ಅಂಕಣ

ಹಿಂದೂ ಅಧ್ಯಾತ್ಮ ಮತ್ತು ಸೇವಾ ಸಮ್ಮೇಳನ

Hindu Spiritual and Service Fair (HSSF) ಅಥವ ಹಿಂದೂ ಅಧ್ಯಾತ್ಮ ಮತ್ತು ಸೇವಾ ಸಮ್ಮೇಳನವೂ ಸತತ ಐದು ದಿನಗಳವರೆಗೂ 9th – 13th ಅಂದರೆ ಇದೇ ಮಾಸದಲ್ಲಿ ಬುಧವಾರದಿಂದ ಭಾನುವಾರದವರೆಗೆ ನಡೆಯಿತು. ಇದು ಬೆಂಗಳೂರಿನ ನಾಷನಲ್ ಕಾಲೇಜು ಮೈದಾನದಲ್ಲಿ ನಡೆದದ್ದು. ಭಾರಿ ಮಾತ್ರದಲ್ಲಿ ಜೋರಾಗಿಯೇ ಈ ಸಮ್ಮೇಳನ ನೆರೆವೇರಿತು, ಇದು ಕೇಲವ ಸಮ್ಮೇಳನವಾಗಿರಲಿಲ್ಲ. ದೇಶೀಯ ಅಧ್ಯಾತ್ಮ ಮತ್ತು ಸೇವಾ ಸಂಘಟನೆಗಳ ವಿರಾಟ ರೂಪದ ದರ್ಶನವಾಗಿತ್ತು.

ಸೇವೆಯ ವಿಷಯವಾಗಿ ನಮ್ಮಲ್ಲಿ ಒಂದು ತಪ್ಪು ಕಲ್ಪನೆ ಇದೆ. ಅದೇನಪ್ಪಾ ಅಂದರೆ ಕ್ರೈಸ್ತ ಮತದವರು ಮಾತ್ರ ಸೇವಾ ಚಟುವಟಿಕೆಗಳನ್ನು ಮಾಡುತ್ತಾರೆ, ಬೆರೆಯವರಲ್ಲಾ ಎಂದು. ನಿಜ, ಕ್ರೈಸ್ತರಲ್ಲಿ ಸುಮಾರು NGOಗಳು ನಿರಂತರವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಹಿಂದೂ ಧರ್ಮದಿಂದ ಪ್ರೇರಿತವಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಸಹಸ್ರಾರು ಸಂಘಟನೆಗಳ ಪರಿಚಯ ನಮಗಿಲ್ಲವಾಗಿದೆ. ಈ ಸಮ್ಮೇಳನ ಈ ವಿಚಾರವಾಗಿ ಒಂದು “eye-opener” ಎಂದೇ ಹೇಳಬಹುದು.

December 9ರಂದು ಕರ್ನಾಟಕದ ರಾಜ್ಯಪಾಲರಾದಂತಹ ವಜ್ಜುಭಾಯ್ ವಾಲ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದರು. ಒಟ್ಟು 5 ದಿನಗಳಲ್ಲಿ ಸರಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಸೇರಿರುವ ಅಂದಾಜಿದೆ. ಈ ಹಿಂದೇ ಇದೇ ಸಮ್ಮೆಳನವು ಜೈಪುರ ಹಾಗು ಚೆನ್ನೈನಲ್ಲಿ ನೆರವೇರಿತ್ತು. ಕರ್ನಾಟಕದಲ್ಲಿ ಇದೇ ಮೊದಲನೆಯದು.

ನಾಷನಲ್ ಕಾಲೇಜ್ ಮೈದಾನದ ಮುಖ್ಯದ್ವಾರದಿಂದ ಪ್ರವೇಶ ಮಾಡಿದ್ದಲ್ಲಿ ಸಭಾಂಗಣಕ್ಕೆ ದಾರಿಯಾಗಿತ್ತು. ಅಲ್ಲಿಂದ ಚೂರು ಮುಂದೆ ಬಲಕ್ಕೆ ತಿರುಗಿದಲ್ಲಿ ತಬೇಲಿಗಳಿದ್ದವು (stalls). ಸತತವಾಗಿ ದಿನಕ್ಕೆ ಒಂದು ಪರಿಕಲ್ಪನೆ ಎಂಬಂತೆ, ನಾಲ್ಕು ದಿನಗಳಲ್ಲಿ ನಾಲ್ಕು ನಿರೂಪಗಳ ಪ್ರದರ್ಶನವಿತ್ತು. ಅವು ಈ ರೀತಿಯಾಗಿದ್ದವು:-

೧. ಮಾತೃ ವಂದನ

೨. ಗೌ-ಗಂಗಾ ವಂದನ

೩. ಪ್ರಕೃತಿ ವಂದನ

೪. ಪರಮ ವೈಭವ (ವೀರ/ಯೋಧರ ಸ್ಮರಣೆ/ವಂದನೆ)

ಮೊದಲನೆಯ ದಿನ ಉದ್ಘಾಟನಾ ಸಮಾರಂಭವಾಗಿತ್ತು (ಎಲ್ಲ ಸೇರಿ ಐದು ದಿನಗಳು).

