ಅಂಕಣ

ಕಳ್ಳಬೆಕ್ಕಿಗೆ ಹುಲಿಪಟ್ಟ ಏಕೆ?

ಟಿಪ್ಪು ಸುಲ್ತಾನನ ಜಯಂತಿಯನ್ನು ಕರ್ನಾಟಕದಲ್ಲಿ ಆಚರಿಸಲು ಕರೆಕೊಟ್ಟು, ಅದಕ್ಕಾಗಿ ಹಲವು ಕೋಟಿ ರುಪಾಯಿಗಳನ್ನು ಎತ್ತಿಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದಲೂ ತಾನು ಬಹುಸಂಖ್ಯಾತ ಹಿಂದೂಗಳ ವಿರೋಧಿ ಎನ್ನುವುದನ್ನು ಹಲವು ಸಂದರ್ಭಗಳಲ್ಲಿ ತೋರಿಸುತ್ತ ಬಂದಿರುವ ಮುಖ್ಯಮಂತ್ರಿಯವರು ಇದೀಗ ಟಿಪ್ಪುವನ್ನು ಬಳಸಿಕೊಂಡು ಕನರ್ಾಟಕ ರಾಜ್ಯ ಕಾಂಗ್ರೆಸ್ಸಿನ ಭವಿಷ್ಯಕ್ಕೆ ಶಾಶ್ವತವಾಗಿ ಚಪ್ಪಡಿಕಲ್ಲು ಎಳೆಯುವುದಕ್ಕೆ ತಯಾರಾಗಿದ್ದಾರೆ. ಜೊತೆಗೆ ಟಿಪ್ಪುವನ್ನು ಉಪೇಕ್ಷಿಸಿದ್ದವರೂ ಇದೀಗ ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಆತನ ನೈಜ ಜೀವನಚರಿತ್ರೆಯನ್ನು ತಿಳಿಯುವಂತಾಗಿದೆ. ಆಗುವುದೆಲ್ಲಾ ಒಳ್ಳೆಯದಕ್ಕೇ ಎನ್ನುತ್ತ ಸರಕಾರದ ನಡೆಯನ್ನು ನಾವು ಸ್ವಾಗತಿಸಬೇಕಾಗಿದೆ.

