ಕವಿತೆ

ಪೈಕಾ – ಹೈಕು

ನನ್ನಂತೆ ಪೈಕಾದಿಂದ ಬಳಲುತ್ತಿರುವವರಿಗೆ!

 

ದೇವರ ಮನೆಯಲ್ಲಿದ್ದ ಡಬ್ಬಿ

ಕಣ್ಣಿಗೆ ಬಿದ್ದಾಗ ಕೈಗೆತ್ತಿ

ಕೊಂಡೆನೇಕೋ ತಿಳಿಯದು

 

ಬಿಳಿ ಪುಡಿಯ ಘ್ರಾಣಕ್ಕೆ

ಮೆದುಳಿನ ಕಣಗಳು

ತಕತಕ ಕುಣಿದಂತೆ ಭಾಸ

 

ತಿನ್ನುತ್ತಾ ಕುಳಿತಿರಲು ಡಬ್ಬಿ

ಖಾಲಿಯಾಗಿ ತಳ ಕಂಡಿದ್ದು

ಗೊತ್ತೇ ಆಗಲಿಲ್ಲ

 

ಅಪ್ಪನಿಗೆ ಸಂಶಯ

ಹಣೆಗೆ ಹಚ್ಚಿಕೊಳ್ಳುವುದು

ಯಾರದೋ ಹೊಟ್ಟೆಗೆ ಹೋಯಿತೆಂದು

 

ಕದ್ದು ಮುಚ್ಚಿ ನೂರು ಲೊಟ್ಟೆಗಳ

ಹೇಳಿ ಮನಕ್ಕೆ

ಹಾಯೆನಿಸುವುದೇ ಆಯ್ತು

 

ಗುಡಿಗೆ ಅಡಿಗಡಿಗೆ ಹೋಗುವುದು

ವಿಭೂತಿ ಪ್ರೀತಿಗೆ

ದೇವರ ಮೇಲಿನ ಭಕ್ತಿಯಿಂದಲ್ಲ

 

ಮಾದಕ ವ್ಯಸನಿಯಂತೆಯೆ

ನಾನು? ಹಲವು ಬಾರಿ

ಕೇಳಿಕೊಂಡದ್ದಿದೆ

 

ಪೋಷಕಾಂಶದ ಕೊರತೆ

ಕಂಡಕಂಡದ್ದು ತಿನ್ನುವಂತೆ

ಮೆದುಳು ಮಾಡುತ್ತದೆ

 

ಬಳಪ ಬಣ್ಣದ ಕಡ್ಡಿ

ಹಸಿಮಣ್ಣು ಸಿಮೆಂಟುಗಳು

ಕರೆಯುವವು ಕಂಡೊಡನೆ ತಿನ್ನುತಿನ್ನೆಂದು

 

ಹಾನಿಯಾಗುವ ಸಮಯ

ದೂರವಿಲ್ಲ ಕಾಯ್ವೆ

ವಿಭೂತಿಯ ತಿನ್ನುತ್ತಾ ಅಲ್ಲಿವರೆಗೆ

 

 – Deepthi Delampady

 

 

Note: Pica – It’s a disorder mainly because of lack of nutrition. Persistent eating of substances with no nutrition.

Introducing Haiku poetry to our readers, Haiku is one of the most important forms of traditional Japanese poetry. Haiku is, today, a 17-syllable verse form consisting of three metrical units of 5, 7, and 5 syllables. Since early days, there has been confusion between the three related terms Haiku, Hokku and Haikai.

 

Facebook ಕಾಮೆಂಟ್ಸ್

ಲೇಖಕರ ಕುರಿತು

Deepthi Delampady

Currently studying Information Science and Engineering (6th semester) at SJCE, Mysore.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!