ಇದೇ ಜನವರಿ ತಿಂಗಳ ಅಷ್ಟೇನೂ ಚಳಿಯಿಲ್ಲದೆ ತುಂಬಾ ಆಹ್ಲಾದಕರವಾದ ಒಂದು ಮುಂಜಾವು…ಬೆಳ್ಳಂಬೆಳಿಗ್ಗೆಯೇ ಕೈಗಾ ನೇಚರ್ ಕ್ಲಬ್ ಹತ್ತಿರ ಜನ ಒಗ್ಗೂಡಲು ಶುರುವಾದರು. ಹೆಂಗಸರು, ಮಕ್ಕಳು ಸೇರಿ ನೋಡತ್ತಲೇ ಸುಮಾರು 50-60 ಜನರು ಸೇರಿಯಾಯಿತು…ಎಲ್ಲರೂ ಉತ್ಸಾಹಿತರಾಗಿದ್ದು ತಲೆಗೊಂದು ಟೋಪಿ, ಕಾಲಿಗೆ ಶೂ, ಬೆನ್ನಿಗೆ ಚೀಲ, ಕಣ್ಣಿಗೊಂದು ಕಪ್ಪು ಕನ್ನಡಕ.! ಕೆಲವರ...
Author - Guest Author
ಎಲ್ಲಾ ಕೊಟ್ಟ ದೇಶದ ಮೇಲೆ ಒಂದು ಹಿಡಿ ದೇಶಭಕ್ತಿಯೂ ಇಲ್ಲದಾಯಿತೇ?
ಉಮರ್ ದರಾಝ್- 22 ವರ್ಷದ ಪಾಕಿಸ್ಥಾನಿ ಯುವಕ, ಭಾರತೀಯ ಕ್ರಿಕೆಟ್ ಪಟು ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿ. ಕಳೆದ ಜನವರಿ 26ರಂದು ಅಡಿಲೇಡ್‍ನಲ್ಲಿ ಭಾರತ ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಕೊಹ್ಲಿ 90ರನ್ ಚಚ್ಚಿದ್ದರು. ಆ ನೆರವಿನಿಂದ ಭಾರತ ಜಯ ಗಳಿಸಿತ್ತೂ ಕೂಡಾ! ಅದೇ ಖುಷಿಯಲ್ಲಿ ಆ ವಿದೇಶಿ ಅಭಿಮಾನಿ ತನ್ನ ಮನೆಯಲ್ಲೇ ಭಾರತದ ಧ್ವಜವನ್ನು ಬೀಸಿ ಸಂಭ್ರಮಿಸಿದ್ದನಷ್ಟೇ...
ಇವನು
ಅದೆಷ್ಟು ಹುಡುಕಿದರೂ ಸಿಗುತ್ತಿಲ್ಲ ಕುರುಹು ಎಷ್ಟು ಆಳಕ್ಕಿಳಿದರೂ ಬರೀ ಗೊಜಲು ಗೊಜಲು ತಲೆ ಬುಡ ಏನೂ ತಿಳಿಯದು ಇಷ್ಟು ವರುಷಗಳು ಕಳೆದರೂ ಜೊತೆಯಲಿ, ಅರ್ಥವಾಗುತ್ತಿಲ್ಲ ಇವನು.1 ಒಮ್ಮೊಮ್ಮೆ ಅದೇನೋ ಹುಮ್ಮಸ್ಸು, ಅದೇನೋ ಉತ್ಸಾಹ, ಲವಲವಿಕೆ ಮತ್ತೊಮ್ಮೆ ಅದೇ ಆದ್ರತೆ, ಬೇಸರಿಕೆ, ಜಿಗುಪ್ಸೆ ಮೂಲೆಯಲಿ ಚಿಗುರೊಡೆದು ಮನದ ತುಂಬ ಹಬ್ಬುವ ಆಸೆಗಳು, ಏನೇನೋ ಕನಸುಗಳು, ವಾಸ್ತವದ...
ಅಷ್ಟಕ್ಕೂ ಸಂಶೋಧನಾ ವಿದ್ಯಾರ್ಥಿಗಳನ್ನು ಕತ್ತಲಲ್ಲಿಟ್ಟವರಾರು?
