X

ಕಾವ್ಯಕನ್ನಿಕೆಗೊಂದು ಹೆಸರು

ಬಹಳಷ್ಟು ಬರೆದೆ ನಾ ನನ್ನ ಕಾವ್ಯ ಕನ್ನಿಕೆಯ ಕುರಿತು ಶಬ್ದಗಳ ಸರ ಹೆಣೆದು ಸುಸ್ತಾದೆ, ಅವಳ ಅಂದ ವರ್ಣಿಸಲು. ಕೇಳುವ ಮನಸ್ಸಾಯಿತು ಅವಳ ನನ್ನ ವರ್ಣನೆಗಳಲ್ಲಿ ಅವಳ…

Anoop Gunaga

ಕವಿತೆ

೧.ಫಜೀತಿ.... ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ತಂದಿಟ್ಟಿದ್ದಂತೂ ನಿಜ ಫಜೀತಿಯ... ೨.ಅಭಯ.... ಕದ್ದು ಮುಚ್ಚಿ ಮುಖಕ್ಕೆ ಮುಸುಕು ಕಟ್ಟಿ ಹುಡುಗನ ಹಿಂದೆ ಕೂರುವ ಹುಡುಗಿಗಿಲ್ಲ ಭಯ ಹೆಲ್ಮೆಟ್…

Mamatha Channappa

ನಿಮ್ಮ ಗೆಲುವಿಗೆ ಬೇಕಾಗಿರುವುದು – ಹತ್ತು ಸಾವಿರ ತಾಸುಗಳು.

'ತಪಸ್ಸು' ಎಂಬ ಪದವನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ,ಕೇಳಿದ್ದೇವೆ. ಕೆಲವು ಋಷಿ, ಮುನಿ, ರಾಜರು  ವರುಷಾನುವರುಷ ಚಳಿ,ಮಳೆ ಎನ್ನದೆ ತಪಸ್ಸು ಮಾಡಿ ಬೇಕಾದ ವರವನ್ನು ಪಡೆದುಕೊಂಡು ಶಕ್ತಿಶಾಲಿಯಾದ ಸಾಕಷ್ಟು…

Vikram Joshi

ಗೋಸಾಕಾಣಿಕೆಯತ್ತ ಹೆಚ್ಚಬೇಕಿರುವ ಒಲವು

ಭಾರತ ಕ್ಷೀರೋತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೆ ಬರಲು ಕಾರಣವಾದುದು ಗೋಸಾಕಾಣಿಕೆಯತ್ತ ಹೆಚ್ಚುತ್ತಿರುವ ಒಲವು. ಇಲ್ಲಿ ಎರಡು ಬಗೆಯ ಒಲವು ಹೆಚ್ಚು ಗಟ್ಟಿಯಾಗಿ ಕಂಡುಬರುತ್ತಿದೆ. ಒಂದು ಸಾಂಪ್ರದಾಯಿಕವಾಗಿ ಹೈನುಗಾರಿಕೆ ಮಾಡುತ್ತಿದ್ದವರು…

ಶಂ.ನಾ. ಖಂಡಿಗೆ

ಫಾರ್ಮನಿ:  ನಿಮ್ಮ  ಸ್ಮಾರ್ಟ್ಫೋನಿಗೆ  ಹೊಸ ಲೆಕ್ಕದ ಪುಸ್ತಕ !

ಕೃಷಿಕರಾದ ನನ್ನ ಅಪ್ಪ ನಿಯಮಿತವಾಗಿ ಮನೆಯ ಆದಾಯ ಹಾಗೂವೆಚ್ಚವನ್ನು ಡೈರಿ ಪುಸ್ತಕದಲ್ಲಿ ಇವತ್ತಿಗೂ ದಾಖಲಿಸುತ್ತಾರೆ. ಕೃಷಿ ಕೆಲಸದ ವಿವರ, ಕೆಲಸಗಾರರಿಗೆ ಕೊಡುವ ಸಂಬಳ, ಬಂಧುಗಳ ಫೋನ್ ನಂಬರ್…

