ಪ್ರಚಲಿತ

ಹೇಳಿ ಈ ಪ್ರಶಸ್ತಿ ನ್ಯಾಯಯುತವೇ!?

ಪ್ರಶಸ್ತಿ ಒಂದು ಗೌರವ. ಒಬ್ಬರಿಗೆ ಪ್ರಶಸ್ತಿ ಬರುತ್ತದೆ ಎಂದರೆ ಅಭಿನಂದನಗಳ ಮಹಾಪೂರ ಹರಿದು ಬರಬೇಕು. ಅವರ ವಿಚಾರದಲ್ಲಿ ಲೇಖನಗಳು ಮೂಡಿಬರುತ್ತಿರಬೇಕು. ಬೆಳೆದು ಬಂದ ದಾರಿಯ ಬಗ್ಗೆಯೂ ಅಭಿಮಾನದಿಂದ ಚರ್ಚೆಗಳು ನಡೆಯುತ್ತಿರಬೇಕು.ಅದು ಆ ಪ್ರಶಸ್ತಿಗೆ ಸಂದುವ ಗೌರವವೂ ಹೌದು. ಅದೆಷ್ಟೋ ಬಾರಿ ಪ್ರಶಸ್ತಿ ಸ್ವೀಕರಿಸುವ ವ್ಯಕ್ತಿಯಿಂದಾಗಿಯೇ ಆ ಪ್ರಶಸ್ತಿಯ ತೂಕ ಕೂಡ ನೂರು ಪಟ್ಟು ಹೆಚ್ಚಾದಂತೆನ್ನಿಸುತ್ತದೆ. ಹಾಗೆನೇ ಇನ್ನು ಕೆಲವರಿಗೆ ಪ್ರಶಸ್ತಿ ಭಾಜನವಾದಾಗ ಅಯ್ಯೋ ಅವರಿಗೆ ಈಮೊದಲೇ ಪ್ರಶಸ್ತಿ ಬರಬೇಕಾಗಿತ್ತು ಅನ್ನಿಸುವುದೂ ಇದೆ. ಇರಲಿ, ಆದರೆ ಇತ್ತೀಚೆಗೆ ನಮ್ಮ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಓರ್ವ ಬುದ್ಧಿವಂತ(?) ಪ್ರೊಪೆಸರ್ ಮಹಾಶಯರಿಗೂ ಪ್ರಶಸ್ತಿಯನ್ನು ಘೋಷಿಸಿದ್ದು ಇದೀಗ ತೀವ್ರ ಸುದ್ದಿಯಾಗಿದೆ. ಆದರೆವಿಪರ್ಯಾಸವೆಂಬಂತೆ ಅದು ಮಾತ್ರ ಈ ಮೇಲಿನದಕ್ಕಿಂತ ಸಂಪೂರ್ಣ ಭಿನ್ನವಾದುದು! ಯಾಕೆಂದರೆ ಅಕಾಡೆಮಿಯ ಈ ಘೋಷಣೆಯಿಂದ ಅದೇ ವರ್ಗದ ಒಂದಷ್ಟು ಬೆರಳೆಣಿಕೆಯ ಮಂದಿ ಖುಷಿಯಾಗಿದ್ದು ಬಿಟ್ಟರೆ ಬಹುತೇಕ ಎಲ್ಲರೂ ಮುಖಸಿಂಡರಿಸುವಂತಾಗಿದೆ! ಪ್ರಶಸ್ತಿಯ ಆಯ್ಕೆಗೂ ಒಂದು ಮಾನದಂಡಗಳಿರಬೇಕಿತ್ತಲ್ಲವೇ ಎಂದು ಪ್ರಶ್ನಿಸುವಂತಾಗಿದೆ. ಅಸಲಿಗೆ ಅದ್ಯಾವ ಕೃತಿಗೆ, ಅದ್ಯಾವ ಸಾಧನೆಗೆ ಈ ಗೌರವ ಪ್ರಶಸ್ತಿಯನ್ನು ‘ಮಾಹಾಶಯರಿಗೆ’ ನೀಡಲಾಗುತ್ತಿದೆ ಎಂಬುದೇ ಯಾರಿಗೂತಿಳಿದಂತೆ ಕಾಣುತ್ತಿಲ್ಲ! ಈವರೆಗಿನ ‘ಜೀವಮಾನ ಶ್ರೇಷ್ಟ ಸಾಧನೆಗೆ’ ಎಂಬ ಒಕ್ಕಣೆಯಷ್ಟೇ! ಯಾವುದು ಆ ಜೀವಮಾನ ಶ್ರೇಷ್ಟ ಸಾಧನೆ!? ಸಮಾಜದ ಶಾಂತಿ ಕದಡಿದ್ದೇ!? ಅಥವಾ ವೈಚಾರಿಕತೆಯ ಹೆಸರಲ್ಲಿ ವೇದಿಕೆಗಳಲ್ಲಿ ಅನಗತ್ಯವಾಗಿ ಹಿಂದೂಧರ್ಮದನಂಬಿಕೆಗಳನ್ನು, ಬಹುಸಂಖ್ಯಾತರನ್ನು ಹೀಯಾಳಿಸಿದ್ದೇ!? ಇಲ್ಲ ಸರಕಾರ ಅದೇನು ಬಯಸುತ್ತೋ ಆ ಮಾದರಿಯಲ್ಲೇ ತಮ್ಮ ಹೆಜ್ಜೆಗಳನ್ನು ಇರಿಸಿದ್ದೇ!? ಖಂಡಿತಾ ಇವೆಲ್ಲವುಗಳಿಗೆ  ಸ್ವತಃ ಅಕಾಡೆಮಿಯಷ್ಟೇ ಉತ್ತರಿಸಬೇಕಿದೆ! ಇರಲಿ, ಪ್ರಶಸ್ತಿಯೇನೋಘೋಷಣೆಯಾಯಿತು, ಆದರೆ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ ಇದೀಗ ಇಡೀ ಸಾಹಿತ್ಯ ಅಕಾಡೆಮಿಯೇ ಪೋಲೀಸ್ ಬಂದೋಬಸ್ತಿಲ್ಲಿ ಕೆಲಸ ಮಾಡುವಂತಾಗಿದೆ! ಪ್ರಶಸ್ತಿಗೆ ಭಾಜನವಾಗುತ್ತಿರುವ ವ್ಯಕ್ತಿಗೆ ಅಭಿನಂದನೆಯ ಪತ್ರಗಳು, ಪರವಾದ ಲೇಖನಗಳುಬರುವುದು ಬಿಡಿ  ಇದೀಗ ಟೀಕೆ ಟಿಪ್ಪಣಿಗಳ ವಿಚಾರಗಳೇ ಪತ್ರಿಕೆ ತುಂಬಾ ಹರಿದಾಡುತ್ತಿವೆ! ಸಾಲದಕ್ಕೆ ಪ್ರಶಸ್ತಿಯ ವಿರುದ್ಧ ಬಲವಾದ ಸಾಮಾಜಿಕ ಹೋರಾಟವೂ ಜಾಗೃತಗೊಂಡು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲೂ ಧ್ವನಿ ಎತ್ತುವಂತಾಗಿದೆ! ಎಂಥಾ ಅವಸ್ಥೆನೋಡಿ.

ತಮಾಷೆ ಅನ್ನಿಸಲ್ವೇ!?

ಹೌದು, ಪ್ರಶಸ್ತಿಯು ಯಾವತ್ತೂ ಸಾಧನೆಯ ಬೆನ್ನೇರಬೇಕು. ಸಾಧಕನನ್ನು ಹರಸಿಕೊಂಡು ಬರಬೇಕು. ಅದೆಷ್ಟೋ ಬಾರಿ ದುಡ್ಡು ಕೊಟ್ಟೋ ಇಲ್ಲವೇ ಪ್ರಭಾವ ಬೀರಿಯೋ ಪ್ರಶಸ್ತಿಗಿಟ್ಟಿಸಿಕೊಳ್ಳುವುದೂ ಇದೆಯಾದರೂ ಅದನ್ನು ಕೂಡ ಒಂದೆರಡು ದಿನಗಳಲ್ಲಿ ಮರೆತುಬಿಡಬಹುದು. ಆದರೆ ವೈಚಾರಿಕತೆಯ ಹೆಸರಲ್ಲಿ ನಿಜವಾಗಿಯೂ ಸಮಾಜದ ಸ್ವಾಸ್ಥ್ಯವನ್ನು ಕದಡುವವರಿಗೆ ಪ್ರಶಸ್ತಿ ನೀಡುವ ಕೆಲಸವಿದೆಯಲ್ಲ ಅದು ನಿಜವಾಗಿಯೂ  ಜನರಿಗೆ ಮಾಡುವ ದೊಡ್ಡ ಅಪಮಾನ. ಜೊತೆಗೆ ಇದು ಸಮಾಜದ ಆರೋಗ್ಯ ಹದೆಗೆಡಿಸಲುಇರುವ ಮತ್ತೊಂದು ಕಾರಣವೂ ಹೌದು. ಹೀಗೆ ಪ್ರಶಸ್ತಿ ನೀಡುತ್ತಾ ಹೋದರೆ ಸಮಾಜದಲ್ಲಿ ಇಂತಹುದೆ ಮನಸ್ಥಿತಿಯ ಜನ ಮತ್ತಷ್ಟು ಬೆಳೆದು ನಿಲ್ಲುತ್ತಾರಷ್ಟೇ. ಇದರಿಂದ ಸಮಾಜಕ್ಕಾಗುವ ಲಾಭವೇನು!? ಇಂತವರಿಂದ ಸಮಾಜದೊಳಗೆ ವೈಮನಸ್ಸು ಅಲ್ಲದೆಬೇರೇನು ಸೃಷ್ಟಿಯಾಗಲು ಸಾಧ್ಯ!? ಹೇಳಿ ಕೆ.ಎಸ್.ಭಗವಾನ್ ಎಂಬ ಹರಕಲು ಬಾಯಿಯ ನಿವೃತ್ತ ಇಂಗ್ಲೀಷ್ ಪ್ರೋಫೆಸರ್ ಮಹಾಶಯರಿಗೆ ಪ್ರಶಸ್ತಿ ನೀಡುವುದರಿಂದ ನಮ್ಮ ಸಾಹಿತ್ಯ ಅಕಾಡೆಮಿಯ ಗೌರವ ಮಣ್ಣುಪಾಲಾದಂತಾಗಿಲ್ಲವೆ!?

ಒಂದೇ ಮಾತಿನಲ್ಲಿ ಹೇಳುವುದಾದರೆ ಈ ಕೆ.ಎಸ್ ಭಗವಾನ್’ರವರು ಮಾಡಿರುವ ಕೆಲಸಕ್ಕಿಂತ ಎಬ್ಬಿಸಿರುವ ಸಾಮಾಜಿಕ ರಾಡಿಯೇ ಹೆಚ್ಚು! ಅವರು ಬರೆದಿರುವ ಕೃತಿಗಳು ಅದೆಷ್ಟು ಮಂದಿಗೆ ನೆನಪಿದೆಯೋ ಆ ದೇವರೇ ಬಲ್ಲ ಆದರೆ ಪದೇ ಪದೇ ಕಾರುವ’ಹಣಿಮುತ್ತುಗಳಂತೂ’ ಎಲ್ಲರಿಗೂ ತಿಳಿದದ್ದೇ! ಹಿಂದೆಕ್ಕೆ ನೋಡುವುದಾದರೆ, 1985ರಲ್ಲಿ ಶಂಕರಾಚಾರ್ಯರ ಬಗ್ಗೆ ವೈಚಾರಿಕತೆಯ ಹೆಸರಲ್ಲಿ ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ ಎಂಬ ಪುಸ್ತಕ ಬರೆದು ಮೊದಲ ಬಾರಿಗೆ ಸಮಾಜದಲ್ಲಿ ರಾಡಿ ಎಬ್ಬಿಸಿದವರುಇವರು! ಆದಿಶಂಕರರು ಒಬ್ಬ ಜಾತಿ ಪದ್ಧತಿಯನ್ನು ಬಲವಾಗಿ ಬೆಂಬಲಿಸಿದ್ದ ವ್ಯಕ್ತಿ, ಮಹಿಳೆಗೆ ಅವರು ಸ್ವಾತಂತ್ರ್ಯವನ್ನು ನೀಡೇ ಇಲ್ಲ ಎಂಬೆಲ್ಲಾ ತಗಾದೆಯಿರುವ ಕೃತಿಯದು! ಆದಿ ಶಂಕರರು ಬರೆದ ಅದೆಷ್ಟೋ ಮಹಾನ್’ಗ್ರಂಥಗಳನ್ನು, ಸಾಧನೆಗಳನ್ನುಕಡೆಗಣಿಸುತ್ತಾ ಅದೆಲ್ಲೋ ಒಂದೆಡೆ ನುಸುಳುವ ಜಾತಿ ಪದ್ಧತಿಯಷ್ಟೇ ಈ ಕೃತಿಗೆ ಮೂಲಪ್ರೇರಣೆಯಾದದ್ದು ವಿಪರ್ಯಾಸವೇ ಸರಿ! ಶಂಕರರ ಜೀವನ ಯಾತ್ರೆಯಲ್ಲಿ ಬರುವ ಅದ್ಯಾವುದೋ ‘ಚಾಂಡಾಲ’ ಆವೃತ್ತಿಯನ್ನು ಪಡೆದುಕೊಂಡು ಶಂಕರರನ್ನು ನಾವೆಲ್ಲಾಜಾತಿ ಪದ್ಧತಿಯ ಹೆಸರಲ್ಲಿ ದೂಷಿಸಬೇಕೆಂತೆ! ಅರೇ, ಅದೇ ಶಂಕರರು ಚಾಂಡಲನ ವಿಚಾರದಲ್ಲಿ ‘ಮಾನೀಷ ಪಂಚಕಮ್’ ಎಂಬ ಶ್ಲೋಕವನ್ನು ಬರೆದು ‘ಅರಿತವ ಯಾರೂ ಬೇಕಾದರೂ (ಆತ ಕೀಳು ಜಾತಿಯವನಾಗಿದ್ದರೂ) ಗುರುವಾಗಬಲ್ಲ’ ಎಂದು ಸಾರಿದ್ದರಲ್ಲಾಎಂದು ಕೇಳಿದರೆ ಮಾತ್ರ ಇವರಲ್ಲಿ ಉತ್ತರವಿಲ್ಲ! ಮೊಸರಲ್ಲೂ ಕಲ್ಲನ್ನುಡುಕುವುದು ಎಂದರೆ ಬಹುಷಃ ಇದೇ ಇರಬೇಕು.

ಈ ಭಗವಾನರು ಓರ್ವ ಆಂಗ್ಲ ಪ್ರೊಫೇಸರ್ ಆದರೆ ಕೃತಿಗಳನ್ನು ರಚಿಸಿದ್ದು ಕನ್ನಡದಲ್ಲೇ  ಜಾಸ್ತಿ! ಎಣಿಕೆಯ ಸಾಲುಗಳಲ್ಲಿ ಇವರು ರಚಿಸಿದ ‘ಬದಲಾವಣೆ, ‘ಅಂತರ್ಯ’, ‘ಗಾಂಧಿಯನ್ನು ಗೋಡ್ಸೆ ಯಾಕೆ ಕೊಂದ’, ‘ಇತಿಹಾಸದ ಪಾಠಗಳು’ ಎಂಬಿತ್ಯಾದಿ ಕೆಲವುಪುಸ್ತಕಗಳನ್ನು ಉದಾಹರಿಸಬಹುದಾದರೂ  ಅವೆಲ್ಲವುಗಳು ಸಮಾಜದಲ್ಲಿ ಅದೆಷ್ಟು ಪ್ರಭಾವ ಬೀರಿವೆ, ಆ ಕೃತಿಗಳೆಷ್ಟು ಮಾರಾಟವಾಗಿವೆ ಎಂಬುದನ್ನು ಮಾತ್ರ ಯಾರೂ ಕೇಳುವಂತಿಲ್ಲ! ಅವೆಲ್ಲವುಗಳು ಅಂತೆಗೊಂದು ಬೊಂತೆಯಾಗಿ ಪುಸ್ತಕಗಳ ಸಾಲಲ್ಲಿಸೇರ್ಪಡೆಯಾದವಷ್ಟೇ! ಒಟ್ಟಿನಲ್ಲಿ ಅದ್ಯಾವುದರಿಂದಲೂ ಭಗವಾನರಿಗೆ ಸಮಾಜದಲ್ಲಿ ಸದ್ದು ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದಲೇ ಇವರು ಅನ್ಯ ಉಪಾಯವಿಲ್ಲದೆ ಪ್ರಚಾರಕ್ಕಾಗಿ ಅಪ್ಪಿಕೊಂಡ ಒಂದು ಮಾರ್ಗವೆಂದರೆ ಅದು ಸಾರ್ವಜನಿಕ ‘ವೇದಿಕೆ’! ತನ್ನದೇಮನೋಸ್ಥಿತಿಯಿರುವ ಸರಕಾರದ ಸಾಥ್ ಬೇರೆ ಸಿಕ್ಕಿದರಿಂದ ತನ್ನ ಹರಕಲು ನಾಲಗೆಯ ಮೂಲಕ ಅದೂ ಎಲ್ಲೇ ಇರಲಿ, ಯಾವ ಕಾರ್ಯಕ್ರಮದ ವೇದಿಕೆಯೇ ಇರಲಿ ಮೈಕ್ ಸಿಕ್ಕಿತು