X

ಕವಿತೆ

೧.ಫಜೀತಿ….

ಹಿಂಬದಿ ಸವಾರರಿಗೂ
ಹೆಲ್ಮೆಟ್ ಕಡ್ಡಾಯ
ತಂದಿಟ್ಟಿದ್ದಂತೂ ನಿಜ
ಫಜೀತಿಯ…

೨.ಅಭಯ….

ಕದ್ದು ಮುಚ್ಚಿ
ಮುಖಕ್ಕೆ ಮುಸುಕು ಕಟ್ಟಿ
ಹುಡುಗನ ಹಿಂದೆ ಕೂರುವ
ಹುಡುಗಿಗಿಲ್ಲ ಭಯ
ಹೆಲ್ಮೆಟ್ ನೀಡುತಿದೆ
ನಾನಿರುವೆನೆಂಬ ಅಭಯ..

೩.ಅಳಲು…

ಹೆಲ್ಮೆಟ್ ನಿಂದಾಗಿ
ಹೆಂಡತಿಯರೇ ಅದಲು-ಬದಲು
ಕೇಳುತ್ತಿಲ್ಲ ಸರಕಾರ
ಪತಿದೇವರುಗಳ ಅಳಲು..

೪.ಮ್ಯಾಚಿಂಗ್….

ಎಲ್ಲವನ್ನೂ ಮ್ಯಾಚಿಂಗ್
ಹುಡುಕುವ
ಹುಡುಗಿಗಿದೆಯಂತೆ
ಮ್ಯಾಚಿಂಗ್ ಹೆಲ್ಮೆಟ್ ನ ಚಿಂತೆ..

೫.ಮಾವ..

ಹೆಲ್ಮೆಟ್ ಧರಿಸದೆ
ಹುಡುಗಿಯ ಕೂರಿಸಿಕೊಂಡು
ಸ್ಟೈಲಾಗಿ ಹೊರಟವನಿಗೆ
ಎದುರಾಗಿದ್ದು
ಪೊಲೀಸ್ ಮಾವ..

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post