ಪ್ರಚಲಿತ

ಅಭಿವೃದ್ಧಿಯ ಪಥದಲ್ಲಿ ಭವ್ಯ ಭಾರತ

ನರೇಂದ್ರ ಮೋದಿ ನಮ್ಮ ದೇಶದಲ್ಲಿ ತುಂಬಾ ಪ್ರಚಲಿತದಲ್ಲಿರುವ ಹೆಸರು. 2014ರ ಲೋಕಸಭೆಯ ಚುನಾವಣೆಯಲ್ಲಿ ಭಾರತದ ಮಹತ್ವಾಕಾಂಕ್ಷೆಯ ಆಶಾಕಿರಣವಾಗಿ ಗೋಚರಿಸಿದವರು ನರೇಂದ್ರ ಮೋದಿ. ಸಾಮಾನ್ಯ ನೊಬ್ಬ ದೇಶದ ಪ್ರಧಾನಿ ಹುದ್ದೆಯಲ್ಲಿ ಕೂತಾಗ ವಿಶ್ವಕ್ಕೆ ನಮ್ಮ ಸಂವಿಧಾನದ ಮಹತ್ವ ಮತ್ತೆ ತಲುಪಿತ್ತು. ಒಂದು pure election ವಿಶ್ವದ ಬಲಿಷ್ಟ ರಾಷ್ಟ್ರಗಳು ಭಾರತವನ್ನ ನೋಡುವ ದೃಷ್ಟಿ ಬದಲಾಯಿಸಿತ್ತು. ರಾಜಕೀಯದಲ್ಲಿ ವಂಶಪಾರಂಪರ್ಯ ಮೆರೆದಾಡುತ್ತಿದ್ದಾಗ ಸಾಮಾನ್ಯನಾಗಿ ಸ್ಪರ್ಧೆಗೆ ಧುಮುಕಿದ್ದು ನರೇಂದ್ರ ಮೋದಿ. ಒಬ್ಬ successful ಮುಖ್ಯಮಂತ್ರಿಯಾಗಿ ತಾನು ಬದಲಾಯಿಸಿದ್ದ ಗುಜರಾತ್ ಎಂಬ ರಾಜ್ಯದ Report Card ಅನ್ನು ಹಂತ ಹಂತವಾಗಿ ಬಿಚ್ಚಿಡುತ್ತ ಹೋದ ಮೋದಿ ಜನರನ್ನ ಆವರಿಸಿದ್ದರು. ನೂರಾರು, ಸಾವಿರಾರು ಯುವಕರು April ೨೦೧೪ ರ General Election ನ ತಯಾರಿಗಾಗಿ, ನರೇಂದ್ರ ಮೋದಿಗಾಗಿ ಕೆಲಸ ಬಿಟ್ಟರು. #VoteforNation ಎಂದು ಹಳ್ಳಿ ಹಳ್ಳಿಯ ತಿರುಗಾಡಿದರು, ಅದೆಷ್ಟೋ ವರ್ಷಗಳಿಂದ ಮತದಾನ ಮಾಡದವರು “I will vote for nation this time” ಅಂದರು. ಯಾರು ಬಂದು ಕೂತರೆ ಭಾರತ ಸ್ವಾವಲಂಬಿಯಾಗತ್ತೆ, ಯಾರು ಬಂದು ಕೂತರೆ ಭಾರತ ವಿಶ್ವಗುರು ಆಗತ್ತೆ ಅಂತ ಅದೆಷ್ಟೋ ಮನಸ್ಥಿತಿಗಳು ನಂಬಿದ್ದರೋ ಅದೇ ‘ನರೇಂದ್ರ’ ಪ್ರಧಾನ ಸೇವಕನಾಗಿ ಸ್ಥಾನ ಅಲಂಕರಿಸಿದ್ದ. ಭಾರತದ ಜನರು ಅಸಾಮಾನ್ಯ ಗೆಲುವನ್ನ BJP ಗೆ ನೀಡುವ ಮೂಲಕ ಸದೃಢ ಸರ್ಕಾರದ ರಚನೆಗೆ ಕಾರಣೀಭೂತವಾದರು.

