ಸಿವನೇ ಸಂಭುಲಿಂಗ!
ಡೈಲಿ ಪಂಚಾಯ್ತಿ ಕಟ್ಟೇನಾಗೇ ಇಸ್ಪೀಟ್ ಆಡಕ್ಬರ್ತಿದ್ದ ಬುಲ್ಲೀ ಆವತ್ತ್ ಎಷ್ಟೋತ್ತಾದ್ರೂ ಬರ್ಲೇ ಇಲ್ಲ. ಮೂಡೌಟಾದ ಗೋಪಾಲಣ್ಣ ಬುಲ್ಲೀನ ವುಡಿಕ್ಕಂಡು ಮನೆಗಂಟ ವೋದ.
“ಬುಲ್ಲೀ ಲೇ ಬುಲ್ಲೀ, ಬಾರಲೇ ವೊರಕ್ಕೆ, ಅದೇನ್ಲಾ ಮಾಡ್ತಿದ್ಯಾ ವೊಳಕ್ಕೆ?”
“ಊರಾಚೆ ಸಾಲುದ್ದಕ್ಕೆ ಮನೇಗಂಟ ಬಂದ್ಯಾ ನನ್ ಮಗನ್ನ ಹಾಳ್ ಮಾಡಕ್ಕೆ?” ಅಂತ ಬುಲ್ಲೀ ತಾಯಿ ಬಸಮ್ಮ ರೇಗಿದ್ಲು.
“ಯಾಕ್ತಾಯಿ ಈ ಪಾಟಿ ಉರುದ್ ಬೀಳ್ತಿ? ಮೊಸ್ರಿಗೇ ವುಳಿ ಹಿಂಡೋದುಂಟಾ ಎಲ್ಲಾರು?” ಗೋಪಾಲಣ್ಣ ಆಯಮ್ಮಂಗೆ ಸರ್ಯಾಗೇ ದಮ್ಕಿ ಹಾಕ್ದ.
‘ಅದೇನ್ ಕರ್ಮಾನೋ ನಿಮ್ದು. ಬೆಳ್ ಬೆಳ್ಗೇ ಅದೇನೋ ಜರ ಬಂದವ್ನ್ತರಾ ಟಿವಿ ಮುಂದೆ ಕುಂತವ್ನೆ ಬುಲ್ಲೀ”
ಆಟೋತ್ಗೆ ವೊರಗ್ಬಂದ ಬುಲ್ಲೀ ಗೋಪಾಲಣ್ಣನ್ ತಾವ ‘ಮೌಕಾ ಮೌಕಾ ಮೌಕಾ ಮೌಕಾ’ ಅಂತ ಅದೇನೋ ಹಾಡೇಳ್ದ
“ಇದೇನ್ಲಾ ನಿನ್ ವ್ಯಾಸ?? ಅದೇನ್ ಜರ ಕಣ್ಲಾ ನಿಂಗೆ?”
“ವಲ್ಡ್ ಕಪ್ ಪಿವರಣ್ಣೋ, ಧವನ್ನೋ ಕೊಹ್ಲಿ ಕೊಡ್ತಿರೋ ಮಾಂಜಾಕ್ಕೆ ಪಾಕಿಸ್ತಾನ, ಅಪ್ರಿಕಾದೋರೆಲ್ಲಾ ಉಡೀಸ್ ಆಗ್ಬುಟ್ಟವ್ರೆ ಗೋಪಲಣ್ಣ!!”
“ಅದೇನ್ ಮಾಂಜಾನೋ ಕರ್ಮ? ನಮ್ ಬಿಹಾರ ಶೀಯೆಮ್ಮು ಮಾಜೀ ಶೀಯೆಮ್ಮು ನಿತೀಸುಗೇ ಮಾಂಜಾ ಕೊಡಕ್ಕೋದ್ ವಿಷ್ಯ ಗೊತ್ತೇನ್ಲಾ ನಿಂಗೇ? ” ಅಂತೇಳಿ ಮನೆ ವರಾಂಡದಲ್ಲೇ ಮಾತಿಗಿಳಿದ್ರು ಗೋಪಾಲಣ್ಣ-ಬುಲ್ಲೀ!
“ಅದೇನ್ ಬೇಗ ಬೊಗ್ಳಿ ಗೊಪಾಲಣ್ಣ, ಮ್ಯಾಚ್ ನೋಡಕ್ಕೆ ಲೇಟಾಯ್ತದೆ” ಬುಲ್ಲೀ ಏಳ್ದ.
