ಅಂಕಣ

ಕಾಶ್ಮೀರವೆಂಬ ಖಾಲಿ ಕಣಿವೆ… ಪ್ರತ್ಯೇಕತಾವಾದಿಗಳ ಕೈಯ್ಯಲ್ಲಿ ಬರಿದಾಗುತ್ತಿರುವ ಶ್ರೀನಗರ…

ಹೌದು… ಹುಟ್ಟುತ್ತಲೇ ಧರ್ಮದ ಅಫೀಮನ್ನು ಕುಡಿಸಿದ ಪರಿಣಾಮ, ಶ್ರೀನಗರ ಬರಿದಾದೀತು ಎನ್ನುವ ಸಾಮಾನ್ಯ ಇಕ್ವೇಶನ್ ಇವತ್ತು ಸ್ಥಳೀಯ ಯುವಕರಿಗೆ ಅರಿವಾಗದೇ ಹೋಗುತ್ತಿರುವುದು ದುರಂತ. ಅಸಲಿಗೆ ಇಂತಹ ಪ್ರದೇಶದಲ್ಲಿ ಕೋಟ್ಯಾಂತರ ವ್ಯಯಿಸಿ ರಾಜ್ಯಾವಾಳುವ ಆಸೆಯಾಗಲಿ, ಅಂತರಾಷ್ಟ್ರೀಯ ರಾಜಕೀಯ ದಾಹವಾಗಲಿ, ಗೆದ್ದು ಜಾಗತಿಕ ಮನ್ನಣೆ ಪಡೆಯುವ ಇರಾದೆಯಾಗಲಿ ಪಾಕಿಸ್ತಾನಕ್ಕೆ ಹಿಂದೆಯೂ ಇರಲಿಲ್ಲ ಈಗಲೂ ಇಲ್ಲ. ಅದರದ್ದೇನಿದ್ದರೂ ಒಳಮುಸುಗಿನಲ್ಲಿರುವ ಸೇಡು ಮತ್ತು ಬರೀ ಸೇಡು ಜೊತೆಗೆ ಮುಸ್ಲಿಂ ಎಂಬ ಹೆಸರಿಗೆ ತಾನೊಬ್ಬನೆ ಜಾಗತಿಕ ರಕ್ಷಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವ ದುರಾಸೆ. ಇದೆಲ್ಲದಕ್ಕೆ ಕಳಸವಿಟ್ಟಂತೆ ಆ ವಂಚಕ ದೇಶದಲ್ಲಿ ರಾಜ್ಯವಾಳಲು ಇರುವುದು ಮಿಲಿಟರಿ ಕೈಗೊಂಬೆಯಾಗಿರುವ ಸರಕಾರವೇ ಹೊರತಾಗಿ ಪ್ರಜಾಪ್ರಭುತ್ವವಲ್ಲ. ತನ್ನ ನಾಯಕರನ್ನೇ ಸಾಲುಸಾಲಾಗಿ ಕೊಲ್ಲಿಸುವ ಇತಿಹಾಸ ಹೊಂದಿರುವ ಏಕೈಕ ನಾಡು ಪಾಕಿಸ್ತಾನ. ಅಲ್ಲಿನ ನಾಯಕರಿಗೆ ಜನರ ಗಮನವನ್ನು ನಿರಂತರವಾಗಿ ಧರ್ಮ ಮತ್ತು ಸರಹದ್ದಿನ ಕಡೆಗೆ ತಿರುಗಿಸಿಡದಿದ್ದರೆ ಅಂತಿಮ ಫಲಿತಾಂಶ ತಮ್ಮ ಬುಡಕ್ಕೆ ಬರುತ್ತದೆನ್ನುವ ಒಳಸತ್ಯ ಅತ್ಯಂತ ಸ್ಪಷ್ಟ.

