ಮಂಕುತಿಮ್ಮನ ಕಗ್ಗ ೦೬೫. ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ | ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ || ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ | ಶಾಸ್ತ್ರಿತನದಿಂದಲ್ಲ – ಮಂಕುತಿಮ್ಮ || ೦೬೫ || ಪುಸ್ತಕದ ಬದನೆಕಾಯಿಯ ಜ್ಞಾನಕ್ಕು, ಅನುಭವಸಿದ್ದ ಜ್ಞಾನಕ್ಕು ನಡುವೆಯಿರುವ ಅಂತರವನ್ನು ಬಿಂಬಿಸುವ ಈ ಪದ್ಯ ಬರಿ ಓದು ಬರಹ ಕಲಿತು, ವಿದ್ಯಾಭ್ಯಾಸ ಮಾಡಿ...
Author - Nagesha MN
ಬತ್ತ ಕುಟ್ಟಿದರಕ್ಕಿ, ಚಿತ್ತ ಕುಟ್ಟಿದರೇ ತತ್ತ್ವ !
ಮಂಕುತಿಮ್ಮನ ಕಗ್ಗ ೦೬೪. ಚಿತ್ತದನುಭವ ಭಾವ ಸಂಭಾವನೆಗಳೆಲ್ಲ | ಬತ್ತವದನು ವಿಚಾರಯುಕ್ತಿಗಳು ಕುಟ್ಟೆ || ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ | ನಿತ್ಯ ಭೋಜನ ನಮಗೆ – ಮಂಕುತಿಮ್ಮ || ೦೬೪ || ನಮ್ಮ ಮನಸಿನ ಅನುಭವಗಳು, ಅದರಲ್ಲುಂಟಾಗುವ ಭಾವಗಳ ಫಲಿತವೆಲ್ಲ ಒಂದು ರೀತಿ ನಾವೆ ನಮಗಿತ್ತ ಸಂಭಾವನೆಯ ಹಾಗೆ. ಆ ಭಾವಾನುಭವಗಳೆಲ್ಲ ಅಕ್ಕಿಯ ಮೂಲರೂಪವಾದ...
ಬಿಡು ಒರಟು ನರಭಾಷೆ, ಆಲಿಸೊಳಗಿನ ಮಾತು ಕೂಸೇ !
ಮಂಕುತಿಮ್ಮನ ಕಗ್ಗ ಟಿಪ್ಪಣಿ ೬೩. ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು ? | ಅರಿಯದದು ನಮ್ಮೆದೆಯ ಭಾವಗಳನೊರೆಯ || ಪರಮಾನುಭಾವಗಳುಲಿಯನುಭವಿಗಳೊಳಕಿವಿಗೆ | ಒರಟುಯಾನವೊ ಭಾಷೆ – ಮಂಕುತಿಮ್ಮ || ೬೩ || ಮಾನಸ ಸರೋವರ ಕನ್ನಡ ಚಿತ್ರದ ಮಧುರವಾದ ‘ಹಾಡು ಹಳೆಯದಾದರೇನು ಭಾವ ನವನವೀನ, ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ’ ಸಾಲುಗಳನ್ನು ನಾವೆಲ್ಲಾ...
ಹೊರಗಿನದೆಲ್ಲವನ್ನೂ ಗೆದ್ದೇ, ನಿನ್ನೊಳಗಿನ ಕಥೆಯೇನಪ್ಪಾ ?
ಮಂಕುತಿಮ್ಮನ ಕಗ್ಗ ೬೨. ಭೌತವಿಜ್ಞಾನಿ ರವಿತಾರೆಧರೆಗಳ ಚಲನ | ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ || ಪ್ರೀತಿರೋಷಗಳನವನಳೆವನೇನ್ ? ಅವ್ಯಕ್ತ | ಚೇತನವನರಿವನೇಂ ? – ಮಂಕುತಿಮ್ಮ || ೬೨ || ಕಗ್ಗದ ಹಲವು ಪದ್ಯಗಳಂತೆ ಇಲ್ಲಿಯೂ ಮೊದಲೆರಡು ಸಾಲುಗಳು ಭೌತಿಕ ಜಗಕ್ಕೆ ಸಂಬಂಧಿಸಿದ್ದರೆ, ಕೊನೆಯೆರಡು ಸಾಲುಗಳು ಅಭೌತಿಕ ಸ್ವರೂಪಕ್ಕೆ ಕೊಂಡಿ ಹಾಕುತ್ತವೆ. ಏನೆಲ್ಲಾ...