ಫ್ರೆಂಚರನ್ನು ಕರೆದವನು!A

ಟಿಪ್ಪು ಯಾರು? ಅವನು ಭಾರತದ ಸ್ವಾತಂತ್ರ್ಯ ಹೋರಾಟಗಾರನಾಗಿದ್ದನೆ? ಈ ವಿಷಯದಲ್ಲಿ ನಮಗೆ ಶಾಲಾ ಪಠ್ಯಪುಸ್ತಕಗಳು ಹೇಳುವುದು ಬೇರೆ; ಇತಿಹಾಸದ ದಾಖಲೆಪತ್ರಗಳು ಬಿಚ್ಚಿಡುವ ಸತ್ಯವೇ ಬೇರೆ. ಶಾಲೆಗಳಲ್ಲಿ ನಾವು ಕಲಿತಿರುವ ಪ್ರಕಾರ, ಟಿಪ್ಪು ಮಹಾನ್ ಶೂರನಾಗಿದ್ದ. ಹಲವು ಯುದ್ಧಗಳಲ್ಲಿ ಬ್ರಿಟಿಷರ ಜೊತೆ ವೀರಾವೇಶದಿಂದ ಹೋರಾಡಿದ. ಕನ್ನಡ ನಾಡುನುಡಿಗಾಗಿ ತನ್ನ ಪ್ರಾಣವನ್ನೇ ಪಣವಾಗಿಟ್ಟು ಸೇವೆಗೈದ. ಆದರೆ, ಇತಿಹಾಸವನ್ನು ಕೆದಕಿದಾಗ ಆತ ಯಾವುದೇ ದೇಶಾಭಿಮಾನ ಇಟ್ಟುಕೊಂಡು ಬ್ರಿಟಿಷರ ಜೊತೆ ಹೋರಾಡಿದ್ದು ಕಂಡುಬರುವುದಿಲ್ಲ. ಕನ್ನಡನಾಡಿನ ಜನರ ರಕ್ಷಣೆ ಮಾಡುತ್ತಿದ್ದ ಮೈಸೂರಿನ ಒಡೆಯರಿಂದ ಅಧಿಕಾರ ಕಸಿದುಕೊಂಡು ದಕ್ಷಿಣಭಾರತದಲ್ಲಿ ಪ್ರಬಲನಾದ ಹೈದರಾಲಿಯ ಮಗ ಟಿಪ್ಪು, ಬ್ರಿಟಿಷರ ವಿರುದ್ಧ ಹೋರಾಡಿದ್ದು ಅವರು ನಿಜಾಮ ಮತ್ತು ಮೈಸೂರಿನ ಒಡೆಯರ ಜೊತೆ ಹೊಂದಾಣಿಕೆ ಮಾಡಿಕೊಂಡು ತನ್ನ ವಿರುದ್ಧ ತಿರುಗಿಬಿದ್ದರು ಎಂಬ ಕಾರಣಕ್ಕೆ ಮಾತ್ರ. 1797ರ ಎಪ್ರೀಲ್ 21ರಂದು ಫ್ರೆಂಚರಿಗೆ ಪತ್ರ ಬರೆಯುವ ಟಿಪ್ಪು, ಅವರ ಬೆಂಬಲ ಸಿಕ್ಕರೆ ಬ್ರಿಟಿಷರನ್ನು ಓಡಿಸಿ ಇಡೀ ದೇಶವನ್ನು ಲೂಟಿ ಹೊಡೆಯಬಹುದು ಎಂಬ ಪ್ರಲೋಭನೆ ಒಡ್ಡುತ್ತಾನೆ. ಬ್ರಿಟಿಷರ ವಿರುದ್ಧ ಹೋರಾಡಲು ಫ್ರೆಂಚರ ಸಹಾಯ ಬೇಡಿದವನನ್ನು ರಾಷ್ಟ್ರಪ್ರೇಮಿ ಎಂದು ಕರೆಯಲು ಸಾಧ್ಯವಾದೀತೇ? ಅಲ್ಲದೆ, ಟಿಪ್ಪು ತನ್ನ ಆಡಳಿತವಿರುವ ಎಲ್ಲಾ ಪ್ರದೇಶಗಳಲ್ಲಿ ಉದರ್ು ಮತ್ತು ಫಾರಸಿ ಭಾಷೆಗಳನ್ನು ಖಾಯಂ ಮಾಡಿದ. ತನ್ನ ರಾಜ್ಯದ ವ್ಯವಹಾರಗಳು ಫಾರಸಿ ಭಾಷೆಯಲ್ಲೇ ಇರಬೇಕೆಂದು ಕಟ್ಟಪ್ಪಣೆ ಹೊರಡಿಸಿದ. ಟಿಪ್ಪುವಿನ ಆಡಳಿತ ಕಾಲದಲ್ಲಿ ಹಲವು ಊರುಗಳ ಹೆಸರುಗಳು ಬದಲಾದವು. ಮಂಗಳೂರು ಜಲಲಾಬಾದ್ ಆಯಿತು. ಮೈಸೂರು – ನಝರಾಬಾದ್, ಕಣ್ಣಾನೂರು – ಕುಸನಬಾದ್, ಗುಟ್ಟಿ – ಫೈಜ್ ಹಿಸ್ಸಾರ್, ಧಾರವಾಡ – ಖುಷರ್ಿದ್ ಸವಾಡ್, ದಿಂಡಿಗಲ್ – ಕಲಿಖಾಬಾದ್, ರತ್ನಗಿರಿ – ಮುಸ್ತಫಾಬಾದ್, ಕಲ್ಲಿಕೋಟೆ – ಇಸ್ಲಮಾಬಾದ್.. ಹೀಗೆ ಮೈಸೂರಿನ ಸುತ್ತಮುತ್ತಲಿನ ಜಾಗಗಳಿಗೆಲ್ಲ ಟಿಪ್ಪು ಮುಸ್ಲಿಮ್ ಹೆಸರುಗಳನ್ನು ಇಡುತ್ತಾ ಹೋದ. ಆದರೆ ಟಿಪ್ಪುವನ್ನು ನಖಶಿಖಾಂತ ದ್ವೇಷಿಸುತ್ತಿದ್ದ ಈ ಎಲ್ಲ ಊರುಗಳ ಜನರೂ ಅವನ ಮರಣಾನಂತರ ಹಳೆಯ ಹೆಸರುಗಳನ್ನೇ ಉಳಿಸಿಕೊಂಡರು. ಟಿಪ್ಪು ತನ್ನ ಅರಮನೆಯಲ್ಲಿ ಒಂದಷ್ಟು ಹುಲಿಗಳನ್ನು ಸಾಕಿಕೊಂಡಿದ್ದ. ಹುಲಿಯ ಪಟ್ಟೆಗಳ ವಿನ್ಯಾಸ ಇರುವ ಸಮವಸ್ತ್ರಗಳನ್ನು ತನ್ನ ಸೈನಿಕರಿಗೆ ಕೊಟ್ಟಿದ್ದ. ಹುಲಿಯ ಮುಖದ ಅಚ್ಚು ಇರುವ ಸಿಂಹಾಸನವನ್ನು ಬಳಸುತ್ತಿದ್ದ. ಈ ಎಲ್ಲ ಕಾರಣಗಳಿಂದ ಅವನಿಗೆ ಶೇರ್-ಇ-ಮೈಸೂರ್ ಎಂಬ ಬಿರುದನ್ನು ಅವನ ಹೊಗಳುಭಟರು ಕೊಟ್ಟರು.