ಇನ್ನು ಸ್ಟಾಲ್ಗಳದ್ದೆ ವಿಶೇಷ. ಅಲ್ಲಿ ಪುಸ್ತಕಗಳ ಸಂತೆಯೇ ಇತ್ತು. ಎಲ್ಲೆಡೆ ದುರ್ಲಭವಾದ ಪುಸ್ತಕಗಳು ಇಲ್ಲಿ ಮಾರಟಕ್ಕೆ ಇದ್ದವು. ರಿಯಾಯ್ತಿ ದರದಲ್ಲಿ ಪುಸ್ತಕಗಳು ಲಭ್ಯವಿದ್ದವು. ಸೇವಾ ಚಟುವಟಿಕೆಗಳ ಅಂದರೆ NGOಗಳ ಸ್ಟಾಲ್ಗಳು ಕೂಡ ಇದ್ದವು. ಅನಾಥ ಮಕ್ಕಳಿಗೆ ಬಿಡಾರ-ಆಶ್ರಯಗಳು, ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು, ಯೋಗ ಮತ್ತು ಆರೋಗ್ಯದ ಕ್ಷೇತ್ರ, ಅಧ್ಯಾತ್ಮ, ಬಡವರ ಏಳಿಗೆ, ದೀನ-ದಲಿತರ ಏಳಿಗೆ, ಸಾವಯವ ಕೃಷಿ, ಪ್ರಕೃತಿ ಸಂಪನ್ಮೂಲ ಸಂರಕ್ಷಣೆ, ಸಮಾಜದಲ್ಲಿ ಇದೇ ರೀತಿ ಬೇರೆ ಬೇರೆ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಅನೇಕ ಸಂಘ-ಸಂಸ್ಥೆಗಳು ಇಲ್ಲಿದ್ದವು. ಇನ್ನು ಸ್ವದೇಶಿ ‘food court’ ಕೂಡ ಇತ್ತು. ಸಾವಯವ ಕೃಷಿಯಿಂದ ಮಾಡಲ್ಪಟ್ಟ ತಿಂಡಿ-ತಿನಿಸುಗಳಿದ್ದವು. ಇಲ್ಲಿನ ಶಾವಿಗೆ ಬಾತ್, ರಾಗಿ ನಿಪ್ಪಟ್ಟು, ಮತ್ತು ಪೈನಾಪಲ್ ಮಸಾಲ ಬಂದ ಜನರಲ್ಲಿ ಹೆಚ್ಚು ನೀರು ತಂದಿತು.

