ಪ್ರಚಲಿತ

ಕರಾವಳಿಗರಿಗೆ ಇದು ಉಳಿವಿಗಾಗಿ ಹೋರಾಟ..??

ಮೊನ್ನೆ ಉಪ್ಪಿನಂಗಡಿಯಲ್ಲಿ ಜನಶಕ್ತಿ ಪ್ರದರ್ಶನವಾಯಿತು, ಸುಮಾರು ಹತ್ತು ಸಾವಿರ ಜನ ಸರ್ಕಾರಕ್ಕೆ ವಿರುದ್ಧವಾಗಿ ನೀರು ಕೊಡಲಾರೆವೆಂದು ಘೋಷಣೆಯನ್ನು ಕೂಗುತ್ತಿದ್ದರು.. ಒಗ್ಗಟ್ಟಿನ ಬೃಹತ್ ಬಲ ಪ್ರದರ್ಶನ ಅದು.. ಅದರ ಪರಿಣಾಮ ನೆನ್ನೆ ಚನ್ನೈ ಹಸಿರು ಪೀಠ 13 ದಿನಗಳ ಕಾಲ ಕಾಮಗಾರಿಯನ್ನುಸ್ಥಗಿತಗೊಳಿಸಿದೆಹಾಗಿದ್ದರೆ ಹೋರಾಟ ಎಷ್ಟು ಸರಿ ಎಷ್ಟು ತಪ್ಪು…?? ಅಸಲು ಎತ್ತಿನಹೊಳೆಯ ತಿರುವಲ್ಲಿ ಇರುವ ಸಾಧಕ ಬಾಧಕಗಳೇನು..?? ಇದರ ಒಂದು ಸುಧೀರ್ಘ ವಿಶ್ಲೇಷಣಾ ವರದಿ ಇಲ್ಲಿದೆ

ಕಥೆ ಆರಂಭವಾಗಿ ಬಹಳ ವರ್ಷಗಳೇ ಆಯಿತು.. ಇದು ಮತ್ತೆ ನೀರಿಗಾಗಿ ಗೋಳು ಪ್ರಾರಂಭವಾಗಿ ತುಂಬಾ ವರ್ಷವಾಯ್ತು, ಇದಕ್ಕೆ ಅತಿಹೆಚ್ಚು ಬಲಿಯಾಗುತ್ತಿರುವದೆಂದರೆ ಬಯಲುಸೀಮೆ.. ನೀರಿಲ್ಲದೆ ಜನರು ಕಂಗಾಲಾಗಿರುವುದು ಸತ್ಯ.. ಇರುವ ನೀರೂ ಶುದ್ಧ ನೀರಲ್ಲ.. ಕಾರ್ಖಾನೆಗಳ ಕಲ್ಮಶ ಸೇರಿದ ವಿಷಯುಕ್ತನೀರು.. ಆದರೆ ಉಳಿವಿಗಾಗಿ ಹೊರಡುವಾಗ ಮಾನವ ನಿಯಮಗಳನ್ನು ಮೀರುತ್ತಾನಂತೆ, ಹಾಗೆಯೇ ಅಲ್ಲಿನ ಜನರು ಉಳಿವಿಗಾಗಿ ಪರಿಶುದ್ಧ ನೀರನ್ನೇ ಕುಡಿಯಬೇಕು ಎಂಬ ನಿಯಮವನ್ನು ಬಿಟ್ಟು ಸಿಗುವ ನೀರನ್ನೇ ಕುಡಿದು ಬದುಕುತ್ತಿದ್ದಾರೆ.. ಸಮಸ್ಯೆಯನ್ನು ಪರಿಹಾರ ಮಾಡಲೆಂದು ಒಂದು ದಾರಿ ಯೋಚಿಸಿದಾಗಹೊಳೆದದ್ದು ಒಂದೇ ಅದೇನೆಂದರೆ ಸಮುದ್ರಕ್ಕೆ ಸೇರುವ ನೀರನ್ನು ಡ್ಯಾಮ್ ಕಟ್ಟಿ ತಡೆದು, ಆಗ ನಿಲ್ಲುವ ನೀರನ್ನು ಬಳಸಿಕೊಳ್ಳುವ ಯೋಜನೆಯದು.. ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಗಳಾಗಿದ್ದಾಗ ರೂಪಿಸಿದ್ದ ಯೋಜನೆಗಳಲ್ಲಿ ರೀತಿಯ ಯೋಜನೆಗಳೂ ಸಹ ಒಂದು.ಕರ್ನಾಟಕದಲ್ಲೂ ಸಹ ನೀರಿನ ಬರ ಹೊಸತೇನಲ್ಲ. ಕರ್ನಾಟಕದಲ್ಲೂ ಯೋಜನೆಯನ್ನು ಜಾರಿಗೊಳಿಸಬೇಕೆಂದು ನಿರ್ಧರಿಸಿತು ಸರ್ಕಾರ. ಆದರೆ ಒಂದು ಸಮಸ್ಯೆ ಉಂಟಾಗಿತ್ತು. ಏನೆಂದರೆ, ಡ್ಯಾಮ್ ಕಟ್ಟಲು ಬೇಕಾಗುವ ಎಲ್ಲ ಸೌಕರ್ಯಗಳಿದ್ದವು ಆದರೆ ನದಿಗಳೇ ಇರದಂತಾಯ್ತು. ಯಾಕೆಂದರೆ ಹೆಚ್ಚಿನದಾಗಿಇರುವ ಬಯಲು ಸೀಮೆಗಳು ಪೂರ್ವಕ್ಕೆ ಮತ್ತು ಪೂರ್ವಕ್ಕೆ ಹರಿಯುವ ನದಿಗಳಿಗೆ ಡ್ಯಾಮ್ ನಿರ್ಮಿಸಿ ನೀರಾವರಿಗೆ ಮತ್ತು ಕಾರ್ಖಾನೆಗಳಿಗೆ ನೀಡಿ ಆಗಿತ್ತು.  ಆದರೆ  ದಿ.ಜಿ. ಎಸ್. ಪರಮಶಿವಯ್ಯ ಎಂಬ ನೀರಾವರಿ ತಜ್ಞರು ತಮ್ಮ ತಂಡದ ನೇತೃತ್ವದಲ್ಲಿ ಒಂದು ಯೋಜನೆಯನ್ನು ತಯಾರಿಸಿದರು. ಅದೇನೆಂದರೆಪಶ್ಚಿಮಕ್ಕೆ ಅಂದರೆ ಅರಬ್ಬೀ ಸಮುದ್ರದ ದಿಕ್ಕಿಗೆ ಹರಿಯುವ ನೀರನ್ನು ತರುವುದು. ಅದರಲ್ಲಿರುವ ಒಂದು ಯೋಜನೆ ಈಗ ವಿವಾದ ಮತ್ತು ವಿಶೇಷ ಪ್ರತಿಭಟನೆಯ ಕೇಂದ್ರಕ್ಕೆ ನಾಂದಿ ಹಾಡಿದೆ. ಯೋಜನೆಯೇ ಎತ್ತಿನಹೊಳೆ ಯೋಜನೆ

