ಪ್ರಚಲಿತ

ಬುಡ್ ಬುಡಿಕೆ

ಟೈಮ್ ಅಷ್ಟತ್ತ್ಕಾಗ್ಲೇ ಪೌನೇ ದಸ್ಸ್ ಆಗಿತ್ತು…

ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ… ಅ೦ತ  ಪದ್ಯ ಏಳ್ಕ೦ಡು ಕಲ್ಲೇಶಿ ತನ್ನ ಸೆಕೆ೦ಡ್ ಹ್ಯಾ೦ಡ್ ಸೈಕಲ್ದಾಗೆ ಸಿಟಿ ಕಡೆ ವ೦ಟಿತ್ತು.

ಅದೆಲ್ಲಿತ್ತೊ ಗೊತ್ತಿಲ್ಲ, ಒಳ್ಳೆ ಒತಿಕ್ಯಾತದ್ ತರ ವಕ್ಕರಿಸ್ಕೊ೦ಡ್ತು ನೋಡ್ರಪ್ಪಾ ನಮ್  ಮಲ್ಲೇಶಿ.!!

“ಅಲ್ಲ್ ಕಲ್ಲಾ ಕಲ್ಲೇಶೀ, ನಿಮ್ಮ್ ಶೀಯೆಮ್ಮು ಶಿದ್ದಣ್ಣ ತಿಮ್ಮಪ್ಪನ್ ದರ್ಶನಕ್ಕೆ ಹೋಗಯ್ತೆ ಅ೦ತೆ?? ಅವ್ದೇನ್‌ಲಾ???”

ಉಗೀರೀ ನನ್ನ ಮಗನ ಮಖಕ್ಕೇ ಅ೦ತಾ ಮಾತು ಆರ೦ಭಿಸ್ತಪ್ಪ ಕಲ್ಲೇಶಿ. “ನೋಡ್ಲಾ ಮಲ್ಲೆಶಿ, ಅವರವರ ಭಾವಕ್ಕೆ ಅವರವರ ಭಕುತಿಗೆ ಅ೦ತಾ ,ದೊಡ್ಡೋರು ಹೇಳವ್ರೇ ಕಲ್ಲಾ.!!! ನಮ್ಮ್ ಶಿದ್ದಣ್ಣ ತಿರುಪತಿಗೆ ಓದ್ರೆ ನೀನ್ಯಾಕ್ಲೆ ಚಡ್ಡಿಯೊಳ್ಕೆ ಇರುವೆ ಬಿಟ್ಟ್ಕೊಂಡಂಗ್ ಆಡ್ತೀಯಾ ಬಿಕ್ನಾಸಿ ನನ್ನ್ ಮಗನೆ, ??? ಎಲ್ಲಾ  ಏಳಯ್ತೆ ದೇವಸ್ತಾನಕ್ಕೆ ಹೋಗೋಲ್ಲ ಅ೦ತಾ ನಮ್ಮ್ ಶಿದ್ದಣ್ಣ???

ದುಶ್ಮನ್ನ್ ಬಗಲ್ ಮೇ ಹೇ ಅಂದಾಂಗೇ ನಿಮ್ಮ್ ಪರಮೇಸೀ, ಸೀಎಮ್ಮ್ ಸೀಟ್ದಾಗೆ ಕೊರಟ್‌ಗೆರೆ  ಹ್ಯಾಂಡ್‌ಮೇಡ್ ಉಲ್ಲನ್ ಟವೆಲ್ಲ್ ಹಾಕಕ್ಕೆ ಟ್ರೈ ಮಾಡ್ತಿರೋದ್ ಗೊತ್ತಾದ್ ಮೇಲೂ ಹೆಂಗ್ ಸುಮ್ನಿರ್ತ್ಲಾ ಶಿದ್ದಣ್ಣ??!!!” ಅ೦ತಾ ಒಂದೇ ಉಸ್ರಿಗೆ ಏಳ್ಬಿಡ್ತು ಕಲ್ಲೇಶಿ.

“ನೀನು ಹೇಳ್ತಿರೋದು ಸರೀ ಇದೆ ಕಣ್ಲಾ ಕಲ್ಲೇಶೀ. .. ಆದ್ರೆ ನಸೀಬು ಚೆನ್ನಾಗಿಲ್ಲ೦ದ್ರೆ ಯಾವ್ ದೇವ್ರೂ ಕೈ ಇಡ್ಯಲ್ಲಾ ಕಲ್ಲಾ!!!  ನಮ್ಮ್ ಯೆಡ್ರೂ ಮತ್ತು ಗಣಿಧಣಿ ರೆಡ್ಡಿಗಾರು ಓಗ್ದಿರೋ ಟೆಂಪಲ್ ಇದ್ಯೆನ್‌ಲಾ?? ಆದ್ರೂ ಜೈಲ್ನಾಗೆ ಮುದ್ದೆ ಮುರ್ದಿಲ್ವೇನ್ಲಾ??!!” ಅಂತಾ ರಾಗ ಎಳೀತು ಮಲ್ಲೇಶಿ…..

“ಬುಡ್ಲಾ ತಿರುಬೋಕಿ ನನ್ನ ಮಗನೇ, ನಿನ್ನನ್ನು ಹಿ೦ಗೇ ಬುಟ್ರೆ ಇನ್ನೇನೇನೊ ಮಾತಾಡ್ತೀಯಾ… ನಮ್ಮ್ ಶಿದ್ದಣ್ಣ ಏನ್ ಕಮ್ಮಿನಾ ಮಾಡೈತೆ ಕೆಲ್ಸಾನಾ..???ಶಾಧಿ ಭಾಗ್ಯ, ಆ ಭಾಗ್ಯ ಅಂತ ಬೇಜಾನ್ನ್ ಹವಾ ಮಾಡೈತೆ ಕಲ್ಲಾ!!!…”ಅಂತಾ ಶಿದ್ದಣ್ಣನ್ನ ಡಿಫೆಂಡ್ ಮಾಡ್ತಪ್ಪ ನಮ್ಮ್ ಕಲ್ಲೇಶಿ…

ಬುಡುತ್ತಾ ಮಲ್ಲೇಶಿ?? ಅರ್ಕಾವತಿ ಲೇಔಟ್ ಇಚಾರ ಎತ್ಬುಡ್ತು ನೋಡ್ರಪ್ಪ..ಅದ್ರು ಜೊತೇಗ್ ಲಾಟರೀ ಇಚಾರ ಎತ್ಬುಟ್ಟು “ಯಾಕ್ಲ ಬೇಕು ಲಾಟರೀ.?? ಬೇಕಾದ್ರೆ ಐದು ರೂಪಯ್ಗೆ ಇಡ್ಲಿ,ದ್ವಾಸಿ, ಚಿತ್ರಾನ್ನ ಕೊಡ್ಲಪ್ಪ!!” ಅಂತು.

“ಬುಡ್ಲಾ ಶಿವನೇ, ರಾಜ್ಕೀಯ ಮಾತಾಡಿ ಶ್ಯಾನೆ ಬೇಜಾರಾಗ್ಯತೆ. ನಡೀಲಾ ನಮ್ಮ್ ಹುಚ್ಚ ವೆಂಕಟಣ್ಣ೦ದು ಪಿಕ್ಚರ್ ನೋಡ್ಕೊಂಡು ಬರೋಣ” ಅಂತ ಜಾಗ ಖಾಲಿ ಮಾಡ್ತು ಕಲ್ಲೇಶಿ..!!!!

 

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!