ಪ್ರಚಲಿತ

ಪರದೆ ಸರಿದರೂ ಪ್ರಶಂಸೆಯ ಸುರಿಮಳೆ ನಿಲ್ಲಲಾರದು!

 

ಬಹುಶಃ ಅಂತಾದ್ದೊಂದು ವಿಡಿಯೋವನ್ನು ನೋಡಿದಾಗ ಎಂತಹಾ ಕಲ್ಲು ಮನಸ್ಸೂ ಕೂಡಾ ಕರಗದೇ ಇರದು, ಹೃದಯವದೆಷ್ಟೇ Strong  ಇದ್ದರೂ ಮಿಡಿಯದೇ ಇರದು, ಆ ಹೃದಯ ವಿದ್ರಾವಕ ಘಟನೆಗೆ ಕಾರಣರಾದ ಭಯೋತ್ಪಾದಕರೂ ಆ ವಿಡಿಯೋ ನೋಡಿದರೆ ಒಮ್ಮೆ ಮರುಕದೆ ಇರಲಾರರು, ಭಯೋತ್ಪಾದಕರ ಮೇಲಿನ ಆಕ್ರೋಶ, ಇಷ್ಟೆಲ್ಲಾ ಆಗುತ್ತಿದ್ದರೂ ನಮಗೆ ಏನೂ ಮಾಡಲಾಗುತ್ತಿಲ್ಲವಲ್ಲಾ ಎಂಬ ನಮ್ಮ ಅಸಹಾಯಕತೆ, ಇಂತಹಾ ಕೃತ್ಯಗಳಿಗೆ ಬಲಿಯಾಗುತ್ತಿರುವ ಅಮಾಯಕ ಯೋಧರ ಮೇಲಿನ ಅನುಕಂಪ ಇವೆಲ್ಲವೂ ಒಟ್ಟಾಗಿ ಕಣ್ಣಾಲಿಗಳಲ್ಲಿ ಜಿನುಗುವಂತೆ ಮಾಡಿದ ವಿಡಿಯೋ ಅದು! ಉಗ್ರರೊಂದಿಗಿನ ಕಾದಾಟದಲ್ಲಿ ಮಡಿದ ಕರ್ನಲ್ ಎಂ.ಎನ್ ರಾಯ್ ಅಂತಿಮ ಸಂಸ್ಕಾರದಲ್ಲಿ ಪುತ್ರಿ ಅಲ್ಕಾ ರಾಯ್ ಗೂರ್ಖಾ ರೆಜಿಮೆಂಟ್ ನ ‘War Cry’ ಹೇಳಿ ತಂದೆಗೆ ಅಂತಿಮ ನಮನ ಸಲ್ಲಿಸುತ್ತಿರುವ ವಿಡಿಯೋ!