ಅತಿಯಾದ ನಿರೀಕ್ಷೆ, ‘ಮೋದಿ’ ರಾಜಕೀಯವಾಗಿ ಇಡುವ ಪ್ರತಿಯೊಂದು ಹೆಜ್ಜೆಯನ್ನ ಜನರೇ Conclude ಮಾಡಬಲ್ಲರಾದಂತಹ ಸ್ಥಿತಿ. ಅತಿಯಾದ ನಿರೀಕ್ಷೆ ಆತ್ಮವಿಶ್ವಾಸನ್ನ ನಡುಗಿಸಿಬಿಡುತ್ತದೆ. ಆದರೆ ಮೋದಿ ಇವೆಲ್ಲವನ್ನ ಮೀರಿ ನಿಲ್ಲುವ ಶಕ್ತಿ ಹೊಂದಿದವರು. ಜನಸಾಮಾನ್ಯನ ಅಂತರಾಳದ ಮಾತನ್ನು ಪ್ರಧಾನಿಯಾದ ಮೇಲೂ ಬಿಚ್ಚಿಡತೊಡಗಿದರು. ಸರ್ಕಾರದ ಆಡಳಿತ ಯಂತ್ರದ ಆಯಕಟ್ಟಿನ ಜಾಗದಲ್ಲಿ ವಿಶ್ವಸನೀಯ, Eligible ಅಧಿಕಾರಿಗಳನ್ನ ನೇಮಿಸಿದರು ಅವರುಗಳು ಕೇವಲ ಅಧಿಕಾರಿಯಗಿ ಅಲ್ಲ ಒಬ್ಬ ಅಪ್ರತಿಮ ದೇಶಸೇವಕರಾಗಿ ಆ ಕೆಲಸವನ್ನ ಒಪ್ಪಿಕೊಂಡರು. ಅಜಿತ್ ಧೋವಲ್, ಸೈಯದ್ ಅಕ್ಬರುದ್ದೀನ್, ಅರವಿಂದ ಸುಬ್ರಹ್ಮಣಿಯನ್ ರಂತಹ ಅನೇಕ  ಅಧಿಕಾರಿಗಳು ಮೋದಿಯವರ Chief Secretary ಸ್ಥಾನ ಅಲಂಕರಿಸಿದರು.

ಮೋದಿ 9 ತಿಂಗಳಲ್ಲಿ  ಏನು ಮಾಡಿದರು?? ಅವರೇನು ಮಾಡಿದರು ಎಂಬುದನ್ನು ನಿಮ್ಮೆದುರಿಡುವ ಪ್ರಯತ್ನ ಮಾಡುತ್ತೇನೆ:

1) “Decision Making Panel ಗಳಿಗೆ ಮಂಗಳ ಹಾಡಿದ ಮೋದಿ”- ಹಿಂದಿನ ಸರ್ಕಾರಗಳಲ್ಲಿ GoMs (Group of Ministers) ಮತ್ತು EGoMs (Empowered Group of Ministers)ಗಳು ತುಂಬಾನೇ ಇದ್ದವು. ಇವುಗಳನ್ನ Policy Paralysis ಅಂತ ಕರೆಯಬಹುದು. ಇವುಗಳು ಏನ್ಮಾಡುತ್ತಿದ್ದವು ಗೊತ್ತಾ? ಮೊದಲನೆಯದಾಗಿ ನಿರ್ಣಯ ತೆಗೆದುಕೊಳ್ಳುಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದು, ಎರಡನೆಯದಾಗಿ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಪ್ರಯತ್ನ ಮತ್ತು ಮೂರನೆಯದಾಗಿ ಪ್ರಮುಖವಾಗಿ ಉತ್ತರದಾಯಿತ್ವವೇ ಇರಲಿಲ್ಲ.ಮೋದಿ ಇಂಥ panel ಗಳಿಗೆ ಮಂಗಳ ಹಾಡಿದರು.

