ಅಂಕಣ

ಜಗತ್ತು ನಿಬ್ಬೆರಗಾಗುವಂತೆ ಮಾಡಿದ ರಾಜಕೀಯದ ‘ಸನ್ಯಾಸಿ’

ಇಲ್ಲಿಯವರೆಗೆ ಎಲ್ಲರೂ ಕೇಳಲ್ಪಟ್ಟದ್ದು … ಕೇವಲ ಕಾವಿ ತೊಟ್ಟವರು ಮಾತ್ರ ಸನ್ಯಾಸಿಗಳೆಂದು… ಆದರೆ ನಮಗೆ ಅರಿವೆ ಇಲ್ಲದೇ ಒಬ್ಬ ವ್ಯಕ್ತಿ ಖಾದಿಯನ್ನೇ ತೊಟ್ಟ ಸನ್ಯಾಸಿಯೊಬ್ಬರಿದ್ದಾರೆ. ಅವರೊಬ್ಬ ತಮ್ಮ ಜೀವನವನ್ನೇ ದೇಶಕ್ಕಾಗಿ ಮುಡುಪಾಗಿಟ್ಟ ಮಹಾನುಭಾವ.. ದೇಶದ ಸ್ವಾತಂತ್ಯ ಹೋರಾಟದಲ್ಲೂ ಭಾಗಿಯಾಗಿದ್ದವರು. ರಾಜಕೀಯದಲ್ಲಿ ಸ್ನಾತಕೋತ್ತರ ಪದವೀಧರ. ಕವಿಯೊಬ್ಬರ ಮಗನಾಗಿ ಜನಿಸಿದ ಇವರೂ ಒಬ್ಬ ಶ್ರೇಷ್ಠ ಕವಿಗಳೇ. ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ಅತ್ಯಂತ ಪ್ರಾಮಾಣಿಕ ಅಜಾತ ಶತ್ರು ಎಂಬ ಬಿರುದನ್ನು ಪಡೆದವರು. ಹೊಗಳಲು ಪದಗಳೇ ಇಲ್ಲವಾಗಿದೆ… ಇಷ್ಟೊಂದು ಹೊಗಳುವಾಗ ಆ ಮಹಾನುಭಾವ ಯಾರೆಂದು ಕುತೂಹಲ ಮೂಡದೇ ಇರಲಾರದು..

ಡಿಸೆಂಬರ್ 25 ಎಂದರೆ ತಟ್ಟನೆ ನೆನಪಿಗೆ ಬರುವುದು ಕ್ರಿಸ್ಮಸ್ ಹಬ್ಬ …
ಆದರೆ ಹೆಚ್ಚಿನವರಿಗೆ ತಿಳಿಯದೇ ಇರುವ ವಿಷಯ ಎಂದರೆ ಒಬ್ಬ ಮಹಾನ್ ವ್ಯಕ್ತಿಯ ಹುಟ್ಟುಹಬ್ಬವು ಅದೇ ದಿನವೇ ಇದೆಯೆಂದು. ಇಡೀ ವಿಶ್ವವೇ ಕ್ರಿಸ್ಮಸ್ ಹಬ್ಬದ ಸಡಗರದಲ್ಲಿರುತ್ತದೆ. ಅಂದು ನಮ್ಮ ದೇಶದ ಮಾಜಿ ಪ್ರಧಾನಿಯೊಬ್ಬರ ಹುಟ್ಟುಹಬ್ಬ. ನಮ್ಮ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಒಂದು ಭಾರಿ ಪ್ರಧಾನಿಯಾದವರಲ್ಲ. ಮೂರು ಬಾರಿ ಪ್ರಧಾನಿ ಹುದ್ದೆಗೇರಿದವರು… 13 ದಿನದಿಂದ ನಾಲ್ಕುವರೆ ವರ್ಷದ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು. ನಮ್ಮ ದೇಶ ಬಿಡಿ ಇಡೀ ಪ್ರಪಂಚವೇ ಬೆರಗಾಗಿತ್ತು. ದೇಶಕ್ಕಾಗಿ ಬ್ರಹ್ಮಚಾರಿಯಾಗಿಯೇ ಉಳಿದ, ಪ್ರಾಮಾಣಿಕತೆಯೇ ತಮ್ಮ ಜೀವನದಲ್ಲಿ ಪಾಲಿಸಿದಾ ಆದರ್ಶ ವ್ಯಕ್ತಿ.

