ನಾರಾಯಣ ಮೂರ್ತಿ ಭಾರತದ ಐಟಿ ಇಂಡಸ್ಟ್ರಿಯ ದಿಗ್ಗಜರಲ್ಲಿ ಒಬ್ಬರು. ೧೯೮೧ರಲ್ಲಿ ಆರಂಭಿಸಿದ ಇನ್ಫೋಸಿಸ್ ಭಾರತದ ೬ನೇ ಅತಿದೊಡ್ಡ ಕಂಪನಿಯಾಗಿದೆ. ಈ ಸಂದರ್ಶನದಲ್ಲಿ ಮೂರ್ತಿಯವರು ತಾವು ಪಡೆದ ಮೌಲ್ಯಯುತ ಸಲಹೆಗಳ ಬಗ್ಗೆ, ನಾಯಕತ್ವ, ಕಾರ್ಯನಿರ್ವಹಣೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಹಾಗೂ ಇಂದಿನ ಯುವ ಪೀಳಿಗೆಗೆ ತಮ್ಮ ಕೆಲವು ಸಲಹೆಗಳನ್ನು ಕೂಡ ನೀಡಿದ್ದಾರೆ. ನೀವು...
Author - Shruthi Rao
ಸಿತಾರ್ ಲೋಕದ ತಾರೆ ಅನೌಷ್ಕ ಶಂಕರ್
ಸಿತಾರ್ ಎಂದಾಕ್ಷಣ ನೆನಪಾಗುವುದು ಪಂಡಿತ್ ರವಿಶಂಕರ್. ಭಾರತೀಯ ಶಾಸ್ತ್ರೀಯ ಸಂಗೀತವಾದ್ಯವಾದ ಸಿತಾರ್’ನ್ನು ಜಗತ್ತಿನ ಮೂಲೆ ಮೂಲೆಗೆ ತಲುಪಿಸಿದ್ದು ಸುಪ್ರಸಿದ್ಧ ಸಿತಾರ್ ವಾದಕ ಪಂಡಿತ್ ರವಿಶಂಕರ್. ಇಂದು ರವಿಶಂಕರ್ ಇಲ್ಲ ಆದರೆ ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಅವರ ಪುತ್ರಿ ಅನೌಷ್ಕ ಶಂಕರ್. ಅನೌಷ್ಕ ಇಂದು ಸಿತಾರ್ ಜಗತ್ತಿನಲ್ಲಿ ತಮ್ಮದೇ ಆದ...
ಈ ಅಂಕಣ ಒಂದು ರೀತಿ ರಿವಿಜನ್ ಇದ್ದ ಹಾಗೆ
ಸಮಯ ಎಂದೂ ನಿಲ್ಲುವುದಿಲ್ಲ, ಅದರ ಪಾಡಿಗೆ ಅದು ಸಾಗುತ್ತಲೇ ಇರುತ್ತದೆ. ಕೆಲವೊಮ್ಮೆ ದಿನಗಳು ಎಷ್ಟು ಬೇಗ ಉರುಳಿ ಹೋಗುತ್ತಿದೆ ಎಂದೆನಿಸುತ್ತದೆ. ಇನ್ನು ಕೆಲವೊಮ್ಮೆ ಸಮಯ ಸಾಗುತ್ತಲೇ ಇಲ್ಲವೇನೋ, ನಿಂತು ಹೋಗಿದೆಯೇನೋ ಎನ್ನುವ ಭಾವ. ದಿನಗಳು ಬೇಗ ಉರುಳುತ್ತಿದೆ ಎಂದು ಅನ್ನಿಸುತ್ತಿದೆಯಾದರೆ ಜೀವನ ಸುಗಮವಾಗಿ ಸಾಗುತ್ತಿದೆ ಎಂದರ್ಥ. ನಾವು ನೋವಿನಲ್ಲಿದ್ದಾಗ ಸಮಯ...
ಸಾವು ಸೋಲಲ್ಲ…!!
ಇಂದು ಜ್ಯಾಕ್ ಸೊಬಿಯಾಕ್ ನೆನಪಾಗುತ್ತಿದ್ದಾನೆ. ಇಂದು ಮಾತ್ರವಲ್ಲ ‘ಆಸ್ಟಿಯೋಸರ್ಕೋಮ’ ಎಂದಾಗ, ಗಿಟಾರ್’ನ್ನು ಕಂಡಾಗ, ಧೈರ್ಯ ಹಾಗೂ ಆತ್ಮವಿಶ್ವಾಸಗಳ ಮಾತುಗಳು ಬಂದಾಗೆಲ್ಲಾ ಆತ ನೆನಪಾಗುತ್ತಾನೆ. ಜ್ಯಾಕ್ ಬಗ್ಗೆ ಈ ಹಿಂದೆಯೂ ಹೇಳಿದ್ದೆ. ಕೆಲ ವ್ಯಕ್ತಿಗಳು ನಮಗೆ ಹತ್ತಿರದಿಂದ ಪರಿಚಯವಿಲ್ಲದಿದ್ದರೂ, ಮುಖಾಮುಖಿಯಾಗಿ ಭೇಟಿಯಾಗಿಲ್ಲದಿದ್ದರೂ, ಅವರೊಂದಿಗೆ ಮಾತನಾಡದಿದ್ದರೂ...
ಸವಾಲುಗಳಿಗೇ ಸವಾಲೊಡ್ದಿದ ಆರೋನ್..!
“ನೋ..ನೋ.. ನನಗೆ ನೋವಾಗುತ್ತದೆ, ಬೇಡ” ಎಂದು ಆಸ್ಪತ್ರೆಯಲ್ಲಿ ಮಲಗಿದ್ದ ಒಂಭತ್ತು ವರ್ಷದ ಹುಡುಗ ಕೂಗಾಡುತ್ತಿದ್ದ. ಡಾಕ್ಟರ್ ಹಾಗೂ ನರ್ಸ್ ಆತನ ಪಕ್ಕ ಅಸಹಾಯಕರಾಗಿ ನಿಂತಿದ್ದರು. ಆಪರೇಷನ್ ಆಗಿ ಹಲವು ದಿನ ಕಳೆದ ನಂತರ ಹೊಲಿಗೆ ಬಿಚ್ಚಲು ಪ್ರಯತ್ನಿಸುತ್ತಿದ್ದರು ಆ ಡಾಕ್ಟರ್. ಆದರೆ ಆ ಪುಟ್ಟ ಹುಡುಗ ಬಿಟ್ಟರೆ ತಾನೆ! ನೋವಾಗುವುದು ಸಹಜವೇ, ಯಾಕೆಂದರೆ...
ಕ್ಯಾನ್ಸರ್ ಕೆಲವರ ಪಾಲಿಗೆ ಅಂತ್ಯವಲ್ಲ, ಹೊಸ ಆರಂಭವಷ್ಟೇ..!
“ನಿಮಗೆ ಕ್ಯಾನ್ಸರ್ ಇದೆ” ಎಂಬ ಮೂರು ಪದಗಳನ್ನ ಕೇಳಿದಾಗ ಎಲ್ಲವೂ ಮುಗಿದೇಹೋಯಿತು ಎಂದುಕೊಂಡಿರುತ್ತೇವೆ. ಇದು ಅಂತ್ಯ ಅಷ್ಟೇ, ಇನ್ನೇನು ಉಳಿದಿಲ್ಲ ಎನಿಸುತ್ತದೆ. ಆದರೆ ನಿಜವಾಗಿಯೂ ಅದು ಅಂತ್ಯವೇ? ಕ್ಯಾನ್ಸರ್ ಎಂದರೆ ಆರಂಭ ಎನ್ನುತ್ತಾನೆ ಬಿಲ್ ಆರೋನ್! ಹೊಸ ಆರಂಭ.. ಕ್ಯಾನ್ಸರ್ ಎಂದಾಗ ಒಂದು ಹೊಸ ಬದುಕು ಆರಂಭವಾಗುತ್ತದೆ. ನಾವೆಂದೂ ಊಹಿಸಿರದ ಬದುಕು. ಒಂದರ್ಥದಲ್ಲಿ...
ಕ್ಯಾನ್ಸರ್ ಮುಕ್ತ ಬದುಕು ಆರಂಭವಾಗುವುದು ಅಡುಗೆಮನೆಯಲ್ಲಿ!
“ಕ್ಯಾನ್ಸರ್ ಮುಕ್ತ ಬದುಕು ಆರಂಭವಾಗುವುದು ನಿಮ್ಮ ಅಡುಗೆಮನೆಯಲ್ಲಿ” ಹೀಗಂತ ಹೇಳಿದ್ದು ಡೇವಿಡ್ ಸರ್ವನ್ ಶ್ರಿಬರ್. ಡೇವಿಡ್ ಒಬ್ಬ ಡಾಕ್ಟರ್ ಹಾಗೆಯೇ ಮಿದುಳು ಕ್ಯಾನ್ಸರ್ ಸರ್ವೈವರ್ ಕೂಡ ಹೌದು. ಕ್ಯಾನ್ಸರ್’ನ ನಂತರ ಡೇವಿಡ್ ಗಮನ ಹರಿಸಿದ್ದು ಆಹಾರಪದಾರ್ಥಗಳ ಮೇಲೆ. ನಾವು ತೆಗೆದುಕೊಳ್ಳವ ಆಹಾರ ಕ್ಯಾನ್ಸರ್ ಉಂಟಾಗುವುದನ್ನ ತಡೆಗಟ್ಟಬಲ್ಲದೇ, ಸರ್ವೈವರ್’ಗಳು...