ಕಾರಣ ಇವತ್ತು ಪಾಕಿಸ್ತಾನದಾದ್ಯಂತ ಇರುವ ರಾಜಕೀಯ ಪ್ರಭಾವಿಗಳು ಹೆಚ್ಚಿನಂಶ ವಿದೇಶದಲ್ಲಿರುವವರೇ. ಅದರಲ್ಲೂ ರಾಜಕೀಯ ಅಸ್ಥಿರತೆಯ ಪಾಕಿಸ್ತಾನವನ್ನು ನಂಬಿ ಅವರೆಂದೂ ಬದುಕು ಕಟ್ಟಿಕೊಂಡಿಲ್ಲ. ಕಾರಣ ಈಗೀನ ಪೀಳಿಗೆಯನ್ನು ಪೂರ್ತಿ ಧರ್ಮಾಂಧರನ್ನಾಗಿಸಿ ಬೆಳೆಸಿದವರೇ ತಾವು ಮತ್ತದು ಇವತ್ತಲ್ಲ ನಾಳೆ ತಿರುಗಿ ಬೀಳದಿರುವುದಿಲ್ಲ. ತಮ್ಮನ್ನು ಹೊರದಬ್ಬದ ದೇಶಗಳನ್ನೇ ನೋಡಿ ಆಸ್ತಿಪಾಸ್ತಿ ಮಾಡಿಟ್ಟುಕೊಂಡಿದ್ದಾರೆ ಇವರೆಲ್ಲಾ. ಬುರಾನ್‍ವಾನಿಯ ಹತ್ಯೆಗೆ ಪಾಕಿಸ್ತಾನದಲ್ಲಿ ಜುಲೈ 11ರಂದು ಕರಾಳ ದಿನವನ್ನು ಆಚರಿಸಲು ಕರೆಕೊಟ್ಟ ನವಾಝ್ ಶರೀಫ್, ನಿಜಕ್ಕೂ ತುರ್ತು ಪರಿಸ್ಥಿತಿ ಬಂದರೆ ತಾನೇ ಮೊದಲು ವಿದೇಶ ಸೇರಿಕೊಳ್ಳುತ್ತಾನೆ. ಅವನಿಗೆ ವೈಯಕ್ತಿಕವಾಗಿ ಪಾಕ್‍ನಲ್ಲಿ ಕಳೆದುಕೊಳ್ಳುವಂತಹದ್ದೇನೂ ಇಲ್ಲ. ಬೆರಳು ಮಡಚಿ ಎಣಿಸಲು ಕಷ್ಟವಾಗುವಷ್ಟು ಆಮದನಿ ಹೊಂದಿರುವ ನವಾಜ್‍ ಶರೀಫ್ ಪಾಕಿನ ಅತಿದೊಡ್ಡ ಉಕ್ಕು ಉದ್ಯಮಿ. ಅವನೊಬ್ಬನ ಸಂಪತ್ತು ಪಾಕಿಸ್ಥಾನದ ಬಜೆಟ್ಟು. ಸಕ್ಕರೆ ಕಾರ್ಖಾನೆಗಳು, ಟೆಕ್ಸ್‍ಟೈಲ್ಸ್ ಫ್ಯಾಕ್ಟರಿಗಳು, ಸ್ಟೀಲ್ ಉದ್ಯಮ, ಫೌಂಡರೀಸ್, ಒಂದು ಲಕ್ಷಕ್ಕಿಂತಲೂ ಹೆಚ್ಚಿಗೆ ಉದ್ಯೋಗಿಗಳನ್ನು ಹೊಂದಿರುವ ಪಾಕಿಸ್ತಾನದ ಪ್ರಥಮ ಶ್ರೀಮಂತ ಪ್ರಜೆ ಆತ.