2)”Planning Commission ನ ಆಟ ಕೊನೆಗಾಣಿಸಿದ ಮೋದಿ”- 64 ವರ್ಷದಿಂದ ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದ Planning Commission ರಾಜ್ಯ ಸರ್ಕಾರಗಳ ಹಕ್ಕನ್ನು ಕಿತ್ತುಕೊಳ್ಳುವುದೇ ಅಧಿಕಾರ ಎಂಬಂತೆ ವರ್ತಿಸುತ್ತಿತ್ತು. “Overruling and humiliating of state governments in drawing up their development plans” ಅಂತ ತಜ್ಞರೊಬ್ಬರು Planning Commission ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

 3) ಸಚಿವರುಗಳು ತಮ್ಮ ನೆಂಟರು, ಕುಟುಂಬದ ಸಂಬಂಧಿಕರುಗಳಿಗೆ ಸರ್ಕಾರದ ಕೆಲಸವನ್ನ ತಮ್ಮ ಕೈ ಚಳಕದ ಮೂಲಕ ಕೆಇಸುವಂತಿಲ್ಲ ಎಂಬ ಖಡಕ್ ನಿರ್ಧಾರವನ್ನ ಮೋದಿ ತೆಗೆದುಕೊಂಡು ಭ್ರಷ್ಟಾಚಾರದ ಕಡಿವಾಣ ಹಾಕಿದರು.

4) “ಜನ್-ಧನ್” ಯೋಜನೆಯ ಘೋಷಣೆ:- ಇದು ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ, ಭಾರತದ ಪ್ರತಿಯೊಬ್ಬ ನಾಗರೀಕನೂ Bank Account ಹೊಂದಬೇಕೆಂಬುದು ಯೋಜನೆಯ ಉದ್ದೇಶ. Financial Untouchability ಯನ್ನ ಕೊನೆಗಾಣಿಸಲು  ಈ ಯೋಜನೆ ಬಲು ಸಹಕಾರಿ. ಈಗಾಗಲೇ 13.6 crore ಜನರು ಖಾತೆ ತೆರೆದಿದ್ದು 12.8 crore RuPay ಡೆಬಿಟ್ ಕಾರ್ಡ ವಿತರಿಸಿದ್ದು, 12.69 ಸಾವಿರ ಕೋಟಿ ಹಣ ಬ್ಯಾಂಕ್ ನಲ್ಲಿ ಜಮಾವಣೆ ಆಗಿದೆ. ಇದು Guinness Record ಆಗಿದ್ದೂ ಇತಿಹಾಸ. ಖಾತೆದಾರನಿಗೆ RuPay ಡೆಬಿಟ್ card, ಒಂದು ಲಕ್ಷ ಅಪಘಾತದ ವಿಮೆ, 3೦೦೦೦ದ ಜೀವ ವಿಮೆ ಜೊತೆಗೆ 5೦೦೦ ಸಾಲ ಸೌಲಭ್ಯ ನೀಡುವ ಉದ್ದೇಶ ಈ ಯೋಜನೆಯದ್ದು.

5) Power Grid ನಂತೆ Food Grid ಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರದ್ದು. ಈ ಯೋಜನೆಯಲ್ಲಿ ಅತೀ ಹೆಚ್ಚು ಮತ್ತು ಅತೀ ಕಡಿಮೆ ಆಹಾರವನ್ನು ಉತ್ಪಾದನೆ ಮಾಡುವ ಪ್ರದೇಶಗಳ ಗುರುತಿಸಿ ಜೋಡಿಸುವ ಕಾರ್ಯವನ್ನು ಮಾಡುವುದು ಇದರಿಂದ ಆಹಾರಗಳ ಕೊರತೆ ಮತ್ತು ಬೆಲೆಯ ನಿಯಂತ್ರಣವಾಗುತ್ತದೆ.

