ದೇಶ ಕಂಡ ಅತ್ಯಂತ ಪ್ರಾಮಾಣಿಕ ಸ್ವಾಭಿಮಾನಿ ಪ್ರಧಾನಿ ಯಾರಿರಬಹುದು..? ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿದೆ. ಅವರೇ ‘ಲಾಲ್ ಬಹದ್ದೂರ್ ಶಾಸ್ತ್ರಿ’.
‘ಅಕ್ಟೋಬರ್ – ೨’ ಎಂದೊಡನೆ ತಟ್ಟನೆ ನೆನಪಿಗೆ ಬರುವುದು ‘ಗಾಂಧಿ ಜಯಂತಿ’ ಎಲ್ಲರ ಮನದಲ್ಲಿಯೂ ಗಾಂಧಿಜಿಯೇ ತುಂಬಿಹೋಗಿದೆ… ಈ ಶಾಸ್ತ್ರಿಯವರ ಹುಟ್ಟಿದ ದಿನವೂ ಅಕ್ಟೋಬರ್-೨. ಆದರೆ ಯಾವೊಬ್ಬರಿಗೂ ಇವರ ನೆನಪೇ ಇಲ್ಲ… ಶಾಸ್ತ್ರಿಯವರ ಜಯಂತಿಯನ್ನು ಆಚರಿಸುವುದು ಬಿಡಿ ನೆನಪಿಸುವರೇ ಇಲ್ಲ…
ಒಂದು ವೇಳೆ ಪ್ರಾಮಾಣಿಕತೆಗೆ ಮತ್ತು ಸ್ವಾಭಿಮಾನಕ್ಕೆ ಒಂದೇ ಶಬ್ಧದಲ್ಲಿ ಉತ್ತರಿಸುವುದಾದರೆ ಅದು ‘ಶಾಸ್ತ್ರಿ’ ಎಂದರೆ ತಪ್ಪಿಲ್ಲ… ಪ್ರಾಮಾಣಿಕತೆ ಮತ್ತು ಶಾಸ್ತ್ರಿ ಈ ಎರಡೂ ಶಬ್ಧಗಳು ಒಂದಕ್ಕೊಂದು ಬಿಟ್ಟಿರಲಾರದ ನಂಟನ್ನು ಬೆಳೆಸಿಕೊಂಡಿದೆ… ಈ ದಿನ ನಾವು ಈ ಶಾಸ್ತ್ರಿಯವರನ್ನು ನೆನಪಿಸಿಕೊಳ್ಳದಿದ್ದರೆ ಪ್ರಾಮಾಣಿಕತೆಗೆ ಮಾಡಿದಂತಹ ಬಹುದೊಡ್ಡ ದ್ರೋಹ..!!! ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ ಒಮ್ಮೆ ಅವರ ಮಗ ತನಗೆ ಓಡಾಡಲು ದ್ವಿಚಕ್ರವಾಹನ ಬೇಕೆಂದು ಬೇಡಿಕೆಯನ್ನು ಇಟ್ಟರು. ಆಗ ಶಾಸ್ತ್ರಿಯವರು ತನ್ನಲ್ಲಿ ದುಡ್ಡಿಲ್ಲವೆಂದು