ಬೆಳಗ್ಗೆ ಹತ್ತು ಗಂಟೆ ಆಗುತ್ತಿದ್ದಂತೆ ಸರಕಾರಿ ಕಚೇರಿಗಳ ಹಿಂದೆ, ಮುಂದೆಲ್ಲ ಬ್ರೋಕರುಗಳು ಎಡತಾಕುತ್ತಾರೆ. ಕೆಲವರಿಗೆ ನೂರು ರೂಪಾಯಿ ಕೊಟ್ಟರೂ ಸಾಕು! ನೀವೇನೂ ಮಾಡಬೇಡಿ, ……. ರೂಪಾಯಿ ಕೊಡಿ, ಸಣ್ಣ ಪುಟ್ಟ ಕೆಲಸ ಅಲ್ಲವಾ, ಚಿಂತೆ ಮಾಡಬೇಡಿ. ಓ ಅಲ್ಲಿ ಕುಳಿತುಕೊಳ್ಳಿ…ಅರ್ಧ ಗಂಟೆಗೊಳಗೆ ನಿಮ್ಮ ಕೆಲಸ ರೆಡಿ! ಇಂಥ ಮಾತುಗಳು ಸರಕಾರಿ ಕಚೇರಿಯ ಅಕ್ಕಪಕ್ಕದಿಂದ...
Author - Harish mambady
ಡಿಜಿಟಲ್ ಕ್ರಾಂತಿಯೂ, ಮಾನವ ಸಂಬಂಧವೂ
ಕಾರ್ಡ್ ಹಾಕಿ ಸ್ವೈಪ್ ಮಾಡುವ ಜಗತ್ತಿನ ಮಧ್ಯೆಯೇ ಚಿಲ್ಲರೆ ಹಣಕ್ಕಾಗಿ ಕದನಕ್ಕಿಳಿಯುವವರೂ ಇದ್ದಾರೆ ಬೆಂಗಳೂರಿನಲ್ಲಿ ಏನೂ ತೊಂದರೆ ಇಲ್ಲ, ಕಾರ್ಡು ಹಾಕೋದು, ಸ್ವೈಪ್ ಮಾಡೋದು. ಮೊಬೈಲ್ ಇದ್ದರೆ ಆಟೋದವರೂ ಏಮಾರಿಸುವ ಪ್ರಶ್ನೆಯೇ ಇಲ್ಲ. ಎಲ್ಲವೂ ಡಿಜಿಟಲ್. ಹೀಗೆಂದು ಸ್ನೇಹಿತ ಹೇಳಿದಾಗ ಹೌದಲ್ವ, ನಾವು ಎಷ್ಟು ವೇಗವಾಗಿ ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿದ್ದೇವೆ ಎಂದು...
ಜನಸಾಮಾನ್ಯ ನಡೆಯೋದು ಬೇಡ್ವೇ?
ಓ ಅಲ್ಲಿ ಬಲಕ್ಕೆ ತಿರುಗಿ. ಅಲ್ಲೇ ಒಂದು ಬೋರ್ಡು ಕಾಣಿಸುತ್ತದೆ. ಸಿಟಿ ಬ್ಯಾಂಕಿದ್ದು. ಅದರ ಪಕ್ಕದಲ್ಲೇ ಎಡಕ್ಕೆ ತಿರುಗಿ. ಹಾಗೆ ಸರ್ತ ಬನ್ನಿ. ಅಲ್ಲೇ ಇದೆ ನಮ್ಮ ಆಫೀಸು…. ಹೀಗೆ ಸಾಗುತ್ತದೆ ದೂರವಾಣಿಯಲ್ಲಿ ದಾರಿ ಹೇಳುವ ಪರಿ. ಬೆಳೆದ ಬೆಂಗಳೂರು, ಬೆಳೆಯುತ್ತಿರುವ ಮಂಗಳೂರು, ಬೆಳೆಯುವ ಹುಮ್ಮಸ್ಸಿನಲ್ಲಿರುವ ಬಂಟ್ವಾಳದಂಥ ಮೆಟ್ರೋ, ಮಹಾನಗರ, ನಗರದಲ್ಲಿ ನಿಮ್ಮ ಅಥವಾ...