ಮನಸ್ಸೆಂಬ ಮದ್ದು!!
ಈ ಮನಸ್ಸು ಅನ್ನುವುದು ಎಷ್ಟು ವಿಚಿತ್ರವಾದದ್ದೋ ಅಷ್ಟೇ ವಿಶೇಷವಾದದ್ದು ಕೂಡ ಹೌದು. ’ನೀವೇನು ಯೋಚಿಸುತ್ತೀರೋ ಅದೇ ಆಗುವಿರಿ’ ಎನ್ನುವಂತಹ ಮಾತುಗಳು, ನೆಪೊಲಿಯನ್ ಹಿಲ್’ನ “ನಮ್ಮ ಮನಸ್ಸು ಏನೇನೆಲ್ಲಾ ಗ್ರಹಿಸಬಲ್ಲದೋ, ನಂಬಬಲ್ಲದೋ ಅದನ್ನೆಲ್ಲ ಸಾಧಿಸಬಹುದು” ಎಂಬ ಮಾತುಗಳು ಅಚ್ಚರಿಯನ್ನುಂಟುಮಾಡುತ್ತದೆ. ಕೆಲವೊಮ್ಮೆ ಇದೆಲ್ಲಾ ಎಲ್ಲಿ ಸಾಧ್ಯ ಎಂಬಂತಹ ಯೋಚನೆಗಳು ಕೂಡ...
ಕ್ಯಾನ್ಸರ್‍ಗೊಂದು ಕೃತಜ್ಞತೆ..
“ನಿನಗೆ ಏನು ಅನಿಸುತ್ತೆ… ನಿನ್ನ ಬದುಕಲ್ಲಿ ಇದೆಲ್ಲ ಯಾಕೆ ಆಯ್ತು?” ಅಂತ ಕೇಳಿದಳು. “ಗೊತ್ತಿಲ್ಲ.. ಅದನ್ನ ತಿಳಿದುಕೊಳ್ಳುವ ಹಂಬಲವೂ ಇಲ್ಲ. ಆದರೆ ಒಂದಂತೂ ನಿಜ. ಅದೆಲ್ಲ ಅಗಿಲ್ಲದಿದ್ದಿದ್ದರೆ ನನ್ನ ಬದುಕು ಇಂದು ಹೀಗೆ ಇರ್ತಾ ಇರ್ಲಿಲ್ಲ. ನಾನು ಕೂಡ ಹೀಗೆ ಇರ್ತಿರ್ಲಿಲ್ಲ..” ಎಂದೆ. ಅವಳು ಮುಗಳ್ನಕ್ಕಳು. ನಿಜ.. ಕ್ಯಾನ್ಸರ್ ಆಗಿಲ್ಲದಿದ್ದಿದ್ದರೆ ನಾನು...
ಕ್ಯಾನ್ಸರ್’ನೊಂದಿಗಿನ ಹೋರಾಟ ಇನ್ನೂ ನಿಂತಿಲ್ಲ…
ಕೆಲ ದಿನಗಳ ಹಿಂದೆ ಶಾನ್ ಸ್ವಾರ್ನರ್ ಒಂದು ವೀಡಿಯೋವನ್ನು ಹಾಕಿದ್ದ. ಸದ್ಯದರಲ್ಲೆ ನಾರ್ತ್ ಪೋಲ್’ಗೆ ಹೊರಡಲಿರುವ ಶಾನ್ ಅದಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾನೆ. ಅದಕ್ಕೆ ಸಂಬಂಧಪಟ್ಟ ಹಾಗೆಯೇ ತನ್ನನ್ನ ತಾನು ತರಬೇತು ಮಾಡಿಕೊಳ್ಳುತ್ತಿದ್ದಾನೆ. ಅಂತಹ ವೀಡಿಯೋ ಒಂದನ್ನ ಎಲ್ಲರೊಂದಿಗೆ ಶೇರ್ ಮಾಡಿಕೊಂಡಿದ್ದ. ನಾನು ಯಾವಾಗಲೂ ಆತನನ್ನ ಅಚ್ಚರಿಯಿಂದ...