ಕುಮಟಾದ ಹಿರೇಗುತ್ತಿ, ಅಘನಾಶಿನಿ, ಕಿಮಾನಿ,ಮಾದನಗೇರಿ, ಐಗಳಕುರ್ವೆ, ಕಾಗಾಲ, ನುಶಿಕೋಟೆ ಅಥವಾ ಕಾರವಾರದ ದೇವಭಾಗದ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಿರುವವರಿಗೆ ಏಡಿ ಬದುಕಿನ ಅವಿಭಾಜ್ಯ ಅಂಗ. ಇಡೀ ದಿನದ ಪರದಾಟಕ್ಕೆ ವರವೆನ್ನುವಂತೆ ಒಂದೇ ಒಂದು “ನುಕ್ ಏಡಿ” ಸಿಕ್ಕರೂ ಇಲ್ಲಿನ ಕೆಲ ಯುವಕರ ಅಂದಿನ ಜೀವನ ಅಷ್ಟರ ಮಟ್ಟಿಗೆ ಪಾವನ. ತಕ್ಕಡಿಯಲ್ಲಿ ಎರಡು...
Author - Rohith Chakratheertha
ಮುಖ್ಯಮಂತ್ರಿಗಳೇ, ದಯವಿಟ್ಟು ವಾನಪ್ರಸ್ತಕ್ಕೆ ಹೊರಟು ಹೋಗಿ!
ಅಂತರ್ಜಾಲದ ಜಾಲತಾಣವೊಂದರಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದರು: ಕರ್ನಾಟಕದ ಇದುವರೆಗಿನ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಯಾರು?, ಎಂದು. ಅದಕ್ಕೆ ಉತ್ತರಿಸಿದ ಮಹನೀಯರೊಬ್ಬರು, “ಕರ್ನಾಟಕ ಕಂಡ ಇದುವರೆಗಿನ ಅಯೋಗ್ಯ ಮತ್ತು ಅಸಮರ್ಥ (ಇನ್ನೂ ಎಷ್ಟೋ ವಿಶೇಷಣಗಳನ್ನು ಬೇಕಾದರೂ ಕೊಡಿ; ಅವೆಲ್ಲ ಈ ವ್ಯಕ್ತಿಯ ಪೂರ್ಣ ವ್ಯಕ್ತಿತ್ವವನ್ನು ಹಿಡಿದಿಡುವುದಿಲ್ಲವೆಂದೇ...
ಮಿಲೇ ಸುರ್ ಮೇರಾ ತುಮ್ಹಾರಾ! ಯೇ ಸುರ್ ಬನೇ ಹಮಾರಾ!
ಅದೊಂದು ಸುಂದರ ಬಾಲ್ಯ. ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟೊಡನೆ ಧನುಷ್ಠಂಕಾರಗೊಂಡ ಬಾಣಗಳಂತೆ ಮನೆಗೋಡುತ್ತಿದ್ದ ನಾವು ತಪ್ಪದೆ ಕೇಳುತ್ತಿದ್ದ ಕಾರ್ಯಕ್ರಮವೆಂದರೆ 2:20ಕ್ಕೇನೋ ಪ್ರಸಾರವಾಗುತ್ತಿದ್ದ ಚಿಲಿಪಿಲಿ. ವಾರಕ್ಕೊಂದು ಶಾಲೆಯಂತೆ ನಮ್ಮ ಜಿಲ್ಲೆಯ ಶಾಲಾ ಮಕ್ಕಳು ನಡೆಸಿಕೊಡುತ್ತಿದ್ದ ಆ ಕಾರ್ಯಕ್ರಮ ಕೇಳಿ ನಮ್ಮ ಶಾಲೆಯವರು ಉಳಿದವರಿಗಿಂತ ಹೆಚ್ಚೋ ಕಡಿಮೆಯೋ; ನಮ್ಮ...
ಬಲ್ಲರೆಷ್ಟು ಜನ ಬೀರಬಲ್ಲನ?
ಒಮ್ಮೆ ಅಕ್ಬರ್ ಬೀರಬಲ್ಲನ ಜೊತೆ ಮಾತಾಡುತ್ತಿದ್ದಾಗ ಆಮಿಷಗಳ ಮಾತು ಬಂತಂತೆ. ಬೀರಬಲ್ಲ ಹೇಳಿದ, “ದುಡ್ಡಿಗಾಗಿ ಮನುಷ್ಯ ಏನನ್ನು ಬೇಕಾದರೂ ಮಾಡಬಲ್ಲ, ಹುಜೂರ್!”. “ಹೌದೆ? ಏನನ್ನೂ ಮಾಡಬಲ್ಲನೇ?”, ಅಕ್ಬರ್ ಮರುಪ್ರಶ್ನೆ ಹಾಕಿದ. “ಸಂಶಯವೇ ಬೇಡ” ಎಂದ ಅತ್ಯಂತ ಖಚಿತ ಧ್ವನಿಯಲ್ಲಿ ಬೀರಬಲ್ಲ. ಸರಿ, ಈ ಮಾತನ್ನು ಪರೀಕ್ಷಿಸಲೋಸುಗ...
