Author - Anoop Gunaga

ಕಥೆ

ಮನದಾಳದಲ್ಲೊಂದು ಪ್ರೇಮಮೌನ…

ಚಿನ್ಮಯ್ ಅಂದು ಶಾಲಿನಿಯನ್ನು ಮಾತನಾಡಿಸುವ ಸಲುವಾಗಿಯೇ ಅವಳ ಖಾಯಂ ಬಸ್ ನಿಲ್ದಾಣದ ಬಳಿ ಕಾದಿದ್ದ. ಅವಳು ಬರಲು ಇನ್ನೂ ಅರ್ಧಘಂಟೆ ಇತ್ತು. ಯಾವುದೇ ಕಾರಣಕ್ಕೂ ಮಿಸ್ ಆಗಬಾರದು ಅಂತ ಬೇಗನೆ ಬಂದಿದ್ದ ಚಿನ್ಮಯ್. ಬಸ್ ನಿಲ್ದಾಣದ ಕೆಂಪು ಬಣ್ಣದ ಸಿಮೆಂಟ್ ಸೀಟ್ ಮೇಲೆ ಹೋಗಿ ಕುಳಿತ. ಆತ ಕೂರುವ ಮುನ್ನ “ಉಫ್…” ಎಂದು ಊದಿದ ಗಾಳಿಯಿಂದ ಸೀಟ್ ಮೇಲಿನ ಧೂಳಿನ...

ಅಂಕಣ

ಕನ್ನಡ ಎನೆ ಅವಮಾನವದೇತಕೆ…?

“ಅಮ್ಮಾ..ಐನೂರು ಅಂದರೆ ಎಷ್ಟು?” ಎಂದು ೩ನೇ ತರಗತಿಯ ಮಗುವೊಂದು ಅಮ್ಮನ ಬಳಿ ಕೇಳುತ್ತಿತ್ತು. “ಐನೂರು ಅಂದರೆ ಫೈವ್ ಹಂಡ್ರೆಡ್ ಪುಟ್ಟ” ಎಂಬುದು ಅಮ್ಮನ ಉತ್ತರವಾಗಿತ್ತು. ಹಾಗೆಯೇ ಇತ್ತ ತಿರುಗಿ, ತನ್ನ ಪಕ್ಕದಲ್ಲಿ ನಿಂತಿದ್ದ ಇನ್ನೊಬ್ಬ ಸಂಬಂಧಿಯ ಬಳಿ ಮಾತು ಮುಂದುವರಿಸುತ್ತಾ ಆ ಮಹಾನ್ ತಾಯಿ ಹೀಗೆಂದಳು : “…ನಮ್ ಮಗನ...

ಕವಿತೆ

ಕೊಳಲ ನುಡಿಸುವ ಕೊರಳನರಸುತ…!!!

ಮುರಳಿಯ ನಾದ ಹೊಮ್ಮಿರೆ, ಗೋವುಗಳೆಲ್ಲ ಭಾವುಕವಾಗಿರೆ, ಹೊರಳಿತ್ತು ಗೋಪಿಕೆಯ ಮನ; ಮುರಳಿಯ ನುಡಿಸುವ ಕೊರಳನರಸುತ!!! ಸುಳಿದಾಡಿದಳಾಕೆ, ಬಯಕೆಗಳ ಬಳಿಯಲ್ಲಿ… ತೊಳಲಾಡಿದಳು ಮತ್ತೆ, ಸೆಳೆತಗಳ ಸುಳಿಯಲ್ಲಿ. ಏನೋ ಕಳೆದಂತೆ ಕಳವಳದಿ ಕಾತರಿಸಿ, ಸುರಿವ ಮಳೆಗರುಹಿದಳು… ಹರಿವ ಹೊಳೆಯ ಕಳುಹಿದಳು… ಮುರಳೀಧರನನ್ನು ಬಳಿಗೆ ಕರೆತರಲು. ವಿರಹಬೇನೆಗೆ ಬಳಲಿ...

ಅಂಕಣ

‘ನಾಳೆ’ ಎಂಬ ಬಣ್ಣದ ಚಿಟ್ಟೆ…

ನಮ್ಮ ಬದುಕನ್ನು ಪ್ರವೇಶಿಸಿರದ, ಆದರೂ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ, ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಹಂಬಲಿಸುವ ಭವಿಷ್ಯದ ತುಣುಕಿನ ಚಿತ್ರಣವೇ ‘ನಾಳೆ‘. ಈ ಜೀವನ ಪಯಣದಲ್ಲಿ ‘ನಾಳೆ‘ ನಮಗಿಂತ ತುಸು ಮುಂದೆ ಇದ್ದು ನಮ್ಮೊಂದಿಗೆ ಸಾಗುತ್ತದೆ. ಅದು ನೂರು ಕನಸುಗಳ ಬಣ್ಣ ಮೆತ್ತಿಕೊಂಡು ಹಾರುವ ಚಿಟ್ಟೆಯಂತೆ. ಇನ್ನೇನು ನಾವು ಆ...