ಮೊನ್ನೆ ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದಲಿತನಲ್ಲದವನನ್ನು ದಲಿತನೆಂದು ಹುಯಿಲೆಬ್ಬಿಸಲಾಯಿತು. ಸಾವು ಬಿಡಿ, ದಲಿತನದ್ದಾದರೂ ಆಗಿರಲಿ ಇಲ್ಲವೇ ಇನ್ನಾರದ್ದಾದರೂ ಆಗಿರಲಿ ಯಾವುದೇ ಕಾರಣಕ್ಕೂ ಸಾವು ಅಪೇಕ್ಷಣೀಯವಲ್ಲ. ಆದರೆ ಒಬ್ಬ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆ, ನಮಗೆ ಒಬ್ಬ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆಯಾಗಿ ಬಾಧಿಸಲೇ ಇಲ್ಲವಲ್ಲ? ರೋಹಿತ್...
ಕೆಸರಲ್ಲೂ ಕನಸು ಮೊಗೆದಳು, ಮೊಗೆದ ಕನಸು ಕೊಳಗೇರಿಯಲ್ಲಿ ನನಸಾಗಿತ್ತು !
ನಿಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದೋ Singham Returns ನಂತಹ ಒಂದು Action Thriller ಅನ್ನು ನೋಡಬೇಕು. ಅಥವಾ ಇನ್ಯಾವುದೋ ಸ್ಲಮ್ಮಿನ ಜೀವನದ ಬಗ್ಗೆ, ಅವರ ತೊಳಲಾಟದ ಬಗ್ಗೆ ಇರುವ ಕ್ಲಾಸಿಕ್ ಸಾಕ್ಷ್ಯಚಿತ್ರವೊಂದನ್ನು ವೀಕ್ಷಿಸಬೇಕು. ಏನು ಮಾಡುತ್ತೀರಿ? ನನ್ನ ಆಯ್ಕೆಯಂತೂ ಮೊದಲನೆಯದು. ವಾವ್, ಕಪ್ಪಗಿನ ಬಟ್ಟೆಯಲ್ಲಿ, BMW ಬೈಕಿನಲ್ಲಿ ಹಾರಿಸಿ – ಹೂಂಕರಿಸಿ...
ಅಳಿಲು
ಇತ್ತೊಂದು ದೊಡ್ಡ ಮರ. ಅದರಲ್ಲಿ ಅಳಿವಿಲ್ಲ ಎಂದು ನಂಬಿದ ಅಳಿಲುಗಳ ಪುಟ್ಟ ಸಂಸಾರ. ಯಜಮಾನ ಅಳಿಲಪ್ಪ, ಯಜಮಾನಿ ಅಳಿಲಮ್ಮ. ವಸಂತ ಮಾಸದಲ್ಲಿ ಮರಗಿಡಗಳು ಚಿಗುರೊಡೆಯಲು ಇವರ ಸಂಭ್ರಮ ಹೇಳತೀರದು.ಅಳಿಲಮ್ಮನದಂತೂ ತರಾತುರಿಯ ಓಡಾಟ. ಸಣ್ಣಪುಟ್ಟ ಎಲೆ ಸಹಿತ ಎಳೆ ಕಡ್ಡಿಗಳನ್ನು ಬಾಯಲ್ಲಿ ಮುರಿದು ಮರದ ಟೊಂಗೆಯ ಮಧ್ಯೆ ರಾಶಿ ಹಾಕಿ ಕುಣಿಯುತ್ತಾ,ಚಿಕ್ಕ ಚೊಕ್ಕವಾಗಿ ಗೂಡು ಕಟ್ಟುವಳು...