ಹೇಳಿದರು… ಮಗ ತನ್ನ ಹಠ ಬಿಡದೆ ತಾಯಿಯ ಬಳಿ ಬೇಡಿಕೆ ಇಟ್ಟನು. ತಾಯಿಯ ಬಳಿಯಿದ್ದ ಹಣದಿಂದ ಮಗನು ದ್ವಿಚಕ್ರ ವಾಹನವೊಂದನ್ನು ಖರೀದಿಸಿದ.. ಅದನ್ನು ಗಮನಿಸಿದ ಶಾಸ್ತ್ರಿಯವರಿಗೆ ಆಶ್ಚರ್ಯದ ಜೊತೆಗೆ ಅನುಮಾನವೂ ಕಾಡಲಾರಂಭಿಸಿತು. ಎಲ್ಲಿಂದ ಬಂತು ಇಷ್ಟೊಂದು ದುಡ್ಡು ತನ್ನ ಮಡದಿ ಬಳಿ ಎಂದು. ತಡಮಾಡದೆ ತನ್ನ ಮಡದಿಯನ್ನು ಕೇಳಿಯೇ ಬಿಟ್ಟರು “ದ್ವಿಚಕ್ರವಾಹನದ ಖರೀದಿಗೆ ನಿನ್ನ ಬಳಿ ಹಣವಾದರು ಎಲ್ಲಿಂದ ಬಂತು?” ಎಂದು.. ಅದಕ್ಕೆ ಪ್ರತಿಯಾಗಿ ಶಾಸ್ತ್ರಿಯವರ ಮಡದಿಯು “ನಿಮಗೆ ಪ್ರತಿ ತಿಂಗಳು ಬರುವ ಸಂಬಳದ ಉಳಿತಾಯದಿಂದ”. ಎಂದುಬಿಟ್ಟರು.. ತಕ್ಷಣಕ್ಕೆ ಏನನ್ನೂ ಹೇಳದೆ ಸುಮ್ಮನಾದರು.. ಇದಾದ ಮರು ದಿನವೇ ಸರಕಾರಕ್ಕೆ “ನನಗೆ ನೀವು ನೀಡುತ್ತಿರುವ ಸಂಬಳದಲ್ಲಿ ಕೊಂಚ ಉಳಿತಾಯವಾಗುತ್ತಿದೆ. (ಅದಕ್ಕೆ ಸರಿಯಾದ ಲೆಕ್ಕಾಚಾರ ನೀಡಿ) ತನಗೆ ಬರುತ್ತಿರುವ ಸಂಬಳ ಹೆಚ್ಚಾಗಿದೆ ಮತ್ತು ಇದು ಸಾರ್ವಜನಿಕ ಹಣ . ಪೋಲು ಮಾಡಬಾರದು.. ಮುಂದಿನ ದಿನದಿಂದ ತನಗೆ ಸಂಬಳದಲ್ಲಿ ಕೊಂಚ ಕಡಿತಗೊಳಿಸಿ.” ಎಂದು ಪತ್ರದಲ್ಲಿ ಬರೆದಿದ್ದರು… ಇಂತಹ ಹುಚ್ಚು ಧೈರ್ಯ ಮಾಡಲು ಯಾರಿಗಾದರು ಸಾಧ್ಯವಾಗುವುದೇ.?? ಇದೊಂದೇ ಸನ್ನಿವೇಶ ಸಾಕು ಅವರ ಪ್ರಾಮಾಣಿಕತೆಯನ್ನು ತೋರಿಸಲು..