Col M N Rai

Col M N Rai

ಮುನೀಂದ್ರನಾಥ್ ರಾಯ್… ಸಾಯುವ ಒಂದು ದಿನ… ಒಂದೇ ಒಂದು ದಿನ ಮೊದಲಷ್ಟೇ ಹಿಂದಿನ ವರ್ಷ ಉಗ್ರರನ್ನು ಮಟ್ಟ ಹಾಕಿದ್ದಕ್ಕಾಗಿ “ಯುಧ್ಧ ಸೇವಾ ಪದಕ” ವನ್ನು ಪಡೆದಿದ್ದ ವೀರಯೋಧ! ಈ ವರ್ಷ ಈ ಪ್ರಶಸ್ತಿ ಪಡೆದ  ಹದಿಮೂರು ಸೈನಿಕರಲ್ಲಿ ಅತಿ ಕಿರಿಯವರಾಗಿದ್ದರು ರಾಯ್. ಉತ್ತರಪ್ರದೇಶದ ಗಾಝಿಪುರದ ಒಬ್ಬ ಶಿಕ್ಷಕನ ಮಗನಾಗಿದ್ದ ರಾಯ್ ಅವರದ್ದು ಅದೆಂತಹಾ ದೇಶಭಕ್ತ ಕುಟುಂಬವೆಂದರೆ ಈ ಶಿಕ್ಷಕನ ಮೂರಕ್ಕೆ ಮೂರೂ ಗಂಡುಮಕ್ಕಳು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಷ್ಟೇನಾ ಅಂತ ಕೇಳ್ಬೇಡಿ. ಈ ಮೂವರೂ ಸೇನೆಯಲ್ಲಿನ ಸೇವೆಗಾಗಿ ಒಂದಿಲ್ಲೊಂದು ಉನ್ನತ ಪ್ರಶಸ್ತಿಯನ್ನು ಪಡೆದುಕೊಂಡವರು. ಹಿರಿಯವರಾದ ವೈಎನ್ ರಾಯ್ ಜಮ್ಮುವಿನ ರಘುನಾಥ ಮಂದಿರದಲ್ಲಿ ನಡೆದ ಆತ್ಮಾಹುತಿ ದಾಳಿಯಯಲ್ಲಿ ಉಗ್ರರ ವಿರುಧ್ಧ ಹೋರಾಡಿದ್ದಕ್ಕಾಗಿ ‘ಪೋಲಿಸ್ ಗ್ಯಾಲ್ಲಾಂಟ್ರಿ ಅವಾರ್ಡ್’ ಪಡೆದುಕೊಂಡಿದ್ದರೆ ಮತ್ತೋರ್ವ ಸಹೋದರ ಡಿಎನ್ ರಾಯ್ ಅತ್ಯುತ್ತಮ ಸಾಧನೆಗಾಗಿ ಪದಕವನ್ನು ಪಡೆದುಕೊಂಡಿದ್ದರು. ಮತ್ತೀಗ ಎಂಎನ್ ರಾಯ್..! wow!! ಇವರೇನು ಯುಧ್ಧ ಮಾಡುವುದಕ್ಕಾಗಿ ಸೈನ್ಯ ಸೇರಿದ್ದಾ? ಇಲ್ಲಾ ಪ್ರಶಸ್ತಿಗಳನ್ನು ಬಾಚಿಕೊಳ್ಳುವುದಕ್ಕಾಗಿಯಾ? ಆದರೆ ಪ್ರಶಸ್ತಿ ಪಡೆದ ಮರುದಿನವೇ ತನಗೆ ಸಾವು ಬರುತ್ತದೆಂದು ರಾಯ್  ಊಹಿಸಿಯೂ ಇರಲಿಕ್ಕಿಲ್ಲ. ದೇಶವನ್ನು ಬಹಳ ಹೆಮ್ಮೆಯಿಂದ ಕಾಯುವ ಒಬ್ಬ ಯೋಧನಿಗೆ ಇಂತಾ ದುಃಸ್ಠಿತಿ ಬರುತ್ತದೆಯೆಂದಾದರೆ ಆ ದೇವರಿಗೂ ಒಂದು ಕ್ಷಣ ಶಪಿಸಿಬಿಡೋಣ ಎಂದೆನಿಸುತ್ತದೆ! ಛೆ!!

ಕರ್ತವ್ಯದಿಂದ ಕ್ಷಣವೂ ವಿರಮಿಸದ ಎಂ.ಎನ್ ರಾಯ್, ಮೊನ್ನೆ ಗಣರಾಜ್ಯೋತ್ಸ್ವದಂದು ಪ್ರಶಸ್ತಿ ಸ್ವೀಕರಿಸಿದ ಮರುದಿನವೇ ಕರ್ತವ್ಯಕ್ಕೆ ಹಾಜರಾಗಿದ್ದರು. ಪ್ರಶಸ್ತಿಯನ್ನು ಸಂಭ್ರಮಿಸುವುದಕ್ಕೂ ಸಮಯ ತೆಗೆದುಕೊಳ್ಳಲಿಲ್ಲ. ಅಲ್ಲಾ ಒಬ್ಬ ಸೈನಿಕನಿಗೆ ದೇಶ ಕಾಯುವುದು ಹೆಚ್ಚೋ ಅಥವಾ ಪ್ರಶಸ್ತಿಯನ್ನು ಸಂಭ್ರಮಿಸುವುದು ಹೆಚ್ಚೋ ಹೇಳಿ?? ಕರ್ತವ್ಯ ಪ್ರಜ್ನೆ ಪರಾಕಾಷ್ಟೆಯಲ್ಲಿದ್ದುದರಿಂದಲೋ ಏನೋ ಅದೇ ಕೊನೇಯ ಕರ್ತವ್ಯದ ದಿನ ಎಂಬ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಆದರೆ ಭಯೋತ್ಪಾದಕರು ಶ್ರೀನಗರದ ಪುಲ್ವಾಮಾ ಜಿಲ್ಲೆಯ ಮಿಂದೋರಾ ಹಳ್ಳಿಯ ಮನೆಯೊಂದರಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಸುಳಿವಂತೂ ಸಿಕ್ಕಿತ್ತು. ಸ್ವಲ್ಪವೂ ಹಿಂಜರಿಯದೆ 42 ರಾಷ್ಟ್ರೀಯ ರೈಫಲ್ಸ್ ನ ನೇತೃತ್ವ ವಹಿಸಿ ಹೊರಟೇ ಬಿಟ್ಟಿದ್ದರು ಎಂ.ಎನ್ ರಾಯ್ ಮತ್ತವರ ಸೈನಿಕ ಪಡೆ!

