ಅಂಕಣ

ಅಗತ್ಯವೇ ಇಲ್ಲದ ವಿಷಯವನ್ನು ಎತ್ತಿಕಟ್ಟಿಬಿಟ್ಟರಲ್ಲ…. ಇದು ಯಾವ ಭಾಗ್ಯ!?

ಮೈಸೂರು ಹುಲಿ ಟಿಪ್ಪು ಸುಲ್ತಾನ್‍ ಮತಾಂಧನೋ ಅಲ್ಲವೋ, ತನ್ನ ಆಡಳಿತಾವಧಿಯಲ್ಲಿ ಹಿಂದೂ-ಕ್ರೈಸ್ತರುಗಳನ್ನು ನಿರ್ಧಯವಾಗಿ ಕೊಂದಿದ್ದಾನೋ ಇಲ್ಲವೋ ಈ ಬಗ್ಗೆ ಅದಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ,ಬೇಕಾದಷ್ಡು ಲೇಖನಗಳು, ಪುಸ್ತಕಗಳು ಹೊರಬಂದಿವೆ, ಹೊರಬರುತ್ತಿವೆ. ಆದ್ದರಿಂದ ಈ ಬಗ್ಗೆ ಮತ್ತಷ್ಟು ಗೀಚುವುದು ಬೇಡ. ಟಿಪ್ಪು ಸುಲ್ತಾನ್‍ ಮಾಡಿದ್ದು ತಪ್ಪು ಎನ್ನುವವರು ತಪ್ಪು ಎನ್ನಲಿ, ಸರಿ ಎನ್ನುವವರು ಸರಿ ಎನ್ನಲಿ.ಅದನ್ನಿಲ್ಲಿ ಸದ್ಯ ಅಪ್ರಸ್ತುತವಾಗಿಯೇ ಇಡೋಣ. ಆದರೆ ಅಗತ್ಯ ಚರ್ಚಿಸಬೇಕಾದ ವಿಚಾರವೇನೆಂದರೆ, ಒಂದು ಪ್ರಜಾಪ್ರಭುತ್ವದ ಆಡಳಿತದಲ್ಲಿ, ಜನ ಹಿತಾಯವನ್ನು ಬಯಸಬೇಕಾಗಿದ್ದ ನಮ್ಮ ಸರಕಾರಕ್ಕೆ ಬಹುಜನರವಿರುದ್ಧದ ಹೊರತಾಗಿಯೂ ಈ ಟಿಪ್ಪು ಎನ್ನುವ ಕರ್ನಾಟಕದ ರಾಜನೋರ್ವನ ಹುಟ್ಟಿದ ಹಬ್ಬವನ್ನು ಏಕಾಏಕಿ ಆಚರಿಸುವ ದುರ್ದು ಅದ್ಯಾಕೆ ಬಂತು ಎಂದು!? ಅದಕ್ಕಿಂತಲೂ ಮುಖ್ಯವಾಗಿ ಈ ಸಂಶಯತೀತ ರಾಜನಜಯಂತಿಯಿಂದ ರಾಜ್ಯಕ್ಕೆ ಧಕ್ಕಿದ ಪ್ರಯೋಜನ, ಸಾಧಿಸಿದ ಸಾಧನೆಯಾದರೂ ಏನು!? ಒಂದೇ ಮಾತಿನಲ್ಲಿ ಹೇಳುವುದಾದರೆ ಬೇಕಿತ್ತಾ ಈ ಮತೀಯ ಆಚರಣೆ? ಮತೀಯ ವಿಚಾರಗಳನನ್ನು ಕೆದಕಬೇಡಿ, ಶಾಂತಿಸೌಹಾರ್ಧತೆಗಳನ್ನು ಕಾಪಾಡಿ ಎಂದು ನೆನಪಾದಾಗಲೆಲ್ಲಾ ಕರೆಕೊಡುವ ಈ ನಮ್ಮ ಘನ ಸರಕಾರಕ್ಕೆ ಈ ಟಿಪ್ಪು ಜಯಂತಿ ಮೂಲಕ ತಾವುಗಳು ಕೂಡ ತುಪ್ಪ ಸುರಿದದ್ದು ಮತೀಯ ವಿಚಾರಕ್ಕೆ ಎಂಬ ಸಣ್ಣ ವಿಚಾರವೂಮನದಟ್ಟಾಗದೇ ಹೋದದ್ದು ವಿಪರ್ಯಾಸವಲ್ಲವೇ!?

