ಅಂಕಣ

ಕೇವಲ ಒಂದೇ ಒಂದು ಮಾತಿನಿಂದ ವಿಶ್ವದ ಮನೆಮಾತಾದ ಯುವ ಸನ್ಯಾಸಿ…

  ಇವರು ಬಾಲ್ಯದಲ್ಲಿ ಮಹಾ ತುಂಟ…  ಬಾಲ್ಯದಲ್ಲಿ ಹೆಚ್ಚಿನ ಬಾಲಕರು ಹಾಗೆಯೇ ಇರುತ್ತಾರೆ ಬಿಡಿ.. ಹಾಗಿದ್ದರೆ ಚೆಂದ .. ಲವಲವಿಕೆಯಿಂದಲೇ ಇರಬೇಕು… ಪ್ರತಿನಿತ್ಯ ಒಂದಿಲ್ಲೊಂದು ತುಂಟತನ ಮಾಡುತ್ತಲೇ ಇದ್ದ ಪುಟ್ಟ ಬಾಲಕ … ಆದರೆ ಇವನ ತುಂಟತನದಿಂದ ಬೇಸರಗೊಂಡ ತಾಯಿ ಒಂದು ಕೋಣೆಯಲ್ಲಿ ಕೂಡಿ ಹಾಕಿದಳು… ಮೊದಲೇ ಆ ಬಾಲಕ ತುಂಟ … ಯಾವುದಕ್ಕೂ ಅಂಜಲೇ ಇಲ್ಲ… ಎಲ್ಲಿಂದ ಅಷ್ಟೊಂದು ಧೈರ್ಯವಿತ್ತೋ ಅವನಲ್ಲಿ . ಅದೇ ಕೋಣೆಯಲ್ಲಿ ಕೊಂಚ ಸಮಯ ಮೌನ ಧ್ಯಾನಕ್ಕೆ ಕುಳಿತ . ಇತ್ತ ಅವನ ತಾಯಿ ತನ್ನ ನಿತ್ಯ ಕಾಯಕದಲ್ಲಿ ತೊಡಗಿದ್ದಳು… ಅಬ್ಬ ಅವನ ಕಾಟ ತಪ್ಪಿತಲ್ಲ ಎಂದು ಮನದಲ್ಲಿಯೇ ಅಂದುಕೊಂಡಿದ್ದಳು.  ಬಾಲಕ ತುಂಟನಾದರೂ ಅವನಲ್ಲಿ ಮುಗ್ಧನಾಗಿದ್ದ.. ಆ ತನ್ನ ಸಣ್ಣ ವಯಸ್ಸಿನಲ್ಲಿಯೇ ತನ್ನಲ್ಲಿದ್ದದ್ದನು ಪರರಿಗೆ ಧಾನ ಮಾಡುತ್ತಿದ್ದ… ಸಮಯ ಕಳೆದು ಮಧ್ಯಾಹ್ನವಾಯಿತು. ಮೌನ ಧ್ಯಾನದಲ್ಲಿದ್ದ ಆ ಬಾಲಕನಿಗೆ ಅದೆಲ್ಲಿಂದಲೋ ಆರ್ತನಾದ ಕೇಳಿಸಿತು. ಅದು ಭಿಕ್ಷುಕಿಯದ್ದಾಗಿತ್ತು.. ಕೊಂಚ ಸಮಯ ಬಿಟ್ಟು ನೋಡಿದಾದ ಆ ಭಿಕ್ಷುಕಿಯ ಸ್ವರ ತನ್ನ ಮನೆಯ ಹತ್ತಿರಕ್ಕೆ ಬರುತ್ತಿದ್ದನ್ನು ಬಾಲಕ ತನ್ನಷ್ಟಕ್ಕೆ ಗಮನಿಸುತ್ತಿದ್ದ… ಬಾಲಕನ ತಾಯಿ ತಾನು ತಯಾರಿಸಿದ್ದ ಅಡುಗೆಯಲ್ಲಿ ಆ ಭಿಕ್ಷುಕಿಗೆ ನೀಡಿದಳು .. ಇದನ್ನೆಲ್ಲಾ ಆ ಬಾಲಕ ಕೋಣೆಯಿಂದಲೇ ಗಮನಿಸುತ್ತಿದ್ದ .. ಭಿಕ್ಷುಕಿ ತನಗೆ ನೀಡಿದ ಆಹಾರವನ್ನು ತೆಗೆದುಕೊಂಡು. ಹೊರಟಳು. ಹತ್ತರಿಂದ ಹದಿನೈದು ಹೆಜ್ಜೆ ಮುಂದಿದುವಷ್ಟರಲ್ಲಿ ಇಳಿ ಧ್ವನಿಯಲ್ಲಿ ಅವಳನ್ನು ಕರೆದು.. ಮಾತನಾಡಿಸಿ.. ಅಲ್ಲೇ ಇದ್ದ ತನ್ನ ಅಮ್ಮನ ಸೀರೆಯನ್ನು ಕೋಣೆಯ ಕಿಟಕಿಯಿಂದಲೇ ಹೊರ ಎಸೆದೇ ಬಿಟ್ಟ. ಅದು ಅಮ್ಮನ ಅರಿವಿಗೆ ಬಂತು. ತನ್ನ ಮಗನನ್ನು ಶಿಕ್ಷಿಸಬೇಕೋ, ಮೆಚ್ಚಿಕೊಳ್ಳಬೇಕೋ ಎಂದು ತಿಳಿಯದೇ ಗೊಂದಲಕ್ಕೊಳಗಾಗಿ ಬಿಗಿದಪ್ಪಿಕೊಂಡಳು. ಈ ಒಂದು ಘಟನೆಯೇ ಸಾಕು ಪುಟ್ಟ ಬಾಲಕ ಎಂಥಹಾ ಧಾನಶೂರನಾಗಿದ್ದನೆಂದು ತಿಳಿಯಲು…

ಇಷ್ಟೆಲ್ಲಾ ಹೇಳಿದ ಮೇಲೆ ಈ ಬಾಲಕ ಯಾರೆಂದು ಹೇಳಲೇಬೇಕಲ್ಲವೇ? ಗೊಂದಲಬೇಡ… ಈತನ ಜನನ1863ನೇಯ ಜನವರಿ 12 ರಂದು ಕೊಲ್ಕತ್ತಾದಲ್ಲಿ ಆಯಿತು… ಪೂರ್ವಾಶ್ರಮದ ಅಂದರೆ ಬಾಲ್ಯದ ಹೆಸರು ‘ನರೇಂದ್ರ ದತ್ತ ..’ ತಾಯಿ ಭುವನೇಶ್ವರಿ ಮತ್ತು ತಂದೆ ವಿಶ್ವನಾಥ ದತ್ತ ದಂಪತಿಗಳ ಸುಪುತ್ರ..ತಂದೆ ವಕೀಲ ವೃತ್ತಿ ಮಾಡುತ್ತಿದ್ದರು . ತಾಯಿ ಗೃಹಸ್ಥೆಯಾಗಿದ್ದರು. ಬಾಲ್ಯದಿಂದಲೇ ರಾಮಾಯಣ ಮಹಾಭಾರತದಂತಹಾ ಪೌರಾಣಿಕ ಕಥೆಗಳನ್ನು ತನ್ನ ತಾಯಿಯ ಬಾಯಿಂದ ಕೇಳಿ ತಿಳಿದುಕೊಂಡಿದ್ದ. ದೇವರ ಮೇಲೆ ಅಗಾಧ ಭಕ್ತಿ.. ಅನುಮಾನ ಬಂದೊಡನೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದ… ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೆ ಸುಮ್ಮನಿರುತ್ತಿರಲಿಲ್ಲ.. ನರೇಂದ್ರನ ತಾಯಿ ಮಾತು ಮಾತಿಗೂ ಕೆಟ್ಟ ಕೆಲಸ ಮಾಡಿದರೆ ದೇವರು ಶಿಕ್ಷೆ ಕೊಡುತ್ತಾನೆ ಎನ್ನುತ್ತಿರುತ್ತಾಳೆ… ಒಂದು ದಿನ ಸುಮ್ಮನಿರಲಾರದೆ ನರೇಂದ್ರ ದೇವರು ಅಂದರೆ ಯಾರು ? ಎಲ್ಲಿರುತ್ತಾನೆ ? ಹೇಗಿರುತ್ತಾನೆ ? ಇತ್ಯಾದಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಾನೆ… ತಾಯಿ ಕೊಟ್ಟ ಉತ್ತರ ನರೇಂದ್ರನಿಗೆ ಸರಿಯೆನಿಸಿರಲಿಲ್ಲ… ಉತ್ತರ ದೊರಕುವವರೆಗೆ ಸುಮ್ಮನಿರಲಿಲ್ಲ …

 ಕೊನೆಗೆ ಉತ್ತರ ದೊರಕ್ಕಿದ್ದು ಗುರುಗಳಾದ ರಾಮಕೃಷ್ಣರಿಂದಲೇ …!

      ಮುಂದೆ ರಾಮಕೃಷ್ಣರಿಂದಲೇ ಸನ್ಯಾಸ ದೀಕ್ಷೆಯನ್ನು ಪಡೆದರು. ಮೊದಲಿಗೆ ಅವರಿಗೆ ಸಚ್ಚಿದಾನಂದ ಎಂದು ನಾಮಕರಣ ಮಾಡಲಾಯಿತು.. ಕಾಲಕ್ರಮೇಣ ಅದು ವಿವೇಕಾನಂದ ಎಂದಾಯಿತು… ಇದೇ ನಾಮದೇಯದಿಂದ  ವಿಶ್ವವಿಖ್ಯಾತರಾದರು…

             1893ರ ಸೆಪ್ಟೆಂಬರ್ 11ರಂದು ಅಮೇರಿಕಾದ ಚಿಕಾಗೋ ದಲ್ಲಿ ಸರ್ವಧರ್ಮದ ಸಮ್ಮೇಳನವು ಏರ್ಪಾಡಾಗಿತ್ತು… ಅದರಲ್ಲಿ ಭಾಗವಹಿಸುವ ಆಸೆಯಿಂದ ವಿವೇಕಾನಂದರು ಅಮೇರಿಕಾದ ಕಡೆಗೆ ಹೋದರು .. ಆದರೆ ಆ ಸಮ್ಮೇಳನದಲ್ಲಿ ಭಾಗವಹಿಸಲು ಅವರಿಗೆ ಯಾವುದೇ ಒಬ್ಬ ವ್ಯಕ್ತಿಯ ಪರಿಚಯವೂ ಇರಲಿಲ್ಲ.. ಹಡಗಿನಲ್ಲಿ ಪ್ರಯಾಣದ ಸಂದರ್ಭ ಒಬ್ಬ ಮಹಿಳೆಯ ಪರಿಚಯ ಅವರಿಗಾಗಿತ್ತು.. ಆ ಮಹಿಳೆಯ ಸಹಾಯದಿಂದ ಸುಪ್ರಸಿದ್ದ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜೆ.ಹೆಚ್,ರೈಟ್’ರ ಪರಿಚಯ ಸಂಪಾದಿಸಿಕೊಂಡು… ಸರ್ವಧರ್ಮ ಸಮ್ಮೆಳನದಲ್ಲಿ ಭಾಗವಹಿಸಿದರು… ಅಲ್ಲಿ ಭಾಗವಹಿಸಿದ್ದ ಹಲವು ಧರ್ಮದ ಧರ್ಮಗುರುಗಳು ತಮ್ಮ ತಮ್ಮ ಧರ್ಮವನ್ನು ವಿವರಿಸಿದರು… ಕೊನೆಯಲ್ಲಿ ತಮ್ಮ ಸರದಿ ಬಂದೇ ಬಿಟ್ಟಿತು… ಯಾವುದೇ ಪೂರ್ವ ತಯಾರಿಯಿರಲಿಲ್ಲ.. ಹಿಂಜರಿಕೆಯಿಂದಲೇ ತಮ್ಮ ಭಾಷಣವನ್ನು ಪ್ರಾರಂಭಿಸಿದರು..  “ಅಮೇರಿಕಾದ ಸೋದರ ಸೋದರಿಯರೇ …” ಎಂಬ ಪ್ರಾರಂಭದ ಮಾತು ಕೇಳಿ ಅಲ್ಲಿ ನೆರೆದಿದ್ದ ಜನರೆಲ್ಲಾ ಕ್ಷಣ ಮಾತ್ರದಲ್ಲೇ ಅವಕ್ಕಾಗಿ ಮೆಚ್ಚಿ ಚಪ್ಪಾಳೆಗಳ ಸುರಿಮಳೆಯನ್ನೇ ಸುರಿಸಿದರು. ಅಮೇರಿಕಾದಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಸಾಮಾನ್ಯದ ವಿಷಯವೇ ಅಲ್ಲ… ಇಡೀ ಸಭೆಯಲ್ಲಿ ಮೌನ ಆವರಿಸಿತ್ತು… ಪ್ರಾರಂಭದಿಂದ ಕೊನೆಯವರೆಗೆ ವಿವೇಕಾನಂದರ ಭಾಷಣವನ್ನು ಒಂದೇ ಚಿತ್ತದಿಂದ ಆಲಿಸಿದರು…