“ತಡ್ಕಳ್ಳ ವಸಿ, ಅದೇನಾಯ್ತೋ ಗೊತ್ತಿಲ್ಲ. ಲೋಕ್ಸಭೆ ಎಲೆಕ್ಸ್ನ್ ಟೇಮ್ನಾಗೇ ತಂದಿಟ್ಟಿದ್ದ ಪಟಾಕಿ ಬಿಡಕ್ಕಾಯ್ತಿಲ್ಲ ಅಂತ ನಿತೀಸುಗೇ ಪುಲ್ಲು ಬೇಜಾರಯ್ತಿತ್ತಂತೆ. ನಿನ್ನಂಗೆ ಮೌಕಾ ಮೌಕಾ ಆಡೇಳ್ತಾ ಕೂತಿತ್ತು ನಿತೀಸು, ಇದ್ಕಿದ್ದಂತೆ ನಿತೀಸುಗೂ ಶೀಯೆಮ್ ಮಾಂಜಿಗೂ ಜಗ್ಳ ಆಯ್ತಂತೆ. ಮಾಂಜಿ ನನ್ ಮಾತ್ ಕೇಳ್ತಾಯಿಲ್ಲ , ಆವಯ್ಯನ್ನ ಬೇಗ ಶೀಟಿಂದ ಇಳುಸ್ಬೇಕು” ಅಂತ ನಿತೀಸು ಸಡ್ಯಂತ್ರ ಮಾಡ್ಬುಡ್ತು ಕಣ್ಲಾ
“ಏನ್ ಸಡ್ಯಂತ್ರ ಗೋಪಾಲಣ್ಣ? ”
“ಏಳೀ ಕೇಳಿ ಮಾಂಜಿ ಡಮ್ಮಿ ಶೀಯೆಮ್ಮ್ ತಾನೇ? ಮೋದಿಗೇ ಮಾಂಜಾ ಕೊಡಕ್ಕೋಗಿ ಹಲ್ವಾ ತಿಂದ ನಿತೀಸು ನೈತಿಕ ಒಣೆ ಒತ್ತು ರಿಜೈನ್ ಮಾಡ್ಬುಡ್ತು. ಈವಾಗ ಪವರ್ ಬೇಕಲ್ವಾ, ಮಾಂಜೀನಾ ಕಿತ್ತಾಕಕ್ಕೆ ನೋಡ್ತು ಈ ನಿತೀಸು”.
“ಅಷ್ಟು ಈಜೀಯಾಗಿ ಮಾಂಜಿ ಶೀಟ್ ಬಿಟ್ಕೊಟ್ನಾ ಗೋಪಾಲಣ್ಣ? ”
“ಅದೆಂಗೋ ಬಿಡ್ತಾವ್ನೆ? ಅತ್ತಿಪ್ಪತ್ ದಿನ ‘ನಾನ್ ಪವನರ್ಾಗಿರೋವಾಗ ಕಮಿಸನ್ನು ತಗೋಂಡಿವ್ನಿ, ನಮ್ ದೇಸ್ದಾಗೆ ನಮ್ ಎಂಡ್ತಿಗಿಂತ ಬೇರೆವ್ರ ಎಂಡ್ತಿ ಮ್ಯಾಕೆ ಕಣ್ಣಾಕೋರೇ ಜಾಸ್ತಿ’ ಅಂತ ಏನೇನೋ ಬಡ್ಕಂಡು ಪುಗ್ಸಟ್ಟೆ ಪಬ್ಲಿಶಿಟಿ ಪಡ್ಕಳಕ್ಕೆ ನೋಡ್ತು. ಆದ್ರೆ ಅದ್ಯಾವ್ದೂ ವರ್ಕೌಟೇ ಅಗ್ಲಿಲ್ಲ. ಪಾಪ ”
“ಉಹುಹುಹು.. ಬಲ್ ರಸಿಕ ಈ ಮಾಂಜಿ.. ಥೇಟ್ ನಿಮ್ಥರ ಗೋಪಾಲಣ್ಣ ಅಂತೇಳ್ತು ಬುಲ್ಲೀ. ”
“ವಸಿ ಜೋರಾಗ್ ಏಳ್ಳಾ ದರ್ಬೇಸಿ.. ಏಟಾದ್ರೂ ನಮ್ ಕುಮಾರಣ್ಣನ್ ಅಟ್ಟಿಲ್ಲ ಬಿಡು ಕಣ್ಲಾ ”
“ಅದೂನೂ ಕರೆಕ್ಟೇಯಾ.. ಆಮೇಲೇನಾಯ್ತು ಗೋಪಾಲಣ್ಣಾ? ”
“ಆಗೋದೇನ್.. ಮಾಂಜಿಗೆ ಸಪ್ಪೋರ್ಟೇ ಸಿಗ್ಲಿಲ್ಲ, ಕಮ್ಲ ಪಾರ್ಟಿಯೋರ್ ಕೈ ಎತ್ಬುಟ್ರು, ಲಾಲು, ಕಾಂಗ್ರೇಸ್ ಪಾರ್ಟಿಯೋರ್ ನಿತಿಶುಗೆ ಬೆಂಬ್ಲ ಕೊಟ್ಬುಟ್ರು, ನಿತೀಸುಗೇ ಮಾಂಜಾ ಕೊಡಕ್ಕೋಗಿ ಮಾಂಜಿ ಮಾಜಿ ಆಗ್ಬುಡ್ತು! ಸಿವನೇ ಸಂಭುಲಿಂಗ!!”