 ಪರಮಶಿವಯ್ಯ ವರದಿಯಲ್ಲಿ ಏನಿದೆ.?

ಪರಮಶಿವಯ್ಯ ವರದಿ ಸರ್ಕಾರಕ್ಕೆ ಕೆಲವು ಶಿಫಾರಸುಗಳನ್ನು ಮಾಡಿತ್ತು.. ಅದೇನೆಂದರೆ, ಸಮುದ್ರ ಪಾಲಾಗುವ ನೀರನ್ನು ನೀರಾವರಿ ಮತ್ತು ಕುಡಿಯಲು ಬಳಸಿಕೊಳ್ಳುವುದು. ಅದಕ್ಕಾಗಿ ಪಶ್ಚಿಮ ಮುಖವಾಗಿ ಹರಿಯುವ ನದಿಗಳ ನೀರನ್ನು ತಡೆದು ಬಳಸಬಹುದು ಎಂಬ ಸಲಹೆಯನ್ನು ನೀಡಿ ಅದಕ್ಕನುಸಾರವಾಗಿಯೋಜನಾ ವರದಿಯನ್ನು ಸಿದ್ಧಪಡಿಸಿತು. ಒಟ್ಟು ಏಳು ಯೋಜನೆಗಳನ್ನು ಹೊಂದಿರುವ ವರದಿಯಲ್ಲಿ ಒಂದು ಯೋಜನೆಗೆ ಎತ್ತಿನಹೊಳೆಯನ್ನು ಬಳಸಿಕೊಳ್ಳಲಾಗುತ್ತದೆ. 9 ಜಿಲ್ಲೆಯ 43 ತಾಲೂಕುಗಳು ಹಾಗೂ ಬೆಂಗಳೂರು ನಗರದ ಕುಡಿಯುವ ಹಾಗೂ ನೀರಾವರಿ ಯೋಜನೆಗಳಿವೆ. ಇದರ ಒಂದು ಭಾಗವನ್ನುಮಾತ್ರ ಎತ್ತಿನಹೊಳೆ ಯೋಜನೆಗೆ ಬಳಸಿಕೊಳ್ಳಲಾಗ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಇದರ ಬಹುಪಾಲು ನೀರು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ನೀಡಲಾಗುತ್ತದೆ ಜಿಲ್ಲೆಗಳಿಗೆ ಕುಡಿಯಲು ಮತ್ತು ನೀರಾವರಿ ಎಂದು ಹೇಳಲಾಗುತ್ತಿದೆ. ಆದರೆ ಇದರಲ್ಲಿ ಅನೇಕ ಸಾಧಕಬಾಧಕ ಅಂಶಗಳಿದ್ದುಕಣ್ಣೆದುರಿದ್ದರೂ ಕಾಣದಾಗಿದೆ. ಒಂದಷ್ಟು ವೈಜ್ಞಾನಿಕ ಪರೀಕ್ಷೆಗಳು ಈಗಾಗಲೇ ನಡೆದಿದೆ, ಅವುಗಳ ಫಲಿತಾಂಶ ಕೂಡ ನೀಡಲಾಗಿದೆ.. ಇದನ್ನು ಆಧರಿಸಿ ನೋಡಿದಾಗ ಗೋಚರವಾಗುವ ಅಂಶಗಳೇ ಬೇರೆ. ಯೋಜನೆಯ ಸಾಧ್ಯಅಸಾಧ್ಯದ ಕುರಿತು ವೈಜ್ಞಾನಿಕವಾಗಿ ವಿಶ್ಲೇಷಣೆಗಳು ನಡೆದಿದೆ.. ಅವುಗಳುಹೇಳುತ್ತಿರುವ ಕೆಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ..