ದಿಲ್ಲಿ ಹೊಗೆ ಹಳ್ಳಿಗೂ ಬಂದೀತು
ಇದು ಅಚ್ಚರಿಯೇನಲ್ಲ. ಎಲ್ಲರಿಗೂ ಗೊತ್ತಿರುವ ಸತ್ಯ. ವಿಶ್ವದ ವಾಯುಮಾಲಿನ್ಯಕ್ಕೆ ಭಾರತದ ಕೊಡುಗೆಯೂ ಗಣನೀಯ. ಇದಕ್ಕೆ ರಾಷ್ಟ್ರ ರಾಜಧಾನಿಯೂ “ಅತ್ಯುತ್ತಮ’’ ಕೊಡುಗೆ ನೀಡಿದೆ. ಮೊನ್ನೆ ಎಲ್ಲ ಪತ್ರಿಕೆ, ಟಿ.ವಿ.ಗಳಲ್ಲೂ ರಾಜಧಾನಿ ನವದೆಹಲಿಯಲ್ಲಿ ಹೊಗೆಯಂಥ ಧೂಳು ಎದ್ದದ್ದೇ ಸುದ್ದಿ. ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ ಎಂಬ ಮಾತು ಹಳತಾಯಿತು. ಈಗ ಬೆಂಕಿ ಇಲ್ಲದಿದ್ದರೂ ಹೊಗೆ...
ಸ್ಟೀಲ್ ಸಂಕವೂ, ಕಚ್ಚಾ ರಸ್ತೆಯೂ
ಲೆಕ್ಕ ಮಾಡಲು ಕಷ್ಟವಾಗುವಷ್ಟು ಕೋಟಿ ರೂಪಾಯಿ! ಬೆಂಗಳೂರು ಮಹಾನಗರದ ಬಸವೇಶ್ವರ ಸರ್ಕಲ್’ನಿಂದಹೆಬ್ಬಾಳದವರೆಗೆ ದೊಡ್ಡ ದೊಡ್ಡ ಮನುಷ್ಯರು ಓಡಾಡಲುಸರಕಾರ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆಗೆಬಿಡಿಎ ನಿಗದಿಪಡಿಸಿದ ಮೊತ್ತ ದಿನದಿಂದ ದಿನಕ್ಕೆಜಾಸ್ತಿಯಾಗುತ್ತಲೇ ಹೋಗುತ್ತಿದೆ. ಇದೀಗ ಹೈಕೋರ್ಟು ಇಂಥಪ್ರಯತ್ನಕ್ಕೆ ತಡೆ ಹಾಕಿದೆ. ಇಲ್ಲವಾದರೆ ಯಾವುದೇ...
ಒಂಟಿ ಮನೆಯ ಒಬ್ಬಂಟಿ ಬದುಕು
ದೊಡ್ಡಗುಡ್ಡೆ ಸಮೀಪದ ಸಣ್ಣಕಾಡಿನ ಪಕ್ಕ ಸೋಮಣ್ಣನ ವಿಶಾಲವಾದ ಮನೆಯಲ್ಲೀಗ ಯಾರಿದ್ದಾರೆ? ಬೆಳಗ್ಗೆ ನೋಡಿದರೂ ಅಷ್ಟೇ, ರಾತ್ರಿ ನೋಡಿದರೂ ಅಷ್ಟೇ, ಸೋಮಣ್ಣ ಮತ್ತು ಅವರ ಪತ್ನಿ ಜಾನಕಮ್ಮ ಇಬ್ಬರೇ ಗಂಜಿ ಬೇಯಿಸಿ ಉಣ್ಣುತ್ತಾರೆ. ಹಾಗಾದರೆ ಗಂಡ, ಹೆಂಡತಿಗೆ ಗತಿಯೇ ಇಲ್ಲವಾಯಿತೇ? ಅಲ್ಲವೇ ಅಲ್ಲ, ಸೋಮಣ್ಣರಿಗೆ ಮೂರು ಮಕ್ಕಳು. ಒಬ್ಬ ಗಲ್ಫ್’ನಲ್ಲಿದ್ದಾನೆ. ಮತ್ತೋರ್ವ ಬೊಂಬಾಯಿ...
ಕ್ಲೀನ್ ಮನಸ್ಸು, ಸ್ವಚ್ಛ ಭಾರತ
‘ಸಾರ್…..ದಯವಿಟ್ಟು ಅಲ್ಲಿ ಎಸೀಬೇಡಿ’ ಹೀಗನ್ನುತ್ತಿದ್ದಂತೆ ಅವರು ಕೇಳಿದವನನ್ನು ದುರುದುರು ಎಂದು ನೋಡಿದರು. ಕಣ್ಣು ದೊಡ್ಡದಾಯಿತು. ಮುಖ ದಪ್ಪಗಾಯಿತು. ಮೊದಲೇ ವ್ಯಗ್ರರಾಗಿದ್ದವರು ಮರು ಪ್ರಶ್ನಿಸಿದರು. ‘ಹಾಗಾದರೆ ನಾನು ಎಲ್ಲಿ ಎಸೀಬೇಕು’ ಚೆಂಡು ಕೇಳಿದವನ ಅಂಗಣಕ್ಕೆ ಬಂದು ಬಿತ್ತು!. ತೀರ್ಪು ಕೇಳಿದ ವ್ಯಕ್ತಿಯೇ ಕೊಡುವಂತೆ ಆತನನ್ನು ನೋಡಿದರು. ಅವರ ಉರುಟು...