ಎಂದಾಕ್ಷಣ ರಾಮ,ಸೀತೆ, ಕೃಷ್ಣ ಭಗವದ್ಗೀತೆ ಎಂದು ಉಸುರಲು ಪ್ರಾರಂಭಿಸಿಬಿಟ್ಟರು! ಮೊದಲು ಇದೇ ಆದಿ ಶಂಕರರನ್ನು ವೇದಿಕೆ ಏರಿ ಹಿಗ್ಗಾಮುಗ್ಗ ಏಕವಚನದಲ್ಲಿ ಜಾಡಿಸಿದರು. ಶಂಕರರು ಜಾತಿ ಪದ್ಧತಿಯನ್ನು ಬಲವಾಗಿ ಪ್ರತಿಪಾದಿಸಿದರು ಎಂಬ ಆಪಾದನೆ ಮಾಡಿದರು. ಇವರ ಒಂದು ಆಪಾದನೆಗೆ ಹತ್ತಾರು ಪ್ರತಿ ಉತ್ತರಗಳುಬಂತಾದರೂ ಅವೆಲ್ಲವುಗಳಿಗೆ ಈ ಭಗವಾನ್ ಉತ್ತರವೀಯದೆ ಜಾಣ ಎಸ್ಕೇಪ್ ಆಗಿದ್ದು ಗಮನೀಯ.  ಬಳಿಕ ವಿಚಾರ ಮೌನವಾಗುತ್ತಲೇ ಮತ್ತೆ ಇವರು ಕೈಗೆತ್ತಿಕೊಂಡ ವಿಷಯ ಪವಿತ್ರ ಭಗವದ್ಗೀತೆ! ಇದೊಂದು ಹಿಂಸೆಯನ್ನು ಪ್ರತಿನಿಧಿಸುವ ಪುಸ್ತಕವೆಂತಲೂ,ಜಾತಿ ಪದ್ಧತಿಗೆ ಅವಕಾಶವೀಯುವ ಗ್ರಂಥವೆಂತಲೂ ಆಪಾದಿಸುತ್ತಾ ಭಗವದೀತೆಯನ್ನು ಸುಟ್ಟು ಬಿಡಬೇಕು ಎಂದು ಅರಚಿದರು! ಪರಿಣಾಮ ಮತ್ತೊಂದಷ್ಟು ಸುದ್ದಿಯಾದರು ಈ ಭಗವಾನರು. ಭಗವದ್ಗೀತೆಯ ಒಂಭತ್ತನೇ ಅದ್ಯಾಯದ 32, 33ನೇ ಶ್ಲೋಕಗಳಲ್ಲಿವರ್ಣ ತಾರತಮ್ಯದ ಬಗ್ಗೆ ಉಲ್ಲೇಖಗಳಿವೆ ಎಂಬುದು ಇವರ ಆಪಾದನೆ. ಅಯ್ಯೋ ಸ್ವಾಮಿ ಇದೇ ಭಗವದ್ಗೀತೆಯಲ್ಲಿ ‘ಚಾತುವಣ್ರ್ಯಂ ಮಯ ಸೃಷ್ಣಂ ಗುಣ ಕರ್ಮಾ ವಿಭಾಗಷಃ’ ಎಂಬುದೂ ಇದೇಯಲ್ಲ ಎಂದರೆ ಮಾತೇ ಕೇಳದ ಭಗವಾನ್ ಈತ! ಸರಿ ನಿಮ್ಮದೇಸರಿ ಇರಬಹುದು ಬನ್ನಿ ಯಾವುದಕ್ಕೂ ಜ್ಞಾನ ಅಜ್ಞಾನಗಳ ಬಗ್ಗೆ ಸಾರ್ವಜನಿಕವಾಗಿಯೇ ಚರ್ಚಿಸೋಣ ಎಂದು ಟಿ.ವಿ ಮಾಧ್ಯಮದವರು ವಿಷ್ಣುದಾಸ್ ನಾಗೇಂದ್ರಾಚಾರ್ಯರೊಡನೆ ‘ಓಪನ್ ಡಿಬೇಟ್’ಗೆ ಕರೆದರೆ ಕೊಣೆಕ್ಷಣದಲ್ಲಿ ಅತ್ತ ಸುಳಿಯದೆ,  ಫೋನ್’ಗೂಸಿಗದೆ ಎಸ್ಕೇಪ್ ಆದ ಜಾಣ ‘ಬುದ್ಧಿಜೀವಿ’ ಇವರು! ನಿಜವಾಗಿಯೂ ಇವರೊಬ್ಬ ಪ್ರಖರ ವಿಚಾರವಾದಿಗಳಾಗಿರುತ್ತಿದ್ದರೆ ತನ್ನೆಲ್ಲಾ ಟೀಕೆಗಳಿಗೆ ಬಲವಾದ ಸಮರ್ಥನೆಗಳನ್ನು ನೀಡುವ ಕೆಲಸ ಮಾಡಬೇಕಿತ್ತು. ಕನಿಷ್ಟ ಪಕ್ಷ ಒಂದು ಸವಿವರವಾದ ಲೇಖನವನ್ನಾದರೂಪ್ರಕಟಿಸಿ ಅದರ ಮೂಲಕವಾದರೂ ಬಲಪಂಥೀಯ ವಿಚಾರವಂತರಿಗೆ ಸಮರ್ಥ ಉತ್ತರವನ್ನು ನೀಡಬೇಕಿತ್ತು. ಆದರೆ ಅದ್ಯಾವುದೂ ಭಗವಾನರಿಂದ ಬರಲೇ ಇಲ್ಲ. ತನ್ನ ಮೂಗಿನ ನೇರದ್ದೇ ಸರಿ ಎನ್ನುವ ವಿಚಾರವಾದಿಗಳಿಂದ ಇಂತಹುಗಳನ್ನು ನಿರೀಕ್ಷಿಸುವುದುತಪ್ಪಾಗುತ್ತೆ ಬಿಡಿ! ಒಂದು ರೀತಿಯಲ್ಲಿ ಕಲ್ಲು ಹೊಡೆದು ಹೋಡುವ ಬುದ್ಧಿವಂತಿಕೆಯಷ್ಟೇ ಇವರದ್ದು! ಆದರೆ ಅಷ್ಟರಲ್ಲಾಗಲೇ ಸರಕಾರದ ಕೆಲ ‘ಕೈ’ಗಳು ಇವರ ಬೆಂಬಲಕ್ಕೆ ನಿಂತವು ನೋಡಿ. ಇನ್ನೊಂದೆಡೆ ನಾಸ್ತಿಕತೆಯನ್ನೇ ಒಪ್ಪುವ ‘ಎಡ’ಬಿಡಂಗಿಬರವಣಿಗೆಗಾರರು ಕೂಡ ಸುತ್ತ ನೆರೆಯಲು ಪ್ರಾರಂಭಿಸಿದರು! ಪರಿಣಾಮ ವೇದಿಕೆ ಏರಿ ಕಾರುವ ವಿಷಗಳೆಲ್ಲಾ ‘ವಾಕ್ ಸ್ವಾತಂತ್ರ್ಯದ’ ಪಟ್ಟಿಗೆ ಸೇರಿಕೊಂಡವು! ಇದೀಗ ಮತ್ತೆ ಭಗವಾನ್ ಸುದ್ದಿ ಮಾಡಿದ್ದು ಹಿಂದೂಗಳು ಅದ್ಯಾರನ್ನು ಪೂಜನೀಯವಾಗಿಕಾಣುತ್ತಾರೋ ಅದೇ ಶ್ರೀರಾಮ ಹಾಗೂ ಶ್ರೀಕೃಷ್ಣರನ್ನು ವಿಮರ್ಶಿಸಿ! ಒಂದೆಡೆ ‘ಐ ಸರ್ವ್’ ಎಂಬ ಹೈದರಬಾದ್ ಮೂಲದ ಸಂಶೋಧನಾ ಸಂಸ್ಥೆಯೊಂದು ಅತ್ಯಾಧುನಿಕ ಸಾಪ್ಟ್ವೇರ್ ಬಳಸಿ ರಾಮಾಯಣ, ಮಹಾಭಾರತಗಳ ಸತ್ಯತೆಯ ಬಗ್ಗೆ ಬೆಳಕು ಚೆಲ್ಲಿಭಾರತದ ಕೀರ್ತಿಯನ್ನು ವಿಶ್ವಕ್ಕೆ ಪಸರಿಸುವ ಕೆಲಸ ಮಾಡುತ್ತಿರಬೇಕಾದರೆ ಇತ್ತ ನಮ್ಮ ಭಗವಾನರು ರಾಮ ಕೃಷ್ಣರ ಹುಟ್ಟಿನ ಬಗ್ಗೆಯೇ ಪರಮ ಪಂಡಿತನಂತೆ ಪ್ರಶ್ನೆಯಿಟ್ಟು ವಿಮರ್ಶೆಗಿಳಿದರು! ಭಗವಾನ್ ಪ್ರಕಾರ ಅವರಿಬ್ಬರೂ ತಂದೆಗೆ ಹುಟ್ಟಿದವರು ಅಲ್ಲವೇಅಲ್ಲವಂತೇ! ಸಾವಿರಾರು ವರ್ಷಗಳ ಕೆಳಗಿನ ಒಂದು ಸದ್ಗ್ರಂಥವೆಂದು ಪರಿಗಣಿಸಲ್ಪಟ್ಟಿರುವ ಗ್ರಂಥಗಳನ್ನು, ಅದರಲ್ಲಿ ಬರುವ ಪಾತ್ರಗಳನ್ನು ಇದೀಗ ಪ್ರಶ್ನಿಸಿ ಆಗುವ ಲಾಭವಾದರೂ ಏನು ಎಂಬುದಕ್ಕೆ ಭಗವಾನರಷ್ಟೇ ಉತ್ತರಿಸಬೇಕಿದೆ! ಅಷ್ಟಕ್ಕೂ ಇಂತಹಪ್ರಶ್ನೆಗಳಿಂದ ಇಲ್ಲಿರುವ ಬಹುಸಂಖ್ಯಾತರ ಮನಸಿಗೆ ಆಗುವ ಘಾಸಿಗೆ ಹೊಣೆಯಾರು? ಗ್ರಂಥಗಳ ಬಗ್ಗೆ, ಅದರ ಪಾತ್ರಗಳ ಬಗ್ಗೆ ಒಪ್ಪಿಗೆ, ಸಮ್ಮತಿ ಇಲ್ಲವೆಂದಾದರೆ ಅದು ಅವರರವರ ಅಭಿಪ್ರಾಯ. ಆದರೆ ನೀವೂ ಒಪ್ಪಬೇಡಿ ಸುಟ್ಟು ಬಿಡಿ ಎನ್ನಲು ಇವರ್ಯಾರು?ಹಾಗೇನೆ ಇಲ್ಲಿ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಮೊದಲಿಗೆ ರಾಮಾಯಣ ಇಲ್ಲವೇ ಮಹಾಭಾರತಗಳೆರಡೂ ನಿಜವಲ್ಲ ಅವುಗಳು ಕವಿ ಸೃಷ್ಟಿ ಎಂದೇ ಒಪ್ಪೋಣ. ಆದರೆ ಅವೆರಡನ್ನೂ ಬರೆದವರು ಬ್ರಾಹ್ಮಣರಲ್ಲ ಎಂಬುದನ್ನು ಕೂಡ ಒಪ್ಪಿಕೊಳ್ಳಬೇಕು ತಾನೆ!? (ಒಂದು ಬೇಡನ ಕೊಡುಗೆಯಾದರೆ ಇನ್ನೊಂದು ಮತ್ಸ್ಯಗಂಧಿಕೆಯ ಮಗನ ಕೊಡುಗೆ) ಹಾಗಾದರೆ ಇಲ್ಲಿ ಬ್ರಾಹ್ಮಣೇತರರು ಕೂಡ ಕೃಷ್ಣನ ಹೆಸರಲ್ಲಿ ಜಾತಿ ಧರ್ಮದ ಪೋಷಣೆಯ ಮಾತನಾಡಿದರೆ!? ಎರಡನೆಯದಾಗಿ ಹಿಂದೂ ಸದ್ಗ್ರಂಥಗಳಲ್ಲಿ ಬರುವ ‘ಬ್ರಾಹ್ಮಣ’ ‘ಶೂದ್ರ’ ಎಂಬ ಪದಗಳ ಅರ್ಥವೇನು? ‘ನಾ ಯೋನಿ ನಾಪಿ ಸಂಸ್ಕಾರೋ, ನಶೃತಾ ನಚ ಸಂತತಿ ಕಾರಣಾನೀ ದ್ವಿಜತ್ಪೃಷ್ಯ ವೃತ್ತಿಮೇವಾತೋ ಕಾರಣಾನ್’ ಎಂಬ ಶ್ಲೋಕಕ್ಕೇ ಅರ್ಥವೇ ಇಲ್ಲವೇ ಹಾಗಾದರೆ!? ಮಹಾಭಾರತದಲ್ಲೂ ಯಕ್ಷ-ಧರ್ಮರಾಯರನಡುವಿನ ಸೊಗಸಾದ ಸಂಭಾಷಣೆಗಳಲ್ಲಿ ಇದೇ ಬ್ರಾಹ್ಮಣತ್ವದ ಬಗ್ಗೆ ಸವಿವರಗಳಿವೆ. ಇದೆಲ್ಲವನ್ನೂ ನುಂಗಿ ಹಾಕಿ ಅದೆಲ್ಲಿಂದಲೋ ಒಂದಂಶವನ್ನು ತೆಗೆದುಕೊಂಡು ತಮ್ಮ ಮೂಗಿನ ನೇರಕ್ಕೆ ವಾದಿಸುವುದನ್ನು ವಿಚಾರವಾದವೆಂದು ಒಪ್ಪಿಕೊಳ್ಳಬೇಕೆ!?