6)ಮೋದಿಯವರ ಮೊದಲ ನೇಪಾಳದ ಭೇಟಿ:- ಇದೆಂತಾ Development ಅಂತ ನೀವೆನ್ನಬಹುದು ಆದರೆ ಬರೋಬ್ಬರಿ 17 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ನೇಪಾಳಕ್ಕೆ ಭೇಟಿ ನೀಡಿದ್ದರು.ಪಕ್ಕದ ನೇಪಾಳವನ್ನ ಹಿಂದಿನ ಎಲ್ಲಾ ಪ್ರಧಾನಿಗಳು Ignore ಮಾಡಿದ್ದರು ಇದರ ಲಾಭವನ್ನು ಚೀನಾ ಪಡೆದುಕೊಳ್ಳುತ್ತಿತ್ತು. ನೇಪಾಳಕ್ಕೆ ಆಮಿಷಗಳನ್ನೊಡ್ಡಿ ಭಾರತದ ಪ್ರದೇಶವನ್ನ ಹಂತ ಹಂತವಾಗಿ ಆಕ್ರಮಿಸಬೇಕೆಂಬ ಚೈನಾದ ಆಸೆಗೆ ಮೋದಿ ತಣ್ಣೀರನ್ನೆರಚಿದ್ದರು. ನೇಪಾಳದ ಜನರ ಮನಸ್ಸನ್ನ ಭಾರತದ ಪ್ರಧಾನಿ ಗೆದ್ದಿದ್ದರು, ಸಡ್ಡುಹೊಡೆಯುವ ಪ್ರಯತ್ನ ಮಾಡಿದ್ದ ಚೀನಾ ಕೈಹೊಸಕಿಕೊಂಡಿತ್ತು.ಭಾರತ ಗೆದ್ದಿತ್ತು.

7) ಭಾರತ ಭೂತಾನ್ ಸಂಬಂಧ ವೃದ್ಧಿ:- ನೇಪಾಳದ ನಂತರ ಮೋದಿ ಹೊರಟಿದ್ದು ಭೂತಾನ್ ಎಂಬ ಚಿಕ್ಕ ನೆರೆ ರಾಷ್ಟ್ರಕ್ಕೆ. ಭೂತಾನ್ ಯಾವತ್ತೂ ಭಾರತದ ರಾಷ್ಟ್ರೀಯ ವಿಚಾರಧಾರೆಗಳಿಗೆ ಧಕ್ಕೆ ತರದ ರಾಷ್ಟ್ರ. ಕಾದು ನೋಡಿ ಮುಂದಿನ ದಿನಗಳಲ್ಲಿ ಭಾರತಕ್ಕೆ Major Source of Hydro-Power ಭೂತಾನ್ ನಿಂದಲೇ ಬರುತ್ತದೆ. ಅಲ್ಲೂ ಮೋದಿ ಗೆದ್ದರು.

8) ಭಾರತ ಜಪಾನ್ನ ಅವಶ್ಯ ಮೈತ್ರಿ:- ಚೈನಾ ಅಮೇರಿಕಾ ನಡುಗಿದ್ದು ಯಾವಾಗ ಮೋದಿ ಜಪಾನ್ ಗೆ ಭೇಟಿ ನೀಡಿದರೋ ಆಗ. ಜಪಾನ್ ಗೆ ಹೋದ ಮೋದಿ ರಕ್ಷಣಾವಲಯದಲ್ಲಿ  ಭಾರತದೊಡನೆ  ಜಪಾನ್ ೪ ದಶಕಗಳಲ್ಲಿ ದೊಡ್ಡ ಒಪ್ಪಂದ ಏರ್ಪಡಿಸುವಲ್ಲಿ ಯಶಸ್ವಿಯಾದರು.ಈ ಭೇಟಿ 35USD ಬಿಲಿಯನ್ ಹೂಡಿಕೆ ಹರಿದು ಬರುವಂತೆ ಮಾಡಿತು.