ಆದರೆ ವಿಧಿಲೀಲೆ ಬೇರೆಯೇ ಇತ್ತಲ್ಲಾ!! ಮನೆಯೊಳಗೆ ಅವಿತುಕೊಂಡಿದ್ದ ಉಗ್ರರು ಹೊರಬಂದು ಒಮ್ಮಿಂದೊಮ್ಮೆಲೇ ಗುಂಡಿನ ಮಳೆಗರೆಯತೊಡಗಿದಾಗ ನಮ್ಮವರೇನೂ ಸುಮ್ಮನೆ ಕೂರಲಿಲ್ಲ. ಕ್ಷಣ ಮಾತ್ರದಲ್ಲಿ ಎರಡು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಆದರೆ ಅಷ್ಟರಲ್ಲ್ಲೇ ಉಗ್ರರ ಗುಂಡುಗಳೂ ನಮ್ಮವರ ದೇಹವನ್ನು ಹೊಕ್ಕಿತ್ತು. ಸೇನೆಯಲ್ಲಿ ಉನ್ನತ ರಾಂಕ್ ಹೊಂದಿದ್ದ ಅಧಿಕಾರಿಯಾಗಿದ್ದ ಎಂ.ಎನ್ ರಾಯ್ ಮತ್ತು ಹೆಡ್ ಕಾನ್ಸ್ ಟೇಬಲ್ ಸಂಜೀವ್ ಸಿಂಘ್ ವೀರಮರಣವನ್ನಪ್ಪಿದ್ದರು. ‘ಯುಧ್ಧ ಸೇವಾ ಪದಕ’ ಪಡೆದ ಸಂಭ್ರಮ ಹುತಾತ್ಮರಾದರು ಎಂಬ ಸುದ್ದಿಯೊಂದಿಗೆ ಕರಗಿಹೋಗಿತ್ತು. ಒಂದೇ ದಿನದ ಅಂತರದಲ್ಲಿ ಎರಡು ಭಾರಿ hero ಆಗಿದ್ದರು ಮಿ. ರಾಯ್!

