ಫರ್ನಾಂಡೆಸ್ ಇದ್ದವರು, ನನ್ನ ಮುಖ ಗಮನಿಸುತ್ತಾ, ತಮ್ಮಗೋಲ್ಡ್’ರಿಮ್ ಕನ್ನಡಕವನ್ನು ಮೇಲೇರಿಸಿಕೊಳ್ಳುತ್ತಾ, “ನಾನೂ ಅವನ್ನು ಕೈ ಬರಹ ತಜ್ಞರಿಗೂ, ಬೆರಳಚ್ಚಿನವರಿಗೂ ತೋರಿಸಿದೆ..ಸಾಮಾನ್ಯ ಪೇಪರ್, ಸಾಮಾನ್ಯ ಬ್ಲ್ಯಾಕ್ ರೆನಾಲ್ಡ್ಸ್ ಪೆನ್, ಯಾವ ಬೆರಳಚ್ಚೂ ಇಲ್ಲಾ ಅಂದು ಬಿಟ್ರು…..ಗ್ಲೋವ್ಸ್ ಹಾಕಿಕೊಂಡಿದ್ದರೇನೋ!” ಎಂದರು ತಾವೇನೂ ಕಮ್ಮಿಯಿಲ್ಲಾ...
ಕಥೆ
ದೇವರಾಗಿ ಬಂದ ಆ ಮಹಾನುಭಾವ!
ಅಂದು ಶನಿವಾರ. ಮಧ್ಯಾಹ್ನ ಸುಮಾರು ಹನ್ನೊಂದು ಮೂವತ್ತು. ಒಲೆ ಮೇಲಿಟ್ಟ ಕುಕ್ಕರ್ ಸೀಟಿ ಹಾಕಿದ ಸೌಂಡ್ ಕೇಳಿಸುತ್ತಿದೆ. ಓ ಮೂರು ಸೌಂಡ್ ಆಯಿತು. ಬೇಗ ಹೋಗಿ ಆರಿಸಬೇಕು. ತರಾತುರಿಯಲ್ಲಿ ಮಕ್ಕಳಾ ಇಲ್ಲೆ ಆಟ ಆಡಿಕೊಂಡಿರಿ ಎಂದೆ. ಅವರಿಗೆ ಕೇಳಸಿತೊ ಇಲ್ಲವೊ ಗಮನಿಸಲು ಸಮಯವಿಲ್ಲ. ಕುಕ್ಕರ್ ಸೀಟಿ ಎಳೀತಾ ಇದೆ ನನ್ನ ಗಮನ. ತರಾತುರಿಯಲ್ಲಿ ಒಳಗೆ ಹೋದೆ. ಹಾಗೆ ತರಕಾರಿ...
ಉದ್ಯೋಗ
ಪದ್ಮಿನಿ ತಂದಿಟ್ಟ ಚಹಾವನ್ನು ಗುಟುಕರಿಸಿ ಕುರ್ಚಿಯಿಂದೆದ್ದರು ಮನೋಜ ರಾಯರು. ಬೆಳಗ್ಗಿನಿಂದ ಇದು ನಾಲ್ಕನೇ ಲೋಟ. ಖಾಲಿ ಲೋಟವನ್ನು ಮೇಜಿನ ಮೇಲಿಟ್ಟು ಅಪರಾಹ್ನದ ಕ್ಲಾಸುಗಳಿಗೆ ಹೊರಟಾಗ ಒಳಗಿನಿಂದ ಪದ್ಮಿನಿ “ಬರುವಾಗ ಸಕ್ಕರೆ ಮತ್ತು ಈರುಳ್ಳಿ ತನ್ನಿ” ಎಂದಿದ್ದು ಕೇಳಿಸಿತು. “ಅಯ್ಯೋ, ನನ್ನ ಕರ್ಮ! ಮನೇಲೇ ಇಡೀ ದಿನ ಬಿದ್ದಿರ್ತೀಯಾ. ನೀನೇ ತಗೊಂಡ್...
