ಅಂಕಣ

ಲೋಕಾಯುಕ್ತ ಸಂಸ್ಥೆ ಭ್ರಷ್ಟವಾದದ್ದು …. ಇಂದು ನಿನ್ನೆಯಲ್ಲ…. ನಿಮಗಿದು ಗೊತ್ತೇ ???

ಮೇಲಿನ ಮಾತು ಅಕ್ಷರಶಃ ಸತ್ಯ… ಇದನ್ನೆಲ್ಲಾ ಅಲ್ಲಗಳೆಯುವರಿದ್ದಾರೆ ಎಂದರೆ ಅವರೂ ಭ್ರಷ್ಟರೆಂದೇ ತಿಳಿಯಬೇಕು… ಯಾಕೆ ಎನ್ನುವ ಪ್ರಶ್ನೆ ಮೂಡದೇ ಇರಲಾರದು. ಬಹಳಷ್ಟು ಜನ “ನಮ್ಮ ರಾಜ್ಯದಲ್ಲಿ ಲೋಕಾಯುಕ್ತವಿದೆ… ಭ್ರಷ್ಟಾಚಾರವೇ ನಡೆಯುವುದಿಲ್ಲ “ಇದೊಂದು ಮನೆಯಲ್ಲಿರುವ ಕಾವಲು ನಾಯಿಯಂತೆ.. ಯಾವಾಗ ಕಳ್ಳರು ನುಸುಳಲು ಪ್ರಯತ್ನಿದರೆ ಕನಿಷ್ಟಪಕ್ಷ ಬೊಗಳಿಯಾದರು ತನ್ನ ಮನೆಯವರನ್ನು ಎಚ್ಚರಿಸುತ್ತದೆ ಎಂದುಕೊಡಿದ್ದಾರೆ… ಆದರೆ ತಮಾಷೆಯ ಸಂಗತಿಯೆಂದರೆ ಈ ಲೋಕಾಯುಕ್ತ ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವ ವಿಷಯ ಜನರಿಗೆ ತಿಳಿದೇ ಇಲ್ಲ. ರಾಜ್ಯದಲ್ಲಿ ಅದೆಷ್ಟೇ ಭ್ರಷ್ಟಾಚಾರ ನಡೆದರೂ ಸುಮ್ಮನೆಯೇ ಇರುತ್ತದೆ.. ತಮ್ಮ ಬಳಿ ಬಂದು ಯಾರಾದರು ದೂರು ನೀಡಿದರೆ ಮಾತ್ರ ತನಿಖೆ ನಡೆಸುತ್ತದೆ … ಎನ್ನುವುದು ಬಹಳಷ್ಟು ಜನಕ್ಕೇ ಗೊತ್ತೇ ಇಲ್ಲ.

 