 9) ಯಾವಾಗಲೂ 7೦% ದಷ್ಟು  Defence equipment ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಮೋದಿಯವರ ಮಹತ್ವಾಕಾಂಕ್ಷೆಯ Make in India ಯೋಜನೆ ಜಾರಿಯಾದಾಗಿನಿಂದ ಮತ್ತು 26% ಇದ್ದ FDI in defence ಅನ್ನು 49% ಏರಿಸುವ ಮೂಲಕ ಸ್ವಯಂ ಉತ್ಪಾದನೆಯ ಜೊತೆಗೆ ರಫ್ತನ್ನೂ ಮಾಡಲು ಪ್ರಾರಂಬಿಸಿತು.

1೦) ಸಚಿವರುಗಳ ವೈಯಕ್ತಿಕ ಖರ್ಚುಗಳಿಗೆ ಕಡಿವಾಣ:- ಭಾರತ ಸರ್ಕಾರದ ಸಚಿವರುಗಳು Economic Class ಗಳಲ್ಲಿ ಪ್ರಯಾಣಿಸಬೇಕು, ಹೊಸಾ ಕಾರುಗಳನ್ನು ಖರೀದಿಸುವಂತಿಲ್ಲ, ಫೈವ್ ಸ್ಟಾರ್ ಹೊಟೆಲ್ ಗಳಲ್ಲಿ ಮೀಟಿಂಗ್ ಮಾಡುವಂತಿಲ್ಲ ಮತ್ತು ಬಹು ಮುಖ್ಯವಾಗಿ Office Expenses. ಒಂದು ಲಕ್ಷಕ್ಕಿಂತ ಜಾಸ್ತಿ ಇದ್ದಲ್ಲಿ PMO approval ತೆಗೆದುಕೊಳ್ಳಬೇಕೆಂಬ ನಿರ್ಧಾರ ತೆಗೆದುಕೊಂಡಿದ್ದು ಮೋದಿ.

11) ಸ್ವಚ್ಛ ಭಾರತ ಅಭಿಯಾನ:- ಪ್ರತಿಯೊಬ್ಬ ಭಾರತೀಯನನ್ನೂ ಬೆಡಿದೆಬ್ಬಿಸಿದ ಯೋಜನೆ ಇದು. ಮನೆ, ಹಳ್ಳಿ, ನಗರ, ರಾಜ್ಯ, ದೇಶ ಮುಖ್ಯವಾಗಿ ಎಲ್ಲೆಂದರಲ್ಲಿ ಕಸ ಬಿಸಾಕುವ ಪ್ರತಿಯೊಂದು ಮನಸ್ಸನ್ನು ಜಾಗ್ರತೆಗೊಳಿಸಿದ ಯೋಜನೆ ಇದು. 2019 ರೊಳಗಡೆ Clean India ರೂಪಿಸುವ ಗುರಿ ನಮ್ಮೆಲ್ಲರದ್ದಾಗಬೇಕು.