ಎತ್ತಿನ ಹೊಳೆ ಯೋಜನೆಯಲ್ಲಿ ಏನೇನಿದೆ…??

ಎತ್ತಿನಹೊಳೆ ಯೋಜನೆ ಎಂದರೇನು? ಎಂದು ಕೇಳಿದರೆ ಒಂದೇ ಮಾತಿನಲ್ಲಿ ಬಯಲುಸೀಮೆ ಜಿಲ್ಲೆಗಳಿಗೆ ಪಶ್ಚಿಮಘಟ್ಟದ ನದಿಗಳಿಂದ ನೀರು ತರುವ ಯೋಜನೆ ಎಂದು ಹೇಳುತ್ತಾರೆ. ಇದು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರಿಗೆ ನೀರು ನೀಡುವ ಯೋಜನೆ ಎಂದುಹೇಳಿದರೂ ಇಲ್ಲಿ ಬಹುಪಾಲು ಹೋಗುವುದು ಕೇವಲ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಮಾತ್ರ.. 8 ಚೆಕ್ ಡ್ಯಾಂಗಳ ಮೂಲಕ, ಐದು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಗುರಿಯನ್ನು ಯೋಜನೆ ಹೊಂದಿದೆ.. 24 ಟಿಎಂಸಿ ನೀರು ಪಡೆಯುವ ಗುರಿ ಹೊಂದಿದ್ದು ಎಷ್ಟರ ಮಟ್ಟಿಗೆ ಸಫಲಗೊಳ್ಳುತ್ತದೊಗೊತ್ತಿಲ್ಲತುಮಕೂರಿನ ದೇವರಾಯನ ದುರ್ಗ ಬಳಿಯ ಜಲಾಶಯದಲ್ಲಿ ನೀರು ಸಂಗ್ರಹಿಸಿ ಅಲ್ಲಿಂದ ಕಾಲುವೆ ಮೂಲಕ ಕೆರೆಕುಂಟೆಗಳನ್ನು ತುಂಬಿಸಬೇಕು ಎಂಬುದು ಯೋಜನೆಯ ಮೂಲಈಗ ಇರುವ ಯೋಜನಾ ವರದಿಯ ವೆಚ್ಚ 12,912 ಕೋಟಿ ರೂಪಾಯಿಗಳು.. ಇದು ಪರಿಷ್ಕೃತ ಸಮಗ್ರ ಯೋಜನಾವೆಚ್ಚ.. 2013 ರಲ್ಲಿ ಯೋಜನೆಯ ಅಂದಾಜು ವೆಚ್ಚ 8167 ಕೋಟಿ ರೂಪಾಯಿಗಳು ಇತ್ತು ಎಂಬುದು ಗಮನಾರ್ಹ ಅಂಶ..

ಎತ್ತಿನಹೊಳೆಯಿಂದ ಯಾವ ರೀತಿಯಲ್ಲಿ ನೀರು ಸರಬರಾಜು ಮಾಡುತ್ತಾರೆ..??