ಇವನಂತಹ ಎಲ್ಲರ ಹೂಡಿಕೆ ಇಂಗ್ಲೆಂಡು, ಅಸ್ಟ್ರೇಲಿಯಾ, ನ್ಯೂಜಿಲ್ಯಾಂಡು ಇತ್ಯಾದಿಗಳಲ್ಲಿದೆ ಹೊರತಾಗಿ ಅವರದ್ದೇ ಸಖ್ಯದ ಗಲ್ಫ್‍ ರಾಷ್ಟ್ರಗಳಲ್ಲಿ ಅಲ್ಲ. ಕಾರಣ ಪಾಕಿಸ್ತಾನದ ರಾಜಕೀಯ ಅಸ್ಥಿರತೆ ಇರುವುದು ಅವರ ಆಳುವಿಕೆಯಲ್ಲಲ್ಲ. ಮಿಲಿಟರಿಯ ತಂತ್ರಗಾರಿಕೆ ಮತ್ತು ಸರಹದ್ದಿನ ಚಟುವಟಿಕೆಗಳ ಮೇಲೆ. ಅದೇ ಶ್ರೀನಗರದಲ್ಲೂ ಆಗಿರುವುದು. ಈಗಿರುವ ಹುಡುಗರೆಲ್ಲಾ ಇತ್ತೀಚಿನ ಇಪ್ಪತ್ತು ಮೂವತ್ತು ವರ್ಷದ ಕಾಶ್ಮೀರ ನೋಡಿದರೇ ಹೊರತಾಗಿ ನಿಜವಾದ ಇತಿಹಾಸಕ್ಕೆ ತೆರೆದುಕೊಂಡವರೇ ಅಲ್ಲ. ಹಾಗಾಗಿ ಇವತ್ತು ಮಾತೆತ್ತಿದರೆ “ಹಿಂದುಸ್ತಾನಿ ಫೌಜ್” ಎನ್ನುತ್ತಾರೆ ಹೊರತಾಗಿ ಬದುಕಿನ ಬಗ್ಗೆ ಅವಗಾಹನೆಯೇ ಇಲ್ಲ. ಅಸಲಿಗೆ ಭವಿಷ್ಯ ಕಟ್ಟಿಕೊಳ್ಳಲು ಪ್ರವಾಸೋದ್ಯಮದ ವಿನ: ಬೇರೇನೂ ಇಲ್ಲ. ಹಿಂದಿನ ತಲೆಮಾರು ಕೊಂಚವಾದರೂ ಸೈರಿಸಿಕೊಂಡು ಬದುಕುತ್ತಿದ್ದರೆ ಈಗಿನವರು ಅಕ್ಷರಶ: ಸಾಮಾಜಿಕ ಪರಿಸ್ಥಿತಿಯನ್ನು ಪ್ರಕ್ಷುಬ್ಧಗೊಳಿಸಿ ಹಾಳು ಮಾಡಿಕೊಂಡಿದ್ದಾರೆ ಕಾರಣ ಇವರನ್ನು ಅತ್ಯಂತ ವ್ಯವಸ್ಥಿತವಾಗಿ ಬ್ರೇನ್‍ವಾಶ್ ಮಾಡಿರುವ ಪ್ರತ್ಯೇಕತಾವಾದಿಗಳಿಗೆ ಅಜಾದ್ ಕಾಶ್ಮೀರ ಆದರೆಷ್ಟು..? ಬಿಟ್ಟರೆಸ್ಟು..? ಅವರಿಗೆ ಆಗಬೇಕಾದುದೇನೂ ಇಲ್ಲ.

