ಪ್ರಚಲಿತ

Mr.ಅರ್ನಾಬ್ ಗೋಸ್ವಾಮಿ.. ನೀವ್ಯಾಕ್ ಹಿಂಗ್ ಸ್ವಾಮಿ????

“The Nation Wants to know!!!”

ಬಹುಷ ನೀವು ನ್ಯೂಸ್ ಚಾನೆಲ್ ನೋಡುವ ಹವ್ಯಾಸ ಹೊಂದಿದ್ದರೆ ಈ ವಾಕ್ಯವನ್ನು ಕೇಳದೇ ಇರಲು ಸಾಧ್ಯವಿಲ್ಲ. Yess… ನಾನು ಹೇಳಲು ಹೊರಟಿರೋದು Daredevil News Anchor, ನಿರರ್ಗಳವಾಗಿ ಇಂಗ್ಲಿಷ್ ಮಾತಾಡಬಲ್ಲ, ಆಕ್ರೋಶ ಎಂಬ ಪದಕ್ಕೆ ಆಕ್ರೋಶ ತರಿಸಬಲ್ಲ, Times Now ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಬಗ್ಗೆ.!!

ನಾನು ಈ ವ್ಯಕ್ತಿ ನಡೆಸಿಕೊಡುವ ಪ್ರತಿದಿನ ರಾತ್ರಿ ೯ ಕ್ಕೆ ಪ್ರಸಾರವಾಗುವ ನ್ಯೂಸ್ ಅವರ್ ಚರ್ಚಾ ಕಾರ್ಯಕ್ರಮಗಳನ್ನು ದಿನಾಲೂ ನೋಡೋದಿಲ್ಲವಾದರೂ,  ದಿಟ್ಟತನದಿಂದ ರಾಷ್ಟ್ರೀಯ ವಿಷಯಗಳ ಬಗ್ಗೆ ನಿಷ್ಕಳಂಕವಾಗಿ ಚರ್ಚೆ ಮಾಡುವ ಯೋಗ್ಯತೆ, ಸಣ್ಣ ವಿಷಯವನ್ನೂ ಟಿಆರ್ಪಿಗಾಗಿ ನಿರ್ಭೀತಿಯಿಂದ ರಾಷ್ಟ್ರದ ಮುಂದೆ ಬಿಚ್ಚಿಡುವ ರೀತಿಯಿಂದ ಈ ವ್ಯಕ್ತಿಯ ಕಾರ್ಯಕ್ರಮಗಳ ಕಡೆಗೆ ಸಣ್ಣ ಮಟ್ಟಿಗೆ ಆಕರ್ಷಿತನಾದದ್ದಂತೂ ಸತ್ಯ.

ನಮ್ಮ ರಾಜಕಾರಣಿಗಳು ಅರ್ನಾಬ್ ಗೋಸ್ವಾಮಿ ಎಂಬ ಆಸಾಮಿಯನ್ನ ಎಲ್ಲರಿಗಿಂತ ಹೆಚ್ಚಾಗಿ ಗೌರವಿಸುತ್ತಾರೆ ಎಂದರೆ ಆಶ್ಚರ್ಯವಾಗುತ್ತದೆ. ಕೆಲವು ಸಂಸದರಂತೂ ಲೋಕಸಭಾ ಅಧಿವೇಶನಕ್ಕಿಂತಲೂ ಹೆಚ್ಚಾಗಿ ನ್ಯೂಸ್ ಅವರ್ ಚರ್ಚೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು ಎಂದರೆ ಯೋಚಿಸಿ ಈ ವ್ಯಕ್ತಿಯ ಹವಾ ಎಂತದ್ದು ಎಂಬುದು!! ರುಚಿಕರವಾದ, ಬಿಸಿ ಬಿಸಿಯಾದ ಹೈ ವೋಲ್ಟೇಜ್ ಚರ್ಚೆಗಳನ್ನು ಏರ್ಪಡಿಸಿ ಎಲ್ಲ ಪಕ್ಷದ ವಕ್ತಾರರು ಹಾಗೂ ಅತಿಥಿಗಳಿಗೆ ಆಕ್ರಮಣಕಾರಿ ಪ್ರಶ್ನೆಗಳಿಂದ ಇರಿಸು ಮುರಿಸು ಮಾಡುವ ಚತುರ ಈ ಅರ್ನಾಬ್. ನೀರಸ, ಸಪ್ಪೆಯಾಗಿದ್ದ ಇಂಗ್ಲಿಷ್ ಮಾಧ್ಯಮಕ್ಕೆ ಹೊಸ ಆಯಾಮ ಹಾಗೂ ದಿಕ್ಕು ಕೊಟ್ಟು ದೇಶವನ್ನೇ ತನ್ನತ್ತ ತಿರುಗಿಸಿದ ಸಾಧಕ ಈತ. ಅರ್ನಾಬ್ ಪ್ರಕಾರ ಎಲ್ಲ ಭಾರತೀಯರೂ ತನಗೆ ಉತ್ತರದಾಯಿಗಳು.!!!