ಯಮಸದೃಶ ಮತಾಂತರಿ

ಟಿಪ್ಪುವಿನ ದೌರ್ಜನ್ಯಗಳ ಮಾಹಿತಿಗಳು ನಮಗೆ ಸಿಕ್ಕುವುದು ಆ ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಭೇಟಿ ಕೊಟ್ಟ ಪರದೇಶಗಳ ಇತಿಹಾಸ ತಜ್ಞರಿಂದ. ಜಗತ್ಪ್ರಸಿದ್ಧ ಪೋತರ್ುಗೀಸ್ ಯಾತ್ರಿಕ ಬಾತರ್ೊಲೋಮಿಯೋ ತನ್ನವೊಯೇಜ್ ಟು ಈಸ್ಟ್ ಇಂಡೀಸ್ಎಂಬ ಕೃತಿಯಲ್ಲಿ ಬರೆಯುವ ಕೆಲವು ಸಾಲುಗಳು: ಟಿಪ್ಪು ಒಂದು ಆನೆಯ ಮೇಲೆ ಕೂತು ಸವಾರಿ ಮಾಡುತ್ತಿದ್ದ. ಅವನ ಹಿಂದೆ ಒಟ್ಟು 30,000 ಸೈನಿಕರಿದ್ದರು. ಕಲ್ಲಿಕೋಟೆಯಲ್ಲಿ ಇವರು ಸಿಕ್ಕಸಿಕ್ಕ ನಾಗರಿಕರನ್ನು ನೇಣು ಬಿಗಿದು ನೇತಾಡಿಸಿದರು. ಮಾತೆಯರ ಕೊರಳಿಗೆ ಅವರ ಮಕ್ಕಳನ್ನು ಕಟ್ಟಿಹಾಕಿ ಗಲ್ಲಿಗೆ ಹಾಕಲಾಯಿತು. ಕೇರಳದ ಕ್ರಿಶ್ಚಿಯನ್ನರು ಮತ್ತು ಹಿಂದೂಗಳನ್ನು ನಗ್ನವಾಗಿಸಿ ಆನೆಗಳ ಕಾಲಿಗೆ ಕಟ್ಟಿ ಎಳೆಸಲಾಯಿತು. ಅವರ ದೇಹಗಳು ಛಿದ್ರವಾಗಿ ಬೇರ್ಪಡುವವರೆಗೂ ಟಿಪ್ಪು ಈ ವಿಕೃತ ವಿನೋದಾವಳಿಯನ್ನು ಮುಂದುವರಿಸಿದ. ಕಲ್ಲಿಕೋಟೆಯ ಎಲ್ಲಾ ಚಚರ್ು ಮತ್ತು ಮಂದಿರಗಳನ್ನೂ ನೆಲಸಮ ಮಾಡಲಾಯಿತು. ಬದುಕುಳಿದ ಗಂಡು-ಹೆಣ್ಣುಗಳಿಗೆ ಮುಸ್ಲಿಮ್ ಹೆಣ್ಣು-ಗಂಡುಗಳನ್ನು ಬಲವಂತವಾಗಿ ಮದುವೆ ಮಾಡಿಸಲಾಯಿತು. ದೊರೆಯ ಆಜ್ಞೆಯನ್ನು ಧಿಕ್ಕರಿಸಿ ಪಲಾಯನ ಮಾಡಲು ನೋಡಿದವರನ್ನು ಹಿಡಿದುತಂದು ಕೂಡಲೇ ಗಲ್ಲಿಗೇರಿಸಿ, ಹೆಣವನ್ನು ಊರಲ್ಲಿ ಮೆರವಣಿಗೆ ಮಾಡಲಾಯಿತು. – ಬಾತರ್ೊಲೋಮಿಯೊನ ಈ ವಿವರಣೆಗಳನ್ನು ಓದುತ್ತ ಹೋದಾಗ, ನಮಗೆ, ಟಿಪ್ಪು ಯಾವ ಕೋನದಿಂದ ಧರ್ಮಸಹಿಷ್ಣುವಿನಂತೆ ಕಾಣಿಸುತ್ತಾನೆ? ಕಲ್ಲಿಕೋಟೆ ಒಂದು ಕಾಲದಲ್ಲಿ ಬ್ರಾಹ್ಮಣರ ಬಾಹುಳ್ಯವಿದ್ದ ಪಟ್ಟಣವಾಗಿತ್ತು. ಆದರೆ ಟಿಪ್ಪು ಅಲ್ಲಿದ್ದ 7000 ಬ್ರಾಹ್ಮಣ ಕುಟುಂಬಗಳಿಗೆ ಯಮಸದೃಶನಾದ. 2000 ಕುಟುಂಬಗಳನ್ನು ಒಂದು ಕುಡಿಯೂ ಉಳಿಯದಂತೆ ಅಳಿಸಿಹಾಕಿದ. ಹೆಂಗಸರು ಮಕ್ಕಳೂ ಆತನ ಸೇನೆಗೆ ಕೊರಳೊಡ್ಡಿ ಹುಳುಗಳಂತೆ ಸತ್ತರು. ಟಿಪ್ಪುವಿನ ಕಾಲದಲ್ಲಿ ಮಂಗಳೂರಿಗೆ ಬ್ರಿಟಿಷ್ ಅಧಿಕಾರಿಯಾಗಿ ನೇಮಕವಾಗಿದ್ದ ಕರ್ನಲ್ ಫುಲ್ಲೆರ್ಟನ್ 1783ರಲ್ಲಿ ಟಿಪ್ಪುಸೈನ್ಯ ತೋರಿದ ಹಿಂಸೆಯ ಭೀಭತ್ಸವನ್ನು ಹೀಗೆ ದಾಖಲು ಮಾಡುತ್ತಾನೆ: ಟಿಪ್ಪುವಿನ ಸೈನಿಕರು ಪ್ರತಿದಿನ ಹತ್ತಿಪ್ಪತ್ತು ಜನ ಬ್ರಾಹ್ಮಣರ ತಲೆಗಳನ್ನು ಕಡಿದು ತಂದು ಝಮೊರಿನ್ ಕೋಟೆಯ ಆಸುಪಾಸಿನಲ್ಲಿ ತೂಗು ಹಾಕುತ್ತಿದ್ದರು. ಈ ಕ್ರೌರ್ಯವನ್ನು ಕಂಡು ಸಹಿಸಲಾಗದೆ; ಇನ್ನಷ್ಟು ಬ್ರಾಹ್ಮಣರ ಜೀವ ಹೋಗಬಾರದೆಂಬ ಉದ್ಧೇಶದಿಂದ ಝಮೊರಿನ್ ರಾಜ ಆ ಪ್ರದೇಶಗಳನ್ನು ಬಿಟ್ಟುಕೊಟ್ಟು ಕೇರಳದ ದಕ್ಷಿಣಭಾಗಕ್ಕೆ ಹೋದ. ಟಿಪ್ಪುವಿನ ಅಧಿಕಾರಿಗಳು ಮಂಗಳೂರು ಮತ್ತು ಕೇರಳ ಪ್ರಾಂತ್ಯಗಳಲ್ಲಿ ನಡೆಸುತ್ತಿದ್ದ ಇನ್ನೊಂದು ಕೆಲಸವೆಂದರೆ ಸಾಮೂಹಿಕ ಮುಂಜಿ. ಸುಮಾರು ಸಾವಿರ ಜನರನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿ, ಅವರ ಮರ್ಮಗಳ ಮುಂಭಾಗದ ತೊಗಲನ್ನು ಕತ್ತಿಯಿಂದ ಕತ್ತರಿಸುತ್ತಿದ್ದರು. ಈ ಕ್ರಿಯೆಯನ್ನು ಮಾಡಿಸಿಕೊಂಡವನು ಇಸ್ಲಾಂ ಮತಸ್ಥನಾದ ಎಂಬ ಘೋಷಣೆ ಮಾಡುತ್ತಿದ್ದರು. ಅಲ್ಲದೆ ಅವರ ಬಾಯಿಗೆ ಬಲವಂತವಾಗಿ ದನದ ಮಾಂಸವನ್ನು ತುರುಕಲಾಗುತ್ತಿತ್ತು.