ನೀರೇ ಇಲ್ಲ, ಇನ್ನು ಲಿಫ್ಟ್ ಎಲ್ಲಿಂದ?
‘ನಾವೇನು ಯಾರಿಗೂ ಅನ್ಯಾಯ ಮಾಡಲ್ಲ, ಸಮುದ್ರಕ್ಕೆ ಎಷ್ಟೊಂದು ನೀರು ವೇಸ್ಟ್ ಆಗಿ ಹೋಗುತ್ತೆ, ಅಂಥ ನೀರನ್ನು ನಾವು ಲಿಫ್ಟ್ ಮಾಡ್ತೀವಿ ಅಷ್ಟೇ…ಇಂಥ ಮಾತು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕಾಮನ್. ಯಾರೋ ಕೆಳಸ್ತರದ ರಾಜಕಾರಣಿಯೋ, ಅಧಿಕಾರಿಯೋ ಇಂಥ ಮಾತನ್ನು ಹೇಳಿದ್ದರೆ ಏನೋ ಅಜ್ಞಾನದಿಂದ ಹೀಗೆ ಹೇಳುತ್ತಾರೆ ಎನ್ನಬಹುದಿತ್ತೇನೋ, ಆದರೆ ಹೀಗಂದವರು ಖುದ್ದು ಈ ರಾಜ್ಯದ...
ನೈತಿಕತೆಗೀಗ ಡೇಂಜರ್ ಝೋನ್!
ಸರಿ ರಾತ್ರಿ (ಅದು ಮಧ್ಯರಾತ್ರಿ 12 ಗಂಟೆ) ಮಹಿಳೆಯೊಬ್ಬಳು ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋದಾಗ ಯಾವುದೇ ಅಪಾಯ ಆಕೆಗೆ ಸಂಭವಿಸಿಲ್ಲ ಎಂದಾದರೆ ನಮಗೆ ಸ್ವಾತಂತ್ರ್ಯ ದೊರಕಿದ್ದು ಅರ್ಥಪೂರ್ಣ ಎನಿಸುತ್ತದೆ. ನಮ್ಮ ದೇಶದ ತುಂಬಾ ಪಾಪ್ಯುಲರ್ ವಾಕ್ಯವಿದು. ಹೌದಾ? ಎಲ್ಲಾದರೂ ಉಂಟೇ? ಮೇಲಿನ ವಾಕ್ಯ ಓದಲು, ಬಾಯಿಪಾಠದ ಭಾಷಣ, ಲೇಖನಗಳಿಗಷ್ಟೇ ಮೀಸಲು ಎಂಬುದು ಎಲ್ಲರಿಗೂ...
ಕಾರುಣ್ಯವನ್ನೇ ಕೊಲ್ಲೋ ತಾರುಣ್ಯ
ಅವನೆಂದರೆ ಎಲ್ಲರಿಗೂ ಭಯ! ಅವನನ್ನು ಕೊಂದೇ ಬಿಡಬೇಕು ಎಂಬಷ್ಟು ಭಯ. ಆದರೆ ಯಾರಿಗೂ ಅವನನ್ನು ಮುಟ್ಟುವ ಧೈರ್ಯ ಇರುವುದಿಲ್ಲ. ಅವನು ಮಾಡೋ ಆಟಾಟೋಪಗಳಿಗೆ ಲೆಕ್ಕವೇ ಇಲ್ಲ. ಎಲ್ಲರೂ ಅವನಿಗೆ ಹೆದರುವವರೇ.. ಅಷ್ಟಕ್ಕೂ ಅವನು ಯಾರು? ಶಾಲೆಯೊಂದರ ಪಿಯುಸಿ ವಿದ್ಯಾರ್ಥಿ ಆತ. ಹೆಸರಿಗಷ್ಟೇ ವಿದ್ಯಾರ್ಥಿ. ಯಾರನ್ನೂ ಕೇರ್ ಮಾಡದಷ್ಟು ಅಹಂಕಾರಿ. ಅವನಂಥವನೇ ಆ ಶಾಲೆಯ ಮಾಲೀಕ. ಆ...