ಹೆಚ್ಚಿನ ಪ್ರತ್ಯೇಕತಾವಾದಿಗಳಿಗೆ ಈಗಾಗಲೇ ವಯಸ್ಸಾಗಿದೆ. ಪ್ರತ್ಯೇಕತೆಯಲ್ಲಿ ಏನು ಸಿಕ್ಕಿದರೂ ತಮ್ಮ ಕೈಗೆ ಅಧಿಕಾರ ಮತ್ತೊಂದೊ ಏನೊಂದೂ ದಕ್ಕುವ ಚಾನ್ಸೇ ಇಲ್ಲ. ಏನಿದ್ದರೂ ದುರಾಸೆಯ ದೂರಾಲೋಚನೆ ಮಾತ್ರ. ತಮಗಂತೂ ಸಮಸ್ಯೆ ಏನಿಲ್ಲ. ಈಗಲೂ ಅವರ ಕುಟುಂಬ ಎಂದರೆ ಜೊತೆಗಿರುವ ಹೆಂಡತಿಯರು ಮಾತ್ರ. ಉಳಿದೆಲ್ಲಾ ಸಂತಾನ ಭಾಗ್ಯಗಳನ್ನು ದೇಶದ ಇತರ ಭಾಗದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನೆಲೆಗೊಳಿಸಿಬಿಟ್ಟಿದ್ದಾರೆ. ಹೆಚ್ಚಿನಂಶ ಈ ಪ್ರತ್ಯೇಕತಾವಾದಿಗಳ ಕುಟುಂಬದ ಬಗ್ಗೆ ಸ್ವತ: ಶ್ರೀನಗರದವರಿಗೇ ಮಾಹಿತಿ ಇಲ್ಲ. ಅವರಿಗೇನಿದ್ದರೂ ಕಲ್ಲು ತೂರಾಟಕ್ಕೆ ದಿನಕ್ಕೆ ಇಷ್ಟು ಎಂದು ಸಂಭಾವನೆ ನಿಗದಿಯಾಗಿರುತ್ತದೆ. ಅದಕ್ಕೆ ಪೂರಕ ಈ ಪ್ರತ್ಯೇಕತಾವಾದಿಗಳು ಕ್ಯಾಲೆಂಡರ್/ಟೈಂ ಟೇಬಲ್ಲು ಜಾರಿ ಮಾಡಿರುತ್ತಾರೆ. ಯಾವ ದಿನ ಯಾವ ಏರಿಯಾದಲ್ಲಿ ಕಲ್ಲು ತೂರಾಟ, ಅದಕ್ಕೆ ಸಮಸ್ತ ಜನತೆ ಹಾಗು ಯುವಕರು ಹ್ಯಾಗೆ ತಂತ್ರ ರೂಪಿಸಬೇಕು, ಭಯೋತ್ಪಾದಕರನ್ನು ಸೈನ್ಯ ಸುತ್ತುವರಿದಾಗ ಅವರು ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಕಲ್ಲು ಹೊಡೆಸುವದು ಇವರ  ಸ್ಟ್ರಾಟಜಿಯೇ. ಇದಕ್ಕೆಲ್ಲಾ ಬೆಂಬಲ ಎಂದರೆ ಸರಹದ್ದಿನಿಂದ ಸರಬರಾಜಾಗುವ ವಿದೇಶಿ ಫಂಡಿಂಗ್ ಎಂಬ ಹಡಬೆ ದುಡ್ಡು, ಪೆಂಡಿಗಟ್ಟಲೇ ಖೋಟಾ ನೋಟುಗಳು.