ದೇಗುಲಭಂಜಕ, ಜೆಹಾದ್ ಉಗ್ರ

ಕೇರಳದ ಮಲಬಾರ್ ಪ್ರಾಂತ್ಯದಲ್ಲಿದ್ದ ಕ್ರಿಶ್ಚಿಯನ್ನರು ಮತ್ತು ಹಿಂದೂಗಳನ್ನು ಬಲಾತ್ಕಾರವಾಗಿ ಮತಾಂತರ ಮಾಡಿಸಬೇಕು ಎನ್ನುವುದು ಟಿಪ್ಪುವಿನ ಉದ್ಧೇಶವಾಗಿತ್ತು. ಲೆವಿಸ್ ಬಿ. ಬೌರಿ ಎಂಬ ಬ್ರಿಟಿಷ್ ಇತಿಹಾಸಜ್ಞನ ಪ್ರಕಾರ, ಟಿಪ್ಪು ಮಲಬಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಡಿದ ಅತ್ಯಾಚಾರ, ದೌರ್ಜನ್ಯಗಳನ್ನು ಭಾರತದ ಮೇಲೆ ದಾಳಿ ಮಾಡಿದ ಮುಹಮ್ಮದ್ ಘಜನಿ, ಅಲ್ಲಾದೀನ್ ಖಿಲ್ಜಿ, ನಾದಿರ್ ಷಾ ಮುಂತಾದವರಿಗೂ ಸರಿಗಟ್ಟುವುದು ಸಾಧ್ಯವಿಲ್ಲ. ಕೇರಳದಲ್ಲಿ ಜಿಲ್ಲಾ ಕಲೆಕ್ಟರ್ ಆಗಿದ್ದ ವಿಲಿಯಂ ಲೋಗನ್ ಎಂಬ ಬ್ರಿಟಿಷ್ ಅಧಿಕಾರಿಮಲಬಾರ್ ಮ್ಯಾನುಯೆಲ್ಎಂಬ ಹೊತ್ತಗೆಯಲ್ಲಿ, ಟಿಪ್ಪು ನಾಶಗೊಳಿಸಿದ ಹಿಂದೂ ದೇವಾಲಯಗಳ ಪಟ್ಟಿ ಮಾಡುತ್ತಾರೆ. ಚಿರಕ್ಕಲ್ ತಾಲೂಕಿನ ತ್ರಿಚಂಬರಂ ಮತ್ತು ತಲಿಪ್ಪರಂಪು ದೇವಸ್ಥಾನಗಳು, ತೆಲಿಶ್ಶೇರಿಯ ತಿರುವೆಂಕಟ ದೇವಸ್ಥಾನ, ಬಡಕ್ಕರ ಸಮೀಪದ ಪೊನ್ಮೆರಿ ದೇವಸ್ಥಾನ – ಇವೆಲ್ಲ ಟಿಪ್ಪು ದಾಳಿಗೆ ಒಳಗಾದ ಹಿಂದೂ ಶ್ರದ್ಧಾಕೇಂದ್ರಗಳು. ಕೇರಳದ ಮಣಿಯೂರು ಮಸೀದಿ ಒಂದು ಕಾಲದಲ್ಲಿ ದೇವಸ್ಥಾನವಾಗಿತ್ತು ಎಂಬ ಅಂಶವನ್ನೂ ವಿಲಿಯಂ ಮುಂದಿಡುತ್ತಾರೆ. ಟಿಪ್ಪು ಮೈಸೂರು, ಕೊಡಗು, ಮಂಗಳೂರು ಮತ್ತು ಕೇರಳಗಳಲ್ಲಿ ಹಿಂದೂ ದೇವಸ್ಥಾನಗಳಲ್ಲಿ ತೋರಿಸಿದ ಕ್ರೌರ್ಯಕ್ಕೆ ಸಮಾನವಾದ ಬೇರಾವ ಉದಾಹರಣೆಗಳೂ ನಮಗೆ ಸಿಗುವುದಿಲ್ಲ. ಬೆಂಕಿ ಹಚ್ಚಿ ನೂರಾರು ದೇವಾಲಯಗಳನ್ನು ಬೂದಿ ಮಾಡಲಾಯಿತು. ಕಲ್ಲಿನ ಕೆತ್ತನೆಗಳನ್ನು ವಿರೂಪಗೊಳಿಸಲಾಯಿತು. ತಾಳಿಪ್ಪರಂಪು, ತ್ರಿಶಂಬರಂ ಮುಂತಾದ ಅತಿಪ್ರಮುಖ ದೇವಸ್ಥಾನಗಳಲ್ಲಿ ಟಿಪ್ಪು ಮತ್ತವನ ಸೈನಿಕರು ಮಾಡಿದ ಅನಾಚಾರಗಳನ್ನು ಎಂದಿಗೂ ಕ್ಷಮಿಸುವುದು ಸಾಧ್ಯವಿಲ್ಲ ಎಂದು ವಟಕ್ಕಂಕೂರು ರಾಜರಾಜ ವರ್ಮ ದಾಖಲಿಸಿದ್ದಾರೆ. ಟಿಪ್ಪುವಿನ ಕೈಯಿಂದ ದಕ್ಷಿಣ ಭಾರತದಲ್ಲಿ ನಾಶಗೊಂಡ ಒಟ್ಟು ದೇವಾಲಯಗಳ ಸಂಖ್ಯೆ 8000ಕ್ಕೂ ಹೆಚ್ಚು ಎನ್ನುವ ಮಾತನ್ನು ಮೈಸೂರು ಗಝೆಟಿಯರ್ ದಾಖಲಿಸಿದೆ. ತಾಳಿ, ತಿರುವಣ್ಣೂರು, ವಾರಕ್ಕಲ್, ಪುತ್ತೂರು, ಗೋವಿಂದಪುರ ಮುಂತಾದ ಸ್ಥಳಗಳಲ್ಲಿದ್ದ ನೂರಾರು ದೇವಸ್ಥಾನಗಳು ಟಿಪ್ಪು ದಾಳಿಗೊಳದಾವು ಎನ್ನುವುದನ್ನು ಮಲಬಾರ್ ಗಝೆಟಿಯರ್ ಹೇಳುತ್ತದೆ.

