ಮಂಕುತಿಮ್ಮನ ಕಗ್ಗ – ಟಿಪ್ಪಣಿ ೫೫. ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ ? | ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ || ನರನುಮಂತೆಯೇ ಮನಸಿನನುಭವದಿ ಕಾಣುವನು | ಪರಸತ್ತ್ವಮಹಿಮೆಯನು – ಮಂಕುತಿಮ್ಮ || ೫೫ || ವೈಜ್ಞಾನಿಕ ತಳಹದಿಯಾಧಾರಿತ ಆಧುನಿಕ ಮನೋಭಾವದ ಹಿಂದೆ ನಡೆದಿರುವ ಜಗದಲ್ಲಿ ಪ್ರತಿಯೊಂದಕ್ಕೂ ನೇರ, ಅಲ್ಲಗಳೆಯಲಾಗದ ಸಾಕ್ಷ್ಯ ಸಂಬಂಧವಿರಬೇಕು...
Author - Nagesha MN
ತಿಳಿ ಮೂಢ ಮನವೇ, ಸತ್ಯದಸ್ತಿತ್ವವಿರಬಹುದು ನಡು ಹಾದಿಯಲ್ಲೂ..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೪ ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ | ಸಿಲುಕದೆಮ್ಮಯ ತರ್ಕ ಕರ್ಕಶಾಂಕುಶಕೆ || ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ | ತಿಳಿಮನದೆ ನೋಳ್ಪರ್ಗೆ – ಮಂಕುತಿಮ್ಮ || ೦೫೪ || ನಾವು ಕಾಣುವ, ಒಪ್ಪಬಯಸುವ ಪ್ರತಿಯೊಂದನ್ನು ತರ್ಕಬದ್ಧ, ವೈಜ್ಞಾನಿಕ, ಕಾರ್ಯ-ಕಾರಣ ಸಂಬಂಧಿ ಮಸೂರದಡಿ ಪರಿಶೀಲಿಸಿ ಅದರ ನಿಖರತೆಯನ್ನು...
ಗುಣದ ಕಾರಣ ಮೂಲ, ವಿಸ್ಮಯದ ಸಂಕೀರ್ಣ ಜಾಲ..!
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೩ ತೃಣಕೆ ಹಸಿರೆಲ್ಲಿಯದು ? ಬೇರಿನದೆ ? ಮಣ್ಣಿನದೆ ? | ದಿನಪನದೆ ? ಚಂದ್ರನದೆ ? ನೀರಿನದೆ ? ನಿನದೆ ? || ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ ? ನೋಡು | ಗುಣಕೆ ಕಾರಣವೊಂದೆ ? – ಮಂಕುತಿಮ್ಮ || ೦೫೩ || ಹೊರನೋಟಕ್ಕೆ ಸರಳವೆಂದು ಕಾಣುವಲ್ಲು ಇರುವ ಅವ್ಯಕ್ತ ಸಂಕೀರ್ಣತೆಯನ್ನು ಈ ಪದ್ಯ ಸೊಗಸಾಗಿ ವಿವರಿಸುತ್ತದೆ –...
ಅವರವರ ಭಾವಕ್ಕೆ ಅವರವರ ಭಕುತಿಗೆ
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೨ ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ | ಮುಗಿವ ತರಣಿಯ ರಕ್ತ ಹಿತವೆನಿಸದೇಕೋ ! || ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ | ಬಗೆವೆನ್ನ ಮನಸಿನೊಳೊ ? – ಮಂಕುತಿಮ್ಮ || ೦೫೨ || ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ | ನೀಲಾಕಾಶದ ಮುದವೀವ ಭಾವವನ್ನು ಯಾರು ತಾನೆ ಅಲ್ಲಗಳೆಯಲಾದೀತು? ಅದು ಎಲ್ಲರಿಗು ಹಿತವೆನಿಸುವ...
೦೫೧. ಬಾಹ್ಯಾಡಂಬರದ ಬೆಡಗಿನ ಬಿಗಿ ಕಟ್ಟಿನಲಿ ಸಿಕ್ಕಿಬಿದ್ದ ಜೀವದ ಪಾಡು..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೧: ಸೆಳೆಯುತಿರ್ಪುವದೊಂದು ಹೊರಬೆಡಗಿನೆಳೆಗಳೆ | ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು || ಎಳೆದಾಟವೇಂ ಋಣಾಕರ್ಷಣೆಯೋ ? ಸೃಷ್ಟಿ ವಿಧಿ | ಯೊಳತಂತ್ರವೋ ? ನೋಡು – ಮಂಕುತಿಮ್ಮ || ೦೫೧ || ನಾವೆಲ್ಲ ಅಸಾಧಾರಣ ಅಂತಃಶಕ್ತಿಯ ವರ ಪಡೆದು ಭುವಿಗಿಳಿದ ಜೀವಿಗಳೆ.. ಆದರೆ, ನಮ್ಮೊಳಗಿನ ಅದ್ಭುತ ಸಾಮರ್ಥ್ಯವನ್ನೆಲ್ಲ ಕಬಳಿಸಿ...
ತರ್ಕಾತೀತ-ಗ್ರಂಥಾತೀತ ಅನುಭವ ನೆಲೆಯಾಗಲಾರದೆ ಸತ್ಯಕೆ ?