ಕರಾಳಗರ್ಭ
ನನ್ನ ಆಫೀಸಿನ ಟೇಬಲ್ ಮೇಲೆ ಕಾಲು ಚಾಚಿ ಕಣ್ಮುಚ್ಚಿ ಮಲಗಿರುವಾಗ ’ಮಿಂಚಾಗಿ ನೀನು ಬರಲು’ ಎಂಬ ಹಾಡಿನ ರಿಂಗ್’ಟೋನಿನೊಂದಿಗೆ ಎಬ್ಬಿಸಿತು ನನ್ನ ಮೊಬೈಲ್ ಫೋನ್. ಇದು ನನ್ನದೇ ಆಫೀಸ್, ನಾನೊಬ್ಬನೆ ಇದ್ದಿದ್ದು, ಹಾಗಾಗಿ ನನ್ನ ಪ್ರಪಂಚ ಶಾಂತವಾಗಿದೆ ಅಂದು ಕೊಳ್ಳುತ್ತಿರುವಾಗಲೇ…ಛೆ! ಯಾರಿದು? ” ಹಲೋ, ವಿಜಯ್ ದೇಶಪಾಂಡೆಯವರು ತಾನೆ?” ಎಂದು ನನ್ನ...
ಭಾಮಿನಿ
ಅವ ಬಂದಾಗ ಎದಿರಾಗಬಾರದು ಎಂಬ ಹಿಂಜರಿಕೆಇತ್ತು. ಹೀಗಾಗಿಯೇ ನೆವ ಮಾಡಿ ಬಾಜೂ ಮನೆಯಶಾಮರಾಯರ ಕಡೆ ಹೋಗಿದ್ದೆ. ವಾಸು ಮಾಮಾನಜೊತೆ ಅವನ ಹರಟೆ ಜೋರಾಗಿ ನಡೆದಿತ್ತು. ಸ್ವಲ್ಪಅನ್ನುವುದಕ್ಕಿಂತ ಪೂರ್ತಿಯೇ ಬದಲಾಗಿದ್ದ. ಕೂದಲಿಗೆಢಾಳಾಗಿ ಬಣ್ಣ ಬಡಿದುಕೊಂಡಿದ್ದ. ಬೊಜ್ಜುಸ್ವಲ್ಪ ಅತೀಅನ್ನಿಸುವಂತಿತ್ತು. ಒಬ್ಬನೇ ಬಂದಿದ್ದಾನೆ. ಇದ್ದಾಗಲೇಶಾಮರಾಯರ ಮನೆಯಲ್ಲಿ ಸುದ್ದಿ ಹಬ್ಬಿತ್ತು...
ಪರಿಸ್ಥಿತಿಯ ಕೈಗೊಂಬೆ ರಾಜು0
ರಾಜು, ಮಳವಳ್ಳಿ ಬಳಿಯ ಒಂದು ಕುಗ್ರಾಮದಿಂದ ಬೆಂಗಳೂರು ಸೇರಿಕೊಂಡ 18 ರ ತರುಣ,10ನೇ ಕ್ಲಾಸ್’ವರೆಗೆ ಓದಿ ಅಲ್ಲೇ ನೆಲೆಸಿದ್ದ ಮಹೇಶನ ಬಳಿ ಪ್ಲಂಬಿಂಗ್, ಎಲೆಕ್ಟ್ರೀಷಿಯನ್ ಕೆಲಸ ಕಲಿತಿದ್ದಾನೆ. ಗೌಡರ ಮನೆಯ ಪಂಪ್ ರಿಪೇರಿ ಮಾಡುವುದು, ಫ್ಯೂಸ್ ಫಿಕ್ಸ್ ಮಾಡುವುದು, ಗ್ರಾಮ ಪಂಚಾಯ್ತಿ ಕಚೇರಿ ನೀರಿನ ನಲ್ಲಿಯ ಕೊಳವೆ ಕೆಲಸ ಮಾಡುವುದರಿಂದ ಹಿಡಿದು, ಉಳ್ಳವರ ಜಮೀನಿನ ಕಳೆ...
ಭಾವನಾ ತರಂಗ …
ಬೆಳಿಗ್ಗೆ ಎಂಟು ಗಂಟೆ, ಶನಿವಾರ, ಆಫೀಸಿಗೆ ರಜೆ ಬೇರೆ.. ನಿಧಾನವಾಗಿ ಏಳೋಣವೆಂದರೆ ಅದೇಕೋ ನಿದ್ರಾದೇವಿಗೆ ನನ್ನ ಮೇಲೆ ಸಿಟ್ಟು.. ಹೋಗಲಿ ಎಲ್ಲಾದರೂ ಹೊರಗೆ ಹೋಗೋಣವೆಂದುಕೊಂಡು ಎದ್ದು ಮನೆಯ ಬಾಗಿಲು ತೆಗೆದೆ. ನಾವಿರುವ ಮನೆ ಮೊದಲನೆಯ ಮಹಡಿಯ ಮನೆ,ಒಂದು ವಾರದ ಹಿಂದೆಯಷ್ಟೇ ಈ ಮನೆಗೆ ಬಂದಿದ್ದರಿಂದ ಇದು ಮೊದಲ ವೀಕೆಂಡ್. ಪ್ರತಿ ದಿನ ಆಫೀಸಿಗೆ ಹೋಗುವ ಅವಸರದಲ್ಲಿ ಅಕ್ಕ...