Guest Author

ವಿಶ್ವಗುರು

ಗುರು ಅಂದರೆ ಮಾರ್ಗದರ್ಶಕ, ಯಶಸ್ಸಿನ ಸರಿಯಾದ ದಾರಿತೋರಿಸುವವನು, ಸಕಲ ಜ್ಞಾನವನ್ನು ಬೋಧಿಸುವವ. ಗುರುವಿಗೇ ಇಷ್ಟೊಂದು ಅರ್ಥವಿರುವಾಗ ಅಬ್ಬಾ "ವಿಶ್ವ ಗುರು" ಎಂದರೆ...! ವಿಶ್ವವನ್ನೇ ಮುನ್ನೆಡೆಸುವವನು ಹೌದು ವಿಶ್ವವನ್ನ…

Guest Author

ಸಾಸಿವೆ ತಂದವನು …..

ನಾನು ಆಫೀಸಿನಲ್ಲಿ ಬ್ಯುಸಿ ಆಗಿದ್ದಾಗ ನನ್ನ ಫೋನ್ ರಿಂಗಣಿಸಿತು . ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೇ ಬಿಟ್ಟು ತಕ್ಷಣವೇ ಆಸ್ಪತ್ರೆಗೆ ಓಡಿ ಬಂದೆ . ನೀನೆಂದೂಆಸ್ಪತ್ರೆಯ ಕಡೆಗೆ ಮುಖ ಮಾಡಿದವಳೇ ಅಲ್ಲ ಅಮ್ಮ !. ICU ಕೋಣೆಯೊಳಗೆ ಇಣುಕಿ ನೋಡಿದೆ ,ನನ್ನೆಡೆಗೆ ಒಂದು ಕ್ಷೀಣ ನಗು. ನಾನು ಮತ್ತೆ ಮಗುವಾಗಿಹೋದೆ  ಅಮ್ಮ ,ಗಳ ಗಳನೆ ಅತ್ತು ಬಿಟ್ಟೆ . ಐದಾರು  ವೈದ್ಯರ ತಂಡ ನಿನ್ನ ಕೇಸ್  ಬಗ್ಗೆ ಮಾತನಾಡುತ್ತಿದ್ದರು. ನಿನ್ನ ಖಾಯಿಲೆಗೆ ಉದ್ದುದ್ದ ಹೆಸರು ,ನನಗೆಅದ್ಯಾವುದೂ ಬೇಡ ,ನೀನು ಬೇಕು ,ಬರಿ ನೀನು ...... ಒಂದು ಗಡ್ಡೆ ನಿನ್ನ ಮಿದುಳಿನ ತುಂಬಾ ಹರಡಿ ನಿಂತಿತ್ತು . ಒಂದಲ್ಲ ಎರಡು ಅಲ್ಲಲ್ಲ ಮೂರು. ತೀವ್ರ ಪರೀಕ್ಷೆಯ ನಂತರ ಗೊತ್ತಾಗ ತೊಡಗಿತ್ತು . ಕೆಲವೇ ದಿನಗಳಲ್ಲಿ ಆಪರೇಷನ್ ಮಾಡಬೇಕಾಗಿತ್ತು . ನನ್ನೆಲ್ಲಾ ಉಳಿತಾಯ ,ಇನ್ಸೂರೆನ್ಸ್ ಎಲ್ಲ ಹಣವನ್ನು ಒಟ್ಟುಗೂಡಿಸಿ ಕೊಟ್ಟದ್ದಾಯಿತು . ನಿನ್ನ ಮೇಲೆ ಒಂದಲ್ಲ,ಎರಡಲ್ಲ  ಏಳು ಮೇಜರ್ ಆಪರೇಷನ್ ಆದವು . ಆ ನಿನ್ನ ಪುಟ್ಟ ದೇಹ ಅದನ್ನು  ತಡೆದುಕೊಂಡಿದ್ದಾದರು ಹೇಗೆ ?. ಆ ಕೆಲವಾರು ತಿಂಗಳು ನಾನು ಹೇಗೆಬದುಕಿದ್ದೆನೊ ಗೊತ್ತಿಲ್ಲ ,ಅಥವಾ ಜೀವಂತ ಶವವಾಗಿದ್ದೆ .ಆಧ್ಯಾತ್ಮದ ಕಡೆಗೆ ವಾಲತೊಡಗಿದ್ದೆ. ಆ ಒಂದು ರಾತ್ರಿ ಮಾತ್ರ ನನ್ನ ಜೀವನದಲ್ಲಿ ಮರೆಯದೆ ಉಳಿದು ಬಿಟ್ಟಿದೆ . ಮತ್ತೆ ನಿನ್ನ ICU ಗೆ ಶಿಫ್ಟ್ ಮಾಡಿದ್ದರು . ಜೀವನ್ಮರಣದ ಹೋರಾಟದಲ್ಲಿ ಇದ್ದೆನೀನು . ಆ ಗಾಬರಿಯ ಓಡಾಟ , ಆ ಔಷಧಿಯ ಬಾಟಲಿಗಳು ...... ಸತತ ಎಂಟು ತಾಸುಗಳ ಹೋರಾಟಕ್ಕೆ ಜಯ ದೊರೆತಿತ್ತು . ಕೊನೆಗೂ ನೀನು ಬಂದೆ ,ಸಾವಿನೀಚೆಗೆ ಕಾಲಿಟ್ಟು ಒಳ ಬಂದೆ . ಈಗ ವಾರ್ಡ್ಗೆ ಶಿಫ್ಟ್ ಮಾಡಿದ್ದರು ನಿನ್ನ . ಕಿಮೋಥೆರಪಿ ಶುರುವಾಗಿತ್ತು . ಮಾರುದ್ದ ಮಲ್ಲಿಗೆ ಮುಡಿಯುತ್ತಿದ್ದ ನಿನ್ನ ಕೂದಲು ಮಾಯವಾಗಿತ್ತು . ನಿನ್ನ ದೇಹಮುಂಚಿನ ಅರ್ಧದಷ್ಟು ಆಗಿಹೋಗಿತ್ತು . ಆದರು ನೀನೆ ಗೆದ್ದುಬಿಟ್ಟೆ . ಕದ ತಟ್ಟಿ ಒಳಗೆ ಬರಲೇ ? ಎಂದು ಕೇಳಿದ ಸಾವನ್ನು ನನಗೆ ಕೆಲಸವಿದೆ ಹೋಗು ಎಂದುಒದ್ದೋಡಿಸಿದ್ದೆ . ಆದರೂ ಮನೆಯಲ್ಲಿ ನಿನ್ನ ನಗುವಿಲ್ಲ , ಗೆಜ್ಜೆಯ  ದನಿಯಿಲ್ಲ . ನಿನ್ನ ಇರವನ್ನು ತೋರಿಸುತ್ತಿದ್ದದ್ದು ಎಲೆಕ್ಟ್ರಾನಿಕ್ಸ್ ಉಪಕರಣಗಳ 'ಬ್ಲಿಪ್ ' ಶಬ್ದ ಮಾತ್ರ .ಕೊನೆಗೂ ಚಿಕೆತ್ಸೆ ಮುಗಿದಿತ್ತು . ನಿನ್ನ ಮಿದುಳಿಗೆ ಕೆಲವು ಕಡೆ ಗಾಯವಾಗಿ ಹೋಗಿತ್ತು . ನೀ ನನ್ನ ಸಾಕಿದಂತೆ ನಾ ನಿನ್ನ ಸಾಕಬೇಕಿತ್ತು . ನೀನು ನೂರಕ್ಕೆನೂರರಷ್ಟು ನನ್ನ ಮೇಲೆ ಅವಲಂಬಿ . ಅಡಿಗೆ ಮನೆಗೆ ಕಾಲೇ ಇಟ್ಟಿರದ ನಾನು ಅಡಿಗೆ ಮಾಡುವುದು ಕಲಿತೆ . ದೀಪಾವಳಿಯಂದು ನಾನು ಮಾಡಿದ ಹೋಳಿಗೆ ತಂದಿಟ್ಟಾಗ ನಿನ್ನ ಕಣ್ಣಂಚಲ್ಲಿ ನೀರುಬಂದಿತ್ತು . ಮನೆಯಲ್ಲಿ ಸ್ಮಶಾನ ಮೌನ ನನಗೆ ಅಸಹನೀಯ ಆಗತೊಡಗಿತ್ತು . ನಿನ್ನ ಕೈಗೆ ಪೆನ್ನು ಕೊಟ್ಟು ಬರಿ ,ಬರಿ ಎಂದು ಹೇಳುವೆ . ನೀನು  ಗೀಚಿದ ಗೆರೆಗಳಲ್ಲಿ ನನ್ನದು ಅಕ್ಷರ ಹುಡುಕುವ ಸಾಹಸ. ನಿನ್ನ ಮ್.. ಮ್ ಶಬ್ದದಲ್ಲಿ ನನ್ನ ಹೆಸರು ಕೆಳುತ್ತಿದೆಯೇ ಎಂದು ನೋಡುತ್ತಿದೇನೆ. ಅದೆಷ್ಟೋ ದೀಪಾವಳಿ ,ಸಂಕ್ರಾಂತಿಗಳು ಕಳೆದು ಹೋಗುತ್ತಿದೆ ...... ********************************************************************************* ಹದಿನೈದು ವಸಂತಗಳು ಕಳೆದು ಹೋಗಿದೆ . ಆದರೆ ವಿಶುವಿನ ನಿಷ್ಠೆ ಮಾತ್ರ ಕಡಿಮೆ ಆಗಿಲ್ಲ . ಬಹುಶಃ ಕಡಿಮೆಯೂ ಆಗುವುದಿಲ್ಲ . ಸಾವಿರದ ಮನೆಯಿಂದಸಾಸಿವೆ ತರುವ ಪ್ರಯತ್ನದಲ್ಲಿದ್ದಾನೆ .... -Gurukiran