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೦ ____________________________________________________________ ಮನೆಯೆಲ್ಲಿ ಸತ್ಯಕ್ಕೆ ? ಶ್ರುತಿ ತರ್ಕ ಮಾತ್ರದೊಳೆ ? ಅನುಭವಮುಮದರೊಂದು ನೆಲೆಯಾಗದಿಹುದೇಂ? || ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ | ಅಣಕಿಪುವು ತರ್ಕವನು – ಮಂಕುತಿಮ್ಮ || ೦೫೦ || ಯಾವುದು ಸತ್ಯದ ನೆಲೆಗಟ್ಟು ? ಯಾವುದನ್ನು ಮಾತ್ರ...
ಪುಸ್ತಕದ ಬದನೆ, ಮಸ್ತಕಕೆ ಸೇತುವೆಯಾದರೆ ಸಾಕೆ?
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೯ ಪಂಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕೆ | ಖಂಡಿತದಿ ಸೇತುವೆಯ ಕಟ್ಟುವೊಡೆ ನೀವು || ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ ? | ದಂಡವದನುಳಿದ ನುಡಿ – ಮಂಕುತಿಮ್ಮ || ೦೪೯ || ಸುತ್ತಲ ಜಗಸೃಷ್ಟಿಯ ನಿಗೂಢತೆಯ ಅರೆಬರೆ ತಿಳುವಳಿಕೆ, ಅದನ್ನು ಮೂಗಿನ ನೇರಕ್ಕೆ ಬಿಂಬಿಸಿಕೊಂಡು ಮತ್ತಷ್ಟು ಸಂಕೀರ್ಣವಾಗಿಸುವ ಜನ ಸಮೂಹ...
೦೪೮. ಒಂದು ಮುಷ್ಠಿ ತ್ರಾಸು, ಸಮಷ್ಟಿ ಬೆರೆತರೆ ಲೇಸು..!
ಒಂದಿಹುದುಪಾಯವೋರೊರ್ವನರೆಗಣ್ಣುಗಳು | ಮೊಂದೊಂದು ಸತ್ಯಾಂಶಕಿರಣಗಳ ಪಿಡಿದು || ಒಂದುಗೂಡಿದೊಡವರ್ಗಳರಿವನೆಲ್ಲವನಾಗ | ಮುಂದು ಸಾಗುವೆವಿನಿತು – ಮಂಕುತಿಮ್ಮ || ೦೪೮ || ಈ ಪದ್ಯವು ಹಿಂದಿನ ಪದ್ಯದ ಮುಂದಿನ ಭಾಗವೆನ್ನಬಹುದು. ಅಲ್ಲಿ ಅರೆಗಣ್ಣಿನ ಪ್ರಸ್ತಾಪವಾಗಿ ಅದರಿಂದಾದ ಕುಂದು ಕೊರತೆಯನ್ನು ಎತ್ತಿ ತೋರಿಸುವ ಪ್ರಧಾನ ಆಶಯವಾಗಿದ್ದರೆ, ಇಲ್ಲಿ ಮನುಜ ಕುಲ ಅದನ್ನು...
೦೪೭. ಕೈಯ ಹಕ್ಕಿಯ ಬಿಟ್ಟು, ಪೊದೆಯ ಹಕ್ಕಿಗೆ ಗುರಿಯಿಟ್ಟಂತೆ..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೭ ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? | ಅರೆಬೆಳಕು ಧರೆಯೊಳೆಂದೊರಲಿ ಸುಖವೇನು ? || ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ | ಪರಿಕಿಸಿದೊಡದು ಲಾಭ – ಮಂಕುತಿಮ್ಮ || ೦೪೭ || ಮೊದಲಿನೆರಡು ಸಾಲುಗಳಲ್ಲಿ ಸರ್ವೇ ಸಾಧಾರಣವಾಗಿ ಕಾಣಿಸುವ ಮನುಜ ಪ್ರವೃತ್ತಿ ಹೇಗೆ ಬಿಂಬಿತವಾಗಿದೆ ನೋಡಿ. ನಾವಂದುಕೊಂಡಂತೆ ನಡೆಯದ ಪ್ರತಿ...
ಬೀದಿ ಬತ್ತಲಿ ಅರಸಿ, ವರಿಸುವರಿಲ್ಲ ಜಗದೆ..!
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೬ ಇರಲಿ ಜೀವರಹಸ್ಯವರೆಪರದೆಯೊಳಗಡಗಿ | ಅರಸಿ ವರಿಸುವರಾರು ಬೀದಿಬತ್ತಲಿಯ ? || ಅರಳಿಪುದದಡಗಿರ್ದೊಡಾಗ ನಮ್ಮೆದೆಗಣ್ಣ | ಸುರಸತೆಯ ಕುತುಕದಿಂ – ಮಂಕುತಿಮ್ಮ || ೦೪೬ || ತನ್ನರಿವಿನಳತೆಗೆ ಸಿಗದ, ಏನೆಲ್ಲಾ ಮಾಡಿಯೂ ಹಸ್ತಗತವಾಗದ ಸೃಷ್ಟಿಯ (ಜೀವರಹಸ್ಯದ) ಗುಟ್ಟಿನ ಪರಿಗೆ ಬೇಸತ್ತು ರೋಸೆದ್ದು ಹೋದ ಕವಿಮನ ಇಲ್ಲಿ ತಲುಪುವ...