ಗೆಳತಿ, ಅದೆಷ್ಟು ದಿನಗಳಾಯಿತು ನಿನ್ನ ಜೊತೆ ಮಾತಾಡಿ. ಅದೆಷ್ಟು ದಿನಗಳಾಯಿತು ನೀ ನನ್ನ ಪಕ್ಕ ಕುಳಿತು. ಅರಿವಿದೆಯೇ ನಿನಗೆ? ಒಂದೆರಡು ದಿನಗಳಲ್ಲ ಗೆಳತಿ, ಇಂದಿಗೆ ಸರಿಯಾಗಿ ಒಂದು ವರುಷ. ನಿನ್ನ ಚಿನಕುರುಳಿ ಮಾತಿನಲೆಗಳು ನನ್ನ ಕಿವಿಗೆ ಮುತ್ತಿಕ್ಕಿ ಒಂದು ವರ್ಷವೇ ಕಳೆದುಹೋಗಿದೆ. ಇನ್ನೊಂದು ರೀತಿ ಆಲೋಚಿಸಿದರೆ ಕಳೆದದ್ದು ಕೇವಲ ಒಂದು ವರ್ಷವೇ? ಅನಿಸುತ್ತದೆ. ಏಕೆಂದರೆ...
Author - Anoop Gunaga
ಮಾಮರವೆಲ್ಲೋ…ಕೋಗಿಲೆಯೆಲ್ಲೋ…?!
ಆಗ ತಾನೇ ಕಂಗಳೆರಡು ಸೃಷ್ಟಿಯ ಸೌಂದರ್ಯದಲ್ಲಿ ತಮ್ಮ ದೃಷ್ಟಿಯನ್ನು ವಿಲೀನಗೊಳಿಸಿದ್ದವು. ಆ ಎಳೆ ಮನಸಿಗೆ ಅಂದೇ ಜಗತ್ತಿನ ಜನನ. ಅದಕ್ಕೆ ಇಡೀ ಜಗತ್ತೇ ಅಪರಿಚಿತ. ’ಅಮ್ಮ’ ಎಂಬ ಕರುಳ ಸಂಬಂಧವೊಂದು ಹೊರತುಪಡಿಸಿ ಎಲ್ಲವೂ ಎಲ್ಲರೂ ಅಪರಿಚಿತ. ದಿನ ಕಳೆದಂತೆ ಒಂದೊಂದೇ ಸಂಬಂಧಗಳು ಪರಿಚಯವಾಗುತ್ತಾ ಹೋಗುತ್ತದೆ. ಅಪ್ಪ, ಅಕ್ಕ, ಅಣ್ಣ, ತಮ್ಮ, ತಂಗಿ, ಅಜ್ಜ, ಅಜ್ಜಿ, ಚಿಕ್ಕಪ್ಪ...
ಹನಿಬರಹ – ೨
ರವಿವಾರ ಸೂರ್ಯಕಿರಣಗಳು ಮುತ್ತಿಟ್ಟಾಗಲೇ ಅರಿವಾದದ್ದು ನನಗೆ ಬೆಳಗಾಯಿತೆಂದು ರವಿವಾರ; ರವಿಯೇ ಬರಬೇಕಾಯ್ತು… ಸ್ವಪ್ನಸುಂದರಿಯ ಮೃದು ತೋಳಿನಿಂದ ನನ್ನ ಬಿಡಿಸುವ ಪ್ರಯತ್ನಕ್ಕಿಂದು ಅಲೆಮಾರಿ ಅಲೆಯುತಿಹೆ ನಿನ್ನೆದೆಯ ಬೀದಿಯಲಿ ಅಲೆಮಾರಿಯಂತೆ ನೀಡೆನಗೆ ಒಂದಿಷ್ಟು ಜಾಗವ ಇಳಿಸುವೆ ನನ್ನ ಕನಸುಗಳ ಕಂತೆ ಕಂಗಳಲಿ ಕಳೆದಾಗ… ನಾ ನಿನ್ನ ಕಂಗಳಲಿ ಕಳೆದುಹೋಗೋ ಆ...