12) Inflation Controlled ಮತ್ತು Growth Rate increased:-  ಮೋದಿಯವರ ಸರ್ಕಾರ ಬಂದ ಮೇಲೆ ಕನಿಷ್ಟ ರಫ್ತು ಬೆಲೆ (Minimum Export Price) ಜಾಸ್ತಿ ಆಯಿತು. ಇದರಿಂದ Stock Inflation ಕಳೆದ ೫ ವರ್ಷದಲ್ಲೇ ಕಡಿಮೆ ಆಯಿತು. ಮತ್ತೊಂದು ಮುಖ್ಯ ನಿರ್ಧಾರ ಎಂದರೆ State ಗಳಲ್ಲಿ Special Fast Court ಗಳ ಸ್ಥಾಪನೆ ಮಾಡಿದ್ದರ ಪರಿಣಾಮ Market Hoarding ಮತ್ತು Black Marketing ಕಡಿಮೆ ಆಯಿತು. October 2014 ರಲ್ಲಿ SII(Stock Inflation Index)1.77%ಇತ್ತು, ಅದೇ ಅಕ್ಟೋಬರ್ 2013 ರಲ್ಲಿ 7.24 % ಮತ್ತು ಮೇ 2014 ರಲ್ಲಿ 6.1% ಇತ್ತು ಆಗ UPA ಆಡಳಿತ ಅನ್ನುವುದನ್ನ ಮರೆಯಬಾರದು. ಹಾಗೇ CPI (Cost Price Index) ಅಕ್ಟೋಬರ್ 2014 ರಲ್ಲಿ 5.52% ಮತ್ತು ಅಕ್ಟೋಬರ್ 2012 ರಲ್ಲಿ  ಯುಪಿಎ ಆಳಿತದಲ್ಲಿ 10.74% ಹಾಗು ಮೇ 2014 ಅಲ್ಲಿ 8.28% ಇತ್ತು. WPI Inflation Dec 2014 ರಲ್ಲಿ . 11% ಇತ್ತು ಮತ್ತು ಜನವರಿ 2015 ರಲ್ಲಿ -.39% ಗೆ ಬಂತು ಹಾಗೆಯೇ Core Inflation Dec2014 ರಲ್ಲಿ 1.3% ಇದ್ದಿದ್ದು ಜನವರಿ 2015 ರಲ್ಲಿ. 9% ಗೆ ಬಂತು ಮತ್ತು ಪ್ರಮುಖವಾಗಿ Manufacturing Inflation Dec2014 ರಲ್ಲಿ 1.6% ಇದ್ದಿದ್ದು ಜನವರಿ 2015 ರಲ್ಲಿ 1.05% ಗೆ ಬಂದು Overall Inflation ಕಡಿಮೆ ಆಯಿತಲ್ಲ ಹಾಗಾದರೆ ಇದು ಅಭಿವೃದ್ಧಿಯಲ್ಲವೇ? ಹಾಗೆಯೆ Growth Rate (GDP) 2015-16 ಅಲ್ಲಿ 7.5% ಗೆ ಹೋಗುತ್ತದೆ ಎಂದು Economical Analyst ಗಳು ಹೇಳುತ್ತಿದ್ದಾರಲ್ಲ. ಚೀನಾದ Growth rate ಅನ್ನೂ ಹಿಂದಿಕ್ಕಿ ಸಾಗುತ್ತಿರುವ ಭಾರತ ಬದಲಾಗುತ್ತಿಲ್ಲವೆ? Growth Rate UPA ಅವಧಿಯ 2013-14ರ Q1 ಅಲ್ಲಿ 4.7% ಇತ್ತು ಅದೇ NDA ಯ 2014-15 ರ  Q1ಅಲ್ಲಿ 5.7% ತಲುಪಿತ್ತಲ್ಲ ಅದು ಅಭಿವೃದ್ಧಿ ಅಲ್ಲವೇ?? ಮತ್ತು Industrial Production Index ಯುಪಿಎ ಸರ್ಕಾರದಲ್ಲಿ ಋಣಾತ್ಮಕವಾಗಿಯೇ ಇತ್ತು ಅದು +2.5% ಆಯಿತಲ್ಲ ಅದು ಹೇಗೆ ಸ್ವಾಮೀ??

13) North East ರಾಜ್ಯಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿ ಬಜೆಟ್ ನಲ್ಲಿ 5೦೦೦೦ ಕೋಟಿ ಘೋಷಣೆ ಮಾಡಿ ಒಂಥರ ನಮ್ಮ ದೇಶದ ಪ್ರಮುಖ ಭಾಗದ ಕಡೆ ಗಮನ ಹರಿಸಿದ್ದು ಮೋದಿ. ಮೇಘಾಲಯದಂತ ಪ್ರದೇಶಗಳೂ ರೈಲು ಕಂಡಿತಲ್ಲ ಅದು ಅಭಿವೃದ್ಧಿ ಅಲ್ಲವೇ?