ಹೌದು, ಮೈಸೂರು ಹುಲಿ ಎಂಬ ಬಿರುದಾಂಕಿತ ಟಿಪ್ಪುವನ್ನು ವೈಭವೀಕರಿಸುವವರು ವೈಭವೀಕರಿಸಲಿ, ವಿರೋಧಿಸುವವರು ವಿರೋಧಿಸಲಿ. ಅದಕ್ಕೆ ಚಕಾರವೆತ್ತುವುದು ತಪ್ಪು. ಅದೆಲ್ಲಾ ಅವರರವರ ವೈಯಕ್ತಿಕ ನಿಲುವಿಗೆಬಿಟ್ಟವುಗಳು. ಇಂತಹ  ಐತಿಹಾಸಿಕ ವಿಚಾರಗಳ ಬಗ್ಗೆ ಸಂಶೋಧನಾ ವಿದ್ಯಾರ್ಥಿಗಳು ಬೇಕಾದರೆ ತಲೆಕೆಡಿಸಿಕೊಂಡು ಅಧ್ಯಯನಕ್ಕೆ ಮುಂದಾಗಲಿ, ವಿಶ್ವ ವಿದ್ಯಾಲಯಗಳ ಪ್ರೊಫೆಸರ್‍ಗಳು ಬೇಕಾದರೆ ಈ ಬಗ್ಗೆ ಗಂಟಲುಹರಿಯುವ ಭಾಷಣ ಬಿಗಿಯಲಿ. ಇದರಿಂದ ಅದ್ಯಾವ ನಷ್ಟನೂ ಇಲ್ಲ. ಆದರೆ ವಿನಾಕಾರಣ ಪರಿಸ್ಥಿತಿ ಹದೆಗೆಡುತ್ತೆ ಎಂದು ಗೊತ್ತಿದ್ದೂ ಕೂಡ ಇಂಥಾ ಸೂಕ್ಷ್ಮ ವಿಚಾರವನ್ನ ಅನ್ಯಾಯವಾಗಿ ಎಳೆದು ತಂದು ಪರಸ್ಪರಕಚ್ಚಾಡುವಂತೆ ಮಾಡಿತ್ತಲ್ಲ ನಮ್ಮ ಸರಕಾರ ಇದನ್ನು ಒಪ್ಪುವುದಾದರೂ ಹೇಗೆ!? ಅಷ್ಟಕ್ಕೂ ಸರಕ್ಕಾರಕ್ಕೇಕೆ ಏಕಾಏಕಿ ಟಿಪ್ಪು ಮೇಲೆ ಈವರೆಗೆ ಇಲ್ಲದ ಪ್ರೀತಿ ಹುಟ್ಟಿಬಂತು? ಸ್ವಾತಂತ್ರ್ಯ ಹೋರಾಟಗಾರನೆಂಬ ಕಾರಣಕ್ಕೆ ಈಜಯಂತಿ ಎನ್ನುವುದಾದರೆ ಈತನೋರ್ವನೇನ ಕರ್ನಾಟದಲ್ಲಿ ಕಾಣುವ ಮಹಾನ್‍ ಸ್ವಾತಂತ್ರ್ಯಹೋರಾಟಗಾರ!? ಅಷ್ಟಕ್ಕೂ ನವೆಂಬರ್‍ 20ರಂದು ಹುಟ್ಟಿದ್ದ ಟಿಪ್ಪುವನ್ನು ನವೆಂಬರ್‍ 10ಕ್ಕೆ  ತಂದು ಅದೂ ಹಿಂದೂಗಳ ಹಬ್ಬದದಿನವೇ ಆತನ ಜಯಂತಿ ಆಚರಿಸುವಂತೆ ಸುತ್ತೋಲೆ ಹೊರಡಿಸಿದುದರ ಮರ್ಮವಾದರೂ ಏನು!? ಸರಕಾರದ ಈ ನಡೆಗಳ ಹಿಂದೆ ಸಂಶಯದ ಹುತ್ತವಿರುವುದರಿಂದಲೇ ತಾನೇ ಇದೀಗ ಕೋಮು ದಳ್ಳುರಿ ಹಬ್ಬಿದ್ದು!