ಇವತ್ತು ಹೆಚ್ಚಿನ ಕಾಶ್ಮೀರದ ರಸ್ತೆಗಳ ಕಾಲುವೆಗಳೆಲ್ಲಾ ಕಲ್ಲಿನಿಂದ ತುಂಬೇ ಇರುತ್ತವೆ. ಕಲ್ಲುಗಳನ್ನು ಆಯ್ದು ತುಂಬಿಸುವುದೇ ಹೆಚ್ಚಿನವರ ಕಾಯಕ. ಇದ್ದಕ್ಕಿದ್ದಂತೆ ಪೋಲಿಸರ ಮೇಲೆ ತೂರಲು ಅದೆಲ್ಲಿಂದ ಕಲ್ಲಿನ ಸಾವಿರಾರು ಸ್ಟಾಕ್ ಸಿಕ್ಕಿ ಬಿಡುತ್ತದೆ. ಒಂದು ಸ್ಥಳದಲ್ಲಿ ನೋಡುತ್ತಿದ್ದಂತೆ ನೂರಾರು ಕಲ್ಲುಗಳ ಬೀಳತೊಡಗಿದೆ ಎಂದರೆ ಅಲ್ಲೆಲ್ಲಾ ವ್ಯವಸ್ಥಿತವಾಗಿ ದಾಸ್ತಾನು ನಡೆಯುತ್ತಿತ್ತು ಎಂದೇ ಅರ್ಥ. ಪ್ರತಿ ಊರಿನ ಇಕ್ಕೆಲೆಯಲ್ಲೂ ತುಂಬಿ ಹರಿವ ನದಿಗಳು ಲಕ್ಷಾಂತರ ಕಲ್ಲುಗಳನ್ನು ಎತ್ತಿ ಹಾಕುತ್ತಿದ್ದರೆ ಅವನ್ನೆಲಾ ಒಟ್ಟು ಮಾಡಿ ಚೀಲಗಟ್ಟಲೇ ಹೊರುವುದೇ ಇವರ ಕಾಯಕ. ಇವರಾರೂ ಇವತ್ತು ಶಾಲೆ ಕಲಿತಿಲ್ಲ. ಏನಿದ್ದರೂ ತಿಂಗಳಲ್ಲಿ ಮೂರ್ನಾಲ್ಕು ದಿನ ಇಂತಹ ಗಲಭೆಗಳಲ್ಲಿ ಭಾಗವಹಿಸಿದರೆ ಸಾವಿರ ಲೆಕ್ಕದಲ್ಲಿ ದುಡ್ಡು ಹಂಚಲಾಗುತ್ತದೆ. ಕೆಲವೇ ಗಂಟೆಗಳ ಕಲ್ಲು ತೂರಾಟಕ್ಕೆ ತಿಂಗಳ ಕೂಲಿ, ಪುಗ್ಸಟ್ಟೆ ಎಣ್ಣೆಗೆ ದುಡ್ಡು ದೊರೆಯತೊಡಗಿದರೆ ತಲೆಯಲ್ಲಿ ಬರೀ ಲದ್ದಿ ತುಂಬಿರುವ ಹುಡುಗರು ಬೇರಿನ್ಯಾಕೆ ಕಲಿತಾರು..?