ಸಿದ್ದರಾಮಯ್ಯನವರು ಅದೇಕೆ ಈ ಇದ್ದಿಲನ್ನು ಇನ್ನೂ ಸೆರಗಿನಲ್ಲಿ...
ಮೊದಲಿಗೆ ಈ ಕಥಾನಕವನ್ನು ವಡ್ಡರ್ಸೆ ರಘುರಾಮ ಶೆಟ್ಟರಿಂದ ಶುರು ಮಾಡೋಣ. 1984ರ ಸೆಪ್ಟೆಂಬರ್ 9ರಂದು ಮಂಗಳೂರಲ್ಲಿ “ಚಿಂತನೆಯ ಮಳೆ ಸುರಿಸಿ ಜನಶಕ್ತಿಯ ಬೆಳೆ ತೆಗೆವ ಮುಂಗಾರು” ಎಂಬ ಧ್ಯೇಯ ವಾಕ್ಯದೊಡನೆ ವಡ್ಡರ್ಸೆಯವರ ನಾಯಕತ್ವ, ಸಂಪಾದಕತ್ವದಲ್ಲಿ ಮುಂಗಾರು ದಿನಪತ್ರಿಕೆ ಶುರುವಾಯಿತು. ಅದರ ಉದ್ಘಾಟನೆ ಮಾಡಿದವರು ಆ ಕಾಲದ ಬುದ್ಧಿಜೀವಿ, ಸಾಕ್ಷಿಪ್ರಜ್ಞೆ...
ಮಾನುಷ ದಾಂಪತ್ಯಕ್ಕೆ ಪಕ್ಷಿಗಳ ಪಾಠ
ಉತ್ತರ ಕನ್ನಡದ ಮಂದಿಗೆ ಈ ಹಕ್ಕಿಯ ರೂಪಲಾವಣ್ಯಗಳನ್ನು ವಿವರಿಸಬೇಕಿಲ್ಲ. ಅಂಕೋಲಾ, ಕುಮಟೆ, ಗೋಕರ್ಣ, ಶಿರಸಿ, ಸಿದ್ದಾಪುರ, ಯಲ್ಲಾಪುರದ ಕಾಡುಗಳಲ್ಲಿ; ದಾಂಡೇಲಿಯ ದಟ್ಟಾರಣ್ಯದಲ್ಲಿ; ಅಥವಾ ಕಾಳಿ, ಬೇಡ್ತಿ, ಅಘನಾಶಿನಿ, ಶರಾವತಿಯರ ಕಣಿವೆಗಳಲ್ಲಿ ಬೆಳೆದ ವೃಕ್ಷ ಸಮೂಹಗಳಲ್ಲಿ ಕಂಡುಬರುವ ವರ್ಣಮಯ ಖಗಸಿರಿ ಇದು. ಮೊದಲ ಸಲ ಕಾಣುವವರಿಗಂತೂ ಭಯ ಬೀಳಿಸುವಷ್ಟು ಉದ್ದದ ಕೊಕ್ಕು...
ಏರ ಬಯಸುವ ನಾವೂ ಕೆಳ ಜಗ್ಗುವ ಹಾವೂ
ಆಟಗಳಲ್ಲಿ ಮೂರು ವಿಧ. ಒಂದು – ಯಾವ ಪ್ರತಿಸ್ಪರ್ಧಿಯ ರಣತಂತ್ರಕ್ಕೂ ಸಂಬಂಧ ಪಡದ ಆಟಗಳು, ಎರಡು-ಸ್ಪರ್ಧಿ ಪ್ರತಿಸ್ಪರ್ಧಿಗಳು ಪರಸ್ಪರ ರಣತಂತ್ರಗಳನ್ನು ಹೆಣೆಯುತ್ತ ಮುಂದುವರಿಸಿಕೊಂಡು ಹೋಗುವ ಆಟಗಳು, ಮೂರು – ಆಟಗಾರನ ಶ್ರಮ/ಸಾಮರ್ಥ್ಯ/ಬುದ್ಧಿವಂತಿಕೆಗಳನ್ನು ಬೇಡದ ಆಟಗಳು. ಮೊದಲನೆಯ ವರ್ಗಕ್ಕೆ ಓಟ, ಹೈಜಂಪ್, ಶಾಟ್ಪುಟ್, ಬಿಲ್ಲುಗಾರಿಕೆ, ಈಜು ಇತ್ಯಾದಿ...
