ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಅಡಿಯಲ್ಲಿ ಮಾಣಿ ಮೈಸೂರು ರಾಜ್ಯ ಹೆದ್ದಾರಿ ಅಭಿವೃದ್ದಿ ಕಾಮಗಾರಿ ಅರಂಭವಾಗಿದೆ. ಮೈಸೂರು- ಕುಶಾಲನಗರ, ಕುಶಾಲನಗರ-ಸಂಪಾಜೆ, ಸಂಪಾಜೆ-ಮಾಣಿ ಎಂದು ಕಾಮಗಾರಿಯನ್ನು ಮೂರು ಭಾಗವಾಗಿ ವಿಂಗಡಿಸಿಲಾಗಿತ್ತು. ಮೈಸೂರು-ಕುಶಾಲನಗರ ನಡುವಿನ ಪ್ರಥಮ ಹಂತದ ಕಾಮಗಾರಿ 2009 ಏ.30ಕ್ಕೆ ಮುಕ್ತಾಯವಾಗಿದೆ. ಕುಶಾಲನಗರ-ಸಂಪಾಜೆ 2012 ಮಾ.31ಕ್ಕೆ ಪೂರ್ಣಗೊಂದಿದೆ. ಮಾಣಿ ಸಂಪಾಜೆ ನಡುವಿನ 71.9 ಕಿ ಮೀ ಹೆದ್ದಾರಿ ಕಾಮಗಾರಿ 2010 ಜ.27ಕ್ಕೆ ಆರಂಭವಾಗಿದ್ದು, 2012 ಜೂ.20ಕ್ಕೆ ಮುಗಿಸಬೇಕಾಗಿತ್ತು. ಆದರೆ ವಿವಿಧ ಕಾರಣಗಳನ್ನು ಒಡ್ಡುತ್ತಾ, ಕುಂಟಿತ್ತಾ ಸಾಗಿದ ಕಾಮಗಾರಿ 2015 ಮಾ. 31 ಕಾಮಗಾರಿಯನ್ನು ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡುತ್ತಿದ್ದಾರೆ.
ಎಷ್ಟೆಟ್ಟು ಇದೆ?
ಮಾಣಿ ಪುತ್ತೂರು ನಡುವೆ 400 ರೋಡ್ ಸ್ಟಡ್ಸ್ ಈಗಗಲೇ ಅಲವಡಿಸಲಾಗಿದೆ. ಮಾಣಿ ಸಂಪಾಜೆ ರಸ್ತೆಯಲ್ಲಿ 210 ಕಿರು ಸೇತುವೆಗಳು, 30 ಬಸ್ಸು ಬೇ, 17 ಕಿಮೀ ಕ್ರಾಶ್ ಬ್ಯಾರಿಯರ್ ಗಳ ನಿರ್ಮಾಣ ಈಗಾಗಲೇ ನಡೆದಿದೆ. 1 ಮೇಲ್ಸೇತುವೆ, ಸುಮಾರು 20 ಬಸ್ ಬೇ, ಸುಮಾರು 37 ಕಿಮೀ ಕಾಂಗ್ರೀಟ್/ ಕೆಂಪುಕಲ್ಲಿನ ಚರಂಡಿ, ಸುಮಾರು 5 ಕಿ ಮೀ ಕ್ರಾಶ್ ಬ್ಯಾರಿಯರ್ ನಿರ್ಮಾಣ ಬಾಕಿಯಿದೆ.
ಇನ್ನೂ ಸಂಪೂರ್ಣವಾಗಿಲ್ಲ…
ಮಾಣಿ ಮೈಸೂರು ಹೆದ್ದಾರಿ ರಾಜ್ಯ ಹೆದ್ದಾರಿ 88 ರಿಂದ ರಾಷ್ಟ್ರೀಯ ಹೆದ್ದಾರಿ 375 ಆಗಿ ಪರಿವರ್ತನೆಗೊಂಡಿದೆ. ಆದರೆ ಕಾಮಗಾರಿಗಳು ಮಾತ್ರ ಎಲ್ಲವೂ ಅಪೂರ್ಣ, ಅತಾಂತ್ರಿಕತೆ, ಅವೈಜ್ಞಾನಿಕತೆಯಿಂದ ಕೂಡಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಘನ ವಾಹನಗಳ ಸಾಮಥ್ರ್ಯಕ್ಕನುಗುಣವಾಗಿ ರಸ್ತೆ ಅಭಿವೃದ್ಧಿಯಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಪೆÇೀಳ್ಯ ಸಮೀಪ ಕೆಂಪು ಕಲ್ಲಿನಲ್ಲಿ ನಿರ್ಮಿಸಲಾದ ಚಂಡಿ ಗೋಡೆ ಕಟ್ಟಿ ತಿಂಗಳು ಪೂರೈಸುವ ಮೊದಲೇ ಕುಸಿದು ಬಿದ್ದಿದೆ. ಆದರೂ ಅದನ್ನು ಸರಿಪಡಿಸಲು ಮುಂದಾಗದೇ ಅದೇ ರೀತಿಯ ಚರಂಡಿ ಗೋಡೆಯನ್ನು ಮತ್ತೆ ಮತ್ತೆ ಬೇರೆ ಕಡೆಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಚರಂಡಿ ಮೇಲೆ ಸ್ಯಾಬ್‍ಗಳೂ ಹಲವು ಕಡೆಯಲ್ಲಿ ಬಾಕಿ ಇದ್ದು, ಮೋರಿಗಳನ್ನೂ ಸರಿಯಾಗಿ ಮುಕ್ತಾಯ ಮಾಡಿಲ್ಲ. ಕ್ರಾಶ್ ಬ್ಯಾರಿಯರ್‍ಗಳನ್ನೂ ಹಲವು ಕಡೆಯಲ್ಲಿ ಉದ್ದೇಶ ಪೂರ್ವಕವಾಗಿ ಬಿಡಲಾಗಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.