ಕಥೆ

ಜೀವನ್ಮುಕ್ತಿ

ಸಿಂಧೂ ಎಂದಿನಂತೆ ತರಕಾರಿಗಳನ್ನು ತರಲು ಪೇಟೆಗೆ ಹೋಗಿದ್ದಳು. ತಿರುಗಿ ಬರುವಾಗ ಇದ್ದಕ್ಕಿದ್ದಂತೆ ಮಳೆ ಸುರಿಯತೊಡಗಿತು. ಕೊಡೆಯನ್ನು ಬಿಡಿಸುವ ಮುನ್ನವೇ, ಒಂದಿಷ್ಟು ಮಳೆಹನಿಗಳು ಅವಳನ್ನು ಸ್ಪರ್ಶಿಸಿದ್ದವು. ಅದೇಕೋ ಸಿಂಧುವಿಗೆ ಆ ಸ್ಪರ್ಶ ಹಿತ ನೀಡಿರಬೇಕು. ಅವಳು ಹಾಗೆಯೇ ನೆನೆಯುತ್ತಾ ನಿಂತುಬಿಟ್ಟಳು. ಅವಳ ಒಡಲ ಧಗೆ ಅಷ್ಟರ ಮಟ್ಟಿಗಿತ್ತು. ಬರೀ ನೋವುಗಳ ಉರಿಯಲ್ಲಿ...

ಕವಿತೆ

‘ಹನಿ ಬರಹ’ – ೫ ಹನಿಗವನಗಳ ಸಂಗ್ರಹ

ಕಳ್ಳಿ ಇವಳು ಕದಿಯಬಂದಿಹಳಿವಳು ನನ್ನ ಕನಸುಗಳ. ಅವಳಿಗೇನು ಗೊತ್ತು? ನನ್ನ ಕನಸುಗಳಲೆಲ್ಲ ಅವಳೇ ಇರುವವಳೆಂದು! ನಾ ನಗುತ್ತಿದ್ದೆ; ಅವಳನೇ ಅವಳು ಕದಿಯಬಂದಿಹ ಪರಿಯ ಕಂಡು   ಅರಿಯದ ನಗು ಗೊತ್ತಿಲ್ಲ ಏಕೋ ಅರಿವಿಲ್ಲದಂತೆಯೇ ನಗುವೊಂದು ಮೂಡುವುದು ಅವಳ ಕಂಡಾಗ ಎದೆಬಡಿತ ಏರುವುದು; ಅವಳು ಕೂಡ ನನ್ನ ಕಂಡು, ನಕ್ಕು ಗೆಳತಿಯ ಹಿಂದೆ ಬಚ್ಚಿಕೊಂಡಾಗ.   ಕಾಡಿಗೆ ಅವಳ...

ಅಂಕಣ

ಅಭಿವೃದ್ಧಿ, ಆಧುನಿಕತೆ ಮತ್ತು ಅಸ್ತಿತ್ವ

ಇಡೀ ಸಮಾಜ ಇಂದು ನಗರೀಕರಣವೆಂಬ ಹೊಸ ಅವತಾರ ತಾಳುವ ಸಿದ್ಧತೆಯಲ್ಲಿದೆ. ಅದಕ್ಕೆ ಬೇಕಾದ ಅಲಂಕಾರಗಳನ್ನೆಲ್ಲ ಭರದಿಂದ ನಡೆಸಿದೆ. ಡಾಂಬರಿನ ಲಿಪ್ ಸ್ಟಿಕ್ ಬಳಿದುಕೊಂಡು, ಎಲೆಗಳೆಂಬ ಕೂದಲನ್ನು ಬಾಬ್ ಕಟ್ ಮಾಡಿಸಿಕೊಂಡು ನಮ್ಮ ಹಳ್ಳಿಗಳು ಪಕ್ಕಾ ಪ್ಯಾಟೆ ಹುಡುಗಿಯಂತೆ ತಯಾರಾಗುತ್ತಿವೆ. Development ಎಂಬ ಇಂಗ್ಲೀಷ್ ಪದ ಉಪಯೋಗಿಸುತ್ತ ಉಸಿರು ನೀಡುವ ಮರಗಳನ್ನು ಕಡಿದು...

ಅಂಕಣ

ಉಡುಪಿಯ ಕಂಡೀರಾ? ಉಡುಪಿಯ ಶ್ರೀ ಕೃಷ್ಣನ ಕಂಡೀರಾ?’

‘ಶ್ರೀ ಕೃಷ್ಣ’ – ಮಹಾಭಾರತದ ಸೂತ್ರಧಾರಿ. ಪೌರಾಣಿಕ ಹಿನ್ನೆಲೆಗಳ ಪ್ರಕಾರ ಈತನ ಜನನ, ಈತನ ಲೀಲೆಗಳು ಎಲ್ಲದಕ್ಕೂ ಸಾಕ್ಷಿಯಾದದ್ದು ಉತ್ತರ ಭಾರತವಾದರೂ ಉಡುಪಿಯಲ್ಲಿ ನೆಲೆನಿಂತ ಶ್ರೀಕೃಷ್ಣ ಈಗ ‘ಉಡುಪಿ ಕೃಷ್ಣ’ ಎಂದೇ ಕರೆಸಲ್ಪಡುವಷ್ಟು ಪ್ರಸಿದ್ಧ. ನಾನು ಕೂಡ ಉಡುಪಿಯಲ್ಲಿ ಹುಟ್ಟಿ ಬೆಳೆದವನಾಗಿರುವುದರಿಂದ ಆತನ ಲೀಲೆಗಳ ಮೇಲೆ ಆಸಕ್ತಿ...