ಕಥೆ

ಕಥೆ

ಹಾಯಿ ದೋಣಿ

ಎಲ್ಲರ ಮನೆಯಲ್ಲೂ ಮಗು ಹುಟ್ಟಿತೆಂದರೆ ಸಂಭ್ರಮ ಸಡಗರ. ಆದರೆ ಈ ಮನೆಯಲ್ಲಿ ಮಾತ್ರ ಕತ್ತಲನ್ನು ಕಿತ್ತು ತಿನ್ನುವಂತ ಮೌನ ಆವರಿಸಿತ್ತು. ಅಪ್ಪ ಅನಿಸಿಕೊಂಡವನು ಎಂದಿನಂತೆ ಕಂಠಪೂರ್ತಿ ಹೀರಿ ಬಂದಿದ್ದ. ಹೆತ್ತವಳಿಗೆ ತಾನೇಕೆ ಹೆತ್ತೆ ಅನ್ನುವುದೇ ಅರ್ಥವಾಗದ ಪರಿಸ್ಥಿತಿ. ಅದೊಂದು ಕಡು ಬಡ ಕುಟುಂಬ. ಹೆಸರಿಗೆ ಬಡ ಕುಟುಂಬವಾದರೂ ಮನೆ ಯಜಮಾನ ಅನಿಸಿಕೊಂಡವನು ತನ್ನ ಹೊಟ್ಟೆಗೆ...

ಕಥೆ

ಮಾಯೆಯ ಮುಸುಕು

ನಸುಗತ್ತಲೆಯ ಕೋಣೆ. ಸರಳುಗಳ ಮಧ್ಯೆ ತೂರಿ ಬಂದು, ಕತ್ತಲನು ಬಡಿದೋಡಿಸುವಷ್ಟು ಅವಕಾಶ ಬೆಳಕಿಗಿದ್ದರೂ ಪಾಪಿಯ ಬಳಿ ಸುಳಿಯಲು ಇಷ್ಟವಿಲ್ಲವೇನೋ ಎಂಬಂತಹ ಭಾವ. ” ಅಯ್ಯೋ, ಇವಳು ಹೆತ್ತ ಮಗಳನ್ನೇ ಕೊಂದು ಜೈಲಿಗೆ ಬಂದಿದಾಳೆ. ಏನು ಕಾಲ ಬಂತಪ್ಪ” ಎದುರಿನಲ್ಲಿ ಯಾರೋ ಹೇಳಿಕೊಂಡು ಹೋದರು. ಮಾತು ಕಾದ ಸೀಸದಂತೆ ಕಿವಿಯೊಳಗೆ ಇಳಿಯುತ್ತಿದ್ದರೂ ಕಂಬನಿ ಮಿಡಿಯಲೂ...

ಕಥೆ ಕಾದಂಬರಿ

ಆತ್ಮ ಸಂವೇದನಾ ಅಧ್ಯಾಯ 14

ಆತ್ಮ ಸಂವೇದನಾ ಅಧ್ಯಾಯ 13 ಅದೇ ಸಮಯದಲ್ಲಿ ಸಂವೇದನಾ ರೆಕ್ಕೆ ಬಲಿತ ಹಕ್ಕಿಯಂತೆ ಹಾರುತ್ತಿದ್ದಳು. ಈಜಲು ಕಲಿತ ಪುಟ್ಟ ಮೀನಿನಮರಿಯ ಹಿಗ್ಗು ಅವಳದ್ದು. ಈಗಷ್ಟೆ ಕಣ್ತೆರೆದ ಚಿಕ್ಕ ಮಗುವಿನ ಕುತೂಹಲ ಅವಳಿಗೆ ಪ್ರಪಂಚದ ಬಗ್ಗೆ. ಹೊಸ ಜಗತ್ತಿಗೆ ಬಂದ ಅವಳಿಗೆ ಏನಿದೆ ಹೇಗಿದೆ ಎಂದು ನೋಡುವ ಮಾತನಾಡುವ ಹಂಬಲ. ಇಡೀ ಜಗತ್ತನ್ನೇ ಓಡಾಡಿಬಿಡುವಷ್ಟು ಆತುರ. ಅಪರೂಪಕ್ಕೆಂಬಂತೆ...

ಕಥೆ

ಅನಾಥ – ‘ಪ್ರೀತಿ’

ಇವನೊಬ್ಬ ಅನಾಥ. ಅನಾಥ ಅಂದ್ರೆ ಹಿಂದು-ಮುಂದು ಯಾರು ಇಲ್ಲ ಅಂತ ಅಲ್ಲ. ಎಲ್ಲಾ ಇದ್ದು ಅವನೊಬ್ಬ ಅನಾಥ. ಹೌದು , ಯಾವುದೋ ವಿಷಗಳಿಗೆಯಲ್ಲಿ ಎಲ್ಲಾರಿಂದಲೂ ದೂರಾದ. ಮತ್ತೆಂದೂ ತನ್ನವರೆನ್ನೆಲ್ಲಾ ಸೇರಲಾರದಷ್ಟು ದೂರ. ಕಣ್ಣೆದುರಿಗಿದ್ದರೂ ಇವರೇ ತನ್ನವರೆಂದು ಗುರುತು ಹಿಡಿಯಲಾರ . ಯಾರ ಪಾಪದ ಬಸುರೋ , ಯಾರ ತೀಟೆ ತೀರಿಸಿಕೊಳ್ಳಲು ಹುಟ್ಟಿಸಿದ್ದೋ , ಹೆತ್ತ ಮರುಕ್ಷಣವೇ...

ಕಥೆ

ಕಾರ್ತೀಕ

“ಕಾರ್ತೀಕ ಮಾಸವೆ0ದರೆ ಹೇಗಿರಬೇಕು..ಕೆರೆಕಟ್ಟೆಗಳೆಲ್ಲಾ ತು0ಬಿರಬೇಕು,ಹೊಲದಲ್ಲಿ ನವಣೆ,ಸಜ್ಜೆ,ರಾಗಿ,ಜೋಳಗಳು ತೆನೆ ಒಡೆದಿರಬೇಕು,,,ಉಚ್ಚೆಳ್ಳು ಹೂವು ಇಲ್ಲ, ಚೆ0ಡುಹೂವು ಇಲ್ಲ….ಛೇ,ಯಾಕೆ ಹೀಗಾಗಿದೆ..ಇಡೀ ಊರೆಲ್ಲಾ ಸುತ್ತಿದ್ದರೂ ಒ0ದು ಹನಿ ನೀರು ಕೂಡ ಸಿಗುತ್ತಿಲ್ಲ. ಯಾವುದಾದರೂ ಮನೆಯ ಮೇಲೋ,ಮನೆಯ ಹಿತ್ತಲಿನಲ್ಲೋ ಒ0ದು ಬಿ0ದಿಗೆಯ ತಳದಲ್ಲಾದರೂ ನೀರು...

ಕಥೆ

ಒಂದು ಬದುಕಿನ ಸುತ್ತ ಭಾಗ-೨

ಮೊದಲ ಭಾಗವನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಭಾಗ-೧ ಮುಂದುವರಿದ ಭಾಗ… ಮರುದಿನ ಬಸ್ಸ್ಟಾಂಡ್ ನಲ್ಲಿ ಆಪರೇಶನ್ನಿಗೆ ಎಷ್ಟು ದಿನ ಐತೆ ಎಂದು ಕೇಳಿದ ಪರಿಚಯದ ಪ್ರಯಾಣಿಕನಿಗೆ ನಾಡಿದ್ದು ಹೋಗಿ ಅಡ್ಮಿಟ್ ಮಾಡ್ಬೇಕು ಎಂದು ಸಾವಕಾಶವಾಗಿ ಮುರುಳಿ ಉತ್ತರಿಸಿದ. ನಾನು ಊರ್ಗೋಗಿ ಅಪ್ಪ-ಅವ್ವುಗ ಹೇಳ್ತೀನಿ, ನೋಡಾನಾ ಅವರೇನಾರ ಸಹಾಯ ಮಾಡ್ತಾರೇನೋ ಅಂತ. ಎಂದ...

ಕಥೆ

ಒಂದು ಬದುಕಿನ ಸುತ್ತ.

ಒದ್ದೆ ಕಣ್ಣುಗಳಿಂದ ಯೋಚ್ನೆ ಮಾಡ್ತಾ ಕುಳಿತಿದ್ದ ಮುರುಳಿ ಹತ್ರ ಒಬ್ಬ ಪರಿಚಯಸ್ತ ಬಂದು, ನೂರು ಪಾಂಪ್ಲೆಟ್ ಇರುವ ಕಟ್ಟನ್ನು ಕೊಟ್ಟು “ನನ್ನ ಯೋಗ್ಯತೆ ಇಷ್ಟೆ ಪಾ. ಏನು ಮಾಡೋದು? ನಮ್ಮಂಥ ಬಡವರ ಮಕ್ಕಳಿಗೆ ಇಂಥಾ ಖಾಯಿಲೆ ಬರಬಾರ್ದು, ಎಲ್ಲಾ ದೇವರಾಟ ಇದನ್ನ ಈಸಬೇಕು ಅಷ್ಟೇ” ಎಂದು ಹೋದ. ಮುರಳಿ ಮನೆಗೆ ಹೋಗಿ ಈ ವಿಚಾರವಾಗಿ ಗಂಗಮ್ಮನ ಹತ್ತಿರ ವಿವರಿಸುವಾಗ ಪಾಂಪ್ಲೆಟ್...