ಪೋಖ್ರಾನ್ ಎಂದರೆ ಸಾಕು ಮೊದಲಿಗೆ ನೆನಪಾಗುವುದೇ ನಮ್ಮ ಈ ಮಾಜಿ ಪ್ರಧಾನಿ ಮತ್ತು ದಿವಂಗತ ಮಾಜಿ ರಾಷ್ಟ್ರಪತಿಗಳು ಅಬ್ದುಲ್ ಕಲಾಂ. ಇಡೀ ಪ್ರಪಂಚದ ಗೂಢಚರ್ಯದಿಂದ ಕಣ್ಣು ತಪ್ಪಿಸಿ ಮಾಡಿದ ಪೋಖ್ರಾಣ್ ಅಣ್ವಸ್ತ್ರ ಪರೀಕ್ಷೆ ಸಾಮಾನ್ಯದ ವಿಷಯವಲ್ಲ. ಭಾರತೀಯರೆಲ್ಲಾ ಹೆಮ್ಮೆ ಪಟ್ಟುಕೊಳ್ಳಬೇಕಾದ ವಿಷಯ. ‘ನಮಗೂ ತಾಕತ್ತಿದೆ’ ಎಂದು ತೋರಿಸಿ ಭಾರತ ಪ್ರಕಾಶಿಸುವಂತೆ ಮಾಡಿದ ಮಹಾನ್ ನಾಯಕ. ವಿಶ್ವದ ಮುಂದೆ ತಲೆ ಎತ್ತಿ ನಿಲ್ಲುವಂತೆ ಮಾಡಿದ ಘಟನೆ.

ವಾಜಪೇಯಿ ಆಡಳಿತದಲ್ಲಿ ಭಾರತ – ಪಾಕ್ ಯುಧ್ಧವೂ ನಡೆದಿತ್ತು… ಯುದ್ಧದ ಮೊದ ಮೊದಲು ನಾವು ಸೋಲುವ ಭೀತಿಯಲ್ಲಿತ್ತು.. ಎಲ್ಲಿಯೂ ಎದೆಗುಂದದೆ ನಮ್ಮ ಸೈನಿಕರಿಗೆ ಮತ್ತಷ್ಟು ಧೈರ್ಯ ತುಂಬಿ ಯುಧ್ದದಲ್ಲಿ ನರಿ ಬುದ್ಧಿಯ ಪಾಕಿಸ್ಥಾನ ಬಾಲ ಮುದುಡಿಕೊಂಡು ನಮ್ಮ ಉತ್ತರಕ್ಕೆ ಸೋಲೋಪ್ಪಲೇಬೇಕಾಯಿತು.. ಕಾರ್ಗಿಲ್ ಯುದ್ಧ ಎಂದರೆ ಸಾಕು ಇಂದಿಗೂ ಪಾಕಿಸ್ಥಾನಕ್ಕೆ ಭಯ ಹುಟ್ಟುತ್ತದೆ…
ಕಾರ್ಗಿಲ್ ಯುಧ್ಧದ ಬಳಿಕ ಪಾಕಿಸ್ಥಾನಕ್ಕೆ ಸ್ನೇಹಹಸ್ತ ಚಾಚಿ ಭಾರತ ಪಾಕ್ ಮಧ್ಯೆ ಶಾಂತಿ ಸ್ಥಾಪಿಸುವ ಪ್ರಯತ್ನ ಮಾಡಿದರು. ಇದರ ಫಲವಾಗಿ ದೆಹಲಿಯಿಂದ ಲಾಹೋರ್’ಗೆ ನೇರ ಬಸ್ ಸೌಲಭ್ಯವನ್ನು ಕಲ್ಪಿಸಿದರು. ರೈಲನ್ನು ಕೂಡ ಸಂಚರಿಸುವಂತೆ ಮಾಡಿದರು. ಆದರೆ ಪಾಪಿ ಪಾಕಿಸ್ಥಾನ ಮಾತ್ರ ಸ್ನೇಹ ಹಸ್ತವನ್ನು ಮುಂದುವರಿಸಲು ಯಾವುದೇ ಹೆಜ್ಜೆಯಿಡದೇ ಉಗ್ರರನ್ನು ಪೋಷಿಸಿ ನಮ್ಮ ದೇಶಕ್ಕೆ ಕಳುಹಿಸುತ್ತಿದೆ..