ಪ್ರಯೋಜನಕ್ಕಿಲ್ಲದ ರೋಡ್ ಸ್ಟಡ್ಸ್:
ರಾತ್ರಿ ಸಂಚರಿಸುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಣಿಯಿಂದ ಪುತ್ತೂರುವರೆಗೆ ರಸ್ತೆಯ ಮಧ್ಯಭಾಗದಲ್ಲಿ ರೋಡ್ ಸ್ಟಡ್ಸ್ ಅಳವಡಿಸಲಾಗಿದೆ. ಆದರೆ ಮಾಣಿ-ಕಬಕ ಮಾತ್ರ ಉರಿಯುತ್ತಿದ್ದು, ಕಬಕ-ಪುತ್ತೂರು ನಡುವೆ ಕಳಪೆ ಹುಣಮಟ್ಟದ ಸ್ಟಡ್ಸ್‍ಗಳನ್ನು ಬಳಸಿ ಸದ್ಯ ಉರಿಯುತ್ತಿಲ್ಲ. ಕಳಪೆ ಹುಣಮಟ್ಟದ ಸ್ಟಡ್ಸ್‍ಗಳ ಹಣವನ್ನು ಪಾವತಿ ಮಾಡದೆ ಗುಣಮಟ್ಟದ್ದು ಅಳವಡಿಸಲು ಸೂಚಿಸಲಾಗಿದೆ ಎಂಬುದು ಅಧಿಕಾರಿಗಳ ಮಾತಾಗಿದೆ.
ಮೇಲ್ಸೇತುವೆ ಅಗತ್ಯತೆ:
ಕಬಕ, ನೆಹರುನಗರ, ಕುಂಬ್ರ, ಸುಳ್ಯ ಸೇರಿ ವಿವಿಧ ಕಡೆಯಲ್ಲಿ ಶಾಲೆ ಕಾಲೇಜುಗಳಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆ ದಾಟುವ ಅನಿವಾರ್ಯತೆ ಇದ್ದು, ಇಲ್ಲಿ ಮೇಲ್ಸೇತುಗಳು ನಿರ್ಮಾಣವಾಗಬೇಕಾಗಿದೆ.
ಬಸ್ಸು ಬೇ ಇಲ್ಲ:
ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗಬರದೆಂಬ ಕಾರuಕ್ಕೆ ಬಸ್ಸು ಬೇ ಗಳನ್ನು ನಿರ್ಮಿಸಲಾಗುತ್ತದೆ. ಆದರೆ ಮಾಣಿ ಮೈಸೂರು ಹೆದ್ದಾರಿಯಲ್ಲಿ ಈಗಾಗಲೇ 30 ಬಸ್ಸು ನಿರ್ಮಾಣ ಮಾಡಲಾಗಿದ್ದು, ಇನ್ನೂ 20 ನಿರ್ಮಾಣ ಮಾಡಬೇಕಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡರೂ ವೈಜ್ಞಾನಿಕವಾಗಿ ನಿರ್ಮಾಣವಾಗಿಲ್ಲ ಎಲ್ಲೂ ಬಸ್ಸ್ ಬೇ ಗಳ ನಿರ್ಮಾಣವಾಗಿಲ್ಲ ಎಂಬ ಆರೋಪಗಳಿದೆ.