೬೧. ಒಳಗ್ಹೊರಗಿನ ದನಿಯದ್ವೈತ, ಪರಬೊಮ್ಮವದಾಗಿ ಪ್ರತ್ಯಕ್ಷ !
ನಕ್ಷತ್ರಮಂಡಲದಿನಾಚೆಯಿಂದೊಂದು ದನಿ | ವಕ್ಷೋಗುಹಾಂತರದಿನೊಂದು ದನಿಯಿಂತೀ || ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ | ಪ್ರೇಕ್ಷೆ ಪರಬೊಮ್ಮನದು – ಮಂಕುತಿಮ್ಮ || ೬೧ || ಮೊದಲಿನ ಹಲವಾರು ಪದ್ಯಗಳಲ್ಲಿ ಪರಬ್ರಹ್ಮದ ಇರುವಿಕೆ, ಸ್ವರೂಪದ ಕುರಿತಾದ ಪ್ರಶ್ನೆ-ಟೀಕೆಯನ್ನು ಹರಿಸಿದ್ದ ಕವಿ ಮನ ಬಹುಶಃ ಕಾಲ ಕಳೆದಂತೆಲ್ಲ ಅನುಭವದ ಮೂಸೆಯಡಿ ಪಕ್ವಗೊಂಡೊ, ಜಿಜ್ಞಾಸೆಯ...
೬೦. ಜಗವೊಂದೆ ಬೊಮ್ಮನ ಶ್ವಾಸ, ದೇಶ-ಕಾಲ ಮನುಕುಲ ವಿನ್ಯಾಸ..
ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ | ಕಾಶಿಯಾ ಶಾಸ್ತ್ರಗಳನಾಕ್ಸ್ ಫರ್ಡಿನವರು || ದೇಶಕಾಲವಿಭಾಗ ಮನದ ರಾಜ್ಯದೊಳಿರದು | ಶ್ವಾಸವದು ಬೊಮ್ಮನ ದು – ಮಂಕುತಿಮ್ಮ || ೬೦ || ಜ್ಞಾನಕ್ಕೆ ದೇಶ, ಕಾಲಗಳ ಸೀಮೆಯಾಗಲಿ, ಗಡಿಯಾಗಲಿ ಇಲ್ಲವೆನ್ನುವುದನ್ನು ಪ್ರತಿಬಿಂಬಿಸುವ ಈ ಪದ್ಯ ಜ್ಞಾನಾರ್ಜನೆಯ ಪ್ರಕ್ರಿಯೆ ಪುರಾತನ ಕಾಲದಿಂದಲು ಜಗದೆಲ್ಲೆಡೆ ಹರಡಿಕೊಂಡಿರುವ ಬಗೆಯತ್ತ...
ದೈವದದ್ಭುತದರಿವು, ಮನುಜ ಮಹನೀಯತೆಯಲಿದೆ ಸುಳಿವು !
ಮಂಕುತಿಮ್ಮನ ಕಗ್ಗ ೫೯ ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ | ಮನಗಾಣಿಸಲು ನಿನಗೆ ದೈವದದ್ಬುತವ ? || ಮನುಜರೊಳಗಾಗಾಗ ತೋರ್ಪ ಮಹನೀಯ ಗುಣ | ವನುವಾದ ಬೊಮ್ಮನದು – ಮಂಕುತಿಮ್ಮ || ೫೯ || ಇದಂತು ದೇವರ ಮಹಿಮೆಯನ್ನು ನಿರ್ಯೋಚನೆಯಿಂದ ಒಪ್ಪಿಕೊಂಡ ಮನಸೊಂದು ಆಡಿದ ಮಾತಿನಂತಿದೆ. ದೈವದ ಅದ್ಭುತ ಶಕ್ತಿಯ ನಿರೂಪಣೆಗೆ, ನಂಬಿಕೆ ಬರುವುದಕ್ಕೆ, ಮನಗಾಣಿಸುವುದಕ್ಕೆ...