ರಾಜ್ಯದಲ್ಲಿ ಇಂತಹಾ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಸಂಸ್ಥೆ ಇದೆ ಎನ್ನುವುದು ತಿಳಿದದ್ದೇ ನಿವೃತ್ತ ಲೋಕಾಯುಕ್ತ ವೆಂಕಟಾಚಲಯ್ಯನವರು ಮೊತ್ತ ಮೊದಲು ಅಧಿಕಾರ ವಹಿಸಿ ಕೆಲವೊಂದು ಭ್ರಷ್ಟರ ಮನೆ ಮೇಲಿನ ದಾಳಿಯ ದಿನದಂದು…!!! ಅಲ್ಲಿಯ ವರೆಗೆ ಆ ಸಂಸ್ಥೆ ಹೇಗೆ ಎಲ್ಲೆಲ್ಲಿ ಕಾರ್ಯ ನಿರ್ವಹಿಸುತ್ತಿದೆ.?? ಎನ್ನುವುದು ಬಹುಷಃ ಮುಖ್ಯಮಂತ್ರಿಯವರಿಗೂ ತಿಳಿದಿರಲಿಲ್ಲವೇನೋ ??? ಅಷ್ಟೊಂದು ತಟಸ್ಥವಾಗಿತ್ತು.. ಆ ಭ್ರಷ್ಟ ನಿಗ್ರಹ ಸಂಸ್ಥೆ. ಅದನ್ನು ಕೇಳುವವರೇ ಇರಲಿಲ್ಲ… ತಮಗೆ ಬಂದ ದೂರನ್ನು ತನ್ನೊಳಗೆ ಒಂದು ಬಾರಿ ವಿಮರ್ಷಿಸಿಕೊಂಡು ತದನಂತರ ಅದನ್ನು ತನಿಖೆಗೆ ಅರ್ಹವೆಂದು ದೂರಿನ ಆಧಾರದಲ್ಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ… ನಂತರ ಅವರೇ ಭ್ರಷ್ಟಚಾರಿಗಳನ್ನು ತಮ್ಮ ಕಕ್ಷಿದಾರರ ಸಹಾಯ ಪಡೆದು ಹಿಡಿಯಲು ಜೇಡರ ಬಲೆ ಹೆಣೆದು ಅದರಲ್ಲಿ ಸಿಲುಕುವಂತೆ ಮಾಡುತ್ತಾರೆ.ಈ ದಾಳಿಯು ಎಲ್ಲಾ ಮಾಧ್ಯಮಗಳಲ್ಲೂ ಬಾರಿ ಸುದ್ದಿ ಮಾಡುತ್ತದೆ. ಜನರಿಗೆ ತುಂಬಾ ಖುಷಿಯಾಗುತ್ತಾರೆ.. ಅಬ್ಬ ಭ್ರಷ್ಟರನ್ನು ಹಿಡಿದರು ಕೊಂಚವಾದರು ಭ್ರಷ್ಟಮುಕ್ತವಾಯಿತು ಎಂದು…ಇನ್ನೂ ಯಾರಿಗೂ ತಿಳಿದೇ ಇಲ್ಲ ಈ ದಾಳಿ ಮೊದಲು ಮತ್ತು ನಂತರ ಬಹಳಷ್ಟು ಆಟಗಳು ನಡೆದಿರುತ್ತದೆ ಎಂದು. ಭ್ರಷ್ಟಾಚಾರದಲ್ಲಿ ಸಿಲುಕುವಂತೆ ಮಾಡುವಲ್ಲಿ ಕೆಲವೊಂದು ವಿರೋಧಿಗಳ ಹಸ್ತಕ್ಷೇಪವಿರುತ್ತದೆ…. ನಂತರ ಎಲ್ಲಾ ತಿಳಿಯಾದ ಬಳಿಕ ಅದೇ ಹುದ್ದೆಯಲ್ಲಿ ಬಂದು ಅದೇ ಕಾರ್ಯ ಪುನರಾಂಭಿಸುತ್ತಾರೆ. ಎಲ್ಲರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ.. ಆದರೆ ಇಲ್ಲಿಯವರೆಗೆ ಯಾರಾದರು ಲೋಕಾಯುಕ್ತ ದಾಳಿಯ ಸಂದರ್ಭ ಸಿಲುಕಿದವರು ಎಷ್ಟು ಜನ ಶಿಕ್ಷೆಗೆ ಗುರಿಯಾದ ಉದಾಹರಣೆಯನ್ನು ಗಮನಿಸಿದ್ದೀರಿ… ಒಬ್ಬನೇ ಒಬ್ಬ ಶಿಕ್ಷೆಗೆ ಒಳಗಾಗಲಿಲ್ಲ ಎನ್ನುವುದು ಗೊತ್ತೇ ???

 