ನಮ್ಮ ದೇಶವು ಕೊಂಚ ವಿಜ್ಞಾನದಲ್ಲಿ ಮುಂದೆ ಬರಬೇಕೆಂದು ವಿಜ್ಞಾನವನ್ನು ಪ್ರೋತ್ಸಾಹಿಸಲು “ಜೈ ವಿಜ್ಞಾನ್” ಎಂದು ಘೋಷಣೆಯನ್ನು ದೇಶಾದ್ಯಂತ ಮೊಳಗಿಸಿದರು. ದೂರವಾಣಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿದಾಯಕ ಕಾರ್ಯಕ್ಕೆ ಬಾರೀ ಪ್ರೊತ್ಸಾಹ ನೀಡಿದರು.
ವಾಜಪೇಯಿಯವರು ಗದ್ದುಗೆಗೆ ಏರುವ ಸಂದರ್ಭದಲ್ಲಿ ದೇಶದಲ್ಲಿ ರಸ್ತೆಗಳ ಗುಣಮಟ್ಟ ಹಾಗೂ ಉತ್ತಮ ದರ್ಜೆಯ ರಸ್ತೆಗಳು ಇರಲೇ ಇಲ್ಲ…ಹಳ್ಳಿ ಹಳ್ಳಿಗಳ ಸಂಪರ್ಕಿಸುವ ‘ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ’ವನ್ನು ಸಮರ್ಪಕ ನಿಟ್ಟಿನಲ್ಲಿ ಜಾರಿಗೊಳಿಸಿದರು… ದೇಶದ ನಾಲ್ಕು ಮೂಲೆಗಳನ್ನು ಸಂಪರ್ಕಿಸುವ ಸುಮಾರು 15 ಸಾವಿರ ಕಿ.ಮೀ. ಉದ್ದದ ‘ಸುವರ್ಣ ಚತುಷ್ಫಥ ‘ ರಸ್ತೆಯನ್ನು ಮಾಡಿಸಿದರು. ಎಲ್ಲರೂ ಶಿಕ್ಷಣವನ್ನು ಪಡೆಯಲೇಬೇಕೆಂದು ಸರ್ವಶಿಕ್ಷಾ ಅಭಿಯಾನವನ್ನು ಜಾರಿಗೆ ತಂದರು. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಪ್ರೋತ್ಸಾಹಿಸಿದರು.

ಇಂತಹ ಹಲವು ಸಾಧನೆ ಮಾಡಿದ ಮಹಾನ್ ನಾಯಕ 2004 ನೇಯ ಇಸವಿಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲೊಪ್ಪಿಕೊಂಡರು. ಕಾರಣ ಇಷ್ಟೇ ..ತಾನು ಮಾಡಿದ ಇಷ್ಟೊಂದು ಅಭಿವೃದ್ಧಿದಾಯಕ ಕಾರ್ಯವನ್ನು ಜನತೆಗೆ ವಿವರಿಸುವುದರಲ್ಲಿ ವಿಫಲರಾದದ್ದು. ಮುಂದಿನ ಹತ್ತುವರ್ಷಗಳ ಕಾಲ ಕಾಂಗ್ರೇಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತ ನಡೆಸಿತ್ತು..