ಟಿಪ್ಪು ಮೂಲತಃ ಒಬ್ಬ ಮತಾಂಧ ಅರಸನಾಗಿದ್ದ ಎನ್ನುವುದಕ್ಕೆ ಅವನೇ ಬರೆದ ಹಲವು ಪತ್ರಗಳು ಸಾಕ್ಷಿ ಹೇಳುತ್ತವೆ. ಅಬ್ದುಲ್ ಖಾದಿರ್ನಿಗೆ 1788ರ ಮಾಚರ್್ 22ರಂದು ಬರೆಯುವ ಪತ್ರದಲ್ಲಿಒಟ್ಟು 12,000 ಜನ ಹಿಂದೂಗಳನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರಿಸಲಾಯಿತು. ಅವರಲ್ಲಿ ಹೆಚ್ಚಿನವರು ನಂಬೂದಿರಿ ಬ್ರಾಹ್ಮಣರು. ಈ ಮತಾಂತರ ಕಾರ್ಯವನ್ನು ದೊಡ್ಡಮಟ್ಟದಲ್ಲಿ ಪ್ರಚಾರಗೊಳಿಸಬೇಕು.  ಸ್ಥಳೀಯ ಊರುಗಳ ಎಲ್ಲಾ ಹಿಂದೂ ಧಮರ್ೀಯರನ್ನೂ ನಿನ್ನೆದುರು ನಿಲ್ಲಿಸಿ ಇಸ್ಲಾಂಗೆ ಮತಾಂತರಿಸುವ ಕೆಲಸ ನಡೆಯಲಿ. ನೆನಪಿಡು – ಒಬ್ಬನೇ ಒಬ್ಬ ಬ್ರಾಹ್ಮಣನೂ ತಪ್ಪಿಸಿಕೊಳ್ಳಬಾರದುಎಂದು ಬರೆಯುತ್ತಾನೆ ಟಿಪ್ಪು. 1790ರ ಜನವರಿ 18ರಂದು ಸಯ್ಯದ್ ಅಬ್ದುಲ್ ದುಲಾಯಿಗೆ ಪತ್ರ ಬರೆದುಪ್ರವಾದಿ ಮುಹಮ್ಮದ ಮತ್ತು ಅಲ್ಲಾಹನ ದಯೆಯಿಂದ, ಕಲ್ಲಿಕೋಟೆಯ ಎಲ್ಲಾ ಹಿಂದೂಗಳೂ ಇಸ್ಲಾಂ ಮತೀಯರಾದರು. ಕೊಚ್ಚಿ ರಾಜ್ಯದ ಗಡಿಭಾಗದಲ್ಲಿರುವ ಕೆಲವರು ಮಾತ್ರ ಇನ್ನೂ ಮತ ಬದಲಾಯಿಸದೆ ಉಳಿದುಕೊಂಡಿದ್ದಾರೆ. ಅವರನ್ನೂ ಬಿಡದೆ ಮತಾಂತರ ಮಾಡುವ ಕೆಲಸವನ್ನು ಶೀಘ್ರದಲ್ಲೇ ಕೈಗೆತ್ತಿಕೊಂಡು ಮುಗಿಸುತ್ತೇನೆ. ಇದನ್ನು ನಾನು ಜೆಹಾದ್ ಎಂದೇ ಪರಿಗಣಿಸಿದ್ದೇನೆಎಂದಿದ್ದಾನೆ. ಅದರ ಮರುದಿನ ಬುದ್ರುಜ್ ಜುಮನ್ ಖಾನ್ಗೆ ಬರೆಯುವ ಪತ್ರದಲ್ಲಿನಾನು ಇತ್ತೀಚೆಗೆ ಮಲಬಾರ್ ಪ್ರಾಂತ್ಯದಲ್ಲಿ ನಾಲ್ಕು ಲಕ್ಷ ಜನರನ್ನು ಇಸ್ಲಾಂಗೆ ಮತಾಂತರಿಸಿದ್ದು ನಿನಗೆ ಗೊತ್ತಿದೆಯೆ? ಅಂಥ ಸಾಧನೆ ಮಾಡಿದ ಮೇಲೆ ಅದೆಷ್ಟು ಉತ್ಸಾಹ ಬಂದಿದೆಯೆಂದರೆ ರಾಮನ್ ನಾಯರ್ನ (ತಿರುವಾಂಕೂರಿನ ರಾಜ ರಾಮ ವರ್ಮ) ರಾಜ್ಯದ ಮೇಲೆ ದಂಡೆತ್ತಿಹೋಗುವುದಕ್ಕೆ ಕಾತರದಿಂದ ಕಾಯುತ್ತಿದ್ದೇನೆ. ಆತನನ್ನೂ ಆತನ ಜನರನ್ನೂ ಇಸ್ಲಾಂಗೆ ಮತಾಂತರಿಸುವ ಯೋಚನೆಯೇ ಚೇತೋಹಾರಿಯಾಗಿದೆ. ಶ್ರೀರಂಗಪಟ್ಟಣಕ್ಕೆ ವಾಪಸು ಹೋಗುವುದನ್ನು ಕೂಡ ನಾನು ಮರೆತಂತಿದೆಎಂದು ಬರೆಯುತ್ತಾನೆ.