ಕಥೆ ಕಾದಂಬರಿ

ಆತ್ಮ ಸಂವೇದನಾ ಅಧ್ಯಾಯ 13

ಬೆಳಕಿನ ಪಂಜರದಲಿ ಹಕ್ಕಿಗಳ ಇಂಚರ… ರವಿಯ ಕುಂಚದಲಿ ಭೂಮಿಯ ಒಲವಿನ ಚಿತ್ತಾರ… ಮುಸ್ಸಂಜೆ ಆರರ ಸಮಯ. ಬಾನಂಚುಕೆಂಪೇರುತ್ತಿತ್ತು. ಕತ್ತಲೆಯ ಅಪ್ಯಾಯತೆ ಮತ್ತೆಭೂಮಿಯನ್ನು ಚುಂಬಿಸಲು ಸಜ್ಜಾಗುತ್ತಿದೆ.ನಾಚಿಕೆಯಿಂದ ಕೆಂಪೇರಿದ ಮುಗಿಲು, ಪ್ರಾಣಿ-ಪಕ್ಷಿಗಳುತಮಗೇನು ಕೆಲಸ ಇವುಗಳ ಮಧ್ಯೆ ಎಂದು ಗೂಡುಸೇರಲು ಹಾತೊರೆಯುತ್ತಿವೆ. ಆತ್ಮಸಂಜೆಯಾಗುತ್ತಿರುವುದನ್ನು...

ಕಥೆ

ಬದುಕು ಸಶೇಷವಂತೆ….. –2

ಬದುಕು ಸಶೇಷವಂತೆ……. – 1 ಮಾತನಾಡಬೇಕೆಂದು ಪಕ್ಕದ ಬೋಳುಗುಡ್ಡ ಹತ್ತಿದಾಗ ಸಾಗರಿಕಾಳೇನೂ ತಂಟೆ ಮಾಡಲಿಲ್ಲ; ಅಕ್ಕನ ಮನಸ್ಸಿಗೆ ಸಾಂತ್ವನ ಹೇಳಲೊಬ್ಬ ಗೆಳೆಯ ಬೇಕೆಂದು ಆಕೆಗೂ ಅನಿಸಿರಬಹುದು. ಕೂತ ನಮ್ಮಿಬ್ಬರ ನಡುವೆ ಕೇವಲ ಅರ್ಧ ಅಡಿ ಅಂತರವಿತ್ತು. ಆದರೆ ಆ ಅಂತರದಲ್ಲಿ ಒಂದು ಸಾಗರವೇ ತುಂಬುವಷ್ಟು ಮೌನ ಗುಡ್ಡೆಯಾಗಿ ಬಿದ್ದಿತ್ತು. ಅವಳದೂ ಮಾತಿಲ್ಲ, ನನ್ನದೂ ಇಲ್ಲ. ಇನ್ನು...

ಕಥೆ

ಬದುಕು ಸಶೇಷವಂತೆ……. – 1

“ಏ ಗುತ್ತಾತನ, ಸೌಗಂಧಿದು ಮದ್ವೆಯಡ ಗಣೇಶನ ಸಂತಿಗೆ.” ಆಯಿ ಫೋನಲ್ಲಿ ಹೇಳಿದ ಮಾತುಗಳಿಗೆ ನಾನು ಬೆಚ್ಚಿಬಿದ್ದಿದ್ದೆ. “ಅಲ್ದೆ, ನಿದ್ರೆಗಣ್ಣಲ್ಲಿ ಮಾತಾಡ್ತಿದ್ಯ ಎಂತದು! ಎಲ್ಲಿಯ ಸೌಗಂಧಿ, ಎಲ್ಲಿಯ ಗಣೇಶ? ಅದಂಥೂ ಓಡಿಹೋಗಿ ಒಂದ್ವರ್ಷ ಆಗ್ತೇ ಬಂತು.” “ನೋಡು ಶಾಕ್ ಆಗೋತು ಅಲ್ದಾ? ನಂಗಕ್ಕೂ ಹಾಂಗೇ ಆತು. ರಾಮಣ್ಣ ಇವತ್ತು ಮದ್ವೆ...