ಯೋಚಿಸೋದಕ್ಕೆ, ಕ್ರಾಂತಿ ಮಾಡೋದಿಕ್ಕೆ ಬೇರೆ ವಿಚಾರಗಳೇ ಇಲ್ಲವೇ!? ಸಮಾಜದಲ್ಲಿ ಇವತ್ತಿಗೂ ಜೀವಂತವಾಗಿರುವ ಹಲವಾರು ಸಮಸ್ಯೆಗಳಿವೆ. ಕಪ್ಪು ಪರದೆಯ ಹಿಂದೆ ಮುಖವನ್ನು ಮುಚ್ಚಿಕೊಂಡು ಸ್ವಾತಂತ್ರ್ಯವೆಂದರೇನೆಂದೇ ಅರಿಯದೆ ಪುರಷ ಪ್ರಧಾನಸಮಾಜದಲ್ಲಿ ಇಂದಿಗೂ ನರಳುತ್ತಿದ್ದಾಳಲ್ಲಾ ಹೆಣ್ಣುಮಗಳು ಇವಳ ಬಗ್ಗೆಯೇಕೆ ಧ್ವನಿ ಎತ್ತುತ್ತಿಲ್ಲ!? ಇವತ್ತಿಗೂ ಆಕೆಯ ವೈವಾಹಿಕ ಬಂಧ ಬರೇ ಮೂರು ಬಾರಿಯ ಮೌಖಿಕ ಶಬ್ದಕ್ಕೆ ಅದೂ ಯಾವುದೇ ಪರಿಹಾರವಿಲ್ಲದೆ ಕೊನೆಯಾಗುತ್ತಿದೆಯಲ್ಲ ಅದರ ಬಗ್ಗೆಯೋಚಿಸುವ ಬುದ್ದಿವಂತಿಕೆ ನಮ್ಮ ಬುದ್ದಿಜೀವಿಗಳಿಗೆ ಇಲ್ಲವೇ!? ಇವುಗಳು ಉದಾಹರಣೆಗಳಷ್ಟೇ ಇಂತಹುದೇ ಜೀವಂತವಾಗಿರುವ ಅಷ್ಟೇ ಕಂಟಕವಾಗಿರುವ ಹಲವಾರು ಆಚರಣೆಗಳು ನಮ್ಮಲ್ಲಿ ಇನ್ನೂ ಇವೆ.  ಆದರೆ ಇವೆಲ್ಲವುಗಳ ಬಗ್ಗೆ ಯೋಚನೆ ಮಾಡದೆ,ಚಿಂತನಾತ್ಮಕ ಕೃತಿ ಬರೆಯದೇ ಕೇವಲ ಹಿಂದೂ ನಂಬಿಕೆಗಳ ಮೇಲೆ ಕಲ್ಲೆಸದು ಮಜಾನೋಡುವ ಮನಸ್ಥಿತಿಯನ್ನು ಮಾತ್ರ ವಿಚಾರವಾದವೆಂದು ಒಪ್ಪಬೇಕೆ!? ಹೇಳೀ ಇಂತಹ ಮನಸ್ಥಿತಿಯನ್ನು ಪ್ರತಿನಿಧಿಸುವ ಭಗವಾನ್ ಅದೇಗೆ ಪ್ರಶಸ್ತಿಗೆ ಯೋಗ್ಯರು!?

  • ಪ್ರಸಾದ್ ಕುಮಾರ್, ಮಾರ್ನಬೈಲ್

kulal22@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!