ಔತಣಕೂಟದಲ್ಲಿ ನೆತ್ತರೋಕುಳಿ

ಟಿಪ್ಪುವಿನ ತಂದೆ ಹೈದರಾಲಿಯ ಕಾಲದಲ್ಲಿ ಬಿದನೂರು ಪ್ರಮುಖ ನಗರವಾಗಿತ್ತು. ಆಗ ಅದಕ್ಕೆ ಹೈದರ್ನಗರ ಎಂದೇ ಹೆಸರು. ಚಿರಕ್ಕಲ್ ರಾಜ್ಯದ ಕಮ್ಮಾರನ್ ನಂಬಿಯಾರ್ ಎಂಬಾತನನ್ನು ಇಸ್ಲಾಂಗೆ ಮತಾಂತರಿಸಿ ಅಯಾಜ್ ಖಾನ್ ಎಂದು ನಾಮಕರಣ ಮಾಡಿ, ಆತನ ಧೈರ್ಯ-ಸಾಹಸಗಳನ್ನು ಮೆಚ್ಚಿ ಹೈದರಾಲಿ ಅವನನ್ನು ಬಿದನೂರಿನ ಮಾಂಡಲಿಕನಾಕನಾಗಿ ನೇಮಿಸಿದ್ದ. ಆದರೆ, ಟಿಪ್ಪುವಿಗೂ ಅಯಾಜ್ ಖಾನನಿಗೂ ಸಂಬಂಧ ಚೆನ್ನಾಗಿರಲಿಲ್ಲ. ಕೊನೆಗೊಮ್ಮೆ ಟಿಪ್ಪು ತನ್ನನ್ನು ಮುಗಿಸಿಹಾಕಲು ಯೋಜನೆ ರೂಪಿಸಿದ್ದಾನೆ ಎಂಬುದನ್ನು ತಿಳಿದು ಅಯಾಜ್ ಖಾನ್ ಬಾಂಬೆ ರಾಜ್ಯಕ್ಕೆ ಓಡಿಹೋದ. ಬಿದನೂರಿಗೆ ದಾಳಿ ಮಾಡಿದ ಟಿಪ್ಪು ಅಲ್ಲಿದ್ದ ಎಲ್ಲಾ ಹಿಂದೂಗಳನ್ನು, ಒಬ್ಬರನ್ನೂ ಬಿಡದೆ, ಇಸ್ಲಾಂಗೆ ಮತಾಂತರಿಸಿದ. ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದವರನ್ನು ಒಂದೋ ಕೊಲ್ಲಲಾಯಿತು, ಇಲ್ಲವೇ ಜೈಲುಗಳಲ್ಲಿ ಜೀವಮಾನಪೂತರ್ಿ ಕಳೆಯುವಂತೆ ಕೂಡಿಹಾಕಲಾಯಿತು. ಜನರನ್ನು ಇಸ್ಲಾಂಗೆ ಮತಾಂತರಿಸುವುದೇ ತನ್ನ ಜೀವನದ ಪರಮೋದ್ಧೇಶವೆಂದು ಭಾವಿಸಿದ್ದ ಟಿಪ್ಪು ಮಂಗಳೂರಲ್ಲಿ ಅತ್ಯಂತ ಕ್ರೂರವಾಗಿ ಕ್ರಿಶ್ಚಿಯನ್ನರನ್ನು ನಡೆಸಿಕೊಂಡ. ಹಲವುಬಗೆಯ ಶಿಕ್ಷೆ, ಬೆದರಿಕೆಗಳ ಮೂಲಕ ಅವರನ್ನು ಮುಸ್ಲಿಮರಾಗಿಸಲಾಯಿತು. ಪೋತರ್ುಗೀಸರು ಅಲ್ಲಿ ಕ್ರಿಶ್ಚಿಯನ್ ಮತಾಂತರ ಕೆಲಸ ಮಾಡಿದ್ದಾರೆ. ಹಾಗಾಗಿ ತಾನು ಮಾಡುತ್ತಿರುವ ಕೆಲಸಕ್ಕೆ ಯಾವ ಪಾಪಲೇಪವೂ ಇಲ್ಲ ಎಂದು ಟಿಪ್ಪು ಹೇಳಿಕೊಳ್ಳುತ್ತಿದ್ದ. ಮಂಗಳೂರಲ್ಲಿ ಆತ ನಡೆಸಿದ ಅತ್ಯಾಚಾರಕ್ಕೆ ವಿಟ್ಲದ ಬಳಿಯ ನೆತ್ತರಕೆರೆ ಈಗಲೂ ಸಾಕ್ಷಿಯಾಗಿ ನಿಂತಿದೆ.