ಬದುಕು ನಿಷ್ಕಾರಣವಲ್ಲ…
ಇತ್ತೀಚೆಗಷ್ಟೆ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ನೋಡಿದೆ. “You are not born to just work, pay bills and die” ಎನ್ನುವ ಸಾಲುಗಳು ಅದರಲ್ಲಿತ್ತು. ಏಕೋ ಗೊತ್ತಿಲ್ಲ, ಓದಿದ ತಕ್ಷಣ ನಿಜ ಅನಿಸಿತು ನನಗೆ. “Yes. Definitely I am not” ಅಂತ ಶೇರ್ ಕೂಡ ಮಾಡಿದೆ. ಹಾಗೆಯೇ ಯಾಕೆ ಆ ಸಾಲು ತಕ್ಷಣ ನನ್ನನ್ನು ಸೆಳೆಯಿತು ಎಂಬ ಕುರಿತು...
ಜಾತ್ರೆ ಮತ್ತು ಅವಳು
ಊರ ಜಾತ್ರೆಲೂ ಗುರುತಿಸುವೆ, ನಿನ್ನ ಆ ಮುದ್ದು ಕಂಗಳನು. ನನ್ನ ನೋಡಿದ್ದರೂ ನೋಡದಂತೆ ಇರೋ; ನಿನ್ನ ಹುಸಿನೋಟವ ಬಲ್ಲೆನು. ನಿನ್ನ ನೋಡೋದ ನಾ ಬಿಡೆನು… ಆಟಿಕೆಯ ಅಂಗಡಿಯಲ್ಲೆಲ್ಲೂ ಸಿಗದ, ನವಿರಾದ ಬೊಂಬೆ ನೀನು. ನೂರಾರು ಹುಡುಗಿಯರು ಬಳಿಯೇ ಸುಳಿದು ಹೋದರೂ ಕಾಣೆ ನಾನು!!! ನಿನ್ನ ಸೀರೆ ಸೆರಗು ನನ್ನ ಕಣ್ಣ ಸವರಿ ನಿನ್ನನ್ನೇ ಅಲ್ಲಿ ಬಿಟ್ಟು ಹೋಯಿತೇ…...
ಬದುಕಿನ ಹಾಡಿಗೊಂದು ನವಪಲ್ಲವಿ…
ಯಶಸ್ ಒಬ್ಬ ಬರಹಗಾರ. ಮನಸಿಗನಿಸಿದ್ದನ್ನೆಲ್ಲ ಶಾಯಿಯ ಮಳೆಯಾಗಿ ಹಾಳೆಯೆಂಬ ಇಳೆಗೆ ಹನಿಸುವುದು ಅವನ ಹವ್ಯಾಸ. ಹಾಗೆಯೇ ಅಂದು ಕೂಡ ಬರೆಯುತ್ತಿದ್ದ. ಅದೊಂದು ಪ್ರೇಮಕಥೆ. ಕಥೆಗೊಂದು ಚೌಕಟ್ಟನ್ನು ಹಾಕಿಕೊಂಡ ನಂತರ ಅಲ್ಲಿನ ಒಂದು ಸನ್ನಿವೇಶವನ್ನು ಚಿತ್ರಿಸುವ ಅವಸರದಲ್ಲಿದ್ದ. ಆಧುನಿಕ ಯುಗದ ಪ್ರೇಮಕಥೆ ಅಂದಮೇಲೆ ಅಲ್ಲಿ ಮೊಬೈಲ್ ಸಂದೇಶಗಳಿರದೆ ಇರಲು ಸಾಧ್ಯವೇ? ಖಂಡಿತ ಇಲ್ಲ...
ಒಲವಿಗೊಂದು ಮನವಿ…
ಮಾತನಾಡು ನನ್ನ ಒಲವೇ ಈ ದಿನ, ನಿನ್ನ ಮಾತು ಕೇಳಲೆಂದೇ ಬಂದೆ ನಾ; ಇನ್ನೇತಕೆ ಬರಿಯ ಮೌನ…? ನಿನ್ನ ಮಾತಲ್ಲಿನ ಪದಗಳ ಪೋಣಿಸಿ… ಕವಿತೆಯ ಹೆಣೆಯುವ ಒಬ್ಬ ಕವಿಯು ನಾ. ನೀ ನನ್ನ ಕಣ್ಣಲ್ಲಿ ಒಂದು ಮುಗಿಯದ ಸವಿಗನಸು!!! ನಿನ್ನ ಕನಸಿನ ಲೋಕಕ್ಕೆ ನನ್ನನ್ನೂ ಪರಿಚಯಿಸು. ನೀನು ನಗುವ ಸಮಯದಲಿ, ಅರಳೊ ಕೆನ್ನೆ ಗುಳಿಯಲ್ಲಿ ಬಿದ್ದ ಒಬ್ಬ ಆಗಂತುಕ ನಾನು!!! ಕೈಯ...