೧೯೬೫ರ ಭಾರತ-ಪಾಕ್ ಯುದ್ಧದಲ್ಲಿ ಕೈಗೊಂಡ ನಿರ್ಣಯ, ಪಾಕಿಸ್ಥಾನವು ಸೋತು ಹೈರಾಣಾಗಿಸಿ ಅಮೇರಿಕವನ್ನೂ ಬೆಚ್ಚಿ ಬೀಳಿಸಿತು. ‘ಜೈ ಜವಾನ್… ಜೈ ಕಿಸಾನ್… ‘ ಎಂಬ ಘೋಷಣೆ ಮೊಳಗಿಸಿ ದೇಶದ ಸೈನಿಕರನ್ನು ಮತ್ತು ರೈತರ ಮನದಲ್ಲಿ ಉತ್ಸಾಹ ಮೂಡಿಸಿದವರು… ದೇಶಕ್ಕಾಗಿ ವಾರದಲ್ಲಿ ದಿನದ ಒಂದು ಹೊತ್ತು ಉಪವಾಸ ಮಾಡಿ ಮಾದರಿ ಪ್ರಧಾನಿಯಾದರು. ಆಡಳಿತದಲ್ಲಿ ಹೊಸ ಛಾಪು ಮೂಡಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದರು. ಇದು ನೆಹರೂ ನಿಷ್ಠರ ಬಾಯಿಗೆ ಬಿಸಿತುಪ್ಪ ಬಿದ್ದಂತಾಯಿತು… ಬಲವಂತದಿಂದ ಶಾಸ್ತ್ರಿಯವರನ್ನು ರಷ್ಯಾದ ಟಾಷ್ಕೆಂಟ್ ಗೆ ಕರೆದೊಯ್ದು ಪಾಕಿಸ್ಥಾನ ಮತ್ತು ಭಾರತದ ಮಧ್ಯೆ ನಡೆದ ಒಪ್ಪಂದಕ್ಕೆ ಒಲ್ಲದ ಮನಸ್ಸಿನಿಂದ ಸಹಿಯನ್ನು ಹಾಕಿಸಲಾಯಿತು… ರಾತ್ರಿ ಶಾಸ್ತ್ರಿಯವರು ಮಲಗುವ ಮುನ್ನ ಅವರ ಆಪ್ತ ಕುಡಿಯಲು ಒಂದು ಲೋಟ ಹಾಲು ಕೊಟ್ಟ. ಇದಾದ ಕೆಲವೇ ಕ್ಷಣದಲ್ಲಿ ಹೃದಯಾಘಾತದಿಂದ ಶಾಸ್ತ್ರಿಯವರು ಇಹಲೋಕ ತ್ಯಜಿಸಿದರು. ಅವರ ದೇಹವನ್ನು ಭಾರತಕ್ಕೆ ತರುವಷ್ಟರಲ್ಲಿ ದೇಹವೂ ನೀಲಿ ಬಣ್ಣಕ್ಕೆ ತಿರುಗಿತ್ತು.ಮರಣಾನಂತರ ಮರಣೋತ್ತರ ಪರೀಕ್ಷೆಯನ್ನು ಮಾಡಿರಲಿಲ್ಲ… ಇದು ಕೊಲೆಯೆನ್ನುವುದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ.. ಇದನ್ನು ಹಲವರು ಗಮನಿಸಿ ತಮ್ಮೊಳಗೆ ಸಾವಿನ ಹಿಂದಿನ ಅನುಮಾನವನ್ನು ವ್ಯಕ್ತಪಡಿಸಿದ್ದರು… ಇಂದಿಗೂ ಹಲವರು ಈ ಸಾವಿನ ರಹಸ್ಯದ ಗೊಂದಲ ಮೂಡಿಸುತ್ತಿದ್ದಾರೆ. ಆದುದರಿಂದ ಶಾಸ್ತ್ರಿಯವರ ಸಾವು ಸಹಜವಲ್ಲ ಎಂಬುವುದು ಖಾತ್ರಿಯಾಯಿತು… ಇದೊಂದು ಪೂರ್ವ ನಿಯೋಜಿತ ಕೊಲೆ…ಎನ್ನುವುದು ಇನ್ನೂ ಕೆಲವರ ವಾದ. ಟಾಷ್ಕೆಂಟ್ ಪ್ರವಾಸದಲ್ಲಿ ಶಾಸ್ತ್ರಿಯವರೊಂದಿಗೆ ಇಂದಿರಾ ಗಾಂಧಿಯೂ ಇದ್ದಿದ್ದರಂತೆ…!!! ಶಾಸ್ತ್ರಿಯವರ ನಂತರ ಪ್ರಧಾನಿ ಪಟ್ಟಕ್ಕೇರಿದ್ದು ಇಂದಿರಾಗಾಂಧಿಯೇ .!!!
