಗೆ ಅದು ಪ್ರಯೋಜನಕಾರಿ ಎಂದೆನ್ನಿಸಲೂಬಹುದು. ಹೆಣ ಸುಡುವ ಭೂಮಿ ನೆಗೆಟಿವ್ ಎನರ್ಜಿಯನ್ನುಅತಿಯಾಗಿ ಪಡೆದುಕೊಂಡಿರುವುದರಿಂದ ಅಲ್ಲೆಲ್ಲಾ ಅಡ್ಡಾಡಬಾರದು ಎಂಬುದು ನಮ್ಮ ಪೂರ್ವಜರು ಇಟ್ಟಿರುವ ಕಟ್ಟುಪಾಡು. ಅದನ್ನೇ ಮೂಢನಂಬಿಕೆ ಎನ್ನುತ್ತಾ ಅಲ್ಲೇ ಬಾಡೂಟ ಮಾಡಿ ತಿಂದು ತೇಗಿನನಗೇನು ಆಗೇ ಇಲ್ಲ ಎಂದು ಆನಂದಿಸಿದವರೂ ಇರಬಹುದು! ದೇವಸ್ಥಾನ ಮಠ ಮಂದಿರಗಳ ಒಳಗೆ ಹೋಗುವಾಗ ಹಾಗೂ ಸ್ಮಶಾನದ ಒಳಗೆ ಹೋಗುವಾಗ ಮನಸ್ಥಿತಿಯಲ್ಲಾಗುವ ಸೂಕ್ಷ್ಮಬದಲಾವಣೆಯನ್ನು ಅದರ ಮೇಲೆ ನಂಬಿಕೆ ಇರುವವನಿಗಷ್ಟೇ ಅರ್ಥವಾಗಬಲ್ಲುದು. ಮಿಕ್ಕವರಿಗೆ ಅದೊಂದು ಮೂಢನಂಬಿಕೆಯಷ್ಟೇ. ವಿಜ್ಞಾನದಿಂದಲೂ ದುಷ್ಟರಿಣಾಮಗಳಿರುವ ಹಾಗೇನಂಬಿಕೆಗಳಿಂದಲೂ ದುಷ್ಟರಿಣಾಮಗಳು ಇದಿರಾಗಬಹುದು. ನಮ್ಮ ಆಚರಣೆಗಳು ಇನ್ನೊಬ್ಬರ ಬದುಕಿಗೆ ಕೊಳ್ಳಿ ಇಡದಿದ್ದರಷ್ಟೇ ಸಾಕು. ಫಲ ಜೋತಿಷ್ಯ, ಸಂಖ್ಯಾಶಾಸ್ತ್ರ, ಮಂತ್ರ-ತಂತ್ರಗಳೆಂಬವಾಮಾಚಾರ ಇಂದು ಕೆಲವರ ಕೈಯಲ್ಲಿ ಕೆಲವು ಪ್ರದೇಶಗಳಲ್ಲಿ ಕೆಟ್ಟದಾಗಿ ಬೆಳೆದಿರಬಹುದು. ಆದರೆ ಇಂತಹ ಜನರ ನಂಬಿಕೆಗಳ ತಡೆಗೆ ಬೇಕಾಗಿರುವುದು ಕಾನೂನುಗಳಲ್ಲ. ಬದಲಾಗಿ ಶೈಕ್ಷಣಿಕಕ್ರಾಂತಿ. ಹೆಂಡತಿ ಮಕ್ಕಳನ್ನು ಬೀದಿಗೆ ಅಟ್ಟುವ ಶೇಂದಿ ಸಾರಾಯಿ ಅಂಗಡಿಗಳಿಗೆ ಮತ್ತಷ್ಟು ಅನುಮತಿ ನೀಡುತ್ತಾ, ಜರ್ದಾ, ಗುಟ್ಕಗಳ ಮೇಲೆ ನಿಷೇಧವೀಯದೆ ಬರೇ ಒಂದು ವರ್ಗದ ಜನರನಂಬಿಕೆಗಳ ವಿರುದ್ಧ ಕಾನೂನು ಮಾಡುತ್ತೇವೆ, ತಡೆಯುತ್ತೇವೆ ಎಂದಾಗ ಸರಕಾರದ ಮೇಲೆ ಜನರಿಗೆ ಭರವಸೆ ಹುಟ್ಟುವುದಕ್ಕಿಂತಲೂ ಜಾಸ್ತಿ ಸಂಶಯವೇ ಹುಟ್ಟವುದು!

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!