ಅಂಕಣ

ತಡವಾಗಿ ಮಲಗುವವರಿಗೆ ಮಾತ್ರ ಅರ್ಥವಾಗುವ 13 ಸತ್ಯಾಂಶಗಳು…

ನಮ್ಮಲ್ಲಿ ಬಹಳಷ್ಟು ಜನ ಬೆಳಿಗಿನಿಂದ ಸಂಜೆಯವರೆಗೂ ಕೆಲಸ ಮಾಡಿ, ಸುಸ್ತಾಗಿ, ಕೆಲಸದ ಒತ್ತಡಕ್ಕೆ ರಾತ್ರಿಯ ವೇಳೆ ಬೇಗ ಮಲಗುವವರಿದ್ದರೂ, ಇವರನ್ನು ಹೊರತುಪಡಿಸಿ, ಇತ್ತೀಚಿನ ದಿನಗಳಲ್ಲಿ ರಾತ್ರಿಯ ವೇಳೆಯಲ್ಲಿ ಚುರುಕಾಗಿ, ಉತ್ತಮ ಕೆಲಸ ಮಾಡುವ ಹೊಸ ಗುಂಪು ಸೇರ್ಪಡೆ ಆಗಿದೆ. ಹಗಲಿನಲ್ಲಿ ಚೆನ್ನಾಗಿ ನಿದ್ದೆ ಮಾಡುವುದು, ಪ್ರತಿನಿತ್ಯವೂ ತಡವಾಗಿ ಮಲಗುವುದು ಇವರ ಅಭ್ಯಾಸ. ಇವರಲ್ಲಿ ನಾನು ಸಹ ಒಬ್ಬ! ಇವರಿಗೆ ಮಾತ್ರ ಅರ್ಥವಾಗುವ, ನಿರೂಪಿಸಬಹುದಾದ 13 ಸತ್ಯಾಂಶಗಳು ಇಲ್ಲಿವೆ.

 

1) ನಿಮ್ಮ ಪ್ರಕಾರ ಬೆಳಗಿನ ಜಾವ, ಕೇವಲ ಮಲಗುವುದಕ್ಕೆ ಮಾತ್ರ. ನಿಮ್ಮ ತಾಯಂದಿರು ಸಹ ನಿಮ್ಮ ಈ ರೂಢಿಗೆ ಶರಣಾಗಿರುತ್ತಾರೆ.

nit1

 

2) ಬೆಳಕಿನ ಹೊತ್ತಿನಲ್ಲಿ ಯಾರೆ ನಿಮಗೆ ಕರೆ ಮಾಡಿದರು ನಿರಾಶೆಗೆ ಒಳಗಾಗಲೇ ಬೇಕು! ಯಾಕೆಂದರೆ ಆ ಸಮಯ ಮಲಗುವುದಕ್ಕೆ ಮಾತ್ರ ಮೀಸಲಾತಿ.

 

nit2

3) ನಿಮ್ಮ ಜೀವನದಲ್ಲಿ ‘ತಡ ರಾತ್ರಿ’ ಎಂಬ ಪದದ ಅಸ್ತಿತ್ವವೇ ಇರುವುದಿಲ್ಲ. ಆದರೆ ಬೆಳಗಿನ ಸಮಯದಲ್ಲಿ ಎಲ್ಲಾ ತಡವಾಗುತ್ತದೆ.

 

nit3

 

4) ನಿಮ್ಮ ಸುತ್ತಮುತ್ತ, ದಿನದ 24 ಗಂಟೆಗಳಲ್ಲಿ, ಮಧ್ಯರಾತ್ರಿಯಲ್ಲಿ ಸಹ ಯಾವ ಯಾವ ರೀತಿಯ ತಿಂಡಿ-ಊಟ-ತಿನಿಸುಗಳು ಎಲ್ಲೆಲ್ಲಿ ಸಿಗುತ್ತದೆ ಎಂದು ಚೆನ್ನಾಗಿ ಗೊತ್ತಿರುತ್ತದೆ. ಮಧ್ಯರಾತ್ರಿಯ ಸಮಯದಲ್ಲಿ ಏನಾದರು ಬೇಕಾದರೆ ನಿಮ್ಮ ಸ್ನೇಹಿತರು ನಿಮಗೇ ಕರೆ ಮಾಡಿ ವಿಚಾರಿಸುತ್ತಾರೆ.

 

nit4

 

5) ರಾತ್ರಿಯ ವೇಳೆ ಸುತ್ತಾಡಲು ಹೋದರೆ ನೀವು ಎಲ್ಲರಿಗಿಂತ ಕೊನೆಯಲ್ಲಿ ಹೋಗುತ್ತೀರ ಹಾಗೆ ಕೊನೆಯಲ್ಲಿ ವಾಪಸ್ಸು ಬರುತ್ತೀರ. ಎಲ್ಲರೂ ಮಲಗಿದರು ನೀವು ಮಲಗುವುದಿಲ್ಲ.