ಕಿತ್ತೂರ’ರ ಗಯ್ಯಾಳಿಗಳು
ಕಳೆದ ಕೆಲವು ವರುಷದ ಕನ್ನಡ ಸಿನಿಮಾದಲ್ಲಿ ನೋಡಿದ ಒಂದೆರಡು ಪಾತ್ರಗಳು ಸಿಕ್ಕಾಪಟ್ಟೆ ಕಾಡುತ್ತಿವೆ.”ರಂಗಿತರಂಗ”ದ ಅಂಗಾರ,”ಉಳಿದವರು ಕಂಡಂತೆ”ಯ ರಿಚಿ.ಇವೆರಡು ಪಾತ್ರಗಳ ಜೊತೆ ಇನ್ನೇರಡು ಪಾತ್ರಗಳು ಇವೆ.ಪುಸ್ತಕದಲ್ಲಿ ಓದಿದ್ದ ಆ ಪಾತ್ರಗಳು ,ಮುಂದೆ ಕನ್ನಡ ಸಿನಿಮಾದಲ್ಲೋ ಬಂದು ಕಾಡುತ್ತವೆ.ಅಗ್ನಿ ಶ್ರೀಧರ್ ಅವರ ಕಾದಂಬರಿ ಆಧಾರಿತ,ಸುಮನ್...
ಉತ್ತರ ಕೊರಿಯಾ ಎ೦ಬ ದೇಶದ ದುರ೦ತ
ಅಮೇರಿಕಾ ಮತ್ತು ರಷ್ಯಾ ಜಗತ್ತಿನ ಪ್ರಮುಖ ರಾಷ್ಟ್ರಗಳು. ಕಮ್ಯುನಿಸ್ಟ್ ಸ೦ಪ್ರದಾಯದ ರಷ್ಯಾಕ್ಕೆ ಮತ್ತು ಬ೦ಡವಾಳಶಾಹಿ ಅಮೇರಿಕಾಗೆ ಮೊದಲಿನಿಂದಲೂ ಶೀತಲ ಸಮರವಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಎರಡೂ ದೇಶಗಳು ತಮ್ಮ ದ್ವೇಷವನ್ನು ತಮ್ಮೊಳಗೆ ಇಟ್ಟುಕೊಳ್ಳದೆ, ಸಾಂಕ್ರಾಮಿಕ ರೋಗದ ತರಹ ಇಡೀ ಜಗತ್ತಿಗೆ ಹರಡುತ್ತಿರುವುದು ಒಂದು ಘೋರ ಕೃತ್ಯವೆಂದು ಹೇಳಬಹುದು. ಹೀಗೆ...
ನಾ ಕಂಡ ನಿಜವಾದ ದೇವರು
ತಂದೆ ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎನ್ನುತ್ತಾರೆ ಆದರೆ ಎಷ್ಟು ಜನ ಮಕ್ಕಳು ತಮ್ಮ ತಂದೆ-ತಾಯಿಯನ್ನು ದೇವರ ರೀತಿ ಪೂಜಿಸುತ್ತಾರೆ? ಪೂಜಿಸುವುದು ಪಕ್ಕದಲ್ಲಿರಲಿ, ಕಡೇ ಪಕ್ಷ ವಯಸ್ಸಾದ ಮೆಲೆ ಅವರ ಹಾರೈಕೆಯನ್ನು ಕೂಡ ಮಾಡುವುದಿಲ್ಲ. ಅದಕ್ಕೇ ಇಂದಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು. ಆದರೇ ಪೋಷಕರು ಮಾತ್ರ ತಮ್ಮ ಮಕ್ಕಳನ್ನು ದೇವರಿಗಿಂತ...
ಬಿಸಿಯೂಟ
ಹಸಿದ ಕಂಗಳ ನೋಟ ಮುಗಿಸಿ ಬೆಳಗಿನ ಪಾಠ ಕಾದು ನಿಂತಿರೆ ತನ್ನ ಸರತಿಗೆಂದು ಬಿಸಿಯ ಅಗುಳಿನ ಊಟ ಖಾರ ಪಲ್ಲೆಯ ಕೂಡಿ ಪುಟ್ಟ ಕೈಬಟ್ಟಲ ತುಂಬಿತೆ ಬೆಂದು ? || ಸಮತೆ ವಸ್ತ್ರದ ಹಂಗು ಕಾಲ ಚಪ್ಪಲಿ ಗುಂಗು ಮರೆತು ನಿಂತಿರೆ ಸಾಲು ಹೊಟ್ಟೆಗಾಗಿ ತಿನ್ನೆ ವಿಷವಾಗಿಯೋ ಬಿದ್ದು ಬೆಂದರು ಸತ್ತು ಆಸೆ ಹಬೆಯಾಡಿದೆ ಬಿಸಿಯೂಟಕಾಗಿ || ಕಾದಿರುವ...