ಮೇರೆ ಇರದ ಸಾಗರ, ಅಚ್ಚರಿಗಳ ಆಗರ
ನಾನು ಇದುವರೆಗೆ ಪ್ರವಾಸ ಮಾಡಿದ ಸ್ಥಳಗಳ ಪಟ್ಟಿ ಮಾಡಿದರೆ ಅರ್ಧಕ್ಕರ್ಧ ಸಿಗುವುದು ಸಮುದ್ರ ತೀರಗಳು. ಮುಂಬಯಿಯಿಂದ ಕಲಕತ್ತೆಯವರೆಗೆ, ಭಾರತಕ್ಕೆ ಹಾರ ತೊಡಿಸಿದಂತಿರುವ ತೀರದ ಬಹುತೇಕ ಎಲ್ಲ ಸ್ಥಳಗಳನ್ನೂ ಕಣ್ತುಂಬಿಕೊಂಡಿದ್ದೇನೆ. ಅಲ್ಲಿನ ಮರಳಲ್ಲಿ ಹೆಜ್ಜೆ ಗುರುತು ಮೂಡಿಸಿದ್ದೇನೆ. ಸಮುದ್ರ ಒಂದೇ, ಅಲೆಗಳೊಂದೇ ಆದರೂ ಪ್ರತಿ ತೀರವೂ ವಿಶಿಷ್ಟ, ಅನನ್ಯ. ಸಮುದ್ರ ರಾಜನ...
ಕಾಡುವ ಲಹ-ರಿಯೋ, ಮಾಯದ ನಗ-ರಿಯೋ…!
ಹದಿನೈದನೇ ಶತಮಾನದ ಕೊನೆಯ ದಶಕ. ಯುರೋಪಿನಲ್ಲಿ ಭಾರತಕ್ಕೆ ಜಲಮಾರ್ಗ ಕಂಡು ಹಿಡಿಯಲು ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳಿಗೆ ಜಿದ್ದಾಜಿದ್ದಿ ನಡೆಯುತ್ತಿದ್ದ ಹೊತ್ತು. ಇವೆರಡೂ ದೇಶಗಳು ಹೊಸ ಭೂಪ್ರದೇಶಗಳಿಗೆ ಒಟ್ಟಾಗಿ ಪ್ರವೇಶಿಸಿದರೆ ಭೂಸ್ವಾಮ್ಯಕ್ಕಾಗಿ ಅಲ್ಲೂ ಹೊಡೆದಾಟ ಮುಂದುವರಿಸಬಹುದೆಂಬ ದೂರಾಲೋಚನೆಯಿಂದ ಆಗಿನ ಪೋಪ್ 1494ರಲ್ಲಿ ಎರಡೂ ದೇಶಗಳ ನಾಯಕರನ್ನು ಕರೆದು...
ದುಡ್ಡಿಗೇ ಸೆಡ್ಡು ಹೊಡೆದಿದೆ ಈ ದೇಶ!
ಆನಂದ ಎಂದರೇನು? ದುಡ್ಡು ಎನ್ನಬಹುದು ನೀವು. ಜಗತ್ತಿನ ಅತ್ಯಂತ ಶ್ರೀಮಂತನನ್ನು ನೋಡಿದರೆ ಆತ ದಿನದ ಇಪ್ಪತ್ತ ನಾಲ್ಕೂ ಗಂಟೆ ದುಡಿಯುತ್ತ ನೂರೆಂಟು ಕೆಲಸಗಳನ್ನು ನಿರ್ವಹಿಸುತ್ತ ತನ್ನ ಸಂಪತ್ತನ್ನು ರಕ್ಷಿಸಿಕೊಳ್ಳಲು ನೂರೆಂಟು ಮಾರ್ಗಗಳನ್ನು ಹುಡುಕುತ್ತ ಹೈರಾಣಾಗಿರುತ್ತಾನೆ. ಆನಂದ ಎಂದರೆ ಅಧಿಕಾರ ಎನ್ನುತ್ತೀರಾ? ಸ್ವಲ್ಪ ನಮ್ಮ ಮೋದಿ ಸಾಹೇಬರನ್ನೋ ಅಮೆರಿಕಾ ಅಧ್ಯಕ್ಷ...