ನಮ್ಮ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರವೇ ಇಲ್ಲ… ಕೇವಲ ಭ್ರಷ್ಟರನ್ನು ಹಿಡಿಯುವುದು ಅಂದರೆ ಯಾರಾದರು ದೂರು ಕೊಟ್ಟರೆ ಮಾತ್ರ ಅಂತಹುದರ ಬಗ್ಗೆ ಜಾಡು ಹಿಡಿಯುತ್ತದೆ.. ಆಡಳಿತ ರೂಢಿಯಾಗಿದ್ದರೆ ಅದರತ್ತ ತಲೆ ಹಾಕಿ ಕೂಡ ಮಲಗುವುದಿಲ್ಲ… ಅನುಮಾನ ಬಂದೊಡನೆ ತಾನಾಗಿಯೇ ತನ್ನ ತೆಕ್ಕೆಗೆ ತೆಗೆದು ತನಿಖೆ ಮಾಡುವಂತಹ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ… ಪ್ರತಿಯೊಂದು ಸರ್ಕಾರವನ್ನು ಅಥವಾ ನ್ಯಾಯಾಲಯವನ್ನು ಅವಲಂಭಿಸಿರಬೇಕು. ಒಂದರ್ಥದಲ್ಲಿ ಹೇಳುವುದಾರೆ “ಕೆಲಸವಿಲ್ಲದವನು ಮೆಯೆಲ್ಲಾ ಪರಚಿಕೊಂಡಿದ್ದನಂತೆ”. ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಷ್ಟೆ… ಬೇರೇನಿಲ್ಲ… !!! ಇಂತಹ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರವು ಇಲ್ಲದಿರುವುದರಿಂದ ಲೋಕಾಯುಕ್ತದ ಅವಶ್ಯಕತೆಯಾದರೂ ಏನಿದೆ. ಪ್ರಸಿದ್ಧ ಹಾಸ್ಯಗಾರ ಪ್ರಾಣೇಶ್ ರ ಮಾತಿನಲ್ಲಿ ಹೇಳುವುದಾರೆ ” ತೆಗೊಂಡೆ … ಹಿಡಿದರು . ಕೊಟ್ಟೆ…. ಬಿಟ್ರು.” ಅವರು ವೇದಿಕೆಯಲ್ಲಿ ನಿಂತು ಈ ಮಾತನ್ನು ಹೇಳಿದಾಗ ಜನ ಹೇಗೆಲ್ಲಾ ನಗುತ್ತಾರೋ ??? ಆದರೆ ಅವರ ಮಾತು ಕ್ಷಣಿಕ ತಮಾಷೆ … ನಂತರ ಚಿಂತಿಸುವಂತೆ ಮಾಡುವುದಂತು ಸತ್ಯ.. ಭಾರತದಲ್ಲಿ ಯಾವುದು ಅಸಾಧ್ಯವಲ್ಲ. ಕೊಲೆಗಾರ, ಭಯೋತ್ಪಾದಕ ಮತ್ತು ಭ್ರಷ್ಟಚಾರಿಗಳಿಗೂ ಜೀವನ ಸಾಗಿಸಲು ಅವಕಾಶವಿದೆ. ಸುಮಾರು ಶೇ.90 ರಷ್ಟು ಭಾರತೀಯ ನ್ಯಾಯಾಂಗವನ್ನು ನಂಬಿಕೆ ಕಳೆದುಕೊಂಡಿದೆ. ಇಂತಹಾ ಸ್ಥಿತಿಯಲ್ಲಿರುವಾಗ ನಾವು ಲೋಕಾಯುಕ್ತದಿಂದ ಏನನ್ನು ನಿರೀಕ್ಷಿಸಬಹುದು.

 