ಇದಲ್ಲದೆ 2 ವಿಶೇಷ ಪ್ರದರ್ಶನಾ ಮಂಟಪಗಳಿದ್ದವು. ಒಂದು ಸಾಧಕರ ಕುರಿತಾಗಿ ಅಂದರೆ ವಿಜ್ಞಾನಿಗಳು, ಸಂತರು, ಕ್ರಾಂತಿಕಾರಿಗಳು, ಋಷಿಗಳಿ, ರಾಜರು, ಮತ್ತು ಹೀಗೆ ಎಲ್ಲಾ ಸಾಧಕರ ಮಂಟಪವಾದರೆ, ಮತ್ತೊಂದು ಹಿಂದೂ ಆಚರ-ವಿಚಾರಗಳ ಕುರಿತಾಗಿ ಅಂದರೆ ॐ ಕಾರ, ನಮಸ್ಕಾರ, ಯೋಗ,ಶ್ಲೋಕ-ಮಂತ್ರಗಳು, ಇತ್ಯಾದಿ ವಿಷಯಗಳ ಕುರಿತಾಗಿ ಇದ್ದವು. ಇನ್ನು ಜನರ ಉತ್ಸುಕತೆಯ ಬಗ್ಗೆ ಕೆಳೋಹಾಗೇ ಇಲ್ಲ. ಲಕ್ಷಾಂತರ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಶ್ರೀ ಶ್ರೀರವಿಶಂಕರ್ ಗುರೂಜಿ, ಚಕ್ರವರ್ತಿ ಸೂಲಿಬೆಲೆ, ಇನ್ನು ಮತ್ತಿತರ ಮಹನೀಯರು ಜನರನ್ನು ಸಂಬೋಧಿಸಿ ಮಾತನಾಡಿದರು. “Vedic Mathematics” ಅಥವ ವೇಗ ಗಣಿತದ ಸ್ಟಾಲ್ ಎಲ್ಲರ ಆಕರ್ಷಣೆಯಾಗಿತ್ತು. ಸಂಸ್ಕೃತ ಸೂತ್ರಗಳ ಮೂಲಕ ಗಣಿತದ ಅನಾಯಾಸ ಪರಿಹಾರ ಸಮಾಧಾನಗಳು ಇಲ್ಲಿ ಪ್ರದರ್ಶನಕ್ಕೆ ಇದ್ದವು. ಸುಭಾಶ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಇನ್ನು ಹಲವಾರು ಸ್ವಾತಂತ್ರ ಹೋರಾಟಗಾರರ T-Shirt ಗಳು ಮಾರಟಕ್ಕೆ ಇದ್ದವು. ಮಕ್ಕಳಿಗೆ ಪ್ರಶ್ನೋತ್ತರ (quiz) ಸ್ಪರ್ದೆ ಏರ್ಪಾಡು ಮಾಡಿದ್ದರು. ವಿಶೇಷ ಏನಂದರೆ, ಈ ಪ್ರಶ್ನೋತ್ತರಸ್ಪರ್ದೆಯು ಭಾರತಕ್ಕೆ ಸಂಬಂಧಿಸಿದ ವಸ್ತುವಿನ ಮೇಲೆ ಇದ್ದದ್ದು.

ಯೂತ್ ಫ಼ಾರ್ ಸೇವಾ (Youth For Seva), ಕುಟುಂಬ ಪ್ರಭೋಧನ್, ಯೋಗಶ್ರಿ. ಹೀಗೆ ಸರಿ ಸುಮಾರು 200 ಸಂಘ ಸಂಸ್ಥೆಗಳ ಸಮ್ಮಿಲನ ಇದಾಗಿತ್ತು. ಭಾರತದಲ್ಲಿ ನಮ್ಮ ಸಂಸ್ಕೃತಿಯಿಂದ ಪ್ರೇರಣೆಗೂಂಡು ಇಷ್ಟೆಲ್ಲಾ ಸಂಘ-ಸಂಸ್ಥೆಗಲು ನಡೆಯುತ್ತಿದೆ ಎಂಬುದು ಕೇವಲ ಮಾಹಿತಿಯ ವಿಚಾರವಾಗಿರಲಿಲ್ಲ, ಅಚ್ಚರಿಯ ವಿಶ್ಜಯ ಕೂಡ ಆಗಿತ್ತು.

ಈಗಿನ ಯುವ ಪೀಳಿಗೆ ಸಮಾಜ-ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದನ್ನು ಕಂಡು ನಮ್ಮೆಲರಿಗೂ ಸ್ಫೂರ್ತಿ ತಂದು ಕೊಡುವ ಸಮಾರಂಭ ಇದಾಗಿತ್ತು. ಭಾರತದ ಅಧ್ಯಾತ್ಮ ಮತ್ತು ಸೇವಾ ಮನೋಭಾವ ಮತ್ತು ಸಾಮಾಜಿಕ ಕಳಕಳಿಯ ಒಂದು ಬೃಹತ್ ನಿದರ್ಶನ ಇದಾಗಿತ್ತು. ಇನ್ನಾದರೂ ನಾವು ಸುಮ್ಮನೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪ್ರಯೋಜನವಿಲ್ಲ. ಮುನ್ನುಗ್ಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳೋಣ. ಇದೇ ಪ್ರೇರಣೆಯು ಇನ್ನು ಹಲವರಿಗೆ ಪ್ರೇರಣೆಯಾಗಿ ಪರಿವರ್ತನೆಯಾಗುವುದೇ ಈ ಸಮ್ಮೇಳನದ ಆದ್ಯ ಉದ್ದಿಶ್ಯವನ್ನು ಪೂರೈಸುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Vittal

ಪ್ರವೃತ್ತ ವಿದ್ಯಮಾನಗಳ ಚಿಂತಕ, ಲೇಖಕ. ಯೋಗ ತಜ್ಞ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!