ಶಾಸ್ತ್ರಿಯವರಿಗೆ ರಾತ್ರಿ ನೀಡಿದ ಹಾಲಿನಲ್ಲಿ ವಿಷ ಬೆರೆಸಿದ್ದು ಯಾರು ?? ಸಹಜ ಸಾವಾಗಿದ್ದರೆ ಅವರ ದೇಹ ನೀಲಿ ಬಣ್ಣಕ್ಕೆ ತಿರುಗಿದ್ದು ಹೇಗೆ??
ಕೊಲೆಯಾಗಿದ್ದರೆ ಯಾರ ಕೈವಾಡವಿದೆ? ಇಂತಹಾ ಹಲವು ಪ್ರಶ್ನೆಗಳು ಗೊಂದಲ ಸೃಷ್ಟಿಸದೆ ಇರಲಾರದು. ಕೊಲೆಯೋ ಅಥವಾ ಸಹಜ ಸಾವೋ ಎನ್ನುವುದರ ಬಗ್ಗೆ ಇದುವರೆಗೂ ಯಾವ ಸರ್ಕಾರವು ಯಾವುದೇ ತನಿಖೆಗೆ ಕೈ ಹಾಕಲೇ ಇಲ್ಲ…!!! ಇದು ಶಾಸ್ತ್ರಿಯವರ ಪ್ರಾಮಾಣಿಕತೆಗೆ ಕೊಟ್ಟ ಬೆಲೆ ಇಷ್ಟೆಯಾ??? ಇಂತಹ ಮಹಾ ಪ್ರಾಮಾಣಿಕ ಪ್ರಧಾನಿಯ ಹುಟ್ಟುಹಬ್ಬದ ದಿನವನ್ನು ನಮ್ಮ ದೈನಿಕದರ್ಶಿನಿಯಲ್ಲಿ ಗುರುತಿಸದೆ ಪ್ರತ್ಯಕ್ಷ-ಪರೋಕ್ಷವಾಗಿ ಅವಮಾನ ಮಾಡುವುದು ಎಷ್ಟು ಸರಿ??? ಭಾರತೀಯರಾದ ನಮಗೆ ಶೋಭೆ ತರುತ್ತದೆಯೇ… ??? ಈ ನಿರ್ಲಕ್ಷ್ಯ ಯಾಕಾಗಿ…??? ಪ್ರಾಮಾಣಿಕರಾದರೆ ಭಾರತದಲ್ಲಿ ಎಲ್ಲರಿಗೂ ಇದೇ ಗತಿಯೇ??? ಎನ್ನುವುದು ಸಾಮಾನ್ಯ ಭಾರತೀಯನ ಮನದಲ್ಲಿ ಮೂಡುವ ಪ್ರಶ್ನೆಗಳ ಸುರಿಮಳೆ.. ಬಹುಷಃ ಶಾಸ್ತ್ರಿಯವರು ಗಾಂಧೀಜಿಗಿಂತಲೂ ಸ್ವಾಭಿಮಾನ ಮತ್ತು ಪ್ರಾಮಾಣಿಕತೆಯಲ್ಲಿ ಒಂದು ಹೆಜ್ಜೆ ಮುಂದೆ ಎಂದರೆ ತಪ್ಪಿಲ್ಲ.!!! ಕೇವಲ ೧೭ ತಿಂಗಳುಗಳ ಇವರ ಪ್ರಧಾನಿ ಆಡಳಿತ ಶೈಲಿಯು ಇಡೀ ವಿಶ್ವದ ಗಮನ ಸೆಳೆದದ್ದು, ದೇಶಕ್ಕಾಗಿ ವಾರದಲ್ಲಿ ಒಂದು ಹೊತ್ತು ಉಪವಾಸ ಮಾಡಿ ಮಾದರಿಯಾದ ಪ್ರಧಾನಿ ಇನ್ನೊಬ್ಬರಿಲ್ಲ. ಮಹಾತ್ಮ ಗಾಂಧಿಯವರೂ ಹಲವಾರು ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಅದರಲ್ಲಿ ಅನುಮಾನವಿಲ್ಲ. ಆದರೆ ಶಾಸ್ತ್ರಿಯವರೂ ಜೀವನದುದ್ದಕ್ಕೂ ಪ್ರಾಮಾಣಿಕರಾಗಿಯೇ ಇದ್ದು ದೇಶಸೇವೆಯನ್ನು ಮಾಡಿದ್ದಾರೆ… ಯಾರಿಗೂ ತಮ್ಮ ನಡವಳಿಕೆಯಲ್ಲಿ ಅನುಮಾನ ಅಥವಾ ವಿವಾದವನ್ನು ಕಂಡುಕೊಳ್ಳುವಂತೆ ಮಾಡಿರಲಿಲ್ಲ. ಇದುವರೆಗಿನ ಎಲ್ಲಾ ಪ್ರಧಾನಿಗಳಲ್ಲಿ ಇವರೇ ಸರ್ವಶ್ರೇಷ್ಠರು. ಇವರ ಸಾವಿನ ಕುರಿತು ಯಾವುದೇ ಗೊಂದಲವಿದ್ದಿರಬಹುದು ಆದರೆ ಹುಟ್ಟುಹಬ್ಬದ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಆದರೂ ನಮ್ಮಲ್ಲಿ ಏಕೆ ತಾರತಮ್ಯ..?
‘ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ‘ ಅನುಮಾನ ಅಥವಾ ವಿವಾದಗಳು ಏನೇ ಇರಲಿ. ಆದರೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಂತು ಸತ್ಯ ‘ ಗಾಂಧಿ ಜಯಂತಿ ಎನ್ನುವ ಕೃತಕ ಮಹಾ ಬಿರುಗಾಳಿಯಲ್ಲಿ ಶಾಸ್ತ್ರಿ ಎಂಬ ಮಹಾ ವೃಕ್ಷವನ್ನು ಧರೆಗುರುಳಿಸಿದ್ದು ಸರಿಯೇ??? ಈ ೨ನೇಯ ಅಕ್ಟೋಬರ್ ಗಾಂಧಿಯೊಬ್ಬರದ್ದೇ ಅಲ್ಲ. ಮುಂದಿನ ದಿನಗಳಲ್ಲಿ ಅಕ್ಟೋಬರ್ ೨ ‘ಗಾಂಧಿ – ಶಾಸ್ತ್ರಿ ಜಯಂತಿ’ ಎಂದು ಪ್ರಸಿದ್ಧಿಯಾಗಲಿ. ಇದರಿಂದ ಗಾಂಧಿಯವರ ಜೊತೆಗೆ ಶಾಸ್ತ್ರಿಯವರಿಗೂ ಗೌರವ ಸಿಗುತ್ತದೆ ಮತ್ತು ಉಳಿದೆಲ್ಲಾ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದಂತಾಗುವುದಿಲ್ಲ.. . “ಸಾಮರ್ಥ್ಯವಿದ್ದರೆ ಈ ಅಕ್ಟೋಬರ್ ೨ ರ ದಿನವನ್ನು ‘ಗಾಂಧಿ-ಶಾಸ್ತ್ರಿ ಜಯಂತಿ’ ಯೆಂದು ಬದಲಾಯಿಸಿ” ಎಂಬ ನೇರ ಸವಾಲನ್ನು ನಾವು ಸರ್ಕಾರವನ್ನು ಕೇಳಬಹುದು.! ಒಂದುವೇಳೆ ಈ ರೀತಿ ಮಾಡಿದ್ದೇ ಆದರೆ ಶಾಸ್ತ್ರಿಯವರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ.. ಸರ್ಕಾರ ಮಾಡದಿದ್ದರೇನಂತೆ ನಾವೇ ಶಾಸ್ತ್ರಿಯವರ ನೆನಪು ಮಾಡಿಕೊಳ್ಳೋಣ…
-
Jagath Bhat
jagath.bhat@yahoo.com