ಲೋಕಾಯುಕ್ತಕ್ಕೆ ಶಿಕ್ಷಿಸುವ ಕೆಲಸವೇ ಇಲ್ಲ. ಭ್ರಷ್ಟರನ್ನು ಹಿಡಿಡು ನ್ಯಾಯಾಲಯದ ಮುಂದೆ ನಿಲ್ಲಿಸಬಹುದು. ನಂತರ ನ್ಯಾಯಾಲಯ ತೀರ್ಮಾನಿಸುತ್ತದೆ. ಅವನು ಶಿಕ್ಷೆಗೆ ಅರ್ಹನೇ ಅಥವಾ ಅನರ್ಹನೇ ಎಂದು. ಈ ರೀತಿ ಇದ್ದ ಮೇಲೆ ನಮಗೆ ಲೋಕಾಯುಕ್ತ ಇಲಾಖೆಯ ಅವಶ್ಯಕತೆ ಇದೆಯೇ ? ಎನ್ನುವ ಪ್ರಶ್ನೆ ಉದ್ಭಸದೆ ಇರಲಾರದು. ಇದನ್ನು ವಿರೋಧಿಸುವವರು ಯಾರೂ ಇಲ್ಲ. ಅಂತಹಾ ಸಾಮರ್ಥ್ಯವೂ ಇಲ್ಲ.. ಆರ್.ಟಿ.ಓ. ಇಲಾಖೆ, ಸಾರಿಗೆ ಇಲಾಖೆ. ಬಿ.ಡಿ.ಎ.ಸಬ್ ರಿಜಿಸ್ಟರ್ ಕಚೇರಿ. ಪೋಲೀಸ್ ಇಲಾಖೆ ಹೀಗೆ ಎಲ್ಲವೂ ಅಂದರೆ ಎಲ್ಲಾ ಸರ್ಕಾರಿ ಸಂಸ್ಥೆಗಳು ಭ್ರಷ್ಟಾಚಾರದಿಂದ ತಾಂಡವವಾಡುತ್ತಿದೆ… ಇದನ್ನೆಲ್ಲಾ ಸರಿ ಪಡಿಸಲು ಲೋಕಾಯುಕ್ತ ಸಂಸ್ಥೆಗೆ ಸಾಧ್ಯವಿದೆಯಾ? ಖಂಡಿತಾ ಇಲ್ಲ ….  ಯಾಕೆಂದರೆ ಪ್ರತಿಯೊಂದು ಇಲಾಖೆಯಿಂದ ಕ್ಲಪ್ತ ಸಮಯಕ್ಕೆ ಲಂಚವೂ ಬರುತ್ತಲೇ ಇರುತ್ತದೆ… ಅಪರೂಪಕ್ಕೆ ಧಕ್ಷ ಅಧಿಕಾರಿಗಳು ಆ ಸ್ಥಾನಕ್ಕೆ ಬಂದರೆ ಬಲೆ ಹೆಣೆದು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಇದು ಭ್ರಷ್ಟತೆಯ ಇನ್ನೊಂದು ಮುಖ ಅಷ್ಟೆ. ಲೋಕಾಯುಕ್ತ ಸಂಸ್ಥೆ ತನ್ನ ಪ್ರಾರಂಭದಿಂದಲೂ ಭ್ರಷ್ಟತೆಯ ಕಳಂಕ ಹಿಡಿದುಕೊಂಡಿದೆ. ಕಣ್ಣಿಗೆ ಮಣ್ಣೆರಚಿಕೊಂಡು ಇಲ್ಲಿಯವರೆಗೆ ಕಾಲಹರಣ ಮಾಡುತ್ತಿತ್ತು. ಇಲ್ಲಿಯ ತನಕ ಅಧಿಕಾರ ವಹಿಸಿಕೊಂಡಿದ್ದ ಎಲ್ಲಾ ಲೋಕಾಯುಕ್ತರನ್ನು ತನಿಖೆಗೆ ಒಳಪಡಿಸಿದರೆ ಲೋಕಾಯುಕ್ತದಲ್ಲಿ ಎಷ್ಟೊಂದು ಭ್ರಷ್ಟತೆಯ ತುಕ್ಕು ಬೆಳಕಿಗೆ ಬರುತ್ತದೆ. ಒಟ್ಟಿನಲ್ಲಿ ಸರ್ಕಾರಿ ಖಜಾನೆಯಿಂದ ಸಾರ್ವಜನಿಕರ ಹಣವನ್ನು ಹಾಳು ಮಾಡುವ ಇಲಾಖೆಯೆಂಬುವುದು ಸತ್ಯ. ಹಾಗಾಗಿ ಲೋಕಾಯುಕ್ತ ಸಂಸ್ಥೆ ಭ್ರಷ್ಟವಾದದ್ದು ಇಂದು ನಿನ್ನೆಯಲ್ಲ…

Jagath Bhat
jagath.bhat@yahoo.com

Facebook ಕಾಮೆಂಟ್ಸ್

ಲೇಖಕರ ಕುರಿತು

Jagath Bhat

ಜಗತ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಯಕ್ಷಗಾನ, ಛಾಯಾಗ್ರಹಣ ಮತ್ತು ಬರವಣಿಗೆ ಇವರ ಹವ್ಯಾಸ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!