೨ಜಿ ಹಗರಣದಲ್ಲಿ ಬೇರೆ ಚಾನೆಲ್ ಗಳು ರಾಜಕಾರಣಿಗಳ ಬೆನ್ನ ಹಿಂದೆ ಬಿದ್ದಿದ್ದರೆ, ಅರ್ನಾಬ್ ಕಾರ್ಪೋರೇಟ್ ವಲಯದ ಹಿಂದೆ ಬಿದ್ದು ಗಣ್ಯರ ಹೆಸರನ್ನು ಹೊರತಂದಿದ್ದ. ಇಂತಹ ಎಂಟೆದೆಯ ಭಂಟ ಕಣ್ರೀ ಈತ. ಬೇರೆ ಚಾನೆಲ್ ಗಳು ಮಾಡಲಾಗದ್ದನ್ನು ಈತ ಮಾಡಿ ತೋರಿಸಿದ್ದ. ಇನ್ನು ಕರ್ನಾಟಕದ ದಕ್ಷ ಐ.ಎ.ಎಸ್. ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣವನ್ನು ಆತ್ಮಹತ್ಯೆ ಎಂದು ಪೋಸ್ಟ್ ಮಾರ್ಟಂ ರಿಪೋರ್ಟ್ ಬರುವ ಮೊದಲೇ ಘೋಷಣೆ ಮಾಡಿದ್ದ ಬೆಂಗಳೂರು ಪೋಲಿಸ್ ಕಮಿಷನರ್ ಎಂ.ಎನ್.ರೆಡ್ಡಿಯವರನ್ನು ನ್ಯೂಸ್ ಅವರ್ನಲ್ಲಿ ಹಿಗ್ಗಾ ಮುಗ್ಗಾವಾಗಿ ತರಾಟೆಗೆ ತೆಗೆದುಕೊಂಡು ದೇಶದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದ್ದರು. ತನ್ನ ಮಾತಿನ ವೈಖರಿಯ ಮೂಲಕ ರೆಡ್ಡಿಯವರನ್ನು ನಿರುತ್ತರರನ್ನಾಗಿ ಮಾಡಿದ್ದರು ಗೋಸ್ವಾಮಿ. ಸಚಿವ ದಿನೇಶ್ ಗುಂಡೂರಾವ್ ಅವರಿಗಂತೂ ರವಿ ಸಾವಿನ ಪ್ರಕರಣದಲ್ಲಿ ಜಾರ್ಜ್, ನಾರಾಯಣ ಸ್ವಾಮಿ, ವರ್ತೂರ್ ಪ್ರಕಾಶ್ ಕೈವಾಡ, ಎಂಬಸಿ ಗ್ರೂಪ್ನಲ್ಲಿ ಜಾರ್ಜ್ ಪಾಲುದಾರಿಕೆ, ಪೋಸ್ಟ್ ಮಾರ್ಟಂ ಸ್ಥಳಕ್ಕೆ ಸಿದ್ಧರಾಮಯ್ಯ ಭೇಟಿ ಹೀಗೆ ಪ್ರಶ್ನೆಯ ಮೇಲೆ ಪ್ರಶ್ನೆ ಹಾಕಿ ಮೂಕ ಪ್ರೇಕ್ಷಕರನ್ನಾಗಿ ಮಾಡಿದ್ದರು. ದಿನೇಶ್ ಸಹನೆಯನ್ನು ಪರೀಕ್ಷೆ ಮಾಡಿದ್ದರು ಅರ್ನಾಬ್!!

