’ಅಷ್ಟಾವಕ್ರ’ – ಆತನಿಗೆ ಯಾರು ಆ ಹೆಸರಿಟ್ಟರೋ ಎನ್ನುವುದಕ್ಕಿಂತ, ಯಾರು ಇಡಲಿಲ್ಲವೋ ಎನ್ನುವುದೇ ಸರಿಯಾದೀತು.ಏಳನೇ ತರಗತಿಯಲ್ಲಿದ್ದಾಗ ಕನ್ನಡ ಮೇಷ್ಟ್ರು “ಅನ್ವರ್ಥನಾಮಕ್ಕೆ ಉದಾಹರಣೆ ಕೊಡಿ” ಎಂದಾಗ “ಮೋಹನನಿಗೆ ಮೋಹನ ಹೆಸರಿಗಿಂತ, ’ಅಷ್ಟಾವಕ್ರ’ ಹೆಸರು ಚೆನ್ನಾಗಿ ಅನ್ವಯಿಸುತ್ತದೆ.ಅದೇ ಅವನಿಗೆ ಅನ್ವರ್ಥನಾಮ” ಎಂದು ಹೇಳಿ ಮುಖಕ್ಕೆ...
Author - Deepthi Delampady
ಆಯ್ಕೆ
“ಇನ್ನೊಂದು ಮೆಟ್ಟಿಲೂ ನನ್ ಕೈಲಿ ಹತ್ತಕ್ಕಾಗಲ್ಲಪ್ಪಾ!” ಉಮಾ ನಿಡುಸುಯ್ದಳು. ಅವಳಿಗಿಂತ ಇಪ್ಪತ್ತೈದು ವರ್ಷ ಹಿರಿಯಳಾದ ಶಾಂತಜ್ಜಿ ಮಾತ್ರ ತುಟಿಪಿಟಿಕ್ಕೆನ್ನದೆ ಆಸ್ಪತ್ರೆಯ ಮೆಟ್ಟಿಲುಗಳನ್ನೇರುತ್ತಲೇ ಇದ್ದಳು. ಶಾಂತಜ್ಜಿಗೀ ಲೋಕದ ಪರಿವೆಯೇ ಇದ್ದಂತಿರಲಿಲ್ಲ. ತನ್ನ ಮಾತಿಗೆ ಶಾಂತಜ್ಜಿ ಕಿವಿಗೊಡದಿರುವುದು ನೋಡಿ ಉಮಾಳ ಮುಖ ಗಂಟಿಕ್ಕಿಕೊಂಡಿತು...
ಸಣ್ಣ ಕಥೆ: ಋಣಾನುಬಂಧ
ಗೋಪುವಿನ ತಟ್ಟೆಗೆ ಮತ್ತೊಮ್ಮೆ ತುಪ್ಪ ಬೀಳುತ್ತಿದ್ದಂತೆ ಕುಮಾರ ನನ್ನತ್ತ ಓರೆನೋಟ ಬೀರಿದ. “ಯಾಕಪ್ಪಾ,ಅವನ ತಟ್ಟೆಗೆ ತುಪ್ಪ ಹಾಕಿದ್ದು ನಿನ್ನ ಹೊಟ್ಟೆಕಿಚ್ಚಿಗೆ ತುಪ್ಪ ಹಾಕಿದಂತೆ ಆಯ್ತಾ?” ಮನಸ್ಸಿನಲ್ಲೇ ಅಂದುಕೊಂಡೆ. ಮಕ್ಕಳು ಅವರವರ ಅಮ್ಮಂದಿರು ಅವರನ್ನೇ ಜಾಸ್ತಿ ಪ್ರೀತಿಸಬೇಕೆಂದು ಅಪೇಕ್ಷಿಸುವುದು ಸಹಜ. ಹಾಗೆಂದು ಅಮ್ಮನನ್ನು ಕಳೆದುಕೊಂಡ...