ಜಾತ್ರೆಯ ಮರುಳು…
ಜಾತ್ರೆ ಎಂದರೆ ಅದು ಬದುಕಿನ ಜಂಜಾಟಗಳ ನಡುವಿನ ಸಂಭ್ರಮ. ದೈನಂದಿನ ಕಾಯಕದ ಬ್ಲಾಕ್-ಎಂಡ್-ವೈಟ್ ಬದುಕಿಗೆ ಕಲರ್ -ಫುಲ್ ಕನಸುಗಳನ್ನು ಹೊತ್ತು ತರುವ ರಾಯಭಾರಿ. ನಮ್ಮದೇ ಊರನ್ನು ಹೊಸ-ಹೊಸ ರೂಪದಲ್ಲಿ ನಮಗೆ ದರ್ಶಿಸುವ ಸಂದರ್ಭಕ್ಕೆ ಸಾಕ್ಷಿಯಾಗುವ ಸದವಕಾಶ ಈ ಜಾತ್ರೆ. ನಿರಾಭರಣ ಸುಂದರಿಯಾದ ನಮ್ಮ ಊರು ಜಾತ್ರೆಯಂದು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ಇನಿಯನ ಬರುವಿಕೆಗೆ...
ನಮ್ಮ ಆದ್ಯತೆ ಯಾವುದಕ್ಕೆ? ಒಳಿತಿಗೋ ಅಥವಾ ಕೆಡುಕಿಗೋ?
ಇಂದು ಸಮಾಜದಲ್ಲಿ ಕಳ್ಳತನ, ಸುಲಿಗೆ, ವಂಚನೆ,ದ್ರೋಹ, ಅತ್ಯಾಚಾರ ಇತ್ಯಾದಿ ಇತ್ಯಾದಿ ಸಮಾಜಘಾತುಕ ಚಟುವಟಿಕೆಗಳು ಸಾಲುಸಾಲಾಗಿ ದಾಳಿಮಾಡುತ್ತಿವೆ. ಜನ ತಮ್ಮನ್ನು ರಕ್ಷಿಸು ಎಂದು ಬೇಡುವ ದೇವರ ವಿಗ್ರಹವೇ ಕಳ್ಳತನವಾಗುತ್ತಿದೆ. ಸ್ವಂತ ಎಂದೆನಿಸಿದವರೇ ವಂಚಿಸಿ ಆಸ್ತಿ ಕಬಳಿಸಿ ನಂಬಿಕೆ ದ್ರೋಹ ಎಸಗುತ್ತಾರೆ. ತನ್ನದೇ ತೋಳಲ್ಲಿ ಆಡಿ ಬೆಳೆದ ಮಗಳನ್ನು ತಂದೆಯೇ ಅತ್ಯಾಚಾರ...
ದೀಪಗಳ ಹಾವಳಿ…
ಮನೆ-ಮನೆಯಲ್ಲೂ, ಅರಿಶಿಣ-ಕುಂಕುಮ ಮಿಶ್ರಿತ ಸೀರೆಯುಟ್ಟು ಸಾಲಾಗಿ ನಿಂತು ತಂಗಾಳಿಗೆ ನಡು ಬಳುಕಿಸುತ್ತ ಜಗತ್ತನ್ನೇ ತಮ್ಮತ್ತ ಸೆಳೆಯುವ ಚೆಲುವೆಯರ ಹಾವಳಿಯಾಗುವ ದಿನವೇ ದೀಪಾವಳಿ. ಅದನ್ನು ನೋಡುವುದೇ ಒಂದು ಹಬ್ಬ. ಹಾಗೆಯೇ ಆ ಸಾಲು ಸಾಲು ಚೆಲುವೆಯರನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದು ನೆನಪಿನ ಪುಟಗಳಲ್ಲಿ ಅಚ್ಚೊತ್ತುವುದು ಇನ್ನೊಂದೇ ರೀತಿಯ ಸಂಭ್ರಮ...