ಇದನ್ನೆಲ್ಲಾ ನೋಡುವಾಗ ಕುದಿಯದೆ ಇರುತ್ತಾ? ರಕ್ತ ಕುದಿಯದೆ ಇರುತ್ತಾ? ದೇಶ ಕಾಯುವ ವೀರಯೋಧನೊಬ್ಬನಿಗೆ ಇಂತಾ ಸ್ಥಿತಿ ತಂದ ಪಾಪಿಗಳ ವಿರುಧ್ಧ ಅಕ್ರೊಶ ಸಿಡಿದೇಳದಿದ್ದೀತಾ? ಆ ಹೆಣ್ಣುಮಗಳಂತೂ ಅಪಾರ ಹೆಮ್ಮೆಯಿಂದ ಅಷ್ಟೇ ದುಃಖದಿಂದ ತಂದೆಗೆ ಸೆಲ್ಯೂಟ್ ಮಾಡಿ ಅಂತಿಮ ನಮನ ಸಲ್ಲಿಸುತ್ತಿರುವುದನ್ನು ನೋಡುವಾಗಲಂತೂ ಕರುಳು ಕಿತ್ತು ಬರುತ್ತದೆ, ದ್ರೋಹಿಗಳ ವಿರುಧ್ಧ ರೋಮ ಸೆಟೆದು ನಿಲ್ಲುತ್ತದೆ. ಇದರಷ್ಟೇ ಬೇಸರದ ಸಂಗತಿ ಮತ್ತೊಂದಿದೆ. ಅದೆಂದರೆ ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಅಲಿ ಶಾ ಗಿಲಾನಿ ನಮ್ಮ ಸೈನಿಕರನ್ನು ಕೊಂದ ದ್ರೋಹಿಗಳನ್ನು ಪ್ರಶಂಸಿಸಿದ್ದು. “ಭಾರತ ತೆಗೆದುಕೊಳ್ಳುತ್ತಿರುವ ಕಟು ನಿರ್ಧಾರಗಳೆ ಕಾಶ್ಮೀರದ ಅಮಾಯಕ ಯುವಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅವರ್ಯಾರೂ ನಿರುದ್ಯೋಗಿಗಳಲ್ಲ, ಕಾಶ್ಮೀರದ ನೈಜ ಪರಿಸ್ಥಿತಿ ಬಲ್ಲವರೇ ಆಗಿದ್ದಾರೆ” ಎನ್ನುವ ಗಿಲಾನಿ, ಮತ್ತೆ ದೇಶದ್ರೋಹದ ಚಾಳಿ ಮುಂದುವರಿಸಿದ್ದಾನೆ. ಇಲ್ಲಿ ಕೇಳು ಗಿಲಾನಿ.,, ಆ ಭಯೋತ್ಪಾದರು ಅಮಾಯಕರು ಎಂದು ಕೊಂಡಾಡುವುದಾದರೆ ಅಲ್ಲಿ ಮಡಿದ ಸೈನಿಕರಲ್ಲೂ ಅಮಾಯಕಯಕತನ ಕಾಣಿಸುವುದಿಲ್ಲ ನಿಮಗೆ? ಹೆತ್ತಮಗನನ್ನೋ, ಕೈಹಿಡಿದ ಗಂಡನನ್ನೋ, ಅಥವಾ ತಂದೆಯನ್ನೋ ದೇಶ ಕಾಯಲು ಕಳುಹಿಸಿಕೊಟ್ಟ ಆ ಕುಟುಂಬದವರ ಮುಖpದಲ್ಲೇಕೇ ಅಮಾಯಕತನ ಕಾಣಿಸುವುದಿಲ್ಲ?  ನಿಮಗೆ ಪಾಕಿಸ್ತಾನವೇ ಬೇಕೆಂದಿದ್ದರೆ ದಯವಿಟ್ಟು ಇಲ್ಲಿಂದ ತೊಲಗಿ, ಅದು ಬಿಟ್ಟು ಕಾಶ್ಮೀರದ ನೆಪದಲ್ಲಿ ಅದೆಷ್ಟು ಸೈನಿಕರ ರಕ್ತ ಕುಡಿಯುತ್ತೀರಿ?  ನಮ್ಮದೇ ದೇಶದೊಳಗೆ ಬಂದು ನಮ್ಮ ನೆಲ, ನಮ್ಮವರನ್ನು ಟಾರ್ಗೆಟ್ ಮಾಡುತ್ತಿರುವ ನಿಮ್ಮಂತ ಪಾಪಿಗಳಿಗೆ ಸರ್ವತ್ರ ದಿಕ್ಕಾರವಿರಲಿ!

“Play your role in life in such passion that even after the curtains come down the applause doesn’t stop”

.. ಇದು ಎಂ.ಎನ್ ರಾಯ್ ವಾಟ್ಸಾಪ್ ನಲ್ಲಿ ಹಾಕಿದ ಕಟ್ಟಕಡೆಯ ಸ್ಟೇಟಸ್. ಒಬ್ಬ ದೇಶಪ್ರೇಮಿ ಸೈನಿಕನಿಗೆ ಅದೆಷ್ಟು ಭಾವಪೂರ್ಣ ಸ್ಟೇಟಸ್ ಇದು!! ಹಾಗೇಯೇ ನಡೆದುಕೊಂಡರು ಎಂ.ಎನ್ ರಾಯ್. ಉಗ್ರರ ವಿರುಧ್ಧದ ಹೋರಾಟದಲ್ಲಿ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರೇ ಹೇಳಿದಂತೆ ಪರದೆಯೇನೋ ಸರಿಯಿತು, ಪ್ರಶಂಸೆಯ ಸುರಿಮಳೆಯಂತೂ ನಿಲ್ಲಲಾರದು. ಜೈಹಿಂದ್!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!