Guest Author

ಸಿಟಿ ಆಫ್ ಜಾಯ್

ಭಾಷ್ಕೋರ್ ಬ್ಯಾನರ್ಜಿಗೆ ಕೋಲ್ಕತ ಅಂದರೆ ಜೀವ. ನಿವೃತ್ತಿಯ ನಂತರ ಮಗಳ ಕೆಲಸಕ್ಕೆ ಅನುಕೂಲವಾಗುತ್ತದೆಂದು ದೆಹಲಿಗೆ ಸ್ಥಾನ ಬದಲಾಯಿಸಿ ಕೂತರೂ ಅವನ ಜೀವವೆಲ್ಲ ಕೋಲ್ಕತ್ತದ ತನ್ನ ವಂಶಜರ ಮನೆಯಲ್ಲೇ.…

Rohith Chakratheertha

ಆತ್ಮ ಸಂವೇದನಾ. ಅಧ್ಯಾಯ 33

ಆತ್ಮ ಸಂವೇದನಾ. ಅಧ್ಯಾಯ 32 ಭೂಮಿಯಲ್ಲಿ ವಿಶೇಷವಾದ ದಿನ. ಅವೆಷ್ಟೋ ಜೋಡಿಗಳು ಒಂದಾಗಿ ಬದುಕುವ ನಿರ್ಧಾರಕ್ಕೆ ಬಂದಿದ್ದವು. ತಾಯಿಯಾಗುವ ಬಯಕೆ ಹೆಣ್ಣಿಗೆ, ತಂದೆಯ ಅಧಿಕಾರ ಮೆರೆವ ಆಸೆ…

Gautam Hegde

ಇನ್ನೂ ಹಿರಿ ಜೀವಕೆ ಎಲ್ಲಿದೆ ನೆಮ್ಮದಿ…?

ಅವಿಭಕ್ತ ಕುಟುಂಬದಲ್ಲಿರುವ ರಾಜೇಶನ ಮುಖದಲ್ಲಿ ಯಾವಾಗಲು ನಗೆ ಹರಿದಾಡುತ್ತದೆ. ಅವನಿಗೆ ಎರಡು ಮಕ್ಕಳು ಒಂದು ಗಂಡು ಇನ್ನೊಂದು ಮುದ್ದಾದ ಹೆಣ್ಣು. ಸಂಸಾರದ ತಾಪತ್ರಯಗಳು ಅವನ ಮುಖದಲ್ಲಿ ಎಲ್ಲೂ…

Guest Author