ಟಿಪ್ಪುವಿನ ಪಾತಕಗಳಿಗೆ ಪ್ರಬಲ ಪ್ರತಿರೋಧ ಒಡ್ಡುತ್ತಿದ್ದವರೆಂದರೆ ಕೊಡವರು. ಫ್ರೆಂಚ್ ಸೇನೆಯ ನೆರವು ಪಡೆದರೂ ಕೊಡವ ಸೇನೆಯನ್ನು ಬಗ್ಗುಬಡಿಯಲು ಸಾಧ್ಯವಾಗದ ಮೇಲೆ ಟಿಪ್ಪು ಅವರನ್ನು ಉಪಾಯದಿಂದ ಸೋಲಿಸುವ ಕುತಂತ್ರ ಹೆಣೆದ. ತಾನು ಇನ್ನುಮುಂದೆ ಕೊಡವರ ಜೊತೆ ಕಾದಾಡುವುದಿಲ್ಲವೆಂದೂ ಪರಸ್ಪರ ಗೌರವ ಕೊಟ್ಟು ತಾವಿಬ್ಬರೂ ಸ್ನೇಹಿತರಂತೆ ನೆರೆಹೊರೆಯ ರಾಜ್ಯಗಳನ್ನು ನೋಡಿಕೊಂಡಿರೋಣ ಎಂದೂ ಹೇಳಿ ಕೊಡವರನ್ನು ನಂಬಿಸಿ ಭಾಗಮಂಡಲದ ದೇವಟ್ಟಿಪರಂಬು ಎಂಬಲ್ಲಿ ಔತಣಕೂಟವನ್ನು ಏರ್ಪಡಿಸಿದ. ಟಿಪ್ಪುವಿನ ಮಾತನ್ನು ನಂಬಿದ ಕೊಡವರು ಔತಣದಲ್ಲಿ ಪಾಲ್ಗೊಳ್ಳಲು ಬಂದರು. ಆಗ ಸಮಯ ಸಾಧಿಸಿ ಟಿಪ್ಪುವಿನ ಸೇನೆ ನಿರಾಯುಧ ಕೊಡವರ ಮೇಲೆ ದಾಳಿ ನಡೆಸಿತು. 1785ರ ಡಿಸೆಂಬರ್ 13ರಂದು ನಡೆದ ಈ ಹತ್ಯಾಕಾಂಡದಲ್ಲಿ ಒಟ್ಟು ಮೂವತ್ತು ಸಾವಿರ ಕೊಡವರು ಪ್ರಾಣಬಿಟ್ಟರು. ಬದುಕುಳಿದವರನ್ನು ಶ್ರೀರಂಗಪಟ್ಟಣದಲ್ಲಿ ಬಂಧಿಸಿಡಲಾಯಿತು. ಸತ್ತವರಲ್ಲಿ ಯೋಧರು ಮಾತ್ರವಲ್ಲದೆ, ಅವರ ಹೆಂಡತಿ-ಮಕ್ಕಳೂ ಸೇರಿದ್ದರು. ಆದರೆ, ಕೊಲೆ ಮಾಡುವ ಸನ್ನಿಗೆ ಬಿದ್ದಿದ್ದ ಟಿಪ್ಪು ಅವಕ್ಕೆಲ್ಲ ಕ್ಯಾರೇ ಎನ್ನಲಿಲ್ಲ. ಈ ರಣಮೇಧದ ಪೂತರ್ಿ ವಿವರಗಳು ಕೊಡಗಿನ ಇತಿಹಾಸಕಾರ ಐ.ಎಮ್.ಮುತ್ತಣ್ಣನವರ ಪುಸ್ತಕಗಳಲ್ಲೂ ಕೂಗರ್್ ಗೆಝೆಟಿಯರ್ನಲ್ಲೂ ದಾಖಲಾಗಿವೆ.