ಕಾಮಗಾರಿ ಬಳಿಕ ಹಲವು ಅಪಘಾತ:
ಮಾಣಿ ಜಂಕ್ಷನ್, ಕಬಕ, ಪುತ್ತೂರು, ಸಂಟ್ಯಾರ್, ಕಾವು ಸೇರಿ ವಿವಿಧ ಕಡೆಯಲ್ಲಿ ರಸ್ತೆಯ ಅವೈಜ್ಞಾನಿಕತೆಯಿಂದಾಗಿ ವ್ಯಪಕವಾದ ಅಪಘಾತಗಳು ನಡೆಯುತ್ತಿದ್ದು, ಈಗಾಗಲೇ ಹಲವು ಜೀವಗಳು ಬಲಿಯಾಗಿದೆ. ಕೊಡಾಜೆ, ಪೊಳ್ಯ, ಆನೆಗುಂಡಿ ಸೇರಿ ಕೆಲವೆಡೆ ಶಾರ್ಪ್ ತಿರುಗಳಿದ್ದು, ಅತಿಯಾದ ವೇಗದಲ್ಲಿ ಸಂಚರಿಸಿದ ವಹನಗಳು ಚರಂಡಿಗೆ ನುಗ್ಗುತ್ತಿವೆ.
ರೋಡ್ ಸ್ಟಡ್ಸ್‍ಗಳು ಸರಿಯಾಗಿ ಉರಿಯದ ಹಿನ್ನಲೆಯಲ್ಲಿ ಅವುಗಳಿಗೆ ಹಣ ಪಾವತಿ ಮಾಡಿಲ್ಲ. ಕಳಪೆ ಗುಣಮಟ್ಟವನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ, ಒಳ್ಳೆಯ ರೋಡ್ ಸ್ಟಡ್ಸ್‍ಗಳನ್ನು ಹಾಕುವಲ್ಲಿ ನಾವು ಬದ್ದವಾಗಿದ್ದೇವೆ. ಶಿರಾಡಿ ಗಾಟ್ ಮುಚ್ಚಿರುವುದರಿಂದ ಇಲ್ಲಿನ ರಸ್ತೆಗಳ ಕಾಮಗಾರಿ ಒತ್ತಡವಿದೆ. ವಾರದಲ್ಲಿ 1 ರಿಂದ 2 ಕಿಮೀ ಬಾಕಿ ಇರುವ ರಸ್ತೆ ಕಾಮಗಾರಿಯನ್ನೂ ಮುಗಿಲಾಗುವುದು. ಬಳಿಕ ಮಾಣಿ ಸಂಪಾಜೆ ನಡುವಿನ ಬಾಕಿ ಉಳಿದ ಕಾಮಗಾರಿಯನ್ನು ಮಾರ್ಚ್ ಕೊನೆಯ ಮೊದಲು ಮುಗಿಸಲಾಗುವುದು. ಚರಂಡಿ ಕುಸಿತವಾಗುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಅದನ್ನು ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು.
| ಅಬ್ದುಲ್ ಸುಬಾನ್
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಮೈಸೂರು ವಿಭಾಗ
ಮಾಣಿ ಮೈಸೂರು ಹೆದ್ದಾರಿ ಇನ್ನೂ ಕೆಆರ್‍ಡಿಸಿಎಲ್ ಕೈಯಲ್ಲೇ ಇದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಡೆದುಕೊಂಡಿಲ್ಲ. ಎಲ್ಲಾ ಕಾಮಗಾರಿ ಮುಗಿದ ಬಳಿಕವೇ ಪಡೆದುಕೊಳ್ಳಲಿದ್ದಾರೆಂದು ಮಾಹಿತಿಯಲ್ಲಿ ತಿಳಿಸಿದ್ದಾರೆ. ಮೈಸೂರು – ಸಂಪಾಜೆ ನಡುವೆ ಇರುವ ಗುಣಪಟ್ಟ ಹಾಗೂ ತಾಂತ್ರಿಕತೆಯ ಕಾಮಗಾರಿ ಸಂಪಾಜೆ – ಮಾಣಿ ಮಧ್ಯ ನಡೆದಿಲ್ಲ. ರಸ್ತೆಯಲ್ಲಿ ನಿತ್ಯ ಸಂಚರಿಸುವ ತಂತ್ರಜ್ಞರು ತಮ್ಮ ವೃತಿಪರ ಅನುಭವಗಳನ್ನು ಹಂಚಿಕೊಂಡಾಗ ರಸ್ತೆ ಉತ್ತಮ ಗುಣಮಟ್ಟದಲ್ಲಿ ನಿರ್ಮಾಣವಾಗಲು ಸಾಧ್ಯವಿದೆ.
| ದಿನೇಶ್ ಭಟ್
ಮಾಹಿತಿಹಕ್ಕು ಕಾರ್ಯಕರ್ತ, ಪುತ್ತೂರು