2004 ನೇ ಲೋಕಸಭಾ ಚುನಾವಣೆಯ ಒಂದು ವರ್ಷಮೊದಲು ಗುಜರಾತಿನ ಮುಖ್ಯಮಂತ್ರಿಯ ಜವಾಬ್ದಾರಿಯನ್ನು ಈಗಿನ ಪ್ರಧಾನಿ ನರೇಂದ್ರ ಮೋದಿಯವವರ ಹೆಗಲಿಗೆ ನೀಡಿದ್ದರು. ತನ್ನ ನಂತರದ ಸ್ಥಾನವನ್ನು ಮೋದಿಯು ತುಂಬುತ್ತಾರೆ ಎನ್ನುವ ಆಸೆಯಿಂದಲೋ ಮೋದಿ ಎನ್ನುವ ಬೀಜವನ್ನು ಗುಜರಾತಿನಲ್ಲಿ ಬಿತ್ತಿದರು. ಭವಿಷ್ಯದ ನಾಯಕರಾಗುತ್ತಾರೆ ಎನ್ನುವ ಭವಿಷ್ಯ ಅವರಿಗೆ ತಿಳಿದಿತ್ತಿರಬಹುದು. ಅಂದು ಬಿತ್ತಿದ ನರೇಂದ್ರ ಮೋದಿಯೆಂಬ ಬೀಜವು ಹೆಮ್ಮರವಾಗಿ ಬೆಳೆದು ಇದೀಗ ವಿಶ್ವಮಟ್ಟದ ನಾಯಕರಾಗಿದ್ದಾರೆ. ಮೋದಿಯವರನ್ನು ಸೃಷ್ಟಿಸಿದ ಕೀರ್ತಿಯು ಅಡ್ವಾಣಿಯವರಷ್ಟೇ ವಾಜಪೇಯಿಯವರಿಗೂ ಸಲ್ಲಬೇಕು…

ಭಾರತ ದೇಶವು ವಿಶ್ವಮಟ್ಟದಲ್ಲಿ ಪ್ರಕಾಶಿಸುವಂತೆ ಮಾಡಿದ ಶ್ರೀಮಾನ್ ವಾಜಪೇಯಿಯವರಿಗೆ ಕಳೆದ ವರ್ಷ ಅಂದರೆ 2014 ನೇಯ ಇಸವಿಯ ಅವರ 90ರ ಹುಟ್ಟುಹಬ್ಬದಂದೇ ಅವರಿಗೆ ಭಾರತ ಸರ್ಕಾರ ‘ಭಾರತ ರತ್ನ’ ನೀಡಿ ಗೌರವಿಸಿದೆ..
ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿಗಳಲ್ಲಿ ಇವರಿಗೆ 2ನೇಯ ಸ್ಥಾನ. ಬ್ರಹ್ಮಚರ್ಯದ ಮೊದಲ ಪ್ರಧಾನಿ ಎಂದೇ ಹೆಸರು ಪಡೆದವರು. ತಾನು ಆಡಳಿತ ನಡೆಸುವಂತೆ ಮಾಡಲು ಅನೇಕ ಪಕ್ಷಗಳ ಬೆಂಬಲ ದೊರಕ್ಕಿತ್ತು. ಅದೇ ಎನ್.ಡಿ.ಎ ತನ್ನ ಎಲ್ಲಾ ಮಿತ್ರಪಕ್ಷಗಳಲ್ಲಿ ಕೊಂಚವೂ ಭಿನ್ನಮತ ತಲೆದೋರದಂತೆ ಸರಿದೂಗಿಸಿಕೊಂಡು ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಿದರು. ಇಂದಿಗೂ ವಾಜಪೇಯಿಯೊಬ್ಬ ಅತ್ಯಂತ ಪ್ರಾಮಾಣಿಕ ವ್ಯಕ್ತಿಯೆಂದು ಪಕ್ಷ ಬೇಧ ಮರೆತು ಹಾಡಿ ಹೊಗಳುತ್ತಾರೆ. ಇದೇ ಕಾರಣಕ್ಕೆ ಅವರನ್ನು ಅಜಾತ ಶತ್ರು ಎಂದು ಕರೆಯುವುದು. ದೇಶದ ಏಳಿಗೆಗಾಗಿ ದುಡಿದ ಮಹಾನ್ ನಾಯಕ ನೂರು ವರ್ಷ ಬಾಳಲೆಂದು ದೇವರಲ್ಲಿ ಪ್ರಾರ್ಥಿಸೋಣ. ಈ ಮೂಲಕ ಅವರ 91 ನೇಯ ಹುಟ್ಟುಹಬ್ಬಕ್ಕೆ ಶುಭ ಕೋರೋಣ…

  • Jagath Bhat

jagath.bhat@yahoo.com

Facebook ಕಾಮೆಂಟ್ಸ್

ಲೇಖಕರ ಕುರಿತು

Jagath Bhat

ಜಗತ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಯಕ್ಷಗಾನ, ಛಾಯಾಗ್ರಹಣ ಮತ್ತು ಬರವಣಿಗೆ ಇವರ ಹವ್ಯಾಸ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!