ಸಮುದ್ರಮಟ್ಟದಿಂದ 800 ಮೀಟರ್ ಎತ್ತರದಲ್ಲಿ ಕಟ್ಟುವ ಅಣೆಕಟ್ಟೆಯಲ್ಲಿ ಹೊಂಗಡ ಹಳ್ಳ ಮತ್ತು ಕಾಡುಮನೆ ಹಳ್ಳದ ಅಣೆಕಟ್ಟೆಯಿಂದ ಎತ್ತಿನಹೊಳೆ ಅಣೆಕಟ್ಟೆಗೆ ನೀರು ಹರಿಸಿ ಅದನ್ನು ಸುರಂಗ ಮಾರ್ಗದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ರವಾನಿಸಲಾಗುತ್ತದೆ. ಯೋಜನೆಗೆ 230 ಮೆ.ವ್ಯಾ ವಿದ್ಯುತ್ಬೇಕಾಗುತ್ತದೆ ಎಂದು ಯೋಜನಾ ವರದಿಯಲ್ಲಿ ಹೇಳಲಾಗಿದೆ. ಇಷ್ಟು ವಿದ್ಯುತ್ ಸರಬರಾಜು, ಪೂರೈಕೆ ಮತ್ತು ಉತ್ಪಾದನೆ ಯಾವುದು ಸುಲಭದ ಮಾತಲ್ಲ. ಸರಿಸುಮಾರು ಒಂದು ವಿದ್ಯುತ್ ಸ್ಥಾವರ ಉತ್ಪಾದನೆ ಮಾಡಬಹುದಾದ ವಿದ್ಯುತ್ ಒಂದೇ ಯೋಜನೆಗೆ ಬೇಕು. ಕಾರಣ ಎತ್ತಿನಹೊಳೆಗೆ ಕಟ್ಟಿದ ಅಣೆಕಟ್ಟಿನಲ್ಲಿಸಂಗ್ರಹವಾದ ನೀರನ್ನು ತೆಗೆದು ಸುರಂಗ ಮಾರ್ಗದಿದಂದ ರವಾನಿಸಬೇಕು.. ಇದಕ್ಕಾಗಿ ಅಷ್ಟು ವಿದ್ಯುತ್ ಪೂರೈಕೆ ಮಾಡುವುದು ಅನಿವಾರ್ಯ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಇದು ಅತ್ಯಂತ ಹೊರೆಯಾಗುವ ಒಂದು ಅಂಶ. ಪ್ರಸ್ತುತ ವರ್ಷದಲ್ಲಿ ರಾಜ್ಯದ ಯಾವುದೇ ಜಲಾಶಯಗಳೂ ಕೂಡ ಶೇಕಡಾ 40%ಭರ್ತಿಯಾಗಿಲ್ಲ. ಇದೇ ರೀತಿ ಮುಂದುವರಿಕೆಯಾದಲ್ಲಿ ಇಷ್ಟು ವಿದ್ಯುತ್ ಪೂರೈಕೆ ಅಸಾಧ್ಯವಾದ ಮಾತು. ಇದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ.

 ವೈಜ್ಞಾನಿಕವಾಗಿ ಇದು ಸಾಧ್ಯವೇ…??