 

nit5

6) ಹಗಲಿನಲ್ಲಿ ಆಗುವ ಎಲ್ಲಾ ಸದ್ದು, ಗದ್ದಲ, ನಿಮಗೆ ಚಿತ್ರಹಿಂಸೆ ಆಗುತ್ತದೆ. ಮತ್ತೆ ಮತ್ತೆ ರಾತ್ರಿಯ ಶಾಂತಿಯುತ ಕಾಲ ಕಳೆಯಲು ಕಾತುರದಿಂದ ಕಾಯುವಿರಿ.

 

nit6

7) ಕಣ್ಣುಗಳು ಊದುವುದು, ನಿದ್ದೆ ಕೆಟ್ಟು ಉರಿಯುವುದು ನಿಮಗೆ ಸರ್ವೇಸಾಮಾನ್ಯ. ಇದಕ್ಕೆ ನಿಮ್ಮದೇ ಆದ ಉಪಾಯಗಳನ್ನು ಕಂಡುಕೊಂಡಿರುತ್ತೀರಿ.

 

nit7

8) ನಿಮ್ಮ ಜತೆಗಾರರನ್ನು ಹುಡುಕಿಕೊಂಡಿರುತ್ತೀರಿ, ಹಾಗೆ ತಡ ರಾತ್ರಿಯಲ್ಲಿ ಅವರೊಂದಿಗೆ ಮಾತನಾಡುವುದು ಸಹ ನಿಮ್ಮ ರೂಢಿ ಆಗಿರುತ್ತದೆ. ನೀವು ಅವರಿಗೆ, ಅಥವಾ ಅವರು ನಿಮಗೆ ಕರೆ ಮಾಡುವುದು ಸಾಮಾನ್ಯದ ವಿಷಯ.

nit8

9) ಪ್ರತಿನಿತ್ಯ ನಿದ್ರೆ ಮಾಡುವುದು ತುಂಬಾ ಕಷ್ಟಕರ. ಮಲಗಲು ಎಲ್ಲಾ ರೀತಿಯಲ್ಲು ಪ್ರಯತ್ನ ಮಾಡುತ್ತಿರುವ. ಜೊತೆಗೆ ಸುಲಭವಾಗಿ, ಸಂಪೂರ್ಣವಾಗಿ ಮಲಗುವವರ ಸಲಹೆಗಳನ್ನು ಕೇಳುತ್ತಲೇ ಇರುತ್ತೇವೆ!

nit9

 

10) ನಿಮ್ಮ ಅತ್ಯಂತ ಆನ್ಲೈನ್ ಚಟುವಟಿಕೆಗಳು ತಡರಾತ್ರಿಯಲ್ಲೇ ನಡೆಯುತ್ತವೆ ಮತ್ತು ನಿಜವಾಗಿಯೂ ಲ್ಯಾಪ್ಟಾಪ್, ಕೀಬೋರ್ಡ್ ಸಂಶೋಧಕರನ್ನು ಪ್ರಶಂಸಿಸುತ್ತೇವೆ.

 

nit10

11) ಕೆಲವೊಮ್ಮೆ ನಿದ್ರಾದೇವಿ ಬೇಗ ಆವರಿಸಿತು ಎಂದರೆ, ಬೆಳಿಗ್ಗೆ ಎದ್ದ ಮೇಲೆ ಏನೊ ಸಾಧನೆ ಮಾಡಿದ ಭಾವನೆ ನಮ್ಮದಾಗಿರುತ್ತದೆ.

 

nit11

12) ಸಾಮನ್ಯ ಜನರಂತೆ ನೀವು ಬೆಳಗಿನ ಜಾವದಲ್ಲಿ ಉದಯಿಸಿದ ಸೂರ್ಯನನ್ನು ನೋಡಿದರು ಸಹ, ನಿಮಗೆ ಅದು ಶುಭ ರಾತ್ರಿಯೆ ಆಗಿರುತ್ತದೆ.

 

nit12

13) ತಡರಾತ್ರಿ ನಿದ್ದೆ ಬಾರದಿದ್ದರೂ ಅದು ಏನೊ ಸಂತೋಷ ನಮ್ಮದು. ಅಂತಿಮವಾಗಿ ವಿಜ್ಞಾನ ಬೆಂಬಲಿತವಾಗಿ ಬೆಳಕಿನ ಗುಬ್ಬಿಗಳಿಗೆಂತ, ರಾತ್ರಿಯ ಗೂಬೆಗಳಿಗೆ ಹೆಚ್ಚು ಬುದ್ಧಿವಂತಿಕೆ !

 

nit13

Facebook ಕಾಮೆಂಟ್ಸ್

ಲೇಖಕರ ಕುರಿತು

Prashanth N Rao

Passionate in writing and a social animal. Love to innovate new things. A great food lover and a travel freak.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!