         ಅಲ್ಲಿಯವರೆಗೆ ಭಾರತವನ್ನು ಹಾವಾಡಿಗರ ದೇಶವೆಂದು ಹೀಯಾಳಿಸುತ್ತಿದ್ದ ವಿದೇಶಿಯರ ಬಾಯಿಗೆ ಬೇಗವೇ ಬಿತ್ತು…  ಈ ಭಾಷಣದಿಂದ ಭಾರತ ಬಿಡಿ ಇಡೀ ವಿಷ್ವವೇ ಬೆರಗಾಗಿದ್ದಂತೂ ಸತ್ಯ.. ಹೇ ಭಿಕ್ಷುಕ ತೊಲಗಿಲ್ಲಿಂದ ಎಂದಿದ್ದ ದೇಶದಲ್ಲಿ ರಾಜ ಮರ್ಯಾದೆ.   ಅಂದೇ ಭಾರತದ ಒಬ್ಬ ವ್ಯಕ್ತಿಯಿಂದ ವಿಶ್ವದ ದೊಡ್ಡಣ್ಣ ಅಮೇರಿಕಾದ ಗರ್ವಭಂಗವಾಗಿತ್ತು.  ಕೆಲವರಂತೂ ತಮಗೂ ನಿಮ್ಮ ಶಿಷ್ಯರಾಗಲು ಅವಕಾಶ ಕೊಡಿ ಎಂದು ಅಂಗಲಾಚಿದರು.. ಅಲ್ಲಿಂದ ಬರುವಾಗ ಒಬ್ಬ ಮಹಿಳೆ (ಮಾರ್ಗರೆಟ್ ಎಲಿಜಬೆತ್ ನೊಬೆಲ್ ) ಅವರೊಂದಿಗೆ ಭಾರತಕ್ಕೆ ಬಂದಳು… ಆ ಮಹಿಳೆಯೇ ಸನ್ಯಾಸ ದೀಕ್ಷೇ ಪಡೆದು ಭಗಿನಿ ನಿವೇದಿತಾ ಎಂದು ಪ್ರಸಿದ್ಧರಾದರು…

        ಆದರೆ ಇಂದು ಸ್ವಾಮಿ ವಿವೇಕಾನಂದರು ನಮ್ಮೊಂದಿಗೆ ಇಲ್ಲ… ಅವರು ಕೊಟ್ಟ ಮೈನವಿರೇಳಿಸುವ ಕರೆ ಇಂದಿಗೂ ಮಲಗಿರುವ ಯುವ ಜನತೆಯನ್ನು ಎಬ್ಬಿಸುತ್ತದೆ.. ಇವರ ತತ್ವ ಆದರ್ಶವೇ ಯುವಕರಿಗೆ ದಾರಿದೀಪ ಮಾದರಿ ಮಾರ್ಗದರ್ಶಿ. ಬಹುಷ: ವಿವೇಕಾನಂದರ ಪೂರ್ವಾಶ್ರಮದ ತಾಯಿಯೂ ಅಂದುಕೊಂಡಿರಲಿಕ್ಕಿಲ್ಲ ತನ್ನ ಮಗ ಮುಂದೆ ಇಡೀ ವಿಶ್ವದ ಯುವಕರಿಗೆ ಮಾದರಿಯಾಗುತ್ತಾರೆಂದು. ಭಾರತವನ್ನು ವಿಶ್ವಕ್ಕೆ ಪರಿಚಯಿಸಿ ಭಾರತದ ಕೀರ್ತಿ ಪತಾಕೆಯನ್ನು ಮೇರು ಪರ್ವತದ ಎತ್ತರಕ್ಕೆ ಏರಿದವರು ಈ ವಿವೇಕಾನಂದರು.ಇವರಂತಹಾ ದೇಶಪ್ರೇಮಿ ಯುವ ಸನ್ಯಾಸಿ ಬೇರೊಬ್ಬರಿಲ್ಲ..!!!

ಜನವರಿ 12ರಂದು ಯುವ ದಿನಾಚರಣೆಯನ್ನು ಆಚರಿಸುವ ಮೂಲಕ ಇಡೀ ವಿಶ್ವಕ್ಕೆ ಸೋದರತ್ವವನ್ನು ಸಾರಿದ ಮಹಾನ್ ಮಾನವತವಾದಿ  ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸೋಣ
ಭಾರತವನ್ನು ವಿಶ್ವಗುರು ಎಂದು ಮತ್ತೊಮ್ಮೆ ಸಾಬೀತು ಪಡಿಸೋಣ. ನಮ್ಮ ಗುರಿ ಮುಟ್ಟುವ ತನಕ ನಿಲ್ಲದಿರೋಣ…
ವಂದೇ ಭಾರತ ಮಾತರಂ…

Jagat bhat

jagath.bhat@yahoo.com

Facebook ಕಾಮೆಂಟ್ಸ್

ಲೇಖಕರ ಕುರಿತು

Jagath Bhat

ಜಗತ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಯಕ್ಷಗಾನ, ಛಾಯಾಗ್ರಹಣ ಮತ್ತು ಬರವಣಿಗೆ ಇವರ ಹವ್ಯಾಸ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!