ನಿರ್ಭಯಾ ಪ್ರಕರಣದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಎನ್ ಡಿ ಟಿವಿ Indias Daughter ಡಾಕ್ಯುಮೆಂಟರಿಯನ್ನು ಪ್ರಸಾರ ಮಾಡುವ ನಿರ್ಧಾರವನ್ನು ವಿರೊಧಿಸಿದಾಗ ಹಲವು ಮಂದಿ ಅರ್ನಾಬ್ ವಿರುದ್ಧ ಆಕ್ರೋಶಗೊಂಡಿದ್ದರು. ಕೇಂದ್ರ ಸರ್ಕಾರವೇ ಡಾಕ್ಯುಮೆಂಟರಿ ಪ್ರಸಾರ ಮಾಡದಂತೆ ನಿರ್ಬಂಧ ಹೇರಿತ್ತಾದರೂ ಅರ್ನಾಬ್ ಅದರ ಪ್ರಸಾರವನ್ನು ವಿರೊಧಿಸಿ ಟೀಕೆಗೆ ಗುರಿಯಾಗಿದ್ದರು. ಗ್ರೀನ್ ಪೀಸ್ ಕಾರ್ಯಕರ್ತೆ ಪ್ರಿಯಾ ಪಿಳ್ಳೈ ಅವರಿಗೆ ಬ್ರಿಟಿಷ್ ವಿಮಾನ ಏರಲು ನಿರಾಕರಿಸಿದ್ದ ವಿಷಯದ ಬಗ್ಗೆ ನ್ಯೂಸ್ ಅವರ್ ನಲ್ಲಿ ಚರ್ಚೆಗೆ ಅತಿಥಿಗಳಾಗಿ ಬಂದಿದ್ದ ಸಾಮಾಜಿಕ ಹೋರಾಟಗಾರರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅರ್ನಾಬ್ ಅವಕಾಶ ನಿರಾಕರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಇದರಿಂದ ಬೇಸತ್ತ ವಕೀಲರಾದ ವೃಂದಾ ಗ್ರೋವರ್, ಸುಧಾ ರಾಮಲಿಂಗಂ ಮುಂತಾದವರು ಪತ್ರಮುಖೇನ ಅಸಮಾಧಾನವನ್ನು ಹೊರಹಾಕಿದ್ದರು.

ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಸೋತಾಗ ಭಾರತ ತಂಡದ ಆಟಗಾರರು ದ್ರೋಹಿಗಳು ಎಂಬಂತೆ ಬಿಂಬಿಸಿದ್ದೂ ಇದೇ ಗೋಸ್ವಾಮಿ. ತ್ರಿಕೋನ ಸರಣಿಯ ಹೀನಾಯ ಸೋಲಿನ ನಂತರ ಭಾರತ ತಂಡವನ್ನು ಸೆಮಿಫೈನಲ್ ತನಕ ಯಶಸ್ವಿಯಾಗಿ ಮುನ್ನಡೆಸಿದ ನಾಯಕ ಧೋನಿಯ ಷಡ್ಯಂತ್ರದಿಂದ ಭಾರತ ಮುಗ್ಗರಿಸಿತು ಎನ್ನುತ್ತೀರಲ್ಲ ಗೋಸ್ವಾಮಿ, ನಿಮಗೆ ಸ್ವಲ್ಪವೂ ನಾಚಿಕೆಯಾಗುವುದಿಲ್ಲವೇ?? ತನ್ನ ಮಗಳ ಮುಖವನ್ನೇ ನೋಡದೆ ತಂಡದ ಹಿತಕ್ಕಾಗಿ ಆಡಿದ ನಾಯಕನೊಬ್ಬನ ಬಗ್ಗೆ ವೃತ್ತಿಧರ್ಮ ಮರೆತು ಮಾತನಾಡಲು ನಿಮಗೇನು ಅರ್ಹತೆ ಇದೆ Mr.Arnab??? ಆಟದಲ್ಲಿ ಸೋಲು-ಗೆಲುವು ಎನ್ನುವುದು ಸಹಜ ಎನ್ನುವುದನ್ನು ಮರೆತು ಟಿಆರ್ಪಿ ಗಾಗಿ ಬಾಯಿಗೆ ಬಂದ ಹಾಗೆ ಆಟಗಾರರನ್ನು ಜರೆದಿದ್ದರು.