ಅಮಾಯಕರು ಬಲಿಯಾದದ್ದು! ಈ ವರೆಗೆ ಶಾಲಾ ಕಾಲೇಜುಗಳ ಸಿಲೆಬಸ್‍ಗಳಲ್ಲಿ, ಇತಿಹಾಸದ ಪುಸ್ತಕಗಳಲ್ಲಷ್ಟೇ ವಿರಾಜಮಾನನಾಗಿದ್ದ ಈ ಟಿಪ್ಪು ಸುಲ್ತಾನ್‍ ಎಂಬ ಒಬ್ಬ ಸಾಮಾನ್ಯ ರಾಜ ಇಂದು ಗಲ್ಲಿ ಗಲ್ಲಿಗಳಲ್ಲಿಬ್ಯಾನರ್‍ ಆಗಿದ್ದಾನೆ ಎಂದಾದರೆ, ಹತ್ತು ಹಲವಾರು ಗೆಳೆಯರ ಬಳಗದ ಹುಟ್ಟಿಗೆ ಕಾರಣವಾಗಿ ಹಿಂಸೆಗೆ ಸುರಿಯುವ ತುಪ್ಪವಾಗುತ್ತಾನೆ ಎಂದಾದರೆ ಅದಕ್ಕೆ ನೇರ ಹೊಣೆ ನಮ್ಮ ಸರಕಾರವಲ್ಲದೆ ಮತ್ತಿನ್ನ್ಯಾರು!?ಸರಕಾರವೇನೋ ಸುತ್ತೋಲೆ ಹೊರಡಿಸಿ ಕೈತೊಳೆದುಕೊಂಡು ಬಿಟ್ಟಿತ್ತು. ಆದರೆ ಇದೀಗ ರಾಜ್ಯಾದ್ಯಂತ ಹಬ್ಬಿರುವ ಕೋಮು ಕಿಡಿಯನ್ನು ನಂದಿಸುವ ಬಗೆ ಹೇಗೆ? ಸರಕಾರದ ಈ ವಿಚಕ್ಷಣ ಮತಿಯಿಂದಾಗಿ ಅಮಾಯಕಕುಟುಂಬಗಳು ಇದೀಗ ಜೀವ ಕಳೆದುಕೊಂಡು ಒದ್ದಾಡುತ್ತಿದೆಯಲ್ಲಾ ಈ ನಷ್ಟವನ್ನು ಪರಿಹಾರವೆಂದು ಕೊಡುವ ಲಕ್ಷ ರೂಪಾಯಿಗಳಿಂದ ತುಂಬಿಸಲು ಸಾಧ್ಯವೇ!? ಅಷ್ಟಕ್ಕೂ ಇದೀಗ ಹೊತ್ತಿಸಿದ ಕಿಡಿ ಖಂಡಿತಾ ಒಂದುಶಾಶ್ವತ ಕಿಡಿಯಂತಾಗಲಿದೆ! ಅಂದರೆ ಪ್ರತೀ ವರ್ಷದ ನವೆಂಬರ್‍ ತಿಂಗಳಲ್ಲಿ ಮತ್ತೆ ಮತ್ತೆ ಹುಟ್ಟಿ ಬರಲಿರುವ ಈ ಟಿಪ್ಪುವಿನಿಂದ ಅದೆಷ್ಟು ಜೀವಗಳು ಬಲಿಯಾಗಬೇಕೋ ಆ ದೇವರೇ ಬಲ್ಲ! ಜನರ ಮನೆ ಮನಗಳನ್ನುಹೊಡೆದು ಅಧಿಕಾರ ಗಟ್ಟಿಗೊಳಿಸ ಹೊರಟಿರುವ ನಮ್ಮ ಸರಕಾರಕ್ಕೆ ಇದರ ತಲೆಬಿಸಿಯೇ ಇಲ್ಲ ಬಿಡಿ! ಒಟ್ಟಿನಲ್ಲಿ ಜನರ ಮಧ್ಯೆ ಶಾಶ್ವತ ವಿಷಬೀಜವನ್ನು ಇಕ್ಕಿದ ಕೀರ್ತಿ ಖಂಡಿತಾ ನಮ್ಮ ಕರ್ನಾಟಕ ಸರಕಾರಕ್ಕೆಸಲ್ಲಲೇಬೇಕು! ಜೊತೆಗೆ ಟಿಪ್ಪುವಿನಂತ ಓರ್ವ ಐತಿಹಾಸಿಕ ರಾಜನನ್ನು ಕೇವಲ ಮುಸಲ್ಮಾನರ ನಾಯಕನನ್ನಾಗಿ ಚಿತ್ರಿಸಿದ ಕೀರ್ತಿಯೂ ಕೂಡ!!

ನಿಜವಾಗಿಯೂ ಇದನ್ನು ದುರಂತವೆನ್ನಲೇಬೇಕು, ಭಾವನೆಗಳ ಜೊತೆ ಆಡುವ ಆಟವೆನ್ನಬೇಕು. ಇರುವ ಹತ್ತು ಹಲವಾರು ಸಮಸ್ಯೆಗಳನ್ನು ಬಗೆಹರಿಸುವುದು ಬಿಟ್ಟು ಅದರ ಜೊತೆಗೆ ಮತ್ತೊಂದು ಅಪಾಯಕಾರಿ ಮತೀಯವಿಚಾರವನ್ನು ಕೊಟ್ಟು ಬಿಟ್ಟಿತ್ತಲ್ಲ ನಮ್ಮ ಸರಕಾರ….ಇದನ್ನು  ಸರಕಾರದ ಶಾಶ್ವತ ಸಾಧನೆಯೆನ್ನಬೇಕಷ್ಟೇ! ಟಿಪ್ಪು ಜಯಂತಿಯಂದು ನಡೆದ ಹಿಂಸಾಚಾರ, ನಷ್ಟ, ಸಾವು ನೋವುಗಳಿಗೆಲ್ಲಾ ಕೊಮು ಮನೋಸ್ಥಿತಿಯಯುವಕರೇ ಕಾರಣ ಎಂದು ಸುಖಾಸುಮ್ಮನೆ ಷರಾ ಬರೆಯಬಹುದು, ನಡೆದಿರುವ ಹಿಂಸಾಚಾರಕ್ಕೆ ಕೋಮು ಸಂಘಟನೆಗಳೇ ಕಾರಣ ಎಂದು ಅಪವಾದ ಬೇರೆ ಹಾಕಿಬಿಡಬಹುದು  ಆದರೆ ಆ ಯುವಕರನ್ನು ದಾರಿ ತಪ್ಪುವಹಾಗೆ ಮಾಡಿದ್ದು, ಸಮಾಜದೊಳಗಡೆ ಕೋಮು ಮನೋಸ್ಥಿತಿಯನ್ನು ಬೆಳೆಸುವಂತೆ ಮಾಡಿದ್ದು ನಮ್ಮ ಸರಕಾರವೇ ಎಂಬುದು ನೆನಪಿರಲಿ! ಹೇಳಿ, ಒಂದು ವೇಳೆ ಟಿಪ್ಪು ಜಯಂತಿಯ ಆಚರಣೆಯ ಬಗ್ಗೆ ನಮ್ಮ ಘನ ಸರಕಾರಹೆಜ್ಜೆಯನ್ನು ಇಡದೇ ಇರುತ್ತಿದ್ದರೆ ಅದ್ಯಾವ ಮುಸಲ್ಮಾನ ಇಲ್ಲಿ ಟಿಪ್ಪು ಜಯಂತಿಯ ಉತ್ಸವ ಬೇಕೆಂದು ಪಟ್ಟು ಹಿಡಿಯುತ್ತಿದ್ದ!? ಹೋರಾಟ ಮಾಡುತ್ತಿದ್ದ!? ಖಂಡಿತಾ ಇಲ್ಲ. ಯಾಕೆಂದರೆ ಮುಸಲ್ಮಾನರಲ್ಲಿ ಜಯಂತಿಗಳನ್ನುಆಚರಿಸುವುದೇ ಒಂದು ಧರ್ಮನಿಷಿದ್ಧವಾದ ವಿಚಾರ. ಪ್ರವಾದಿಯವರ ಹುಟ್ಟುಹಬ್ಬವನ್ನು ಬಿಟ್ಟು ಮತ್ತೇನನ್ನೂ ಆಚರಿಸುವ ಸಂಪ್ರದಾಯವಿಲ್ಲ ಮುಸಲ್ಮಾನರಲ್ಲಿ. ಹಾಗಿರಲು ಇದೀಗ ಮುಸಲ್ಮಾನರನ್ನು ಟಿಪ್ಪು ಜಯಂತಿಆಚರಿಸುವಂತೆ ಪ್ರೇರೇಪಿಸಿದ್ದು, ಸಿಹಿ ತಿಂಡಿ ಹಂಚಿ ಬರ್ತ್‍ ಡೇ ಸೆಲಬ್ರೇಷನ್‍ ಮಾಡುವಂತೆ ಮಾಡಿದ್ದು ನಿಜವಾಗಿಯೂ ನಮ್ಮ ‘ಜಾತ್ಯಾತೀತ’ ಸರಕಾರದ ದೊಡ್ಡ ಸಾಧನೆಯೇ!! ಈ ವರೆಗೆ ಇದ್ದ ಸೂಕ್ಷ್ಮ ವಿಷಯಗಳನ್ನೇಅಪಾಯಕಾರಿ ಮಟ್ಟದಲ್ಲಿ ಇಟ್ಟಿರುವ ಈ ನಮ್ಮ ಸಮಾಜಕ್ಕೆ ಇದೀಗ ಟಿಪ್ಪುವನ್ನು ಕೂಡ ಎಳೆದು ತಂದು ಒಂದು ಸಮಸ್ಯೆಯಾಗಿಸಿದ್ದು ನಿಜವಾಗಿಯೂ ಖೇದಕರ. ಟಿಪ್ಪುವಿನ ವಿಚಾರದಲ್ಲಿ ಸರಕಾರದ ಧೋರಣೆಯನ್ನುಅದ್ಯಾವ ಕೋನದಲ್ಲಿ ತರ್ಕಿಸಿದರೂ ಸರಿಯೆನ್ನಿಸುವುದಿಲ್ಲ. ಬಹುಷಃ ಈ ರೀತಿ ತರ್ಕಿಸಿದ ನಾನೂ ಕೂಡ ಸರಕಾರದ ದೃಷ್ಟಿಕೋನದಲ್ಲಿ ಓರ್ವ ಕೋಮುವಾದಿಯೇ ಇರಬಹುದೇನೋ!!?

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!