14) ಯುಪಿಎ ಅವಧಿಯಾದ 2013-14 ನಲ್ಲಿ Road Construction ಆಗಿದ್ದು ದಿನವೊಂದಕ್ಕೆ 5.3 ಕಿಲೋ ಮೀ. ಅದೇ ಮೋದಿ ಸರಕಾರದ 9 ತಿಂಗಳಲ್ಲಿ Construct ಆಗಿದ್ದು ದಿನವೊಂದಕ್ಕೆ 10.1km ಹಾಗೂ ಹೊಸ ರೈಲ್ವೆ ಮಾರ್ಗಗಳು ಯುಪಿಎಯ 2013-14ರ ಅವಧಿಯಲ್ಲಿ 390ಕೀಮೀ ಆದರೆ ಮೋದಿ ಅವಧಿಯ 9 ತಿಂಗಳಲ್ಲಿ 410 ಕಿಮೀ ಮತ್ತು ಅದೇ ಯುಪಿಎ ಅವಧಿಯಲ್ಲಿ Gauge Conversion ಆಗಿದ್ದು 588Km ಆದರೆ ಮೋದಿಯವರ 9 ತಿಂಗಳ ಅಡಳಿತದಲ್ಲಿ 700Km Gauge Conversion ಆಯಿತಲ್ಲ ಅದು ಅಭಿವೃದ್ಧಿ ಅಲ್ಲವೇ?

5) AADHAR card UPA ಮಹತ್ವಾಕಾಂಕ್ಷೆಯ ಯೋಜನೆ ಅದರೆ ಅದರ Impliment ಮಾಡುವಲ್ಲಿ ಕಾಂಗ್ರೆಸ್ ಎಡವಿತು, 4-5 months ನಲ್ಲಿ ಏಳು ಕೋಟಿ ಹೊಸ account ತೆರೆಯಿತು, 5೦೦೦ ಆಧಾರ್ card MGNREGA ಜೊತೆ ಜೊಡಣೆ ಆಯಿತು ಹಾಗೂ 1.7 ಕೋಟಿ ಆದಾರ್ ಕಾರ್ಡ ಜೋಬ್ ಕಾರ್ಡ ಜೊತೆ ಜೋಡಣೆ ಅಯಿತು ಅದೇ ಮೋದಿಯವರ 9 ತಿಂಗಳ ಆಡಳಿತದಲ್ಲಿ 17 ಕೊಟಿ ಹೊಸ ಖಾತೆ , 8 ಲಕ್ಷ. MGNREGA ಜೊತೆ ಜೋಡಣೆ ಹಾಗೂ 5 ಕೋಟಿ ಜೋಬ್ ಕಾರ್ಡ ಜೊತೆ ಜೋಡಣೆ ಅಯಿತು.