ಮೇಲುಕೋಟೆಯಲ್ಲಿ ದೀಪಾವಳಿ ಇಲ್ಲ

ಇದೇ ಬಗೆಯ ಇನ್ನೊಂದು ಹತ್ಯಾಕಾಂಡವನ್ನು ಟಿಪ್ಪು ಮೇಲುಕೋಟೆಯಲ್ಲಿ ನಡೆಸಿದ. ಹೈದರಾಲಿಯ ಮೃತ್ಯುವಿನ ನಂತರ ರಾಜ್ಯವನ್ನು ಮತ್ತೆ ತನ್ನ ಕೈವಶ ಮಾಡಿಕೊಳ್ಳಲು ಮೈಸೂರಿನ ರಾಜಮಾತೆ ಲಕ್ಷ್ಮೀ ಅಮ್ಮಣ್ಣಿಯವರು ಪ್ರಯತ್ನಿಸುತ್ತಿದ್ದದ್ದು ಟಿಪ್ಪುವಿನ ಗಮನಕ್ಕೆ ಬಂತು. ರಾಜಮಾತೆಗೆ ಮೇಲುಕೋಟೆಯ ಅಯ್ಯಂಗಾರರ ಬೆಂಬಲ ಇದೆ ಎನ್ನುವುದನ್ನು ಗೂಢಚಾರರಿಂದ ತಿಳಿದ ಟಿಪ್ಪು, ಅಲ್ಲಿನ ಮಡಿಯಂ ಅಯ್ಯಂಗಾರರ ಮೇಲೆ ಸೇಡು ತೀರಿಸಿಕೊಳ್ಳಲು ದೀಪಾವಳಿಯ ನರಕಚತುರ್ದಶಿಯ ದಿನವನ್ನು ಆಯ್ದುಕೊಂಡ. ಹಬ್ಬದ ಸಂಭ್ರಮದಲ್ಲಿ ತೊಡಗಿಕೊಂಡಿದ್ದ ಸುಮಾರು 800 ಕುಟುಂಬಗಳನ್ನು ಟಿಪ್ಪುವಿನ ಸೈನಿಕರು ಘನಘೋರವಾಗಿ ಕಡಿದುಚೆಲ್ಲಿದರು. ಇಡೀ ಮೇಲುಕೋಟೆ ಊರೇ ರಕ್ತಸಿಕ್ತವಾಯಿತು. ಎಲ್ಲೆಲ್ಲೂ ಹೆಣಗಳ ರಾಶಿ ಬಿತ್ತು. ಹಬ್ಬದ ಕಳೆಗಟ್ಟಿದ್ದ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿತು. ಮೇಲುಕೋಟೆ ದೇವಸ್ಥಾನಕ್ಕೆ ಟಿಪ್ಪು ಉಂಬಳಿ ಕೊಟ್ಟ ಎಂಬುದನ್ನು ತಾರಕದಲ್ಲಿ ಹೇಳುವ ಜಾತ್ಯತೀತ ಬುದ್ಧಿಜೀವಿಗಳು ಆತ ಅದೇ ಊರಲ್ಲಿ ಮಾಡಿದ ಈ ಭೀಕರ ನರಮೇಧದ ಸುದ್ದಿಯನ್ನು ಮಾತ್ರ ಜಾಣತನದಿಂದ ಮರೆಯುತ್ತಾರೆ. ಈ ಘಟನೆ ನಡೆದು 225 ವರ್ಷಗಳೇ ಕಳೆದರೂ, ಆ ಕಹಿಯ ನೆನಪಿಗೋ ಎನ್ನುವಂತೆ, ಮೇಲುಕೋಟೆಯಲ್ಲಿ ಇಂದಿಗೂ ದೀಪಾವಳಿ ಹಬ್ಬದ ಆಚರಣೆ ಇಲ್ಲ.

ಒಟ್ಟಲ್ಲಿ, ಟಿಪ್ಪು ತನ್ನ ಹದಿನೇಳು ವರ್ಷಗಳ ರಾಜ್ಯಾಡಳಿತದಲ್ಲಿ ಹಲವುಹತ್ತು ಯುದ್ಧಗಳನ್ನು ಮಾಡಿದ. ಇವುಗಳಲ್ಲಿ ಆತ ದೇಶಕ್ಕಾಗಿ ಮಾಡಿದ ತ್ಯಾಗದ ಹೋರಾಟ ಯಾವುದೂ ಇಲ್ಲ. ಹೆಚ್ಚಿನೆಲ್ಲ ಯುದ್ಧಗಳೂ ಅವನ ರಾಜ್ಯರಕ್ಷಣೆ ಮತ್ತು ಇಸ್ಲಾಂ ಮತದ ವಿಸ್ತರಣೆಗಷ್ಟೇ ಸೀಮಿತವಾಗಿದ್ದವು. ಖಡ್ಗದ ಮೇಲಿನ ರಕ್ತದ ಕಲೆ ಆರಲು ಬಿಡದಂತೆ ನಿರಂತರವಾಗಿ ಕಾದಾಡಿದ ಟಿಪ್ಪು ತನ್ನ ಆಡಳಿತದಲ್ಲಿ ಎಷ್ಟು ಸುಧಾರಣಾ ಕೆಲಸಗಳನ್ನು ಮಾಡಿದ? ಮೊದಲ ಆದ್ಯತೆ ಯುದ್ಧಸಂಬಂಧೀ ಕೆಲಸಗಳಿಗೇ ಆದ್ದರಿಂದ ಆತ ಯುದ್ಧೋಪಕರಣಗಳ ಅಭಿವದ್ಧಿಗೆ ಹೆಚ್ಚಿನ ಗಮನ ನೀಡಿದ್ದು ಸಹಜವೇ ಆಗಿದೆ. ಆದರೆ ಅದರ ಹೊರತಾಗಿ ಆಡಳಿತ ಸುಧಾರಣೆಯ ವಿಷಯದಲ್ಲಿ ಟಿಪ್ಪು ಹೆಸರು ಕೇಳಲ್ಪಡುವುದಿಲ್ಲ. ಇನ್ನು ಕನ್ನಡ ಭಾಷೆಗೆ ಟಿಪ್ಪುವಿನ ಕೊಡುಗೆ ಶೂನ್ಯ ಎಂದೇ ಹೇಳಬಹುದು. ಹಾಗಿರುವಾಗ ಕೇವಲ ಜಾತಿ ಆಧಾರದ ಮೇಲೆ ನಡೆಯುತ್ತಿರುವ ಟಿಪ್ಪುಜಯಂತಿ ಎಷ್ಟು ಉಚಿತ? ಜರ್ಮನಿ ದೇಶದಲ್ಲಿ ಹಿಟ್ಲರ್ ನೆನಪಲ್ಲಿ ಹಬ್ಬ ನಡೆಸುವುದು ಎಷ್ಟು ಹಾಸ್ಯಾಸ್ಪದವೋ ಕನರ್ಾಟಕದಲ್ಲಿ ಮತಾಂಧ ಮತ್ತು ನರಹಂತಕನೊಬ್ಬನ ಜಯಂತಿಯನ್ನು ಆಚರಿಸುವುದು ಕೂಡ ಅಷ್ಟೇ ನಗೆಪಾಟಲಿನ ಸಂಗತಿ. ಇದು ಸರಕಾರ, ತಾನು ಮುಟ್ಟಿರುವ ನೈತಿಕ ಅಧಪತನಕ್ಕೆ ಬರೆಯುತ್ತಿರುವ ಹೊಸ ಭಾಷ್ಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!