ಕೇವಲ ಐದಾರು ಪರ್ಸೆಂಟಿನಷ್ಟು ಇಂಥ ಬೆಂಬಲಿಗರು ಶೇ. 90 ಕ್ಕೂ ಹೆಚ್ಚು ಜನರ ಜೀವನವನ್ನೇ ನರಕ ಮಾಡುತ್ತಿದ್ದಾರೆ ಅದರೂ ಸ್ಥಳೀಯರು ಬುದ್ಧಿ ಕಲಿಯುತ್ತಿಲ್ಲ ಎಂದಲ್ಲ. ಎಬುಜೀಗಳ ಪಡೆ ಇವರನ್ನು ಬೆಳೆಯಲು ಬಿಡುತ್ತಿಲ್ಲ ಅಷ್ಟೆ. ಯಾರೋ ಕೊಡುವ ದುಡ್ಡಿನಲ್ಲಿ ಬದುಕು, ಶೋಕಿ ಎರಡೂ ಮಾಡುತ್ತಾ, ಬಣ್ಣಬಣ್ಣದ ದಿರಿಸೂ, ಬಂದೂಕು ಧರಿಸಿ ಓಡಾಡುತ್ತಿದ್ದ ಎಳಸು ಯುವಕನೊಬ್ಬ ಕಾಶ್ಮೀರದ ಬೀದಿಯಲ್ಲಿ ನಾಯಿಯಂತೆ ಸೈನಿಕರ ಗುಂಡಿಗೆ ಬಲಿಯಾದರೆ, ತಡ ಮಾಡದೆ ಬೀದಿಗಿಳಿಯುವ ಪ್ರತ್ಯೇಕತಾವಾದಿ, ಭಯೋತ್ಪಾದಕರ ಬೆಂಬಲಿತ ನಾಯಕರು ಸೃಷ್ಟಿಸುವ ಹವಾ ಇದೆಯಲ್ಲ ಅದು ಹೊಸಬರನ್ನು ಇನ್ನಷ್ಟು ಹಾಳು ಮಾಡುತ್ತಿದೆ. ಶವ ಸಂಸ್ಕಾರದ ಭರಾಟೆ ಎನ್ನುವ ಕ್ರೇಜು ಯುವಕರ ಬಿಸಿ ಹೆಚ್ಚಿಸುತ್ತಿದೆ. ಅದರೆ ಅವರಿಗೆ ಅರ್ಥವಾಗದ್ದೆಂದರೆ ತಾವು ಬಲಿಯಾಗುತ್ತಿದ್ದೇವೆ ಹೊರತಾಗಿ ಇಲ್ಲಿವರೆಗೂ ಒಬ್ಬೆ ಒಬ್ಬ ನಾಯಕನೂ ಕಾಶ್ಮೀರಕ್ಕಾಗಿ ಬಲಿಯಾಗಿಲ್ಲ. ಜೊತೆಗೆ ನಮ್ಮಲ್ಲಿನ ದೂರದೃಷ್ಟಿ ಇಲ್ಲದ ಅಪ್ಪಟ ಬಡಪಾಯಿ ಭಾರತೀಯ ಮುಸ್ಲಿಂರಂತೆ ಆಡುತ್ತಿರುವ ಪಾಕಿ ಪಡೆಗೂ ಒಂದರ್ಥವಾಗಬೇಕಿದೆ. ಶರೀಫನಾಗಲಿ, ಮುಶರಫ್‍ನಾಗಲಿ, ಇವತ್ತು ಪಾಕಿಗಳನ್ನು ಉದ್ಧರಿಸಲು ಬರುವ ಮಾಂತ್ರಿಕರೂ ಅಲ್ಲ, ಯಾವುದೇ ದೇಶೋದ್ಧಾರದ ತೆವಲು ಇರುವ ನಾಯಕರೂ ಅಲ್ಲ. ಏನಿದ್ದರೂ ತೂಬು ಕಿತ್ತುಹೋಗುವವರೆಗೆ ನೀರು ಹರಿಸಿಕೊಂಡು ಬಿಡುವ ಹುನ್ನಾರದಲ್ಲಿರುವ, ಅಂದರೆ ಶುದ್ಧಮುಸ್ಲಿಂರ ಪಾಲಿಗೆ ಕಂಟಕವಾಗಿರುವ ಅವಿವೇಕಿ ಪಡೆ ಇದು. ಶೇ.90 ರಷ್ಟು ಚೆಂದವಾಗಿ ಬದುಕುತ್ತಿರುವ ಮುಸ್ಲಿಂ ಕುಟುಂಬಗಳ ಭವಿಷ್ಯವನ್ನು ಧರ್ಮದ ಹೆಸರಿನಲ್ಲಿ ಭಾರತದಲ್ಲೂ, ಪಾಕಿಸ್ತಾನದಲ್ಲೂ ಹಾಳು ಮಾಡುತ್ತಿರುವ ಅಪ್ಪಟ ದುರ್ಮಾರ್ಗಿಗಳಿವರು. ಅವರಿಗೆ ಬೆಂಬಲಿಸಿ ಶ್ರೀನಗರ ಇನ್ನಷ್ಟು ಹಾಳು ಮಾಡುತ್ತಿರುವ ಸ್ಥಳೀಯರು. ಹೊಸಬರ ಬದುಕು ಬಂಗಾರವಾಗಲಿ ಎಂದರೆ ಆದೀತಾದರೂ ಹೇಗೆ..? ಕಾಶ್ಮೀರ ಖಾಲಿಯಾಗದೆ ಏನಾದೀತು..?

Facebook ಕಾಮೆಂಟ್ಸ್

ಲೇಖಕರ ಕುರಿತು

Santoshkumar Mehandale

ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!