ಇನ್ನುಳಿದ ಮೋದಿಯವರ development ಕಾರ್ಯಗಳು: Coal Auction ನಿಂದ ಯುಪಿಎ ಸರಕಾರದಲ್ಲಿ 1.86ಲಕ್ಷ ಕೋಟಿ ನಷ್ಟವಾಯಿತು ಆದರೆ ಮೋದಿ ಸರಕಾರದಲ್ಲಿ ಕೇವಲ 3೦ ಕೋಲ್ ಬ್ಲಾಕ್ಗಳಿಂದ 2 ಲಕ್ಷ ಕೋಟಿ ಲಾಭವಾಯಿತಲ್ಲ ಅದು ಅಭಿವೃದ್ಧಿ ಅಲ್ಲವೇ?. ಮೋದಿಯವರ ಅಮೆರಿಕಾ ಮತ್ತು ಅಸ್ಟ್ರೇಲಿಯಾ ಬೇಟಿ,ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಆಡಳಿತದಲ್ಲಿ ಭ್ರಷ್ಟಾಚಾರ ತಡೆಯಲು Information Technology ಬಳಸಿಕೊಂಡು E-Revolution ಎಂಬ ಯೋಜನೆ ಬರುತ್ತಿದೆ. ಮತ್ತು ಮೇ 27,2014ರಂದು ಕಪ್ಪು ಹಣ ತರಲು ಮೋದಿ ಸರ್ಕಾರ Special task Force ಅನ್ನು ಸ್ಥಾಪಿಸಿತು. National Judicial Commission Bill 2014 ಅನ್ನು ಹೈಕೋರ್ಟ ನ್ಯಾಯಾಧೀಶರ ನೇಮಕದಲ್ಲಿ ಪಾರದರ್ಶಕತೆ ತರಲು ಲೋಕಸಭೆಯಲ್ಲಿ ಮಂಡಿಸಿತು. Pradhanamantri Saansad Aadarsha Gaon Yojana ಅಡಿಯಲ್ಲಿ ಪ್ರತಿ ಸಂಸದನೂ ಒಂದೊಂದು ಗ್ರಾಮ ದತ್ತು ಪಡೆದು ಅಭಿವೃದ್ಧಿ ಪಡಿಸಬೇಕೆಂಬ ಜವಾಬ್ದಾರಿಯುತ ಯೋಜನೆ, ಹಾಗು ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಜ್ಯೋತಿ ಯೋಜನೆ ಅಡಿಯಲ್ಲಿ 24*7 ವಿದ್ಯುತ್ ನೀಡು ಯೋಜನೆಯನ್ನೂ ಜಾರಿಗೆ ತರಲಾಗಿದೆ. ಇಷ್ಟೇ ಅಲ್ಲದೆ ಮೋದಿಯವರು ಇನ್ನೂ ಅನೇಕ ಅಭಿವೃದ್ಧಿ ಪೂರಕ ವಾತಾವರಣ ಸೃಷ್ಟಿಸಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮೋದಿಯವರು ಯಾವತ್ತು ಬಿಟ್ಟಿ ಸವಲತ್ತುಗಳನ್ನ ನೀಡುವವರಲ್ಲ ಆದರೆ ಸ್ವಾವಲಂಬಿ ಭಾರತವನ್ನ  ಸೃಷ್ಟಿಸುವುದರಲ್ಲಿ ಯಾವುದೇ ಅನುಮಾನ ಬೇಡ. ಹಾಗು ನಾನೆಲ್ಲೂ Land Acquision Bill ಬಗ್ಗೆ ಮಾತಾಡಿಲ್ಲ ಹಾಗಂತ ಅದನ್ನ ವಿರೋಧಿಸುತ್ತಿದ್ದೇನೆ ಅಂತ ಅಲ್ಲ, ಅದರ ಹೆಸರಲ್ಲಿ Congress ಆಡುತ್ತಿರುವ ಆಟವನ್ನೂ ಬಿಚ್ಚಿಡುತ್ತೇನೆ ಸದ್ಯದಲ್ಲೆ.

ಆದರೆ ಅಂದು ಅಟಲ್ ಜೀಗೆ ಮಾಡಿದ ಮೋಸ ಮೋದಿಯವರಿಗಾದರೆ ಎಂಬ ಭಯ ನನ್ನ ಕಾಡುತ್ತಿದೆ. ಮೋದಿಯವರ ಯೋಜನೆಗಳು ಫಲ ಕೊಡಲು ಸಲ್ಪ ಸಮಯಬೇಕು. ನರೇಂದ್ರ ಮೋದಿಯವರ ಸರಕಾರದ ಪ್ರತಿ ನಿರ್ಧಾರದ ಬಗ್ಗೆ ಜನ ಉತ್ಸುಕರಾಗಿದ್ದಾರೆ, ಜನರೇ Report Card ಅನ್ನು ಮೋದಿಗೆ ನೀಡುತ್ತಿದ್ದಾರೆ. ಕೆಲವೊಂದು ಅಮೂಲಾಗ್ರ ಬದಲಾವಣೆ ಆಗಬೇಕೆಂದರೆ ಅದಕ್ಕೆ ಕಾಯುವ ಮನಸ್ಥಿತಿ ನಿಮ್ಮದಾಗಲಿ. ಭಾರತ ಪ್ರಕಾಶಿಸುವ ಕಾಲ ಬಂದೇ ಬರುತ್ತದೆ.  ಜೈ ಹಿಂದ್

By Prasanna Hegde

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!