ಪಾದ ಮುಚ್ಚುವಷ್ಟು ಚರ್ಮ
ಸಂಗತಿ ಬಹಳ ಹಳೆಯದು. ಅಂತೆಯೇ ಈ ಕಥೆಯೂ ಕೂಡ. ಆ ಕಾಲದಲ್ಲಿ ಎಲ್ಲರೂ ಚಪ್ಪಲಿಯಿಲ್ಲದೆ ಬರಿಗಾಲಲ್ಲಿ ನಡೆಯುವವರೆ. ಈಗಿನಂತೆ ಕಾಲಿಗೆ ತೊಡಲು ಚಪ್ಪಲಿಯಿರಲಿಲ್ಲ, ಬೂಟಂತು ಇರಲೇ ಇಲ್ಲ. ಬರಿಗಾಲಲ್ಲಿ ನಡೆಯುವವರ ಈ ಕಥೆ ಚಕ್ರಪುರವೆಂಬ ರಾಜ್ಯದ್ದು. ಚಕ್ರಪುರವನ್ನು ಆಳುವ ರಾಜ ಚಕ್ರಮಾದಿತ್ಯ ಒಂದು ದಿನ ಬಲು ಕೋಪಗೊಂಡ. ಆತ ರಾಜಭವನವನ್ನು ಬಿಟ್ಟು ಹೊರಹೋಗದಂತಹ ಪರಿಸ್ಥಿತಿ...
ಮಿಡಿದ ಹೃದಯಗಳು
ಜೂನ್ ತಿಂಗಳ ಮುಂಜಾನೆಯ ಮಳೆ, ನಾನು ಆಫೀಸ್ಗೆ ಪ್ರಯಾಣಿಸಲು ದ್ವಿಚಕ್ರ ವಾಹನವನ್ನು ತರಾತುರಿಯಲ್ಲಿ ಹೊರ ತೆಗೆಯಲು ಸಾಹಸ ಪಡುತ್ತಿದ್ದೆ ಆದದ್ದೇನು?…ಅನಿರೀಕ್ಷಿತ ತಾಂತ್ರಿಕ ದೋಷ!, ಪೆಚ್ಚು ಮೊರೆ ಹಾಕಿಕೊಂಡು ಅದೃಷ್ಟವನ್ನು ಬಯ್ಯುತ್ತ, ಇಂದು ಮಹಾ ನಗರ ಪಾಲಿಕೆಯ ಬಸ್ಸೇ ಗತಿಯೆಂದು, ಕೈಗೆ ಸಿಕ್ಕ ಛತ್ರಿ ಹಿಡಿದು, ಬ್ಯಾಗನ್ನು ಬೆನ್ನಿಗೇರಿಸಿ, ಪ್ಯಾಂಟನ್ನು ಅರ್ಧ...
ಅಜ್ಜನ ಸ್ವಗತ
ಇದು ಎರಡಲ್ಲ ಮೂರನೇ ಸಲ ಅಂತೆ. ಹಾಗಂತ ಈ ಮನೆಯಲ್ಲಿ ಮಾತಾಡ್ತಾ ಇದ್ರು. ಮೊದಲ ಸಲ ಮನೆ ಹಿಂದುಗಡೆ ಇರೋ ಬಾವೀಲಿ ಎರಡೂ ಕಾಲು ಒಳಗಿಟ್ಟುಕೊಂಡು ಕಟ್ಟೆ ಮೇಲೆ ಕೂತಿದ್ದೆನಂತೆ. ಇನ್ನೇನು ಹಾರಬೇಕು,ಅಷ್ಟರಲ್ಲಿ ಯಾರೋ ನೋಡಿ ಜೋರಾಗಿ ಕೂಗಿದ್ರಿಂದ ಮನೆಯವರೆಲ್ಲ ಓಡಿ ಬಂದು ನನ್ನ ಕಾಪಾಡಿದ್ರಂತೆ. ಇನ್ನೊಂದು ಸಲ ಸೇತುವೆ ಮೇಲಿಂದ ಹೊಳೆಗೆ ಹಾರಕ್ಕೆ ಹೋಗಿದ್ದೆನಂತೆ. ಆಗ...