೫೮. ಸೌಮ್ಯ-ರೌದ್ರ ಕೆಳೆಕೂಟ,ಬೆಚ್ಚಿ ಬೆರಗಾಗೋ ಮನದೋಟ..!
ಮಲೆಕಣಿವೆಗಳ ಬೆರಗು ಪ್ರಕೃತಿ ಕೋಪದ ಗುಡುಗು | ಕೆಳೆಯೊಲವು ನಲ್ಲೆಯ ವಿಯೋಗವಿಂತಹವು || ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ | ನೊಳದನಿಯದೊಂದರಿಂ – ಮಂಕುತಿಮ್ಮ || ೫೮ || ಪ್ರಕೃತಿಯ ವೈವಿಧ್ಯಮಯ ರೂಪಗಳು ಮನದಲ್ಲುಂಟು ಮಾಡುವ ಪ್ರಭಾವದ ಮತ್ತೊಂದು ಚಿತ್ರಣ ಈ ಕಗ್ಗದಲ್ಲಿ ಕಾಣುತ್ತದೆ. ಆ ನಿಸರ್ಗ ಲೀಲೆಯ ಪರಿಣಾಮ ಒಳಿತೆ ಆಗಲಿ ಕೆಡುಕೆ ಆಗಲಿ – ಅದರ...
ಸುತ್ತಮುತ್ತಲ ಸಕಲ, ಅಂತರಂಗದಿ ಕಟ್ಟುವ ಜಾಲ !
ಮಂಕುತಿಮ್ಮನ ಕಗ್ಗ ೫೭ ಆಗುಂಬೆಯಸ್ತಮಯ ದ್ರೋಣಪರ್ವತದುದಯ | ತ್ಯಾಗರಾಜನ ಗಾನ ವಾಲ್ಮೀಕಿ ಕವನ || ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ | ಯೋಗಪುಲಕಾಂಕುರವ ? – ಮಂಕುತಿಮ್ಮ || ೫೭ || ಮಾನವನಲ್ಲಿ ಪುಳಕ ಹುಟ್ಟಿಸುವ ಅನುಭೂತಿ ಹಲವಾರು ವಿಧದಲ್ಲಿ, ಹಲವಾರು ಮಾರ್ಗ-ವಿಧಾನಗಳ ಮೂಲಕ ಸಂಭವಿಸುವಂತದ್ದು. ಅದನ್ನು ‘ಹೀಗೇ’ ಎಂದು ನಿರ್ದೇಶಿಸಿ, ನಿಯಂತ್ರಿಸಿ...
ತ್ರಿವಳಿಗಳ ಹಾವಳಿ ಸಂತೆ – ಸಂತ ಹೃದಯದ ತಾಕಲಾಟ..
ಮಂಕುತಿಮ್ಮನ ಕಗ್ಗ ೫೬ ಮೇಲಿಂದ ನಕ್ಷತ್ರ ಜಯಘೋಷ ಸುತ್ತಣಿಂ | ಭೂಲೋಕದರಚು ಕೆಳಗಿಂ ಮೂಳೆಯಳುವು || ಕೇಳಬರುತೀ ಮೂರು ಕೂಗೆನ್ನ ಹೃದಯದಲಿ | ಮೇಳಯಿಸುತಿದೆ ಸಂತೆ – ಮಂಕುತಿಮ್ಮ || ೫೬|| ಈ ಮಾನವ ಜೀವನದಲ್ಲಿ ಕಾಡುವ ದ್ವಂದ್ವಗಳ ಪರಿ ಒಂದು ರೀತಿಯದಲ್ಲ. ಸುತ್ತಲಿಂದ ಬರುವ ಸಂಕೇತಗಳು ಗೊಂದಲವನ್ನು ಪರಿಹರಿಸುವುದಕ್ಕಿಂತ ಇನ್ನಷ್ಟು ಕ್ಲಿಷ್ಟಗೊಳಿಸುವುದೆ ಹೆಚ್ಚು...