ನಿರೀಕ್ಷಣೆ – ಹೈಕು
ಕ್ಯಾಲೆಂಡರಿನಲಿ ಕೆಂಪು ಶಾಯಿಯಿಲ್ಲ ಆದರೂ ಮನೆಯಲ್ಲಿ ಹಬ್ಬ ಅಮ್ಮನ ಹಾರ್ಮೋನಿಯಂ ಅದಾಗಲೇ ಪೆಟ್ಟಿಗೆ ಬಿಟ್ಟಾಗಿದೆ ಅಪ್ಪ ಸೆಂಟು ಪೂಸಿದರೂ ಗಂಜಲದ ಕಮ್ಮು ಕಮ್ಮಿಯಿಲ್ಲ ಅಣ್ಣನ ಬೈಕಿಗೆ ಕೊನೆಗೂ ಸಿಕ್ಕಿದೆ ಅಭ್ಯಂಗ ಭಾಗ್ಯ ಅಡಿಕೆ ಮರಗಳು ಬರುವವರ ಹಾದಿ ಕಾಯುತ್ತಿವೆ ಚಾತಕ ಪಕ್ಷಿಗಳಂತೆ ರಬ್ಬರು ತೋಟದ ಮಧ್ಯೆ ಬರುತ್ತಿದೆ ಬೈಕು...
ನೆರಳು – ಬೆಳಕು
ಪಿಡಿದ ದೀಪಕೂ ಮೀರಿ ಬೆಳಕ ಸೂಸುತಲಿಹುದು ಮಂದ ನಗೆ ಬೀರುತಿಹ ನಿನ್ನ ವದನ ಓ ನಾರಿ,ನೀ ಸಾರಿ ಹೇಳಬಾರದೆ ನನಗೆ ಕತ್ತಲೆಯ ಒಡನಿಹುದೆ ನಿನಗೆ ಕದನ? ತಳುಕು ಬಳಕಿನ ಗೊಡವೆ ಇಲ್ಲದಿಹ ನಿನಗಿಂದು ಆಗಿಹುದು ಒಡನಾಡಿ ಮಿಣುಕು ಬೆಳಕು ಬೆಳಕು ಕತ್ತಲಿನ ಕತ್ತು ಕೊಯ್ದಂತೆ,ನೀನೆದ್ದು ಬಾ,ತೊಡೆದು ಹಾಕು ಈ ಜಗದ ಕೊಳಕು ಬಚ್ಚಿಡಲುಬೇಡ ಬೆಳಕ ಕಿರಣಗಳ, ನೀನಿಂದು ಪಸರಿಸಲು ಬಿಡು ಅದನು...
ಪೈಕಾ – ಹೈಕು
ನನ್ನಂತೆ ಪೈಕಾದಿಂದ ಬಳಲುತ್ತಿರುವವರಿಗೆ! ದೇವರ ಮನೆಯಲ್ಲಿದ್ದ ಡಬ್ಬಿ ಕಣ್ಣಿಗೆ ಬಿದ್ದಾಗ ಕೈಗೆತ್ತಿ ಕೊಂಡೆನೇಕೋ ತಿಳಿಯದು ಬಿಳಿ ಪುಡಿಯ ಘ್ರಾಣಕ್ಕೆ ಮೆದುಳಿನ ಕಣಗಳು ತಕತಕ ಕುಣಿದಂತೆ ಭಾಸ ತಿನ್ನುತ್ತಾ ಕುಳಿತಿರಲು ಡಬ್ಬಿ ಖಾಲಿಯಾಗಿ ತಳ ಕಂಡಿದ್ದು ಗೊತ್ತೇ ಆಗಲಿಲ್ಲ ಅಪ್ಪನಿಗೆ ಸಂಶಯ ಹಣೆಗೆ ಹಚ್ಚಿಕೊಳ್ಳುವುದು ಯಾರದೋ ಹೊಟ್ಟೆಗೆ...