ಅರ್ನಾಬ್ ಜೊತೆಗಿನ ತಮ್ಮ ಸಂದರ್ಶನದಲ್ಲಿ ರಾಜ್ ಠಾಕ್ರೆ ಸರಿಯಾಗೇ ಅರ್ನಾಬ್ ಗೆ ಪ್ರಶ್ನೆ ಮಾಡಿ, ಪ್ರಕರಣದ ಸತ್ಯವನ್ನು ನಿರ್ಧಾರ ಮಾಡಲು  ನೀವು ಯಾರು ಗೋಸ್ವಾಮಿ ಅವ್ರೇ?? ಟಿಆರ್ಪಿಗಾಗಿ ದೇಶದ ಮುಂದೆ ನಾಟಕ ಮಾಡಬೇಡಿ ಎಂದು ಸರಿಯಾಗಿಯೇ ಟಾಂಗ್ ನೀಡಿದ್ದರು. ಇನ್ನು ಪ್ರಧಾನಿ ಮೋದಿ ಕೂಡಾ ಅರ್ನಾಬ್ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದರು.

ಬೇರೆ ಚಾನೆಲ್ ತರಹ ಅರ್ನಾಬ್ ಗೆದ್ದೆತ್ತಿನ ಬಾಲ ಹಿಡಿಯುವ ವ್ಯಕ್ತಿಯಂತೂ ಖಂಡಿತಾ ಅಲ್ಲ. ಆದರೆ ವಿಷಯಗಳ ವೈಭವೀಕರಣದ ಭರಾಟೆಯಲ್ಲಿ ಮೈಮೇಲೆ ದೆವ್ವ ಬಂದ ಹಾಗೆ ವರ್ತನೆ ಮಾಡಿ ಸುಮ್ಮನೇ ಪ್ರಚಾರಗಿಟ್ಟಿಸಿಕೊಳ್ಳುವುದು ಸರಿಯಲ್ಲ ಎಂಬುದು ನನ್ನ ವಾದ. ಹವಾನಿಯಂತ್ರಿತ ಸ್ಟುಡಿಯೋದಲ್ಲಿ ಕುಳಿತು ಮೈದಾನದಲ್ಲಿ ಬೆವರುಹರಿಸಿದ ಟೀಮ್ ಇಂಡಿಯಾ ಆಟಗಾರರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುವುದು ಎಷ್ಟು ಸರಿ?? ವಿಶ್ವಕಪ್ ಸೋತಕೂಡಲೇ ಭಾರತದ ಒಂದು ಭಾಗ ಆಸೀಸ್ ಪಾಲಾಯ್ತು ಎಂಬ ರೀತಿ ಬೊಬ್ಬೆ ಹೊಡೆಯುವುದೇಕೆ?? ಡಿ.ಕೆ.ರವಿ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡೆಯ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದು ಕೇವಲ ಟಿಆರ್ಪಿ ಗಾಗಿಯೇ??? ಅರ್ನಾಬ್ ದ್ವಂದ್ವ ನಿಲುವು ಅರ್ಥವೇ ಆಗುತ್ತಿಲ್ಲ. ಪತ್ರಿಕೋದ್ಯಮವನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ!!

Mr. Arnab, The Nation wants to know. Answer please!!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!