ಪ್ರಶ್ನೆಗೆ ಹಲವು ವರದಿಗಳು ಉತ್ತರ ನೀಡುತ್ತವೆಎತ್ತರದಿಂದ ತಗ್ಗಿನೆಡೆಗೆ ನೀರು ಹರಿಯುವುದು ನೀರಿನ ನೈಸರ್ಗಿಕ ಗುಣ. ಇದಕ್ಕೆ ಮೂಲ ಕಾರಣ ಎಂದರೆ ಗುರುತ್ವಾಕರ್ಷಣ ಶಕ್ತಿ.. ತಗ್ಗಿನಲ್ಲಿ ಗುರುತ್ವಾಕರ್ಷಣ ಶಕ್ತಿ ಹೆಚ್ಚಾಗಿರುವುದರಿಂದ ನೀರು ಎತ್ತರದಿಂದ ತಗ್ಗಿನೆಡೆಗೆ ಹರಿಯುತ್ತದೆ. ಹೀಗೆ ಪಶ್ಚಿಮಕ್ಕೆಹರಿಯುತ್ತಿರುವ ಒಂದು ನದಿಯನ್ನು ಅದರ ವಿರುದ್ಧ ದಿಕ್ಕಿನೆಡೆಗೆ ಮುಖ ಮಾಡಿ ಹರಿಸುವುದೆಂದರೆ ತುಂಬಾ ಕಷ್ಟಕರ ಕೆಲಸ. ಸಮುದ್ರಮಟ್ಟದಿಂದ 800 ಮೀಟರ್ ಎತ್ತರದಲ್ಲಿ ಆಣೆಕಟ್ಟು ನಿರ್ಮಿಸಿದರೂ ಸಹ ನೀರು ಹರಿಯುವುದು ಅದಕ್ಕಿಂತಲೂ ಎತ್ತರವಾದ ಸ್ಥಳದಲ್ಲಿ. ಚಿಕ್ಕಬಳ್ಳಾಪುರ ಸಮುದ್ರಮಟ್ಟದಿಂದ ೯೧೨ಮೀಟರ್ ಎತ್ತರವಿರುವ ಪ್ರದೇಶ ಅಂದರೆ ಆಣೆಕಟ್ಟಿರುವ ಎತ್ತರಕ್ಕಿಂತ ೧೧೨ ಮೀಟರ್ ಎತ್ತರ ಎಂದಾಯಿತು. ಇಲ್ಲಿ ನೀರನ್ನು ಕೇವಲ ಹರಿಸುವ ಕೆಲಸ ಮಾಡಲಾಗುವದಿಲ್ಲ. ನೀರು ಮೇಲೆ ಏರಬೇಕು. ಅಷ್ಟು ಎತ್ತರಕ್ಕೆ ನೀರನ್ನು ಎಳೆದು ತರಬೇಕು.. ಇದೇ ಅತಿದೊಡ್ಡ ಸವಾಲು.. ಏಕೆಂದರೆ ರೀತಿ ಮಾಡಿದಇನ್ನೊಂದು ಯೋಜನೆಯ ಉದಾಹರಣೆ ಇಲ್ಲವೆಂದೇ ಹೇಳಬಹುದುಹಾಗಾಗಿ ಯೋಜನೆ ಪ್ರಾರಂಭವಾದರೂ ಸಹ ಯಶಸ್ವಿಯಾಗುವ ಪ್ರಮಾಣ ಬಹಳ ಕಡಿಮೆವೈಜ್ಞಾನಿಕ ವರದಿಗಳು ಹೇಳಿರುವದರಲ್ಲಿ ಇದು ಸಹ ಒಂದುಆದ ಕಾರಣ ಸಾವಿರಾರು ಕೋಟಿ ಹಣ ಹೂಡಿಕೆ ಮಾಡಿ, ನೂರಾರು ಮೆಗಾ ವ್ಯಾಟ್ವಿದ್ಯುತ್ ಖರ್ಚು ಮಾಡಿ ಯೋಜನೆ ಸಫಲಗೊಳ್ಳದೆ ಇದ್ದರೆ ಯಾರು ಜವಾಬ್ದಾರರು..??? ಇದಕ್ಕೆ ಸ್ಪಷ್ಟನೆ ನೀಡಲು ಯಾರಲ್ಲೂ ಉತ್ತರವಿಲ್ಲ..

 ನೀರಿನ ಬಳಕೆ

ಕರಾವಳಿಯಾದರೇನು ಬಯಲು ಸೀಮೆಯಾದರೇನು ಕರ್ನಾಟಕ ಎಂದಾಗ ನಾವೆಲ್ಲರೂ ಒಂದೇ.. ಎಲ್ಲರೂ ಅಣ್ಣ ತಮ್ಮಂದಿರೇ, ನೀವು ಬಾಯಾರಿ ಬಿದ್ದರೆ ಉಳಿದವರು ಸಹಿಸಲಾರರುಕರಾವಳಿ ಮಂದಿ ನೀರು ಕೊಡುತ್ತಿಲ್ಲ, ವಿರೋಧ ಮಾಡುತ್ತಿದ್ದಾರೆ, ಇಲ್ಲಿ ನಾವು ಸಾಯುತ್ತಿದ್ದೇವೆ, ಇಲ್ಲಿನ ಜನರು ವಿಷ ಕುಡಿಬೇಕುಸಾರ್, ಇಂಥ ಹತ್ತು ಹಲವು ಮಾತುಗಳು ಕೇಳಿ ಹಲವು ಕಡೆಗಳಿಂದ ಕೇಳಿ ಬರುತ್ತಿದೆಆದರೆ ಎಲ್ಲರೂ ಒಂದು ವಿಷಯದ ಬಗ್ಗೆ ವಿಚಾರ ಮಾಡಲೇ ಬೇಕು.. ಮೊದಲನೇಯದು ಇಷ್ಟೊಂದು ಖರ್ಚುಕೆಲಸ ಎಲ್ಲಾ ಆದ ಮೇಲೆ ನೀರು ಅಲ್ಲಿಗೆ ತಲುಪಿ ಅಲ್ಲಿಗೆ ಹೋಗಿ ತಲುಪುವ ಹೊತ್ತಿಗೆ ಒಂದು ಲೀಟರ್ ನೀರಿನ ಬೆಲೆಎಷ್ಟಾಗಬಹುದು..?? ಇದರ ಬಗ್ಗೆ ಯೋಚಿಸಿದ್ದಾರಾ..?? ಮತ್ತೊಂದು ಮತ್ತೂ ಗಂಭೀರವಾದದ್ದು.. ತೆಗೆದುಕೊಂಡು ಹೋದ ನೀರೆಲ್ಲವೂ ಕುಡಿಯಲು ಮತ್ತು ನೀರಾವರಿಗೆ ಮಾತ್ರ ಉಪಯೋಗವಾಗುತ್ತದೆಯಾ..??? ಮೇಲ್ನೋಟಕ್ಕೆ ಹೌದು ಎಂದೆನಿಸಿದರೂ ಸ್ವಲ್ಪ ಆಳಕ್ಕಿಳಿದು ವಿಶ್ಲೇಷಿಸಿದಾಗ ಸುಳ್ಳೆನಿಸುತ್ತದೆ.ಏಕೆಂದರೆ ಪ್ರದೇಶದಲ್ಲಿರುವ ಕಾರ್ಖಾನೆಗಳು. ಒಂದು ವರದಿಯ ಪ್ರಕಾರ ಹೆಚ್ಚುತ್ತಿರುವ ಕಾರ್ಖಾನೆಗಳಿಂದ ಇರುವ ನೀರು ವಿಷಮಯವಾಗಿದೆ. ಎತ್ತಿನಹೊಳೆಯ ನೀರನ್ನು ಹೆಚ್ಚಿನದಾಗಿ ನೀಡುವುದು ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ, ಅಲ್ಲಿರುವ ಮತ್ತು ಅಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಕಾರ್ಖಾನೆಗಳಿಂದಾಗಿ ನೀರಿನಉಪಯೋಗ ಅದಕ್ಕಾದರೆ..?? ಹೀಗಿರುವಾಗ ಕೊಟ್ಟ ನೀರೂ ಸಹ ಕಾರ್ಖಾನೆಗಳಿಗೆ ಉಪಯೋಗವಾದಲ್ಲಿ ನೀರು ಕೊಟ್ಟೇನು ಪ್ರಯೋಜನ…?? ಇರುವ ನೀರಂತೆ ಬರುವ ನೀರು ಅಂತಾಗಿಬಿಡುತ್ತದೆ.. ಗೆಳೆಯರೆ ಎತ್ತಿನಹೊಳೆ ಅಲ್ಲಿಗೆ ಹೋಗಿ ಸೇರಬೇಕೆಂದರೆ ಒಂದಷ್ಟು ಭೂಮಿ ಮುಳುಗಡೆ ಆಗುತ್ತದೆ, ಜನಗಳಜೀವನದಲ್ಲಿ ಏರಿಳಿತ ಉಂಟಾಗುತ್ತದೆ, ಅರಣ್ಯಗಳು ಮುಳುಗುತ್ತವೆ ಇದೆಲ್ಲದರ ಪ್ರತೀಕವಾಗಿ ನೀರು ಸಿಗುತ್ತದೆ. ನೀರು ಬರುತ್ತಿರುವುದು ಮನುಷ್ಯನ ಬಾಯಾರಿಕೆ ತಣಿಸಲು, ಕಾರ್ಖಾನೆಗಳದ್ದಲ್ಲ.. ಆಗ ತ್ಯಾಗಕ್ಕೆ ಅರ್ಥವಿಲ್ಲನೀರು ಕೊಡಲಾರೆವೆಂಬ ಕೂಗಿನಲ್ಲಿ ಅರ್ಥವಿದೆ

 ಎತ್ತಿನಹೊಳೆಯಿಂದ ಪಶ್ಚಿಮ ಘಟ್ಟಕ್ಕೆ ಹಾನಿ

ಮಾತನ್ನು ಪರಿಸರ ತಜ್ಞರೂ ಹೇಳುತ್ತಿದ್ದಾರೆಇದು ಕೆಣ್ಣೆದುರು ಕಾಣುತ್ತಿರುವ ನಗ್ನ ಸತ್ಯಗಳಲ್ಲೊಂದು. ಪಶ್ಚಿಮ ಘಟ್ಟ ಕರ್ನಾಟಕದ ಸೂಕ್ಷ್ಮ ಪ್ರದೇಶಗಳಲ್ಲೊಂದುಬಹುಮುಖ್ಯವಾಗಿ ಮಳೆಯ ವಿಷಯದಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ.  ಹಸಿರು ಸಿರಿಗಳ ಸ್ಪರ್ಶಕ್ಕೆ ಮೋಡ ಕರಗುತ್ತದೆ. ಇಂಥಹಪ್ರದೇಶದ ನಾಶ ಅತ್ಯಂತ ಅಪಾಯಕಾರಿ ಮತ್ತು ನೇರ ಬರಕ್ಕೆ ನಾಂದಿ. ಗುಜರಾತ್ ನಿಂದ ಕನ್ಯಾಕುಮಾರಿವರೆಗೆ ಸುಮಾರು 160,000 km² ಗಳಷ್ಟು ಪ್ರದೇಶದಲ್ಲಿ ಹಬ್ಬಿರುವ ಪಶ್ಚಿಮ ಘಟ್ಟ ನಿತ್ಯ ಹರಿದ್ವರ್ಣದ ಕಾಡುಗಳನ್ನು ಹೊಂದಿದ್ದು UNESCO ದಿಂದ ಗುರುತಿಸಲ್ಪಟ್ಟಿದೆ.. ಕರ್ನಾಟಕದಲ್ಲಿ ಅತ್ಯಂತ ಹೆಚ್ಚುಗಾಯಗೊಂಡ ಪ್ರದೇಶಗಳಲ್ಲಿ ಪಶ್ಚಿಮ ಘಟ್ಟವೂ ಒಂದು. ಕೈಗಾ ದಂತಹ ಬೃಹತ್ ಅಣುವಿದ್ಯುತ್ ಸ್ಥಾವರ ಇರುವುದು ಪಶ್ಚಿಮ ಘಟ್ಟದಲ್ಲೇ. ಇದರ ಜೊತೆ ಜೊತೆಗೆ ಹತ್ತು ಹಲವು ಜಲವಿದ್ಯುತ್ ಸ್ಥಾವರಗಳು, ಹೀಗೆ ದೊಡ್ಡ ದೊಡ್ಡ ಯೋಜನೆಗಳು ಕಾಡನ್ನು, ಅಲ್ಲಿನ ಪ್ರಾಣಿಗಳನ್ನು, ಪಕ್ಷಿಗಳನ್ನು ನುಂಗಿಬಿಟ್ಟಿದೆ.. ಆದರೂಸುಧಾರಿಸಿಕೊಂಡು ಇರುವುದರಲ್ಲೇ ಇರುವವುಗಳಿಗೆ ಬದುಕು ಕೊಡುತ್ತಿದೆ. ಉತ್ತರಕನ್ನಡ ತನ್ನ ಕಾಡುಗಳನ್ನೆಲ್ಲ ದೇಣಿಗೆ ನೀಡಿ ಆಗಿದೆ. ಈಗ ಸರದಿ ದಕ್ಷಿಣಕನ್ನಡದ್ದು.. ಇದೇ ಮುಂದುವರಿದರೆ ಕಾಡುಗಳನ್ನು ಕೇವಲ ಹಳೇ ಫೋಟೋಗಳಲ್ಲಿ ನೋಡಿ ತಿಳಿದುಕೊಳ್ಳಬೇಕಾಗಬಹುದುವಿಜಯನಗರ ಸಾಮ್ರಾಜ್ಯದವೈಭವ ಇತಿಹಾಸವಾದಂತೆ ಪಶ್ಚಿಮ ಘಟ್ಟದ ಹಸಿರು ಶಾಸನ ಸೇರಬಹುದು. ನೆಮ್ಮದಿಯ ನಾಳೆ ನಮ್ಮ ಕೈನಲ್ಲೇ ಸಾಯಬಹುದುಮುನ್ನೆಚ್ಚರಿಕೆ ಅಗತ್ಯ

 ಎತ್ತಿನ ಹೊಳೆ, ಇದು ನೇತ್ರಾವತಿ ತಿರುವಿಗೆ ಇಟ್ಟ ಇನ್ನೊಂದು ಹೆಸರಾ..??

ಇಂಥದ್ದೊಂದು ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಹಲವರು ಇದು ನೇತ್ರಾವತಿ ನದಿ ತಿರುವೆಂದೇ ಹೇಳುತ್ತಿದ್ದಾರೆ.. ಇದು ನೇತ್ರಾವತಿ ನದಿ ತಿರುವಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಆದರೆ ಮುಂದೆ ನೇತ್ರಾವತಿ ನದಿ ತಿರುವಿಗೆ ನಾಂದಿ ಹೇಳುವುದೂ ಸ್ಪಷ್ಟ ಹಾಗೂ ಎತ್ತಿನಹೊಳೆ ಯೋಜನೆಯಿಂದ ನೇತ್ರಾವತಿನದಿಯ ಮೇಲೆ ಪರಿಣಾಮ ಬೀರುವುದೂ ಅದರ ನೀರಿನಷ್ಟೇ ತಿಳಿಯಾದ ಸತ್ಯ. ಎತ್ತಿನಹೊಳೆ ನೇತ್ರಾವತಿಯ ಪ್ರಮುಖ ಉಪನದಿಗಳಲ್ಲೊಂದು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಉಗಮವಾಗುವ ನದಿ ಗುಂಡ್ಯ ಮತ್ತು ಕುಮಾರಧಾರಾ ನದಿಗಳ ಮೂಲಕ ನೇತ್ರಾವತಿಯನ್ನು ಸೇರಿಕೊಳ್ಳುತ್ತದೆ. ಗುಂಡ್ಯನದಿ ಕುಮಾರಧಾರಾ ನದಿಯ ಉಪನದಿ. ಗುಂಡ್ಯ ನದಿಗೆ ಮತ್ತೊಂದಷ್ಟು ನದಿಗಳು ಸೇರುತ್ತವೆ. ಅದರಲ್ಲಿ ಎತ್ತಿನಹೊಳೆಯೂ ಒಂದು. ಇದೆಲ್ಲವೂ ಒಂದಕ್ಕೊಂದು ಪೂರಕವಾಗಿದ್ದು  ಒಂದು ನದಿಗೆ ಅಪಾಯ ಎದುರಾದರೆ ಉಳಿದವುಗಳು ಅದರ ಪರಿಣಾಮವನ್ನು ಎದುರಿಸಬೇಕು, ಪರಿಣಾಮ ತಕ್ಷಣಕ್ಕೆಕಾಣದಿದ್ದರೂ ಕಾಲಕ್ರಮೇಣ ಅನುಭವಕ್ಕೆ ಬರುತ್ತದೆ.. ಇದರ ಜೊತೆಗೆ ಪ್ರದೇಶ ಜೀವ ವೈವಿಧ್ಯತೆಯ ತಾಣ ಉಭಯವಾಸಿಗಳು, ಮೀನುವಾಸಿಗಳು, ಸಸ್ಯಸಂಕುಲಗಳು, ಅಪಾಯದಂಚಿನಲ್ಲಿರುವ ಪ್ರಾಣಿಗಳ ಜೊತೆಗೆ ಇರುವ ಹಲವು ಜೀವಸಂಕುಲಗಳು ಇವುಗಳ ಜೊತೆ ಜೊತೆಗೆ ಸೇರುವ ಹತ್ತು ಹಲವು ಜಾತಿಯಪಕ್ಷಿಸಂಕುಲಗಳಿಗೆ ಆಶ್ರಯ ನೀಡಿದೆ. ಇದರ ಜೊತೆಗೆ ಕೃಷಿಯನ್ನು ನಂಬಿರುವ ನೂರಾರು ಕುಟುಂಬಗಳು ನಂಬಿರುವುದು ನದಿಗಳ ನೀರನ್ನೇ.. ಒಂದು ಯೋಜನೆಯ ಪ್ರಾರಂಭದಲ್ಲಿ ಇವುಗಳೆಲ್ಲದರ ಮೇಲೆ ಪರಿಣಾಮ ಬೀರುವುದು ಕಾಣುವ ಸತ್ಯಗಳಲ್ಲೊಂದು..

  ಮೇಲಿನವುಗಳು ದೊಡ್ಡ ವಿಷಯಗಳಂತೆ ಕಾಣದೇ ಇರಬಹುದು.. ಆದರೆ ನಂಬಿ ಬದುಕುತ್ತಿರುವ ಒಂದು ದೊಡ್ಡ ಸಮುದಾಯವೇ ಇದೆ.. ಅಂಥಹ ಸಮುದಾಯವನ್ನು ಬಲಿಕೊಟ್ಟು ಮತ್ತೊಂದು ಸಮಾಜದ ಉಳಿವಿಗೆ ನೀರು ಕೊಟ್ಟರೂ, ಸಮುದಾಯಕ್ಕೆ ನೀರು ಸಿಗಲಾರದು ಎಂಬ ಅನುಮಾನ ಹುಟ್ಟಿದಾಗ ನಾವುಸ್ವಾರ್ಥಿಗಳಾಗಲೇಬೆಕು.. ಕರಾವಳಿಗರಿಗೆ ಇದು ಉಳಿವಿಗಾಗಿ ಹೋರಾಟವಾಗಿದೆಯಾಕೆಂದರೆ ಈಗ ಸರ್ಕಾರ ಬುಡಕ್ಕೇ ಕೊಡಲಿ ಬೀಸುತ್ತಿದೆಆದರೆ ಅದು ಉಪಕಾರಕ್ಕೋ ಅಥವಾ ಸ್ವಂತ ಲಾಭಕ್ಕೋ ಸ್ಪಷ್ಟನೆ ನೀಡುತ್ತಿಲ್ಲ ಹೋರಾಟ ನಿಲ್ಲಲಾರದು ಎತ್ತಿನಹೊಳೆ ನಮ್ಮದು, ಎಂಬುದು ಕರಾವಳಿಗರ ಒಂದೇಧ್ವನಿ….

 

– ಚಿರಾಗ್ ಚಂದ್ರ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!